Homeಸಿನಿಮಾಸಿನಿ ಸುದ್ದಿಸಾಮಾಜಿಕ ದುರಂತದ ವಿಡಂಬನೆಯಸಿನಿಕಾರ ಪೀಟರ್ ಬಾಷೋ.

ಸಾಮಾಜಿಕ ದುರಂತದ ವಿಡಂಬನೆಯಸಿನಿಕಾರ ಪೀಟರ್ ಬಾಷೋ.

- Advertisement -
- Advertisement -

ರಾಜಶೇಖರ್ ಅಕ್ಕಿ |

ರಷಿಯಾದ ಒಂದು ಗ್ರಾಮ, ಆಗತಾನೆ ಕ್ರಾಂತಿಯಾಗಿದೆ. ಮಹಾಯುದ್ಧದ ಪರಿಣಾಮಗಳು ಇನ್ನೂ ಕಾಣಿಸಿಕೊಳ್ಳುತ್ತಿವೆ. ಅಂತಹದ್ದರಲ್ಲಿ ಒಂದು ಗೂಡ್ಸ್ ರೈಲಿನಿಂದ ಪರಾನ್ಯಾ ಎನ್ನುವ ಹೆಣ್ಣುಮಗಳು ಬಂದಿಳಿಯುತ್ತಾಳೆ. ಗೋಣಿಚೀಲವನ್ನೇ ಉಡುಪಾಗಿ ಧರಿಸಿದ ಅವಳು ಮಾನಸಿಕವಾಗಿ ಅಸ್ವಸ್ಥ ಎನ್ನುವುದು ಅವಳ ವರ್ತನೆಗಳಿಂದ ಸ್ಪಷ್ಟವಾಗುತ್ತದೆ. ಜೋಕ್ರ್ಯಾ ಎನ್ನುವ ವ್ಯಕ್ತಿ ತನ್ನ ಕುದುರೆಯನ್ನು ಕಳೆದುಕೊಂಡು, ಹೊಸ ಸೋಷಲಿಸ್ಟ್ ಆಳ್ವಕೆಗೆ ಹೊಂದಿಕೊಳ್ಳದೇ ಸ್ಥಳೀಯ ಕೆಫೆಯಲ್ಲಿ ಕಾಲಹರಣ ಮಾಡುತ್ತಿರುತ್ತಾನೆ. ಪರಾನ್ಯಾ ಹೇಗೋ ಆ ಹಳ್ಳಿಯವಳಾಗುತ್ತಾಳೆ. ಅಲ್ಲಿಯ ಪಡ್ಡೆ ಹುಡುಗರಿಗೆ ಅವಳನ್ನು ಪೀಡಿಸುವುದೇ ಒಂದು ಕೆಲಸ. ಒಂದು ದಿನ ಕಿರುಕುಳದಿಂದ ಪಾರಾಗಲು ಓಡುತ್ತ ಹೋಗಿ ಸ್ಟ್ಯಾಲಿನ್‍ನ ಪ್ರತಿಮೆಯೊಂದರ ಪಕ್ಕಕ್ಕೆ ನಿಂತುಕೊಳ್ಳುತ್ತಾಳೆ. ಜನರ ಒಂದು ಗುಂಪೇ ಬಂದು ತಮಾಷೆ ನೋಡುತ್ತಿದೆ. ಅಷ್ಟರಲ್ಲಿ ಪುಟ್ಟಹುಡುಗಿಯೊಬ್ಬಳು ಅವಳನ್ನು ‘ಸ್ಟಾಲಿನ್‍ನ ಹೆಂಡತಿ’ ಎಂದು ಕರೆದುಬಿಡುತ್ತಾಳೆ. ಅಲ್ಲಿಂದ ಪ್ರಾರಂಭವಾಗುವುದು ಅವಳ ನರಕಯಾತನೆ. ಅಧಿಕಾರಿಗಳು ಅವಳೊಬ್ಬ ಗೂಢಚಾರಿ ಎನ್ನುವ ಸಂಶಯದ ಮೇಲೆ ಬಂಧಿಸಿ ಚಿತ್ರಹಿಂಸೆ ನೀಡುತ್ತಾರೆ. ಆದರೆ ಅವಳಿಂದ ಯಾವ ಮಾಹಿತಿಯೂ ಹೊರಬರುವುದಿಲ್ಲ ಆಗ ಅವಳನ್ನು ಬಿಡುಗಡೆ ಮಾಡಿ, ಅವಳ ಚಲನವಲನಗಳಿಂದ ಮಾಹಿತಿ ಸಿಗಬಹುದು ಎನ್ನುವ ಲೆಕ್ಕಾಚಾರದ ಮೇಲೆ ಅವಳ ಮೇಲೆ ಕಣ್ಣಿಟ್ಟಿರುತ್ತಾರೆ. ಹಿತ್ರಹಿಂಸೆಯನ್ನು ಅನುಭವಿಸಿದ ಪರಾನ್ಯಾಳ ಮಾನಸಿಕ ಸ್ಥಿಮಿತ ಇನ್ನಷ್ಟು ಹದಗೆಟ್ಟಿ, ತನಗೆ ಚಿತ್ರಹಿಂಸೆ ನೀಡಿದಾಗ ಪದೇ ಪದೇ ಕೇಳಿದ ಪದಗಳಾದ ‘ಗೂಢಚಾರ’ ‘ದೇಶದ್ರೋಹಿ’ ಎಂದು ಕಂಡಕಂಡವರನ್ನು ನೋಡಿ ಕರೆಯತೊಡಗುತ್ತಾಳೆ. ಅವಳು ಹೆಸರಿಸಿದ ವ್ಯಕ್ತಿಗಳನ್ನು ಪೊಲೀಸರು ಬಂಧಿಸತೊಡಗಿದಾಗ ಇಡೀ ಊರೇ ಪ್ರಕ್ಷುಬ್ದಗೊಳ್ಳುತ್ತದೆ. ಆಗ ಏನಾದರೂ ಮಾಡಲೇಬೇಕು ಎನ್ನುವ ಸ್ಥಿತಿಗೆ ಬಂದುನಿಂತ ಊರಲ್ಲಿ ಜೋಕ್ರ್ಯಾ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಬಲ್ಲ.

ಇದು ಹಂಗೇರಿಯದ ಚಿತ್ರನಿರ್ದೇಶಕ ಪೀಟರ್ ಬಾಷೋ 1990 ರಲ್ಲಿ ನಿರ್ದೇಶಿಸಿದ ‘ಸ್ಟ್ಯಾಲಿನ್’ಸ್ ಬ್ರೈಡ್’ ಎನ್ನುವ ಚಿತ್ರದ ಸಾರಾಂಶ.

ಒಂದು ಕಛೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬಳ ನರ್ವಸ್ ಬ್ರೆಕ್‍ಡೌನ್ ಆಗಿ, ತನ್ನೆಲ್ಲ ಬಟ್ಟೆಗಳನ್ನು ಕಳಚಿ ಬೆತ್ತಲೆಯಾಗಿ ರಸ್ತೆಯಲ್ಲಿ ನಡೆಯತೊಡುತ್ತಾಳೆ. ತನ್ನಪಾಡಿಗೆ ತಾನು ಆಸ್ಪತ್ರೆಗೆ ಹೋಗುತ್ತಿದ್ದ ಯುವವೈದ್ಯನೊಬ್ಬ ಇವಳನ್ನು ನೋಡಿ ತನ್ನ ಓವರ್‍ಕೋಟನ್ನು ಅವಳಿಗೆ ಧರಿಸುತ್ತಾನೆ. ತಾನು ಮಾಡಿದ ಈ ಪುಟ್ಟ ಕ್ರಿಯೆಯಿಂದ ಆಗುವ ಪರಿಣಾಮಗಳ ಯಾವುದೇ ಅರಿವಿಲ್ಲದೇ ಆ ವೈದ್ಯ ಮುಂದೆ ಸಾಗುತ್ತಾನೆ. ಆದರೆ ಅವನು ತನ್ನ ಓವರ್‍ಕೋಟನ್ನು ಆ ಬಡಪಾಯಿ ಹೆಣ್ಣುಮಗಳಿಗೆ ಕೊಟ್ಟ ಸ್ಥಳ ಆ ದೇಶದ ಆಳ್ವಿಕೆಯ ವಿರುದ್ಧ ಪ್ರತಿಭಟನೆ ಮಾಡುವವರ ತಾಣ. ಯುವವೈದ್ಯನ ಈ ಒಂದು ಪುಟ್ಟ ಕ್ರಿಯೆಯನ್ನೂ ಪ್ರತಿಭಟನೆಯ ಸಂಕೇತವೆಂದೇ ಅರ್ಥೈಸಿಕೊಳ್ಳುವ ಅಲ್ಲಿಯ ಅಧಿಕಾರಿಗಳು ಆ ವೈದ್ಯನನ್ನು ಬಂಧಿಸಿ, ತನಿಖೆಗೆ ಒಳಪಡಿಸುತ್ತಾರೆ. ಅಲ್ಲಿಂದ ಆ ವೈದ್ಯ ತನ್ನ ಜೀವನವನ್ನು ಹೊಸದಾಗಿ ಕಂಡಿಕೊಳ್ಳಬೇಕಾಗುತ್ತದೆ.

ಇದು ಪೀಟರ್ ಬಾಷೋ ಅವರ ‘ಬನಾನಾ ಸ್ಕಿನ್ ವಾಲ್ಟ್ಜ್’ (1987) ಚಿತ್ರದ ಸಾರಾಂಶ.

1928ರಲ್ಲಿ ಆಗಿನ ಚೆಕೊಸ್ಲೋವೇಕಿಯಾದಲ್ಲಿ ಹುಟ್ಟಿದ ಪೀಟರ್ ಬಾಷೋ, ಹಂಗರಿಯಾದ ಸಿನೆಮಾ ಮತ್ತು ನಾಟಕದ ಶಾಲೆಯಲ್ಲಿ ಪದವಿ ಪಡೆದುಕೊಂಡರು. ಎರಡನೇ ಮಹಾಯುದ್ಧದಲ್ಲಿ ಆದ ಸಾವು ನೋವುಗಳು, ಮಹಾಯುದ್ಧದ ನಂತರ ಹಂಗರಿ ದೇಶ ರಷಿಯಾದ ಸೆಟಲೈಟ್ ಸ್ಟೇಟ್ ಆಗಿ ಮುಂದುವರೆದದ್ದು, ಹೊಸ ಸಮಾಜವಾದಿ ವ್ಯವಸ್ಥೆಯ ಕಟ್ಟುನಿಟ್ಟುಗಳಿಗೆ ಸಾಕ್ಷಿಯಾಗಿದ್ದ ಪೀಟರ್ ಬಾಷೊ ಜೀವನದುದ್ದಕ್ಕೂ ಹೆಚ್ಚಾಗಿ ರಾಜಕೀಯ ಸಿನೆಮಾಗಳನ್ನೇ ಮಾಡಿದರು. 1969 ರಲ್ಲಿ ಅವರು ಮಾಡಿದ ಚಿತ್ರ ‘ದಿ ವಿಟ್ನೆಸ್’ನಲ್ಲಿ ಹಂಗರಿಯ ಕಮ್ಯುನಿಸ್ಟ್ ಕ್ರಾಂತಿಯಲ್ಲಿ ಭಾಗವಹಿಸಿದ್ದ ಒಬ್ಬ ವ್ಯಕ್ತಿ ತನ್ನ ಊರಿನ ಚರಂಡಿ, ನೀರಿನ ಹರಿವುಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾನೆ. ಅವನು ತನ್ನ ಮನೆಯಲ್ಲಿ ಅಡುಗೆಗಾಗಿ ಹಂದಿಯೊಂದನ್ನು ಕೊಯ್ಯುತ್ತಾನೆ. ಹಂಗರಿಯಲ್ಲಿ ಆಗ ಅದು ನಿಷಿದ್ಧ. ಯಾರಿಗೂ ಗೊತ್ತಾಗಬಾರದು ಎಂದು ಎಷ್ಟೇ ಲಕ್ಷ ವಹಿಸಿದ್ದರೂ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅವನನ್ನು ಬಂಧಿಸಿದ ನಂತರ ಶಿಕ್ಷೆಯಾಗುವ ಬದಲು ಬೇರೊಂದು ಊರಲ್ಲಿ ಉನ್ನತ ಕೆಲಸಕ್ಕೆ ನೇಮಿಸಲಾಗುತ್ತದೆ. ಏಕೆ ಎಂದು ಅವನಿಗೆ ತಿಳಿಯದು, ಒಂದು ಸಲ ನ್ಯಾಯಧೀಶನ ಮುಂದೆ ಬಂದು ನಿಲ್ಲಬೇಕಾದಲ್ಲಿ ತನ್ನ ಎಲ್ಲ ಸತ್ಯಗಳನ್ನು ಹೇಳಿಬಿಡುತ್ತಾನೆ. ಅದರಿಂದ ಅವನಿಗೆ ಮರಣದಂಡನೆ

ವಿಧಿಸಬೇಕೆಂದು ತೀರ್ಪು ಬರುತ್ತದೆ ಆದರೆ ಮರಣೆದಂಡನೆ ಜಾರಿಗೊಳ್ಳಬೇಕಾದ ಸಮಯದಲ್ಲಿಯೇ ರಾಜಕೀಯ ಪರಿಸ್ಥಿತಿ ಬದಲಾಯಿಸುತ್ತವೆ. ‘ದಿ ವಿಟ್ನೆಸ್’ ಎನ್ನುವ ಈ ಚಿತ್ರವನ್ನು ಆ ದೇಶದ ಸರಕಾರವೇ ನಿರ್ಮಿಸಿತ್ತು ಆದರೆ ಬಿಡುಗಡೆಯ ಮುಂಚೆಯೇ ಚಿತ್ರವನ್ನು ನಿಷೇಧಿಸಿತು. ಈ ಚಿತ್ರ ವಿದೇಶಗಳಲ್ಲಿ ಬಿಡುಗಡೆಯಾಗಿ ಪ್ರಸಿದ್ಧಿ ಮಾಡಿದ ನಂತರವೇ ಹಂಗೇರಿಯ ಕಮ್ಯನಿಸ್ಟ್ ಸರಕಾರ ನಿಷೇಧವನ್ನು ವಾಪಸ್ ತೆಗೆದುಕೊಂಡಿತು. ಬಾಷೋ ಅವರ ಚಿತ್ರಗಳಲ್ಲಿ ಕಮ್ಯನಿಸ್ಟ್ ಆಡಳಿತದ ಕೊರತೆಗಳನ್ನು ಪ್ರಶ್ನಿಸುತ್ತಾರೆಯೇ ಹೊರತು ಕಮ್ಯೂನಿಸಂ ಅನ್ನು ಅಲ್ಲ. ಹಾಗೂ ಅವರೆಲ್ಲ ಚಿತ್ರಗಳು ಎಷ್ಟೇ ಗಂಭೀರ ವಿಷಯಗಳನ್ನೆತ್ತಿಕೊಂಡರೂ ಚಿತ್ರದುದ್ದಕ್ಕೂ ಹಾಸ್ಯ, ದುರಂತದ ವಿಡಂಬನೆಯೇ ಎದ್ದುಕಾಣುತ್ತವೆ. ಕಮ್ಯನಿಸಂ ಬಗ್ಗೆ, ಅದರ ಇತಿಹಾಸದ ಬಗ್ಗೆ ಅನೇಕ ಅಧ್ಯಯನಗಳು ನಮಗೆ ಲಭ್ಯವಿವೆ ಆದರೆ ಕ್ರಾಂತಿಯ ನಂತರ ಅಲ್ಲಿಯ ಸಬ್‍ಆಲ್ಟರ್ನ್ ಇತಿಹಾಸದ ಬಗ್ಗೆ ತಿಳಿಯಬೇಕಾದರೆ ನಾವು ಸಾಹಿತ್ಯ, ಸಿನೆಮಾಗಳನ್ನೇ ನೆಚ್ಚಬೇಕಾಗುತ್ತದೆ. ಆ ನಿಟ್ಟಿನಲ್ಲಿ ಪೀಟರ್ ಬಾಷೋ ಮಹತ್ವದ ಚಿತ್ರ ಬರಹಗಾರ ಮತ್ತು ನಿರ್ದೇಶಕ.

ಸಿನೆಮಾ ನಿರ್ದೇಶನದ ಕೌಶಲ್ಯದ ಪ್ರಶ್ನೆ ಬಂದಾಗಲೂ ಪೀಟರ್ ಬಾಷೋ ನಂತಹ ನಿರ್ದೇಶಕರು ಗೆಲ್ಲುತ್ತಾರೆ ಎಂದು ನನಗನಿಸುತ್ತದೆ. ಏಕೆಂದರೆ ಅವರ ಚಿತ್ರಗಳಲ್ಲಿ ನಮಗೆ ಕಾಣಿಸುವುದು, ಮನಕ್ಕೆ ತಟ್ಟುವುದು ಆಯಾ ಕಥೆಗಳು, ಪಾತ್ರಗಳು, ಪಾತ್ರಗಳು ನೋವು ನಲಿವು ಅದರೊಂದಿಗೆ ಆಯಾ ಸಾಮಾಜಿಕ ಪರಿಸರದ ಚಿತ್ರಣ ಮತ್ತು ಅವರು ಕೇಳುವ ಪ್ರಶ್ನೆಗಳೇ ಹೊರತು ಎಲ್ಲಿಯೂ ನಮಗೆ ನಿರ್ದೇಶಕÀ ಅಥವಾ ಛಾಯಗ್ರಹಕÀ ಕಾಣಿಸಿಕೊಳ್ಳುವುದಿಲ್ಲ. ಒಂದು ಉತ್ತಮ ಚಿತ್ರದ ಕರುಹು ಇದೇ ತಾನೇ?

ವಿಶ್ವದ ಅಂಡರ್‍ರೇಟೆಡ್ ನಿರ್ದೇಶಕರಲ್ಲಿ ಒಬ್ಬರು ಎನ್ನಲಾಗುವ ಪೀಟರ್ ಬಾಷೋ ತಮ್ಮ ಚಲನಚಿತ್ರ ನಿರ್ದೇಶನದ ಸುಧೀರ್ಘ ಜೀವನವನ್ನು ಮುಗಿಸಿ 2009ರಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ತೀರಿಕೊಂಡರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...