Homeಅಂಕಣಗಳುಕುಟುಂಬ ರಾಜಕಾರಣ ಕೊನೆಯಾಗಲಿ

ಕುಟುಂಬ ರಾಜಕಾರಣ ಕೊನೆಯಾಗಲಿ

- Advertisement -
- Advertisement -

| ಎಚ್.ಎಸ್ ದೊರೆಸ್ವಾಮಿ |

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿಯವರನ್ನು ಇತ್ತೀಚೆಗೆ ಭೇಟಿಯಾದಾಗ ‘ಕುಟುಂಬ ರಾಜಕೀಯದ ಬಗೆಗೆ ತಲೆಕೆಡಿಸಿಕೊಳ್ಳಬೇಡಿ. ನಮ್ಮದೂ ಕುಟುಂಬ ರಾಜಕಾರಣ, ತಮಿಳುನಾಡಿನಲ್ಲಿ ಡಿಎಂಕೆಯದೂ ಕುಟುಂಬ ರಾಜಕಾರಣ, ಆಂಧ್ರ, ಹರಿಯಾಣ, ಮಹಾರಾಷ್ಟ್ರಗಳಲ್ಲಿ ಕೂಡ ಕುಟುಂಬ ರಾಜಕಾರಣ ನಡೆಯುತ್ತಿದೆ’ ಎಂದಿದ್ದರು. ಆದರೆ ಈಗ ಅದು ಬದಲಾಗಿದೆ. ರಾಹುಲ್ ಗಾಂಧಿಯವರಿಗೆ ‘ನೀವು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಿರಿ’ ಎಂದು ಕಾಂಗ್ರೆಸ್ ಮುಖಂಡರು ಹೇಳಿರುವುದಾಗಿ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು. ಆದರೆ ರಾಹುಲ್‍ಗಾಂಧಿಯವರು ಕಾಂಗ್ರೆಸ್ಸನ್ನು ಕುಟುಂಬ ರಾಜಕೀಯದಿಂದ ಪಾರು ಮಾಡಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್ ಅಧ್ಯಕ್ಷ ಪದವಿಗೆ ಬೇರೆಯವರನ್ನೇ ಆಯ್ಕೆ ಮಾಡಲಾಗುತ್ತದೆ. ಕುಟುಂಬ ರಾಜಕಾರಣ ಕೈಬಿಟ್ಟು ಸಮರ್ಥರಾದ ಒಬ್ಬ ನಾಯಕರನ್ನು ಕಾಂಗ್ರೆಸ್‍ನ ವರಿಷ್ಠರು ಕೂತು ಆಯ್ಕೆ ಮಾಡುತ್ತಾರೆ ಎಂಬ ಸಂತೋಷದ ಸುದ್ದಿಯನ್ನು ರಾಹುಲ್ ನೀಡಿದ್ದಾರೆ. ಅವರಿಗೆ ಅಭಿನಂದನೆಗಳು.

ನೆಹ್ರೂ ಕುಟುಂಬದವರು ಕಾಂಗ್ರೆಸ್ಸನ್ನು ಕಬ್ಜಾ ಮಾಡಿದ್ದಾರೆ ಎಂಬ ಆಪಾದನೆ 30-40 ವರ್ಷಗಳಿಂದ ವಿರೋಧ ಪಕ್ಷಗಳಿಂದ ಕೇಳಿಬರುತ್ತಿದೆ. ಕುಟುಂಬ ರಾಜಕೀಯಕ್ಕೆ ಮತದಾರರು ಬೇಸತ್ತಿದ್ದರು. ಮೋದಿಯಂತೂ ನೆಹ್ರು ಮನೆತನದವರ ಕುಟುಂಬ ರಾಜಕೀಯವನ್ನು ಬಳಸಿಕೊಂಡು ಜನರಲ್ಲಿ ಕಾಂಗ್ರೆಸ್ ಬಗೆಗೆ ವಿಷ ಬೀಜ ಬಿತ್ತುವ ಕೆಲಸವನ್ನು 5 ವರ್ಷಗಳಿಂದ ಸತತವಾಗಿ ಮಾಡುತ್ತಾ ಬಂದಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡು 2ನೇ ಅವಧಿಗೂ ಅಧಿಕಾರ ಪಡೆದುಕೊಂಡಿದ್ದಾರೆ.

ರಾಹುಲ್‍ಗಾಂಧಿಯವರ ಮನೆತನದ ರಾಜಕೀಯವನ್ನು ತೊರೆಯುವ ನಿರ್ಧಾರದಿಂದ ಮೋದಿಯವರ ಕೈಲಿದ್ದ ಮನೆತನದ ರಾಜಕೀಯದ ಅಸ್ತ್ರ, ತನ್ನ ಮೊನಚನ್ನು ಕಳೆದುಕೊಳ್ಳುತ್ತದೆ. ಮೋದಿಯವರ ಬಾಯನ್ನು ಕಟ್ಟಿಹಾಕುತ್ತದೆ. ಇದು ಕಾಂಗ್ರೆಸ್‍ನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ.

ರಾಹುಲ್‍ಗಾಂಧಿಯವರ ಈ ನಿರ್ಧಾರದಿಂದ ಅವರು ಪ್ರಬುದ್ಧ ರಾಜಕೀಯ ನಾಯಕರು ಎಂಬುದು ಸಾಬೀತಾಗಿದೆ. ಈ ಮೂಲಕ ಕುಟುಂಬ ರಾಜಕೀಯ ನಡೆಸುವ ಇತರ ರಾಜಕೀಯ ಪಕ್ಷಗಳಿಗೂ ರಾಹುಲ್ ಎಚ್ಚರಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಂದು ಮನೆತನದವರು ರಾಜಕೀಯವನ್ನು ಕಬ್ಜಾ ಮಾಡುವುದಕ್ಕೆ ಅವಕಾಶವಿಲ್ಲ. ಜನ ನಿಧಾನವಾಗಿಯಾದರೂ ದೇವೇಗೌಡರಿಗೆ ಮತ್ತು ರಾಹುಲ್‍ಗಾಂಧಿಯವರಿಗೆ ಮನೆತನ ರಾಜಕೀಯಕ್ಕೆ ನಾವು ವಿರೋಧಿಗಳು ಎಂಬುದನ್ನು ಚುನಾವಣೆಯಲ್ಲಿ ಅವರಿಬ್ಬರನ್ನೂ ಸೋಲಿಸುವ ಮೂಲಕ ಘೋಷಿಸಿದ್ದಾರೆ.

ರಾಹುಲ್‍ಗಾಂಧಿಯವರು ಜನತೆಯ ಆಕ್ರೋಶವನ್ನು ಅರ್ಥಮಾಡಿಕೊಂಡು ತಮ್ಮ ಕುಟುಂಬ ರಾಜಕೀಯದ ತತ್ವವನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ದೇವೇಗೌಡರು ಮನೆತನದ ರಾಜಕೀಯ ಮಾಡಿ ಸೋಲನ್ನು ಅನುಭವಿಸಿದ್ದರೂ ಅವರು ಕುಟುಂಬ ರಾಜಕೀಯದಿಂದ ಮುಕ್ತರಾಗುವ ಸೂಚನೆಗಳು ಕಾಣುತ್ತಿಲ್ಲ.

ಒಕ್ಕಲಿಗರ ಭಾಗ್ಯದಾತ ಎಂದು ಕುಟುಂಬ ರಾಜಕೀಯ ಮಾಡುತ್ತಿರುವ ದೇವೇಗೌಡರ ಕವಚ ಈ ಸಾರಿಯ ಲೋಕಸಭೆ ಚುನಾವಣೆ ವೇಳೆಯಲ್ಲಿ ಕಳಚಿಬಿತ್ತು. 7 ಸೀಟು ನೀಡಿದರೆ 3 ಸೀಟನ್ನು ಮನೆಗೆ ತೆಗೆದುಕೊಂಡು ಹೋಗಿದ್ದು ಒಕ್ಕಲಿಗ ಸಮುದಾಯದ ಭ್ರಮನಿರಸನಕ್ಕೆ ಕಾರಣವಾಯಿತು. ಗೌಡರು ಚುನಾವಣೆಗೆ ನಿಲ್ಲಿಸಿದ ಕುಟುಂಬದ ಮೂವರಲ್ಲಿ ಇಬ್ಬರು ಸೋತರು. ಸೋತವರಲ್ಲಿ ದೇವೇಗೌಡರೂ ಒಬ್ಬರು.

ದೇವೇಗೌಡರು ಇತ್ತೀಚಿನ ಸಾರ್ವಜನಿಕ ಸಭೆಯೊಂದರಲ್ಲಿ ಸೋಲು ನನಗೆ ಹೊಸದೇನಲ್ಲ ಎಂದಿದ್ದಾರೆ. ಈ ಸಾರಿ ಸೋತದ್ದಕ್ಕೆ ವಿಶೇಷ ಕಾರಣವಿದೆ. ಈ ಸಾರಿ ಅವರು ಸೋತದ್ದು ಅವರು ಕುಟುಂಬ ರಾಜಕಾರಣವನ್ನು ಖೇಚರಕ್ಕೆ ತೆಗೆದುಕೊಂಡು ಹೋದ ಕಾರಣಕ್ಕೆ. ಒಕ್ಕಲಿಗ ಮತದಾರರಿಗೆ ಇವರ ಕುಟುಂಬ ರಾಜಕಾರಣ ಮೊದಲ ಸಾರಿಗೆ ಅರಿವಿಗೆ ಬಂತು. ಆಕ್ರೋಶದಿಂದ ತಮ್ಮ ಮತಗಳನ್ನು ಕುಟುಂಬ ರಾಜಕಾರಣದ ವಿರುದ್ಧವಾಗಿ ಹಾಕಿದರು.

ದೇವೇಗೌಡರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿಯ ದಿಟ್ಟ ನಿಲುವನ್ನು ಅರ್ಥಮಾಡಿಕೊಳ್ಳಬೇಕು. ಅದು ರಾಜಕೀಯ ಮುತ್ಸದ್ದಿತನ. ಕಾಂಗ್ರೆಸ್ ಮೊದಲುಗೊಂಡು ಎಲ್ಲಾ ರಾಜಕೀಯ ಪಕ್ಷಗಳು ಶಾಸಕರನ್ನು, ಪಾರ್ಲಿಮೆಂಟ್ ಸದಸ್ಯರನ್ನು ಆಯ್ಕೆಮಾಡುವಾಗ ಕ್ರಿಮಿನಲ್‍ಗಳನ್ನು, ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವವರನ್ನು, ಭ್ರಷ್ಟರನ್ನು, ಭೂಗಳ್ಳರನ್ನು, ಪಾಳೆಗಾರಿಕೆ ಮನೆತನದವರನ್ನು ದೂರವಿಡಬೇಕು. ಸೋನಿಯಾಗಾಂಧಿಯವರ ಸುತ್ತಲೂ ಸಮಯ ಸಾಧಕರು, ವಂದಿಮಾಗಧರು, ಅವರನ್ನು ಹೊಗಳಿ ಅಟ್ಟಕ್ಕೇರಿಸುವ ಸ್ವಾರ್ಥಸಾಧಿಸುವವರು ಸುತ್ತುಗಟ್ಟಿರುವುದು. ಇಂತಹದರಿಂದ ಅವರು ದೂರ ಉಳಿಯಬೇಕಾದ್ದರ ಅಗತ್ಯತೆ ಇದೆ. ಈ ಕೆಲಸವನ್ನು ರಾಹುಲ್ ಈ ಕೂಡಲೆ ಕೈಗೆತ್ತಿಕೊಳ್ಳಬೇಕು.

ಇಂದಿನ ಇಂದಿರಾ ಕಾಂಗ್ರೆಸ್ ಹಳೇ ಚಾಳಿಯನ್ನು ಬಿಟ್ಟು ಹೊಸ ರೀತಿಯ ಮೌಲ್ಯಾಧಾರಿತ ರಾಜಕೀಯವನ್ನು ಆರಂಭಿಸಲಿ ಎಂದು ಆಶಿಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...