Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಪಾರ್ಲಿಮೆಂಟ್ ಚುನಾವಣೆಯ ಅಸಲಿ ಸವಾಲುಗಳು

ಪಾರ್ಲಿಮೆಂಟ್ ಚುನಾವಣೆಯ ಅಸಲಿ ಸವಾಲುಗಳು

- Advertisement -
- Advertisement -

ಮುಬೈನಿಂದ ಪ್ರಕಟವಾಗುವ ‘ಫೈನಾನ್ಷಿಯಲ್ ಟೈಮ್ಸ್’ ಪತ್ರಿಕೆಯ ಮಾಜಿ ಮುಖ್ಯಸ್ಥರಾದ ಜೇಮ್ಸ್ ಕ್ರಾಬ್‍ಟ್ರೀ ಅವರು ‘ದಿ ಬಿಲಿಯನೇರ್ ರಾಜ್’ ಎಂಬ ಗ್ರಂಥವೊಂದನ್ನು ಪ್ರಕಟಿಸಿದ್ದಾರೆ. ಹಳೇ 1000, 500ರೂಗಳ ನೋಟನ್ನು ಅಪಮೌಲ್ಯ ಮಾಡಿದ್ದು ಒಂದು ತಪ್ಪು ಹೆಜ್ಜೆ ಎಂಬುದು ಈಗ ಸಾಬೀತಾಗಿದೆ. ನೋಟು ಅಪಮೌಲ್ಯದ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎಂದು ಅಬ್ಬರದ ಪ್ರಚಾರ ಮಾಡಿದ್ದ ಪ್ರಧಾನಿ ಮೋದಿಗೆ ಭಾರಿ ಹಿನ್ನಡೆಯಾಗಿದೆ ಎಂದು ಪ್ರಸ್ತಾಪಿಸಿದ್ದಾರೆ. ನೋಟುಗಳ ಅಪಮೌಲ್ಯದಿಂದ ಜನ ಜೀವನ ಅಸ್ತವ್ಯಸ್ತವಾಯಿತು. ಅನುಕೂಲಕ್ಕಿಂತಲೂ ಅದರಿಂದ ಆದ ತೊಂದರೆಯೇ ಜಾಸ್ತಿ. ನೋಟುಗಳ ಅಪಮೌಲ್ಯ ತಪ್ಪು ಗ್ರಹಿಕೆಯಿಂದ ಆದ ಪ್ರಮಾದ, ಜನಪ್ರಿಯತೆ ಗಿಟ್ಟಿಸಲಿಕ್ಕಾಗಿ ಮೋದಿಯವರು ತೆಗೆದುಕೊಂಡ ಈ ಕ್ರಮದಿಂದ ಜನಸಾಮಾನ್ಯರ ಸಂಕಷ್ಟಗಳಿಗೆ ಈಡಾದರು. ಕರೆನ್ಸಿ ನೋಟುಗಳ ಅಭಾವದಿಂದ ಅನೇಕ ಸಣ್ಣ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಬೇಕಾಯಿತು. ಜನ ತಮ್ಮ ಹಣವನ್ನು ತಾವು ಪಡೆಯಲು ಬಿಸಿಲಿನಲ್ಲಿ ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಕ್ಯೂಗಳಲ್ಲಿ ನಿಲ್ಲಬೇಕಾಯಿತು. ಅದೆಷ್ಟೋ ರಸ್ತೆಬದಿ ವ್ಯಾಪಾರಿಗಳು ಚಿಲ್ಲರೆಗೆ ಪರದಾಡಿ ತಮ್ಮ ಕಸುಬನ್ನೇ ಬಿಡಬೇಕಾಯಿತು. ಕಾಳಧನ ಹೊಂದಿದ್ದವರು ಹಳೇ ನೋಟುಗಳನ್ನು ಕೊಟ್ಟು ಹೊಸ ನೋಟನ್ನು ಪಡೆದುಕೊಳ್ಳಲು ಕೋ-ಆಪರೇಟಿವ್ ಬ್ಯಾಂಕುಗಳ ಮೂಲಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಬ್ಯಾಂಕುಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿಕೊಂಡರು. ಹೀಗೆ ನೋಟು ಬ್ಯಾನ್ ಎಂಬುದು ಶ್ರೀಮಂತರಿಗೆ, ಪಟ್ಟಭದ್ರರಿಗೆ ಶಾಪವಾಗುವ ಬದಲು ವರವಾಗಿ ಪರಿಣಮಿಸಿದ್ದು ಈಗ ಇತಿಹಾಸ.
ಮೋದಿ ಅನುಸರಿಸುತ್ತಿರುವ ನೀತಿಯಿಂದಾಗಿ ದೇಶದ ಆರ್ಥಿಕತೆಯ ಉನ್ನತ ಸ್ತರದಲ್ಲಿರುವ ಆಯ್ದ ಕೆಲವೇ ಶ್ರೀಮಂತರ ಅಭಿವೃದ್ಧಿ ಮಾತ್ರ ಆಗುತ್ತಿದೆ. ವಸ್ತುಸ್ಥಿತಿ ಹೀಗಿದ್ದರೂ ಬುದ್ಧಿಜೀವಿಗಳ ಒಂದು ಬಣ ಮೋದಿಯವರ ಘಾತುಕ ಆರ್ಥಿಕ ನೀತಿಗಳನ್ನು, ಮುಖ್ಯವಾಗಿ ನೋಟ್ ಬ್ಯಾನ್‍ನಿಂದ ಉಂಟಾದ ದುಷ್ಪರಿಣಾಮಗಳನ್ನು ಹಗುರವಾಗಿ ಪರಿಗಣಿಸಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಉದಾರೀಕರಣವನ್ನು ಸರ್ಕಾರ ಜಾರಿಗೆ ತಂದ ನಂತರದ ದಿನಗಳಲ್ಲಿ, ಅಭಿವೃದ್ಧಿಯ ಫಲ ಎಲ್ಲರಿಗೂ ಹಂಚಿಕೆಯಾಗಬೇಕು ಎನ್ನುವುದಕ್ಕಿಂತಲೂ ‘ಕ್ಷಿಪ್ರಗತಿಯ ಅಭಿವೃದ್ಧಿ’ ಮುಖ್ಯ ಎಂಬುದು ಇಂತಹ ಬುದ್ಧಿಜೀವಿಗಳ ನಿಲುವು. ದೇಶದ ಸಂಪತ್ತು ಕೆಲವೇ ಬಂಡವಾಳಿಗರಲ್ಲಿ ಹೆಚ್ಚೆಚ್ಚು ಕ್ರೋಢೀಕರಣವಾಗುತ್ತಿದ್ದು, ಬಡವ ಬಲ್ಲಿದರ ಕಂದರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯಾದರೂ ಸರ್ಕಾರದ ಬಳಿ ಈ ಕಂದರ ಮುಚ್ಚುವ ಯಾವ ಯೋಜನೆಯೂ ಇಲ್ಲ. ರಾಷ್ಟ್ರವನ್ನು ಕಾಡುತ್ತಿರುವ ಈ ಜ್ವಲಂತ ಸಮಸ್ಯೆಯನ್ನು ಬಗೆಹರಿಸಬೇಕೆಂಬ ಅಭಿಲಾಷೆ ಯಾವೊಂದು ರಾಜಕೀಯ ಪಕ್ಷಕ್ಕೂ ಇಲ್ಲ. ರಾಜಕೀಯ ಪಕ್ಷಗಳ ಒಳಗೇ ಪ್ರಭಾವಶಾಲಿಗಳಾದ ಧನಾಡ್ಯರು ಇರುವುದರಿಂದ ಅವರು ಆರ್ಥಿಕ ಅಸಮಾನತೆಯ ವಿಚಾರವನ್ನು ಬಗೆಹರಿಸಲು ಅಡಚಣೆಗಳನ್ನು ತಂದೊಡ್ಡುತ್ತಾರೆ.
1991ರ ನಂತರ ಭಾರತದ ಅಭಿವೃದ್ಧಿಯ ದರ ಹೆಚ್ಚಾದುದರ ಫಲವಾಗಿ ಬಡವರ ಸಂಖ್ಯೆ ಇಳಿಮುಖವಾಗಿದೆ ಎಂದೂ, ಬಡವರ ಕೊಳ್ಳುವ ಶಕ್ತಿ ಹೆಚ್ಚಾಗಿದೆಯೆಂದೂ ಹೇಳಲಾಗುತ್ತಿದೆ. ಬಡವರು ಮೊದಲಿಗಿಂತ ಹೆಚ್ಚಿನ ಆಹಾರ ಸೇವಿಸುತ್ತಿದ್ದು, ಹಸಿವು ಇಂಗಿದೆಯೆಂದು ಹೇಳಲಾಗುತ್ತಿದೆ. ಆದರೆ ದೇಶದಲ್ಲಿ ಒಂದೆಡೆ ಶತಕೋಟ್ಯಾಧಿಪತಿಗಳ ಸಂಖ್ಯೆ ಏರುತ್ತಿದೆ. ಮತ್ತೊಂದೆಡೆ ದಿನಕ್ಕೆ ಎರಡು ಹೊತ್ತಿನ ಊಟವೂ ಇಲ್ಲದ ಬಡವರ ಸಂಖ್ಯೆ 7 ಕೋಟಿಗಿಂತಲೂ ಹೆಚ್ಚಿದೆ ಎಂಬುದನ್ನು ನಾವು ಮರೆಮಾಚಕೂಡದು. ನಮ್ಮ ಕಣ್ಣೆದುರಿನಲ್ಲೇ ಕೋಟ್ಯಾಂತರ ಜನರು ತಲೆಮೇಲೆ ಕನಿಷ್ಟ ಸೂರೂ ಇಲ್ಲದೆ ಬೀದಿಗಳಲ್ಲಿರುವುದನ್ನು ಮರೆಯುವಂತಿಲ್ಲ. ಆರ್ಥಿಕವಾಗಿ ದೇಶ ಬೆಳೆಯಬೇಕಾದರೆ, ಇಡೀ ರಾಷ್ಟ್ರಕ್ಕೆ ಅಭಿವೃದ್ಧಿಯ ಫಲ ಸಿಗುವಂತಹ ಆರ್ಥಿಕ ಸುಧಾರಣೆಗಳನ್ನು ನಾವು ಮೊದಲು ತಂದುಕೊಳ್ಳಬೇಕು. ಇಂತಹ ಸಮಾಜಮುಖಿ ಸುಧಾರಣೆಗಳಿಗೆ ಪಟ್ಟ ಭದ್ರರಿಂದ ಅಡ್ಡಿ ಅಡಚಣೆಗಳಾಗದಂತೆ ನೋಡಿಕೊಂಡಾಗ ಮಾತ್ರ ಬಡವ ಬಲ್ಲಿದರ ನಡುವಿನ ಕಂದರವನ್ನು ನಾವು ಮುಚ್ಚಬಹುದು. ಆದರೆ ಆಸ್ಥಾನದ ಆರ್ಥಿಕ ಪಂಡಿತರು ಜಿಡಿಪಿ ವೃದ್ಧಿಯನ್ನೇ ದೇಶದ ಅಭಿವೃದ್ಧಿಯೆಂಬ ಭ್ರಮೆ ಬಿತ್ತುತ್ತಿದ್ದಾರೆ.
ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಈ ಜ್ವಲಂತ ಸಮಸ್ಯೆಯನ್ನು ಮುನ್ನೆಲೆಗೆ ತರಬೇಕಾದ ಅಗತ್ಯವಿದೆ. ಈ ಚುನಾವಣೆಯಲ್ಲಿ ಸರ್ಕಾರದ ಭ್ರಷ್ಟಾಚಾರ ಪ್ರಮುಖವಾದ ವಿಷಯವಾಗುವ ಲಕ್ಷಣ ಕಾಣುತ್ತಿದೆ. ಮೋದಿಯವರು ತಾವು ಭ್ರಷ್ಟಾಚಾರವನ್ನು ಮಟ್ಟ ಹಾಕಿರುವುದಾಗಿ ಪ್ರಚಾರ ಭಾಷಣ ಮಾಡಬಹುದು. ಹಿಂದೆ ಆಡಳಿತ ನಡೆಸಿದವರ ಕಾಲದಲ್ಲಿ ನಡೆದಿರುವ ಹಗರಣಗಳ ಬಗೆಗೆ ಪುಂಖಾನುಪುಂಖವಾಗಿ ಬೊಬ್ಬೆ ಹೊಡೆಯಬಹುದು. ಅದರಂತೆಯೇ ವಿರೋಧ ಪಕ್ಷಗಳೂ ಕೂಡ ಮೋದಿ ಅವರ ಕಾಲದಲ್ಲಾದ ಡಸ್ಸಾಲ್ಟ್ ರಫೈಲ್ ಫೈಟರ್ ಜೆಟ್ಸ್ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರ ಮತ್ತು ವಜ್ರದ ವ್ಯಾಪಾರಿ ನೀರವ್ ಮೋದಿ ನಮ್ಮ ಬ್ಯಾಂಕುಗಳಿಂದ ಸಾವಿರಾರು ಕೋಟಿಗಳ ಸಾಲ ಗುಳುಂ ಮಾಡಿ, ಕದ್ದು ಪರದೇಶಕ್ಕೆ ಹೋಗಲು ಅವಕಾಶ ಕಲ್ಪಿಸಿದ ಮೋದಿ ಸರ್ಕಾರದ ವಿರುದ್ಧ ದನಿಯೆತ್ತಬಹುದು. ಕ್ರೋನೀ ಕ್ಯಾಪಿಟಲಿಸಂ ಬಗೆಗೆ ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಒಂದು ಪರಿಣಾಮಕಾರಿ ಭಾಷಣ ಮಾಡಿ ಮೋದಿಯವರನ್ನು ಜರ್ಝರಿತಗೊಳಿಸಿದ್ದಾರೆ. ಹೀಗೆ ಈ ಸಾರಿಯ ಚುನಾವಣೆಯಲ್ಲಿ ಸರ್ಕಾರದ ಭ್ರಷ್ಟಾಚಾರ ಪ್ರಮುಖ ವಿಷಯವಾಗುತ್ತದೆ ಎನಿಸುತ್ತದೆ. ಬ್ಯಾಂಕಿನ ಹಣ ನುಂಗಿ ಪಲಾಯನ ಗೈದವರು ನಮ್ಮ ಬ್ಯಾಂಕುಗಳನ್ನು ಬರಿದು ಮಾಡಿ ಓಡಿ ಹೋಗಿದ್ದಾರೆ. ಬ್ಯಾಂಕುಗಳ ಸಮಸ್ಯೆ ಕಗ್ಗಂಟಾಗಿದೆ. ಭ್ರಷ್ಟಾಚಾರದಲ್ಲಿ ಭಾರತ ಇಂದಿಗೂ ಎತ್ತಿದ ಕೈ ಎಂಬುದು ಜಗಜ್ಜಾಹೀರಾಗಿದೆ.
ದೇಶ ಇಂತಹ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿದೆ. ಇದೇ ಸಂದರ್ಭದಲ್ಲಿ ಹಿಂದುತ್ವದ ಮುಸುಕಿನಲ್ಲಿ ಮತಾಂಧ ಸಂಚಿನ ಸಂಘಟನೆಗಳ ಹಾವಳಿಯೂ ಹೆಚ್ಚುತ್ತಿದೆ. ಜಾತಿ ಕಲಹಗಳೂ, ಕೋಮು ಘರ್ಷಣೆಗಳೂ ದಿನಬೆಳಗಾದರೆ ಉಲ್ಬಣವಾಗುತ್ತಿರುವುದರಿಂದ ಅಶಾಂತಿ, ಅಸ್ಥಿರತೆ ವ್ಯಾಪಕವಾಗಿ ಬೆಳೆಯುತ್ತಿದೆ. ಸಂಪದ್ಭರಿತವೂ, ಉದ್ಯಮಗಳ ಕೇಂದ್ರವೂ ಆಗಿದ್ದ ಗುಜರಾತ್ ರಾಜ್ಯದಲ್ಲಿ ಇಂತಹ ವಿದ್ಯಮಾನ ಹೆಚ್ಚಾಗಿ ಕಂಡುಬಂದಿತ್ತು. ಈ ಗುಜರಾತ್ ಮಾದರಿ ಈಗ ಇಡೀ ದೇಶಾದ್ಯಂತ ಹರಡಿಕೊಂಡಿದೆ. ಈ ಕಠಿಣ ಸಂದರ್ಭದಲ್ಲಿ ದೇಶದ ನಿಜವಾದ ಅಭಿವೃದ್ಧಿಯ ಪ್ರಶ್ನೆಗಳನ್ನು ನಾವು ಮುನ್ನೆಲೆಗೆ ತರುವಂತಾಗಬೇಕು. ಆಶಾದಾಯಕ ಸಂಗತಿಯೆಂದರೆ, ಕ್ರಮೇಣ ಗುಜರಾತ್‍ನ ಜನತೆ ಎಚ್ಚೆತ್ತುಕೊಳ್ಳುತ್ತಿದ್ದಾರೆ; ಈ ಸಮಾಜಘಾತುಕ ಅಭಿವೃದ್ಧಿ ಮಾದರಿಯ ವಿರುದ್ಧ ದನಿಯೆತ್ತುತ್ತಿದ್ದಾರೆ. ಮೋದಿಯವರ ಹಿನ್ನಡೆ ಗುಜರಾತಿನಿಂದಲೇ ಅರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...