Homeಸಾಮಾಜಿಕಜನತೆಯ ಸಂಗಾತಿ ಲಕ್ಷ್ಮಣ್‌ಜಿ

ಜನತೆಯ ಸಂಗಾತಿ ಲಕ್ಷ್ಮಣ್‌ಜಿ

- Advertisement -
- Advertisement -

ಸಿರಿಮನೆ ನಾಗರಾಜ್ |

ಕನ್ನಡದ ಮಹತ್ವದ ಕವಿ-ಕತೆಗಾರ-ಬರಹಗಾರರಲ್ಲಿ ಒಬ್ಬರಾಗಿದ್ದ, ದಲಿತ ಮತ್ತು ಜನಪರ ಚಳವಳಿಗಳ ಸತತ ಒಡನಾಡಿಯಾಗಿದ್ದ ಲಕ್ಷ್ಮಣಜಿ ಅವರ ಆತ್ಮಕತೆ ‘ಸಂಬೋಳಿ’ಯ ಇಂಗ್ಲಿಷ್ ಅನುವಾದಿತ ಅದೇ ಹೆಸರಿನ ಕೃತಿ ಕಳೆದ ವಾರ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆದ ಚಿಕ್ಕ ಚೊಕ್ಕ ಕಾರ್ಯಕ್ರಮದಲ್ಲಿ ಬಿಡುಗಡೆಯಾಯಿತು. ಅದೇ ಸಮಯದಲ್ಲಿ ಲಕ್ಷ್ಮಣಜಿ ಅವರನ್ನು ಕುರಿತು ಅವರ ಸಮಕಾಲೀನ ಚಳವಳಿಗಾರರು, ಬರಹಗಾರರು ಮತ್ತಿತರ ಅವರ ಸಂಗಾತಿಗಳು ಬರೆದಿರುವ ಆಪ್ತ ಬರಹಗಳ ಸಂಕಲನ ‘ಜನತೆಯ ಸಂಗಾತಿ ಲಕ್ಷ್ಮಣಜಿ’ ಪುಸ್ತಕವೂ ಬಿಡುಗಡೆಯಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿಯವರು ಎರಡೂ ಕೃತಿಗಳನ್ನು ಬಿಡುಗಡೆ ಮಾಡಿದರು.

ಸಂಬೋಳಿ ಕೃತಿಯನ್ನು ಪ್ರೊ. ಸುಶೀಲಾ ಪುನೀತಾ ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ, ದೇಶದ ಗಣ್ಯ ಪ್ರಕಾಶನ ಸಂಸ್ಥೆಗಳಲ್ಲಿ ಒಂದೆನ್ನಿಸಿರುವ ದೆಹಲಿಯ ನಿಯೋಗಿ ಪ್ರಕಾಶನ ಅದನ್ನು ಪ್ರಕಟಿಸಿದೆ. (ಅದನ್ನು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಿಂದ ಪ್ರಕಟಿಸಲು ಈ ಮೊದಲು ಮಾತುಕತೆಯಾಗಿದ್ದು, ಅಲ್ಲಿ ಇನ್ನೂ ಬಹಳ ತಡವಾಗುತ್ತೆ ಎನ್ನುವ ಕಾರಣಕ್ಕೆ ನಿಯೋಗಿ ಪ್ರಕಾಶನ ಅದನ್ನು ತೆಗೆದುಕೊಂಡು ಪ್ರಕಟಿಸಿದೆ.)

ಕನ್ನಡದಲ್ಲಿ ನಾಲ್ಕು ಮುದ್ರಣ ಕಂಡಿದ್ದು, ಈಗಾಗಲೇ ತಮಿಳಿಗೆ ಅನುವಾದವಾಗಿ ಎರಡು ಮರುಮುದ್ರಣ ಕಂಡು ಬಹಳ ಮೆಚ್ಚುಗೆ, ಸಂವೇದನೆ ಹುಟ್ಟುಹಾಕಿರುವ ಸಂಬೋಳಿಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಒಂದು ಪಠ್ಯದಲ್ಲೂ ಕಾಣಿಸಿಕೊಂಡಿದೆ. ‘LISTEN TO THE FLAMES’ – texts and readings from the margins ಎಂಬ ಪಠ್ಯದಲ್ಲಿ ಸಂಬೋಳಿಯ ಒಂದು ಭಾಗವು undying love ಎಂಬ ಹೆಸರಿನಲ್ಲಿ ಸೇರ್ಪಡೆಯಾಗಿದೆ.

ಕಡುದಾರಿದ್ರ್ಯದ, ಜೀತದ ದಲಿತ ಬದುಕಿನಿಂದ ಬಂದು, ಹೇಗೋ ಕಾಲೇಜು ಕಲಿತು ಕೆಎಲ್‌ಇ ಸೊಸೈಟಿಯ ಕಾಲೇಜಿನಲ್ಲಿ ಗುಮಾಸ್ತರಾಗಿದ್ದ ಅತ್ಯಂತ ಸ್ನೇಹಜೀವಿ ಲಕ್ಷ್ಮಣಜಿ, ಎಷ್ಟು ಸ್ನೇಹಜೀವಿಯೋ ಅಷ್ಟೇ ಗಟ್ಟಿಯಾದ ಸಾಮಾಜಿಕ ಬದ್ಧತೆ ಹೊಂದಿದ್ದವರು. ಎಂಥ ಕಷ್ಟವೇ ಇದ್ದರೂ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುವುದನ್ನು ತಪ್ಪಿಸುತ್ತಿರಲಿಲ್ಲ. ದಲಿತ ಸಂಘಟನೆಗಳು ಒಡೆದು ಚೂರಾಗುತ್ತ, ನಾಯಕರಲ್ಲಿ ಪ್ರಾಮಾಣಿಕತೆ-ಕಳಕಳಿ ಕಡಿಮೆಯಾಗಿ, ಚಳವಳಿಯೊಂದು ಬದುಕಿನ ದಾರಿಯಾಗತೊಡಗಿದ್ದುದು, ದೇಶದಲ್ಲಿ ಎಡಪಂಥೀಯ ಚಳವಳಿ ಹಿನ್ನಡೆಗೆ ಈಡಾಗಿ ಸಂಘಪರಿವಾರದ ಫ್ಯಾಸಿಸ್ಟ್ ಶಕ್ತಿಗಳು ವಿಜೃಂಭಿಸತೊಡಗಿದ್ದು ಇವೆಲ್ಲ ಅವರನ್ನು ಬಹಳವಾಗಿ ಕಾಡುತ್ತಿದ್ದವು. ಹಾಗಂತ ಯಾವುದೇ ಚಳವಳಿಯ ಯಾವ ನಾಯಕರ ಜೊತೆಗೂ ಮನಸ್ತಾಪ ಮಾಡಿಕೊಂಡವರಲ್ಲ. ಅವರವರು ಒಂದುವೇಳೆ ಪರಸ್ಪರ ಮುಖ ನೋಡದ, ಮಾತಾಡದ ಹಗೆತನ ಬೆಳೆಸಿಕೊಂಡಿದ್ದರೂ ಲಕ್ಷ್ಮಣಜಿ ಎಲ್ಲರಿಗೂ ಬೇಕಾದವರಾಗಿದ್ದರು. 1989ರಲ್ಲಿ ‘ಕರ್ನಾಟಕ ವಿಮೋಚನಾ ರಂಗ’ ಸ್ಥಾಪನೆಯಾದಾಗ ಅದರ ಜೊತೆಗೂಡಿದ ಲಕ್ಷ್ಮಣಜಿ, ಕವಿರಂ ಇದ್ದಷ್ಟು ಕಾಲವೂ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

ಲಕ್ಷ್ಮಣಜಿ ಐವತ್ತರವತ್ತು ವರ್ಷ ಹಿಂದಿನ ಬೆಂಗಳೂರು ಸೀಮೆಯ ಜೀತದ ಬದುಕನ್ನು ಕಂಡುಂಡು ಬೆಳೆದುಬಂದವರು. ಅಂದಿನ ಜೀತಗಾರರ ಬದುಕಿನ ದಟ್ಟ ಚಿತ್ರಣ ಅವರ ಕವಿತೆ-ಕತೆ-ಬರಹಗಳಲ್ಲಿ ಅತ್ಯಂತ ಸಹಜವಾಗಿ ಬಿಂಬಿತವಾಗಿವೆ. ಅಂಬೇಡ್ಕರ್ ಬಗ್ಗೆ ಅಪಾರ ಅಭಿಮಾನ, ಆದರ. ಮಾರ್ಕ್ಸ್ ಮತ್ತು ಮಾರ್ಕ್ಸ್‌ವಾದದ ಬಗ್ಗೆಯೂ ಅಷ್ಟೇ ಆಸಕ್ತಿ, ಒಲವು. ದಲಿತ ಸಮುದಾಯದ ದುರ್ಭರ ಬದುಕಿನ ಬಗ್ಗೆ ಗಾಢವಾದ ಕ್ರಿಯಾಶೀಲ ಕಳಕಳಿ. ಹಾಗೆಯೇ ಎಲ್ಲ ದುಡಿವ ಜನರ, ಶೋಷಿತರ, ದಮನಿತರ ಬಗ್ಗೆಯೂ ಸಮಾನ ಅನುಕಂಪ, ತುಡಿತ. ಎಲ್ಲೋ ಯಲಹಂಕವೋ, ಪೀಣ್ಯವೋ, ಕಮಗೊಂಡನಹಳ್ಳಿಯೋ … ಎಲ್ಲೆಲ್ಲಿಯದೋ ಗುಡಿಸಲು ವಾಸಿಗಳ, ಬಡಜನರ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೇಗೋ ನಾಲ್ಕಾರು ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಹೋಗಿ, ಮನವರಿಕೆ ಮಾಡಿಯೋ, ಬೆದರಿಕೆ ಹಾಕಿಯೋ ಸಮಸ್ಯೆ ಬಗೆಹರಿಸದೆ ಬಿಡುತ್ತಿರಲಿಲ್ಲ.

ಲಕ್ಷ್ಮಣಜಿ ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಹೆಜ್ಜೆಹೆಜ್ಜೆಗೂ ಹೋದಲ್ಲಿ ಬಂದಲ್ಲಿ, ಮಾತಲ್ಲಿ ಕ್ರಿಯೆಯಲ್ಲಿ ಎಲ್ಲೆಲ್ಲೂ ಅವರು ಎಡೆಬಿಡದೆ ನೆನಪಾಗುತ್ತಾರೆಂದರೆ, ಯಾರೇ ಒಬ್ಬ ಕ್ರಿಯಾಶೀಲ ವ್ಯಕ್ತಿಯ ಸಾಮಾಜಿಕ ಬದುಕು ಸಾರ್ಥಕವೆನ್ನಿಸುವುದು ಹೀಗೇ ಅಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...