Homeರಾಜಕೀಯಬಿಜೆಪಿ ಪರಿವಾರಕ್ಕೆ ಬೇಡವಾಗಿದೆ ಯಾಕೆ ಸಿಬಿಐ ತನಿಖೆ?!

ಬಿಜೆಪಿ ಪರಿವಾರಕ್ಕೆ ಬೇಡವಾಗಿದೆ ಯಾಕೆ ಸಿಬಿಐ ತನಿಖೆ?!

- Advertisement -
- Advertisement -

ಉತ್ತರ ಕನ್ನಡ ಕಳೆದ ಡಿಸೆಬಂರ್-ಜನವರಿಯಲ್ಲಿ ಕೋಮುದಳ್ಳುರಿಗೆ ಸಿಲುಕಿ ತತ್ತರಿಸಿಹೋಗಿತ್ತು! ಹೊನ್ನಾವರದ ಮೀನುಗಾರರ ಪೋರ ಪರೇಶ್ ಮೇಸ್ತ್‍ನ ನಿಗೂಢ ಸಾವನ್ನು ಮತಾಂಧ ಮಸಲತ್ತಿಗೆ ಬಳಸಿಕೊಂಡ ಸಂಘಪರಿವಾರ ದೇಶದಲ್ಲಿ ದೊಡ್ಡ ಸುದ್ದಿ ಮಾಡಿತ್ತು “ಸೆಕೆಂಡ್ ಪಿಎಂ” ಅಮಿತ್‍ಶಾನಿಂದ ಗೃಹಮಂತ್ರಿ ರಾಜ್‍ನಾಥ್‍ಸಿಂಗ್‍ವರೆಗಿನ ಬಿಜೆಪಿಯ ಹಿರಿ-ಮರಿ ಪುಢಾರಿಗಳು ಪರೇಶನ ಸ್ಮರಣೆ ಮಾಡಿದ್ದೇ ಮಾಡಿದ್ದು. ಯಾವುದೇ ಇಸಂಗೆ ಸೇರದೆ ಬಾಲ್ಯದ ಹುಡುಗಾಟದಲ್ಲಿದ್ದ ಪರೇಶನನ್ನು ಹಿಂದೂತ್ವದ ಕಾರ್ಯಕರ್ತನೆಂದು ಬಿಂಬಿಸಿದ ಕೇಸರಿ ಕಿರಾತಕರು ಆತನನ್ನು ಸಾಬರು ಬರ್ಬರವಾಗಿ ಕೊಂದು ಕೆರೆಗೆ ಎಸೆದಿದ್ದಾರೆಂದು ಹುಯಿಲೆಬ್ಬಿಸಿದ್ದರು. ಅಸಲಿಗೆ ಪರೇಶ್ ಸಾಬರ ಹುಡುಗರ ಹಿಂಡಿನಲ್ಲಿ ನಿರ್ವಾಜ್ಯ ಗೆಳೆತನದಲ್ಲಿ ಆಡಿಕೊಂಡಿದ್ದ ಹುಡುಗನಾಗಿತ್ತು.!
ಎದುರಾಗಿದ್ದ ವಿಧಾನಸಭಾ ಚುನಾವಣೆಯಲ್ಲಿ ಓಟ್‍ಬ್ಯಾಂಕ್ ರಾಜಕಾರಣದ ಮೈಲೇಜು ಪಡೆಯುವ ಹಿಕಮತ್ತಿನಿಂದ ಬಿಜೆಪಿಯ ಯಡ್ಡಿ, ಶೋಭಕ್ಕ, ಅನಂತ್ಮಾಣಿ, ಕಟೀಲು… ವಗೈರೆ ಕುಟಿಲ ಕಾರಸ್ಥಾನಿಗಳು ಪರೇಶನ ಸಾವಿನ ಪ್ರಕರಣಕ್ಕೇ ಗಂಟುಬಿದ್ದಿದ್ದರು. ಅಂದಿನ ಸಿದ್ದು ಸರ್ಕಾರ ಕೊಲೆಗಡುಕ ಮುಸಲರ ರಕ್ಷಿಸಲು ಹವಣಿಸುತ್ತಿದೆ, ಪ್ರಕರಣ ಹಳ್ಳ ಹಿಡಿಸುತ್ತಿದೆ. ಎಂದೆಲ್ಲಾ ಬೊಬ್ಬಿರಿದು ಹಿಂದೂಗಳ ಕೆರಳಿಸಿಬಿಟ್ಟಿದ್ದರು. ಸಿಬಿಐ ತನಿಖೆಯೇಬೇಕೆಂದು ಹಠ ಹಿಡಿದು ಹಾರಾಡಿದರು. ಪರೇಶನ ಮನೆಯಂಗಳದಲ್ಲಿ ಕುಂತು ಅನಂತ್ಮಾಣಿ ಪಟಾಲಮ್ ಬರ್ಬರ-ಹೇಯ-ಅನಾಹುತಕಾರಿ ಧರ್ಮಕಾರಣ ಮಾಡಿತು. ಇಡೀ ಜಿಲ್ಲೆಗೆ ಬೆಂಕಿಯಿಟ್ಟಿತು ಅಮಾಯಕ ಸಾಬರ ಅಟ್ಟಾಡಿಸಿ ಸತಾಯಿಸಿತು. ಬಂದ್ ದೊಂಬಿ ಮಾಡಿತು. ಐಜಿಪಿಯಂಥ ಉನ್ನತ ಪೊಲೀಸ್ ಅಧಿಕಾರಿ ಕಾರಿಗೆ-ಚಾಲಕನಿಗೆ ಬೆಂಕಿ ಹಾಕಿತು! ಸಿದ್ದು ಸರ್ಕಾರ ಪ್ರತಿಷ್ಠೆಗೆ ಬೀಳದೆÀ ನಿಂತ ಜಾಗದಲ್ಲೇ ಸಿಬಿಐ ತನಿಖೆಗೆ ಒಪ್ಪಿಕೊಂಡಿತ್ತು.
ಆದರೆ ಬಿಜೆಪಿಯ ವಂಚಕರಿಗೆ ಸಿಬಿಐ ತನಿಖೆ ಬೇಡವಾಗಿತ್ತು. ಇದು ಉಲ್ಟಾ ಹೊಡೆಯುತ್ತದೆಂಬ ದೂ(ದು)ರಾಲೋಚನೆ ಪರಿವಾರ ಪರಾಕ್ರಮಿಗಳದಾಗಿತ್ತು. ಹಾಗಾಗಿ ಮೋದಿ ಮಾಮನ ಮೂಗಿನಡಿಯ ಸಿಬಿಐ ಪರೇಶ ಮೇಸ್ತ್‍ನ ಸಾವಿನ ನಿಗೂಢತೆ ಬೇಧಿಸುವ ಉಸಾಬರಿಗೆ ಹೋಗಲೇ ಇಲ್ಲ. ಸರಿಯಾಗಿ ತನಿಖೆ ನಡೆದರೆ ಬಿಜೆಪಿಯ ಬೊಬ್ಬೆಕೋರರ ಬಂಡವಾಳವೇ ಬೀದಿಗೆ ಬೀಳುತ್ತದೆಂಬ ಆತಂಕ ಸಂಘಸರದಾರರ ಕಾಡುತ್ತಿದೆ. ಇದೆಲ್ಲಕಿಂತ ಹೆಚ್ಚಾಗಿ ಪರೇಶನ ಸಾವಿನ ಕಥೆ ರಹಸ್ಯವಾಗಿಟ್ಟು ಕೋಮು ಕಿತಾಪತಿ ಕಾವು ಲೋಕಸಭೆ ಇಲೆಕ್ಷನ್‍ತನಕ ಆರದಂತೆ ನಿಭಾಯಿಸುವ ಷಡ್ಯಂತ್ರ ಅನಂತ್ಮಾಣಿ ಅಂಡ್ ಗ್ಯಾಂಗು ಹೆಣೆದು ಕೂತಿದೆ! ನೈತಿಕ ನಡವಳಿಕೆಯಿಂದಾಗಲಿ, ಜನಪರ ಅಭಿವೃದ್ಧಿ ಪ್ರಣಾಳಿಕೆ ಮುಂದಿಟ್ಟಾಗÀಲಿ ಸಂಸದನಾಗುವ ಯೋಗ್ಯತೆಯಿಲ್ಲದ ಹೇತ್ಲಾಂಡಿ ಅನಂತ್ಮಾಣಿ ಧರ್ಮೋನ್ಮಾದದ “ಆಟ” ಆಡಿ ಸತತವಾಗಿ ಗೆಲ್ಲುತ್ತಿರುವುದು ಉತ್ತರಕನ್ನಡದ ದೌರ್ಭಾಗ್ಯ.!!
ಪರೇಶ್ ಮೇಸ್ತ್ ಸತ್ತುಹೋಗಿದ್ದು 2017ರ ಡಿಸೆಂಬರ್ ಹದಿಮೂರರಂದು. ಆದಿನ ರಾತ್ರಿ ಹೊನ್ನಾವರದ ಬಸ್‍ಸ್ಟ್ಯಾಂಡಿನ ಬದಿಯಲ್ಲಿರುವ ಅಣ್ಣಿಗೇರಿ ಎಂಬ ಹಣಬಲ, ತೋಳ್ಬಲದ ಸಾಬರ ಕುಟುಂಬದ “ಗುಡ್‍ಲಕ್” ಎಂಬ ಹೆಸರಿನ ಮಾಂಸಾಹಾರಿ ಹೊಟೇಲಿನ ಎದುರಿನ ಶನಿದೇವಸ್ಥಾನದ ಜಾಗೆಯ ತಗಾದೆ ಎದ್ದಿತ್ತು! ತಿಂಗಳೊಪ್ಪತ್ತಿನಿಂದ ಗುಡ್‍ಲಕ್ ಹೋಟೆಲ್-ಶನಿ ದೇವಸ್ಥಾನ ನಡುವಿನ ಜಾಗದ ತಕರಾರು ಬಿಗಡಾಯಿಸಿದ್ದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿತ್ತು. ವ್ಯಾನುಗಟ್ಟಲೆ ಪೊಲೀಸ್ ಪೋರ್ಸ್‍ನೊಂದಿಗೆ ಗಲಭೆ ತಡೆಯಲು ಸನ್ನದ್ಧವಾಗಿ ನಿಂತಿತ್ತು. 13-12-2017ರ ರಾತ್ರಿ 8ರ ಹೊತ್ತಿಗೆ ಹಿಂದೂ-ಮುಸ್ಲಿಮ್‍ರ ಬೈಕ್-ರಿಕ್ಷಾ ಗುದ್ದಿಕೊಂಡ ನೆಪದಲ್ಲಿ ಶನಿದೇವಸ್ಥಾನದ ಅಂಗಳದಲ್ಲಿ ಸಂಘರ್ಷ ಶುರುವಾಯಿತು. ಸಾಬರ ಮತು ಮೀನುಗಾರ ಬಿಸಿರಕ್ತದ ಹುಂಬರೇ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮೆಯಾಗಿದ್ದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಬೀದಿದೀಪ ಆರಿಸಿ ಲಾಠಿ ಚಾರ್ಜ್ ಮಾಡಿದ್ದರು.
ಆ ಗಲಭೆಯಲ್ಲಿ ಕಣ್ಮರೆಯಾಗಿದ್ದ ಪರೇಶ್ ಎರಡು ದಿನಗಳ ನಂತರ ಗುಡ್‍ಲಕ್ ಹೊಟೇಲ್‍ನಿಂದ 500 ಮೀಟರ್ ಅಡಿಗಳಷ್ಟು ದೂರದಲ್ಲಿ ಶನಿದೇಗುಲದ ಹಿಂದಿನ ಶೆಟ್ಟಿಕೆರೆಯಲ್ಲಿ ಹೆಣವಾಗಿ ತೇಲುತ್ತಿದ್ದ. ಅಣ್ಣಿಗೇರಿ ಕುಟುಂಬದ ಪುಂಡ ಆಜಾದನ ಸಾಬಿ ಗ್ಯಾಂಗೇ ಪರೇಶನ ಗುಡ್‍ಲಕ್ ಹೊಟೇಲಿನಲ್ಲಿ ಕೊಂದು ಶೆÀಟ್ಟಿಕೆರೆಯಲ್ಲಿ ಎಸೆದಿದೆ ಎಂಬ ಪುಕಾರನ್ನು ಪರಿವಾರ ಪರಾಕ್ರಮಿಗಳು ತುಂಬ ನಾಜೂಕಾಗಿ ಹಬ್ಬಿಸಿದರು ಪರೇಶನ ಭುಜದ ಮೇಲಿದ್ದ ಜೈ ಶ್ರೀರಾಮ್ ಎಂಬ ಹಚ್ಚೆ ಮೇಲೆ ತಲವಾರಿಂದ ಕಡಿದು ವಿರೂಪ ಮಾಡಲಾಗಿದೆ; ಸಾಯುವ ಮುಂಚೆ ಆತನ ಮೇಲೆ ಬಿಸಿಎಣ್ಣೆ ಸುರಿದು ಹಿಂಸೆ ನೀಡಲಾಗಿದೆ, ಆತನ ಮರ್ಮಾಂಗ ಕಿತ್ತು ಹಾಕಲಾಗಿದೆ.. ಎಂಬೆಲ್ಲಾ ಪ್ರಚೋದನಾತ್ಮಕ ಮಾತುಗಾರಿಕೆ ಕೂಗುಮಾರಿಯ ಖ್ಯಾತಿಯ ಬೇಬಿಯಕ್ಕ ಯಾನೆ ಸೋಗಲಾಡಿ ಸಂಸದೆ ಸೋಭಕ್ಕ ಬುರ್ನಾಸ್ ಬಾಯಿ-ಭಾವನೆಯ ಕೇಂದ್ರದ ಪುಟಗೋಸಿ ಮಂತ್ರಿ ಅನಂತ್ಮಾಣಿ ಮುಂತಾದವರ ಬಾಯಿಂದ ಪುಂಖಾನುಪುಂಖವಾಗಿ ಹೊರಬಿತ್ತು. ಇದು ಬಾಯಿಂದ ಬಾಯಿಗೆ, ಫೇಸ್‍ಬುಕ್‍ನಿಂದ ವಾಟ್ಸ್‍ಆಪ್‍ಗೆ ವ್ಯಾಪಕವಾಗಿ ಹಬ್ಬಿತು ಬಿಜೆಪಿಯ ರೊಟ್ಟಿ ಜಾರಿ ತುಪ್ಪದ ಗಡಿಗೆಗೇ ಬಿತ್ತು…
ಬಹುಸಂಖ್ಯಾತ ಹಿಂದೂಗಳನ್ನು ಭಾವನಾತ್ಮಕವಾಗಿ ಕೆರಳಿಸಿ ಬೀದಿಗಿಳಿಸಿ ಕೋಮುಗಲಭೆ ಮಾಡಿದರೆ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಭರ್ಜರಿ ಫಾಯ್ದೆ ಎತ್ತಬಹುದೆಂದು ಲೆಕ್ಕಾಚಾರ ಸಂಘದ ದೊಂಬಿ ಎಕ್ಸ್‍ಪರ್ಟ್‍ಗಳದಾಗಿತ್ತು! ಅಂಥದೊಂದು ಪಾತಕ ಕೃತ್ಯದಲ್ಲಿ ಬಿಜೆಪಿ ಭೂತಗಳು ಯಶಸ್ವಿಯೂ ಆದರು! ಉತ್ತರಕನ್ನಡ ಉದ್ದಗಲಕ್ಕೆಂದು ದೊಂಬಿ. ದಳ್ಳುರಿಯ ಪರಿಣಾಮವಾಗಿ ಬಿಜೆಪಿಯ ನಾಲ್ಕು ದಂಡಪಿಂಡಗಳು ನಿರಾಯಾಸವಾಗಿ ಎಮ್ಮೆಲ್ಲೆಯಾಗಿ ಹೋದರು!! ಇಂಥದೊಂದು ಕಮ್ಯುನಲ್ ಪವಾಡ ನಡೆಯದೇ ಹೋಗಿದ್ದರೆ ಸದ್ರಿ ನಾಲಾಯಕರು ಶಾಸಕರಾಗೋದು ಸಾಧ್ಯವೇ ಇರಲಿಲ್ಲ ಕಾರವಾರದ ರೂಪಾಲಿ ನಾಯ್ಕ್, ಕುಮಟೆಯ ದಿನಕರ ಶೆಟ್ಟಿ, ಭಟ್ಕಳದ ಸುನೀಲ್ ನಾಯ್ಕ್ ಮತ್ತು ಶಿರಸಿಯ ಕಾಗೇರಿ ಮ್ಯಾಗಿ ಈ ಜನ್ಮದಲ್ಲಿ “ಪರೇಶನ ಮಹಿಮೆ” ಮರೆಯಲಾಗದು! ಮುಂದಿನೈದು ವರ್ಷ ಪರೇಶನ ಫೋಟೋಕ್ಕೆ ದಿನವೂ ಹೂ ಏರಿಸಿ, ಅಗರ್‍ಬತ್ತಿ ಹಚ್ಚಿ ಆತನ ಋಣ ತೀರಿಸಬೇಕಾಗಿದೆ. ಹಾಗಂತ ಪರಮ ಚೆಡ್ಡಿಗಳೇ ಹೇಳುತ್ತಾರೆ. ಜಿಲ್ಲೆಯ ಜನರಿಗಂತು ಪರೇಶನ ಸಾವಿನ ಮಹಿಮೆಯಿಂದಲೇ ಬಿಜೆಪಿ ಈ ಬಾರಿ ಬಂಪರ್ ಎಮ್ಮಲ್ಲೆ ಭಾಗ್ಯ ಕಂಡಿದೆಯೆಂಬುದು ಖಾತ್ರಿಯಾಗಿಬಿಟ್ಟಿದೆ!!
ಸಂಘಪರಿವಾರದ ಧರ್ಮದ ವ್ಯಾಪಾರಿಗಳು ತುಂಬ ವ್ಯಾವಹಾರಿಕವಾಗಿ ಸುಳ್ಳುಗಳನ್ನು ಮಾರ್ಕೆಟಿಂಗ್ ಮಾಡಿದ್ದರು. ಪರೇಶನ ಮನೆಯಲ್ಲಿ ಹೃದಯವಿದ್ರಾವಕ ಸೂತಕದ ನೋವು ಹೆಪ್ಪುಗಟ್ಟಿದ್ದ ಘಳಿಗೆಯಲ್ಲೇ ಬಿಜೆಪಿ ಲೀಡರ್‍ಗಳು ಆ ಸಾವನ್ನು ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಹೇಗೆ ಲಾಭದಾಯಕವಾಗಿ ಬಳಸಿಕೊಳ್ಳಬೇಕೆಂಬ ಚಿಂತನ-ಮಂಥನದಲ್ಲಿ ಮುಳುಗಿದ್ದರು. ಪರೇಶನ ಶವ ಸಿಕ್ಕ ಒಂದು ವಾರದೊಳಗೇ ಆತನ ಆಳೆತ್ತರದ ಕಟೌಟ್ ಹಳ್ಳಿ-ಹಳ್ಳಿಗಳ ಗಲ್ಲಿಗಲ್ಲಿಯಲ್ಲಿ ನಿಲ್ಲಿಸಲಾಗಿತ್ತು . ಹಿಂದೂ ಹುಲಿ ಬಲಿದಾನ; ಧರ್ಮಕ್ಕಾಗಿ ಪ್ರಾಣತೆತ್ತ ಹಿಂದೂ ಹುಡುಗ ಎಂಬಿತ್ಯಾದಿ ಬ್ಯಾನರ್ ಹೆಡ್ಡಿಂಗ್‍ಗಳು ಕಟೌಟ್‍ನಲ್ಲಿ ಹಾಕಲಾಗಿತ್ತು. ಪರೇಶನ ಫೋಟೋ, ಕಟೌಟ್ ಮೂಲಕ ಅಸೆಂಬ್ಲಿ ಇಲೆಕ್ಷನ್ ಪ್ರಚಾರ ಪರೋಕ್ಷವಾಗಿ ಬಿಜೆಪಿ ಶುರು ಹಚ್ಚಿಕೊಂಡಿತ್ತು.
ಪರೇಶನ ಹುತಾತ್ಮನಂತೆ ಬಿಂಬಿಸಿದ ಚಡ್ಡಿಚೋರರು ಆತನ ತಂದೆ ಕಮಲಾಕರ ಮೇಸ್ತನನ್ನು ಇಲೆಕ್ಷನ್ ಸಂದರ್ಭದಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಸ್ಟಾರ್ ಪ್ರಚಾರಕನಾಗಿ ಉಪಯೋಗಿಸಿಕೊಂಡರು. ಅಮಾಯಕ ಪರೇಶನ ಸಾವಿಗೊಂದು ನ್ಯಾಯ ಕೊಡಿಸುವ ಪ್ರ್ರಾಮಾಣಿಕ ಪ್ರಯತ್ನ ಮಾಡಿದ ಅನಂತ್ಮಾಣಿ, ಶೋಭಾ, ಕಟೀಲು… ಮುಂತಾದ ಬಿಜೆಪಿ ಬಾಯಿಬಡುಕರು ಆ ಹುಡುಗ ಮತ್ತು ಆತನ ತಂದೆತಾಯಿಯನ್ನು ಚುನಾವಣಾ ಪ್ರಚಾರದ ಪರವಾಗಿ ಬಳಸಿದ್ದು ಅಸಹ್ಯ-ಅಕ್ಷಮ್ಯ!! ಗುರು ಡಾ|| ಚಿತ್ತರಂಜನ್ ಮರ್ಡರ್ ಕೇಸಿಗೇ ಪತ್ತೆಯಾಗದ ಪ್ರಕರಣವೆಂದು ಸಿಬಿಐ ಸಿ-ರೀಪೋರ್ಟ್ ಜಡಿದು ತಲೆಕೆಡಿಸಿಕೊಳ್ಳದೆ ಅಧಿಕಾರ ಸುಖಸೌಭಾಗ್ಯದಲ್ಲಿ ಮೈಮರೆತಿರುವ ಆತ್ಮೀಯರಿಗೆ ಪರೇಶ್ ಮೇಸ್ತ್, ತಿಮ್ಮಪ್ಪ ನಾಯ್ಕ್‍ರಂತವರು ಯಾವ ಲೆಕ್ಕ?!
ಪರೇಶನ ಸಮಾಧಿ ಮೇಲೆ ಕೇಸರಿ ವಿಜಯಪತಾಕೆ ಹಾರಿಸಿ ಕೇಕೆ ಹಾಕುತ್ತಿರುವ ಸಂಘಿಗಳು ಮುಂದಿನ ಪಾರ್ಲಿಮೆಂಟ್ ಇಲೆಕ್ಷನ್‍ಗಾಗಿ ಇಂಥದ್ದೇ “ಮರಣಮಹಾನಮಿ”ಛಾನ್ಸ್‍ಗೆ ಕಾತರಿಸುತ್ತಿದ್ದರಷ್ಟೇ! ಪರೇಶನ ತಾಯಿ ತಂದೆಯ ದಿಕ್ಕು ತಪ್ಪಿಸಿ ಆ ಹುಡುಗನ ಸಾವನ್ನು ಬಂಡವಾಳ ಮಾಡಿಕೊಂಡು ಚುನಾವಣಾ ಯುದ್ದ ಗೆದ್ದ ಬಿಜೆಪಿಗರೀಗ ನಿಧಾನಕ್ಕೆ ಪ್ರಕರಣ ಮರೆಯುತ್ತಿದ್ದಾರೆ. ಆದರೆ ಪರೇಶನ ಸಾವಿನ ವಾಸ್ತವ ವಿಶ್ಲೇಷಣೆ, ಚರ್ಚೆಗಳು ಮಾತ್ರ ಇವತ್ತಿಗೂ ನಿಂತಿಲ್ಲ. ಆಜಾದ್ ಅಣ್ಣೆಗೇರಿ ತಂಡ ಪರೇಶನ ಹೆಣವನ್ನು ಹೊನ್ನಾವರ ಪಟ್ಟಣದ ನಡುಮಧ್ಯದ ಶÉಟ್ಟಿಕೆರೆಗೆ ಎಸೆವಷ್ಟು ದಡ್ಡರೇ? ಹತ್ತಿರವೇ ಇದ್ದ ಶರಾವತಿ ನದಿ ಅರಬ್ಬಿಸಮುದ್ರಕ್ಕೆ ಶವ ಹಾಕೋದು ಸುಲಭ ಆಗಿರಲಿಲ್ಲವಾ? ದೂರದೂದಕ್ಕೋ ಅಥವಾ ಕಾರಿನಲ್ಲೋ ಹೆಣ ವಿಲೇವಾರಿ ಮಾಡಬಹುದಿತ್ತಲ್ಲವಾ?
ಅಷ್ಟಕ್ಕೂ ಪರೇಶನ ಕೊಲ್ಲುವಂಥ ದೈಹಿಕ ಅಣ್ಣೆಗೇರಿ ಫ್ಯಾಮಿಲಿಗೇನಿತ್ತು? ಅಣ್ಣೆಗೇರಿ ಕುಟುಂಬ ಹುಡುಗರೇ ಪರೇಶನ ಖಾಸಾ ದೋಸ್ತಿಗಳಾಗಿದ್ದರು. ಸಾಬರ ಹುಡುಗರ ಜತೆ ಕ್ರಿಕೆಟ್ ಆಡುತ್ತಿದ್ದ ಪರೇಶ್ ಮತಾಂಧತೆ ಸೋಂಕಿಲ್ಲದೆ ತರುಣನಾಗಿದ್ದ. ಅಣ್ಣೆಗೇರಿ ಕುಟುಂಬದೊಂದಿಗೆ ಅಷ್ಟೇ ಅಲ್ಲ ಯಾವ ಮುಸಲ್ಮಾನ್ ಅದ್ಮಿ ಜೊತೆಗೂ ಪರೇಶನಿಗೆ ಹಗೆತನ ಇರಲಿಲ್ಲ. ಆತ ಬಿಜೆಪಿ ಅಥವಾ ಹಿಂದುತ್ವ ಅಮಲುಕೋರ ಕಾರ್ಯಕರ್ತನೂ ಖಂಡಿತ ಆಗಿರಲಿಲ್ಲ. ಹಾಗಂತ ಆತನ ತಂದೆ ಮಗ ಸತ್ತ ಆರಂಭದ ದಿನಗಳಲ್ಲಿ ಒತ್ತಿ ಒತ್ತಿ ಹೇಳಿದ್ದ ಆ ಬಳಿಕ ಬಿಜೆಪಿ ಶಕುನಿಗಳು ಹೇಳಿಕೆ ಬದಲಿಸಿದ್ದರು. ಆ ಮಾತು ಬೇರ ಬಿಡಿ ಸಾಯುವ ನಾಲ್ಕೈದು ದಿನ ಮೊದಲು ಅಂದಿನ ಸಿಎಂ ಸಿದ್ದು ಕುಮಟಾಕ್ಕೆ ಬಂದಿದ್ದಾಗ ಟೆಂಪೊದಲ್ಲಿ ಜನರನ್ನು ಆ ಸಮಾವೇಶಕ್ಕೆಂದು ಇದೇ ಪರೇಶ್ ಕರೆತರುತ್ತಿದ್ದ. ಆತನ ಒಲವು ಬಿಜೆಪಿಗಿಂತ ಕಾಂಗ್ರೆಸ್ ಕಡೆಗೆ ಹೆಚ್ಚಿತ್ತೆಂದೂ ಹೇಳುವವರೂ ಇದ್ದಾರೆ.
ಇಂಥ ಪಾಪದ ಪರೇಶನ ಕೊಂದೇ ಹಾಕುವಂಥ ಸೇಡು-ದ್ವೇಷ ಸಾಬರಿಗಳಾದರೂ ಏನಿರಲು ಸಾಧ್ಯ? ಮತಾಂಧ ಕಟುಕ ಸಾಬಿಯಾ ಪರೇಶನ ಬದಲಿಗೆ ಬೇರೆ ಆಯ್ಕೆ ಮಾಡುತ್ತಾನೆ. ಏಕೆಂದರೆ ಸಾಬರೊಂದಿಗೆ ಪರೇಶನ ಸಲುಗೆ ಒಡನಾಟ ಅಷ್ಟೇ ಅನ್ಯೋನ್ಯವಾಗಿತ್ತೆಂದು ಆತನ ಜೊತೆಗಾರರೆ ಹೇಳುತ್ತಾರೆ. ಅಸಲಿಗೆ ಆತನ ಭುಜದ ಮೇಲೆ “ಜೈ ಶ್ರೀರಾಮ್” ಎಂಬ ಹಚ್ಚೆ ಇರಲಿಲ್ಲ. ಪರೇಶನ ಶವ ಕಪ್ಪಾಗಿರುವುದು ಸಹಜ ಪ್ರಕ್ರಿಯೆ. ಅದು ಕಾದ ಎಣ್ಣೆಯಿಂದಾದ ಕಲೆ ಅಲ್ಲವೆಂದು ಮಧ್ಯಂತರ ಮರಣೋತ್ತರ ಪರೀಕ್ಷಾ ವರದಿ ಕೊಟ್ಟ ವೈದ್ಯರ ವಾದ. ಪರೇಶನ ತಂದೆ ಮತ್ತು ಬಿಜೆಪಿ ಮುಖಂಡಾಗ್ರೇಸರೇ ಆಯ್ಕೆ ಮಾಡಿದ ಮಣಿಪಾಲ ಆಸ್ಪತ್ರೆ ಡಾಕ್ಟರ್ ಈತ. ಪರೇಶ್ ಮರ್ಮಾಂಗಕ್ಕೆ ಯಾವ ಧಕ್ಕೆಯೂ ಆಗಿರಲಿಲ್ಲ ಎಂದು ವೈದ್ಯರ ವರದಿಯಲ್ಲಿದೆ. ಶೆಟ್ಟಿಕೆರೆ ನೀರೇ ಒಂಥರಾ ಧೂಳು ಕೊಳೆತ ಕಪ್ಪುರಾಡಿ ಅದರಲ್ಲೂ ಎರಡು ದಿನ ಇದ್ದ ಶವ ಕಪ್ಪಾಗಿ ಬದಲಾಯಿತಾ? ಇಂಥ ಜಿಜ್ಞಾಸೆಯೂ ನಡೆಯುತ್ತಲೆ ಇದೆ.
ಹಾಗಿದ್ದರೆ ಪರೇಶ್ ಹೇಗೆ ಸತ್ತುಹೋದ? ಶೆಟ್ಟಿಕೆರೆಯಲ್ಲಿ ಆತನ ಹೆಣ ಹೇಗೆ ಬಂತು? ಆಜಾದ್ ಅಣ್ಣಿಗೇರಿಯ ಗೂಂಡಾಪಡೆಗೂ-ಮೀನುಗಾರ ಹುಡುಗರಿಗೂ ಆದ ಜಗಳ-ಮಾರಾಮಾರಿ ನೋಡಲು ಕುತೂಹಲದಿಂದ ಪರೇಶನೂ ಹೋಗಿದ್ದ. ಪೊಲೀಸರು ಲಾಠಿ ಬೀಸಿದಾಗ ಆತ ಬೆದರಿದ್ದಾನೆ. ಒಂದೆರಡು ಲಾಠಿ ಏಟೂ ಅತನಿಗೆ ಬಿದ್ದಾಗಲೂ ಬಹುಶ: ಕಂಗಾಲಾದ ಹುಡುಗ ಬಚ್ಚಿಟ್ಟುಕೊಳ್ಳಲೆಂದು ಶೆಟ್ಟಿಕೆರೆಯ ಆವರಣ ಹಾರಿದ್ದಾನೆ. ಕೆರೆಯ ಪಾವಟಿಗಳ ಮೇಲೆ ಕಾಲು ಜಾರಿರಬಹುದು ಹೂಳು ತುಂಬಿದ ನೀರಲ್ಲಿ ಬಿದ್ದಿದ್ದಾನೆ. ಹೆದರಿಕೆ ಮೂಡಿದ ಪರೇಶ ಪ್ರಜ್ಞೆ ತಪ್ಪಿರಬಹುದು. ಸೀದಾ ಹೂಳಿನಡಿ ಹೋಗಿ ಸಿಕ್ಕಿಬಿದ್ದಿದ್ದಾನೆ. ಆತ ಮೀನುಗಾರ ಈಜುಗಾರ ಎಲ್ಲವೂ ನಿಜ ಆದರೆ ಕತ್ತಲೆ-ನೋವು-ಗಾಬರಿಯಿಂದ ಆತನಿಗೆ ಹೂಳಿನಡಿಯಿಂದ ತಪ್ಪಿಸಿಕೊಂಡು ಮೇಲೆ ಬರಲಾಗಲಿಲ್ಲ. ಇಂಥದೊಂದು ಸರಳ ತರ್ಕ ಪೊಲೀಸರು-ಪ್ರಜ್ಞಾವಂತÀರು ಮಂಡಿಸುತ್ತಿದ್ದಾರೆ.
ಇಂಥ ವಾದವನ್ನು ಅನಂತ್ಮಾಣಿ, ಶೋಭಕ್ಕ, ಅಮಿತ್ ಶಾ ಒಪ್ಪಲು ಸಾಧ್ಯವಾ? ಇದು ಹಿಂದೂತ್ವದ ಅಭಿಯಾನಕ್ಕೆ ಅಡೆ-ತಡೆ ಅಲ್ಲವಾ? ಹಾಗಿದ್ದರೆ ಸಿಬಿಐ ತನಿಖೆಯನ್ನೇಕೆ ಬಿಜೆಪಿಯ ಅತಿರಥಮಹಾರಥರು ಚುರುಕುಗೊಳಿಸುತ್ತಿಲ್ಲಾ? ಅಂತಿಮ ಮರಣೋತ್ತರ ಪರೀಕ್ಷಾವರದಿಯನ್ನೇಕೆ ಕೇಳುತ್ತಿಲ್ಲ? ಅನಂತ್ಮಾಣಿ, ಅಮಿತ್‍ಶಾ ಕೊಟ್ಟ ಭರವಸೆ ಏಕೆ ಬಿಜೆಪಿಯ ಕೇಂದ್ರ ಸರ್ಕಾರದಿಂದ ಈಡೇರಿಸಲು ಆಗುತ್ತಿಲ್ಲ? ದುರಂತವೆಂದರೆ, ಪರೇಶನನ್ನು ಹುತಾತ್ಮನೆಂದು ಎಲೆಕ್ಷನ್ ಹೊತ್ತಲ್ಲಿ ಕೊಂಡಾಡಿದ ಗಂಡಾಗುಂಡಿ ಬಿಜೆಪಿ ಭೂಪರಿಗೆ ಈಗಾತ ಹೇಗೆ ಸತ್ತನೆಂದು ತಿಳಿಯುವ ಕನಿಷ್ಟ ಪ್ರಜ್ಞೆಯೂ ಇಲ್ಲ. ಪರೇಶ್‍ಮೇಸ್ತನ ಹೆತ್ತವರಿಗೆ ಅಡಿಗಡಿಗೆ ಮೋಸ, ವಂಚನೆ ಮಾಡುತ್ತಾ ಬಂದ ಅನಂತ್ಮಾಣಿ ಪರಿವಾರಕ್ಕೆ ಆ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ಪ್ರಾಮಾಣಿಕತೆ, ನಿಯತ್ತು ಇಲ್ಲದಾಗಿದೆ. ಪರೇಶನ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಾ ಆರು ತಿಂಗಳು ಕಳೆದಿದೆ. ಆ ಬಡ ಬೆಸ್ತರ ಸಂಸಾರಕ್ಕೆ ಬಣ್ಣಬಣ್ಣದ ಭರವಸೆ ಕೊಟ್ಟು ಕೊಟ್ಟು ನಡೆಸಲಾಯಿತೆ ಹೊರತು ಬಿಜೆಪಿಯವರಿಂದ ಯಾವ ನೆರವೂ ದೊರೆತಿಲ್ಲ. ಕೇಂದ್ರ ಮಂತ್ರಿ ಅನಂತ್ಮಾಣಿ, ಈಗ ಶಾಸಕನಾಗಿರುವ ದಿನಕರ ಶೆಟ್ಟಿ, ಭಟ್ಕಳದ ಸುನೀಲ್‍ನಾಯ್ಕ್ ಒಂದಲ್ಲ ಹತ್ತು ಸಲ ಪರೇಶನ ಮನೆಗೆ ಹೋಗಿಬಂದಿದ್ದಾರೆ. ಎಲೆಕ್ಷನ್‍ನಲ್ಲಿ ಹಿಂದೂತ್ವ ಪ್ರಯೋಜನ ಪಡೆಯಲು ನಾಯ್ಕ-ಶೆಟ್ಟಿ-ಹೆಗಡೆ- ಯಡ್ಡಿ-ಶಾ-ಶೆಟ್ಟರ್-ಕಟೀಲ್‍ಗಳು ಪರೇಶ್‍ನ ಮನೆಗೆ ವಕ್ಕರಿಸಿದ್ದರೆ ಹೊರತು ಆ ಕುಟುಂಬದ ಕಣ್ಣೀರು ಒರೆಸಲು ಖಂಡಿತ ಅಲ್ಲವೆಂಬುದೀಗ ಬಟಾಬಯಲಾಗಿದೆ! ಮಂತ್ರಿ ಅನಂತ್ಮಾಣಿ ಕೇಂದ್ರಸರ್ಕಾರದ ಕೈಯಲ್ಲೇ ಸಿಬಿಐ ಇದ್ದರೂ ಆತನಿಗೆ ಆ ತನಿಖೆಯಲ್ಲಿ ಆಸಕ್ತಿಯಿಲ್ಲ. ಲೋಕಸಭೆ ಎಲೆಕ್ಷನ್‍ತನಕ ಇದೇ ತುಮುಲು ಮುಂದುವರಿಯಲೆಂಬ ಬಯಕೆ ಮೋಸಗಾರ ಅನಂತ್ಮಾಣಿಯದು.ಹಾಗಂತ ಪರೇಶನ ಕುಟುಂಬಕ್ಕೆ ಕೊಟ್ಟ ಭರವಸೆಯಾದರೂ ಈತ ಈಡೇರಿಸಿದ್ದಾನಾ ಅಂದರೆ ಉಹುಂ,ಅದೂಇಲ್ಲ. ಬಿಜೆಪಿ ಕೆಲ ಲೀಡರುಗಳು ಕಿಂಚಿತ್ ಕಾಣಿಕೆ ಕೊಟ್ಟಿದ್ದು ಬಿಟ್ಟರೆ ಪರೇಶ್‍ನಂತಹ ಅಮೂಲ್ಯ ತರುಣನ ಕಳಕೊಂಡ ಕುಟುಂಬಕ್ಕೆ ಯಾವ ಪರಿಹಾರ, ಸಾಂತ್ವನ, ಸ್ಪಂದನವೂ ಸಿಕ್ಕಿಲ್ಲ.
ಪರೇಶನ ತಂಗಿಗೆ ಸರ್ಕಾರಿ ನೌಕರಿ ಕೊಡಿಸುವ ಭರವಸೆ ಬಿಜೆಪಿಗರು ಕೊಟ್ಟಿದ್ದು ಬರೀ ಬೊಗಳೆಯಂತಾಗಿದೆ. ದೇಶಪಾಂಡೆ ಕೆಡಿಸಿಸಿ ಬ್ಯಾಂಕಿನಲ್ಲಿ ಪರೇಶನ ತಂಗಿಗೆ ನೌಕರಿ ಕೊಡಿಸಲು ಮುಂದಾದರು.ಅದನ್ನು ಒಪ್ಪಿಕೊಳ್ಳದಂತೆ ಬಿಜೆಪಿ ಪಾಪಿಗಳು ಕಿತಾಪತಿ ಮಾಡಿದರು.ಚನ್ನೈನ ಸಿಬಿಐ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಪರೇಶನ ತಂದೆತಾಯಿ ಸಾಕ್ಷಾತ್‍ಅಮಿತ್‍ಶಾ ತಮ್ಮ ಮನೆಗೆ ಬಂದಾಗ ಅಲವತ್ತುಕೊಂಡಿದ್ದರು. ಆಗ ಆ ಸರ್ವಸಕ್ತ ಮಹಾನುಭಾವ ಎಸ್ಪಿ ದರ್ಜೆಯ ಐಪಿಎಸ್‍ನಿಂದ ಖಡಕ್ ತನಿಖೆ ಮಾಡಿಸುತ್ತೇನೆಂದು ಹೇಳಿದ್ದ. ಪರೇಶನ ತಂದೆಯ ಬೇರ್ಯಾವ ಅಳಲಿಗೂ ಆತ ಸ್ಪಂದಿಸದೆ ಮುಗುಮ್ಮಾಗಿದ್ದುದು ಅನೇಕ ಅನುಮಾನ ಮೂಡಿಸಿದೆ.
ಸಿಬಿಐ ತನಿಖೆಯೇ ಬೇಕೆಂದು ಬೀದಿಗೆ ಇಳಿದಿದ್ದ ಹಿಂದೂ ಸಾಕ್ಷರರೀಗ ಏಕೆ ಬಾಯಿಮುಚ್ಚಿಕೊಂಡಿದ್ದಾರೆ. ಸಿಬಿಐ ತನಿಖೆ ಬೇಗ ಮುಗಿಸುವಂತೆ ಹೋರಾಟ ಮಾಡಲು ಸಂಘಪರಿವಾರಕ್ಕೆ ಧಾಡಿಯೇನು? ಡಾ.ಚಿತ್ತರಂಜನ್, ತಿಮ್ಮಪ್ಪ ನಾಯ್ಕ್ ಮತ್ತು ಪರೇಶ್ ಮೇಸ್ತ ಸಾವಿನ ಪ್ರಕರಣಗಳನ್ನೆಲ್ಲ ಒಂದುಮಾಡಿ ಮರುತನಿಖೆಗೆ ಸಿಬಿಐಗೆಕೊಟ್ಟರೆ ಅನಂತ್ಮಾಣಿ ಆದಿಯಾಗಿ ಬಿಜೆಪಿಯ ನಕಲಿ ಹಿಂದೂ ಪುಣ್ಯಾತ್ಮರ ಅಸಲಿ ಅವಾಂತರ ಅನಾವರಣ ಆಗುತ್ತದೆ? ಆ ತಾಕತ್ತು 52 ಇಂಚಿನ ಎಂಟೆದೆಯ ಭಂಟ ಮೋದಿ ಮಾವನಿಗಿದೆಯಾ? ಬಿಜೆಪಿ ಬಣ್ಣಬಯಲಾಗಿದೆ. ಆದರೂ ಅದೇ ಖೆಡ್ಡಾಕ್ಕೆ ಶೂದ್ರರು ಸಾಲಾಗಿ ಹೋಗಿಬೀಳುತ್ತಿದ್ದಾರೆ.
ಇದೇಯೇನು ಆ ಬ್ರಾಹ್ಮಣರ ಹಣೆಬರಹ?

– ಶುದ್ಧೋದನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...