Homeಅಂಕಣಗಳುಪೆರೋನಿಸಂ & ಮಿಲಿಟರಿ ಸರ್ವಾಧಿಕಾರ ಆಳುವ ವರ್ಗ ಮತ್ತು ಮಿಲಿಟರಿ

ಪೆರೋನಿಸಂ & ಮಿಲಿಟರಿ ಸರ್ವಾಧಿಕಾರ ಆಳುವ ವರ್ಗ ಮತ್ತು ಮಿಲಿಟರಿ

- Advertisement -
- Advertisement -

ಭರತ್ ಹೆಬ್ಬಾಳ್ |

1860ರಿಂದ 1910ರವರೆಗೂ ಉತ್ತರದ ದಿಕ್ಕಿನಲ್ಲಿರುವ ಪಂಪಾಸ್‍ನಲ್ಲಿ ಸ್ಥಳೀಯರ ಮಾರಣಹೋಮ ಮತ್ತು ಫಲವತ್ತಾದ ಭೂಮಿಯಲ್ಲಿ ಕೃಷಿ ವಿಸ್ತರಣೆಗಳಿಂದ ಅರ್ಜೆಂಟಿನಾದ ಆಧುನಿಕ ಆಳುವ ವರ್ಗಗಳು ಸೃಷ್ಟಿಯಾದವು. ಇದು ಯಾವ ರೀತಿ ಕ್ರೂರವಾಗಿತ್ತೆಂದರೆ ಪೆರುಗ್ವೆ ದೇಶದ 70% ಜನಸಂಖ್ಯೆಯನ್ನೇ ಅಳಿಸಿ ಹಾಕಿತ್ತು ಮತ್ತು ಇಂದಿನ ಅರ್ಜೆಂಟೀನದ ಗಡಿಗಳನ್ನು ಸ್ಥಾಪಿಸಿತ್ತು. 1970ರಿಂದ 1920ರವರೆಗೆ ಕೈಗಾರೀಕರಣಗೊಳ್ಳುತ್ತಿದ್ದ ಅಮೇರಿಕಕ್ಕೆ ಯುರೋಪಿನಿಂದ ಹೇಗೆ ಲಕ್ಷಾಂತರ ಜನ ವಲಸೆ ಬಂದರೋ ಹಾಗೆ ಅರ್ಜೆಂಟೀನಗೆ ಕೂಡ ಬಂದರು. 1870ರಲ್ಲಿ 18 ಲಕ್ಷವಿದ್ದ ಜನಸಂಖ್ಯೆ 45 ವರ್ಷಗಳಲ್ಲಿ ಯೂರೋಪಿನ ವಲಸೆಯಿಂದ 1914ರಲ್ಲಿ 78 ಲಕ್ಷಕ್ಕೆ ಏರಿತ್ತು. 1880ರಲ್ಲಿ 2500 ಕಿ.ಮೀ, ಇದ್ದ ರೈಲ್ವೆ ಲೈನ್ 1910ರಲ್ಲಿ 34000 ಕಿ.ಮೀ. ಆಗುವಷ್ಟು ರೈಲ್ವೆ ಮಾರ್ಗಗಳ ವಿಸ್ತಾರವಾಗಿತ್ತು. ವ್ಯವಸಾಯಕ್ಕೆ ಪೂರಕವಾದ ಸಣ್ಣ ಪುಟ್ಟ ಕಾರ್ಖಾನೆಗಳು ಮತ್ತು ಮಾಂಸ ಸಂಸ್ಕರಣಾ ಘಟಕಗಳು ಸ್ಥಾಪನೆಯಾದವು. ಬ್ರಿಟನ್ ಈ ಆರ್ಥಿಕ ಪ್ರಗತಿಯಲ್ಲಿ ಅತ್ಯಂತ ಹೆಚ್ಚು ಬಂಡವಾಳ ಹೂಡಿತ್ತು. ಯೂರೋಪಿನಿಂದ ಬಂದ ವಲಸಿಗರೇ ಹೆಚ್ಚಿದ್ದರು ಮತ್ತು ಆ ಸಮಯದ ಯೂರೋಪಿನಲ್ಲಿ ಭುಗಿಲೆದ್ದಿದ್ದ ದುರಭಿಮಾನಿ ರಾಷ್ಟ್ರೀಯ ರಾಜಕೀಯವು ಅದಕ್ಕೆ ತಕ್ಕುನಾದ ಸಂಸ್ಕೃತಿ ಮತ್ತು ಆರ್ಥಿಕತೆಯನ್ನು ರೂಪಿಸಿಕೊಂಡಿತ್ತು. ವಲಸೆ ಬಂದವರಿಂದಲೇ ರೂಪುಗೊಂಡಿದ್ದ ಅರ್ಜೆಂಟೀನದ ಭೂಮಾಲೀಕ ಆಳುವ ವರ್ಗದ ಸ್ಥಳೀಯ (ಅರ್ಜೆಂಟೀನ) ರಾಷ್ಟ್ರವಾದವು ಇಲ್ಲಿನ ಸಮಾಜದಲ್ಲಿ ಬಲವಾಗಿ ಬೇರೂರಿತ್ತು. ಮಿಲಿಟರೀ ಅಧಿಕಾರದ ಇತಿಹಾಸವಿದ್ದ ಅರ್ಜೆಂಟಿನಾಗೆ, ಒಂದು ಸ್ಥಾಪಿತ ಹಿತಾಸಕ್ತಿಗಳ ರಾಷ್ಟ್ರವಾದಿ ಆಳುವ ವರ್ಗ ಸೃಷ್ಟಿಯಾಗಿತ್ತು. 1929ರ ವಾಲ್ ಸ್ಟ್ರೀಟ್ ಕುಸಿತದ ನಂತರ ಮಾರುಕಟ್ಟೆ ಆರ್ಥಿಕತೆ ಒಂದು ದೊಡ್ಡ ಬಿಕ್ಕಟ್ಟನ್ನು ಎದುರಿಸಿತು. ಆಗ ವ್ಯವಸಾಯ ಕೇಂದ್ರಿತ ಆಳುವ ವರ್ಗ ಮಿಲಿಟರಿ ಮೂಲಕ ಅಸ್ತಿತ್ವದಲ್ಲಿದ್ದ ಸರ್ಕಾರವನ್ನು ಕಿತ್ತೊಗೆಯಿತು. ಮತ್ತು ದುಡಿಯುವ ವರ್ಗವು 1919ರ ದಂಗೆಯ ನಂತರ ಪಡೆದಿದ್ದ ಸವಲತ್ತುಗಳನ್ನು ಕಿತ್ತು ಹಾಕಿ ದಮನಕಾರಿ ಸರ್ವಾಧಿಕಾರವನ್ನು ಸ್ಥಾಪಿಸಿತ್ತು. ಇಟಲಿಯ ಮುಸೊಲೊನಿ ಮತ್ತು ಜರ್ಮನಿಯ ಹಿಟ್ಲರ್‍ನ ರಾಷ್ಟ್ರೀಯ ದುರಭಿಮಾನಿ ನಿಲುವೇ ಈ ಮಿಲಿಟರೀ ಸರ್ಕಾರ ನಿಲುವಾಗಿತ್ತು.
ಪೆರೋನಿಸಂ
ಮಿಲಿಟರೀ ಸರ್ಕಾರಗಳಿಂದಲೇ ನಡೆಯುತ್ತಿದ್ದ ಅರ್ಜೆಂಟೀನಾದಲ್ಲಿ ಆಧುನಿಕ ರಾಜಕೀಯ ಇತಿಹಾಸ ಶುರುವಾಗುವುದೇ ವಾನ್ ಡೊಮಿಂಗೊ ಪೆರೋನ್ ಎಂಬ ಮಾಜಿ ಮಿಲಿಟರೀ ಜನರಲ್‍ನಿಂದ. ಆತ 1930ರಿಂದ 1940ರವರೆಗೂ ಇಟಲಿಯಲ್ಲಿ ಮಿಲಿಟರೀ ಕಾರ್ಯತಂತ್ರಗಳ ಜೊತೆಗೆ ಇಟ್ಯಾಲಿಯನ್ ಫ್ಯಾಸಿಸಮ್, ಜರ್ಮನೀ ನಾಝೀ ಫ್ಯಾಸಿಸಮ್ ಕಲಿಯುತ್ತಾರೆ. 1943ರಲ್ಲಿ ಜನರಲ್ ಆರ್ಟುರೊ ರಾವನ್ ಜೊತೆಗೆ ಅಧ್ಯಕ್ಷ ರಾಮನ್ ಕ್ಯಾಸ್ಟಿಲ್ಲೊನನ್ನು ಅಧಿಕಾರದಿಂದ ಇಳಿಸಲು ಕ್ಷಿಪ್ರಕ್ರಾಂತಿ ನಡೆಸಿ ಗೆಲ್ಲುತ್ತಾರೆ. ಅವರಿಗೆ ಕಾರ್ಮಿಕ ಕಾರ್ಯದರ್ಶಿ ಸ್ಥಾನ ನೀಡಲಾಗುತ್ತದೆ, ನಂತರ ಅವರು ಕಾರ್ಮಿಕ ಇಲಾಖೆಯ ಮುಖ್ಯಸ್ಥರಾದರು ಮತ್ತು ಅಂತಿಮವಾಗಿ ಅವರು ಉಪಾಧ್ಯಕ್ಷರಾದರು. ಕಾರ್ಮಿಕರಿಗೆ ಸಂಬಳ, ಸವಲತ್ತುಗಳು, ಮತ್ತು ವಿರಾಮ ಸಮಯವನ್ನು ಹೆಚ್ಚಿಸಿದರು. ಅದೇ ಸಮಯದಲ್ಲಿ ಪರಿಚಯವಾದ ಏವ ಡ್ವಾರ್ಟೇ ಎಂಬ ರೇಡಿಯೋ ನಿರೂಪಕಿ ಪೆರೋನ್ ಯಶಸ್ಸಿನ ಹಿಂದಿನ ಶಕ್ತಿ ಎಂದು ಹೇಳಲಾಗುತ್ತದೆ. ತೀರಾ ಬಡತನದ ಹಿನ್ನೆಲೆಯಿಂದ ಬಂದಿದ್ದ ಏವ, ಪೆರೋನ್ ಮತ್ತು ಅರ್ಜೆಂಟೀನದ ಇತಿಹಾಸವನ್ನೇ ಬದಲಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. 1945ರಲ್ಲಿ ಇವರ ಜನಪ್ರಿಯತೆ ಎಷ್ಟಿತ್ತೆಂದರೆ ಇವರನ್ನು ಮಿಲಿಟರೀ ಆಡಳಿತವು ಸರ್ಕಾರದಿಂದ ಕಿತ್ತೊಗೆದಾಗ ನಗರದ ದುಡಿಯುವ ವರ್ಗ ಇವರ ಪರವಾಗಿ ಬೀದಿಗಿಳಿದು ದೊಡ್ಡ ಪ್ರತಿಭಟನೆ ಮಾಡಿತ್ತು ಮತ್ತು 1946ರಲ್ಲಿ ನಡೆದ ಚುನಾವಣೆಯಲ್ಲಿ ಪೇರೋನ್ ಅಧಿಕಾರ ಹಿಡಿದಾಗ ಆ ಯಶಸ್ಸಿನ ಹಿಂದಿನ ರೂವಾರಿಯಾಗಿದ್ದರು.
ಫಾಸಿವಾದದ ಹಿನ್ನೆಲೆ ಇದ್ದರೂ ಪೆರೋನ್‍ನ ನೀತಿಗಳು ಅರ್ಜೆಂಟೀನಾದ ದುಡಿಯುವ ಮತ್ತು ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಉಪಕಾರಿಯಾಗಿದ್ದವು. ಇದನ್ನು ಯೂರೋಪಿನ ಸೋಶಿಯಲ್ -ಡೆಮೊಕ್ರ್ಯಾಟ್ಸ್ ರಾಜಕೀಯ ನೀತಿಗಳಿಗೆ ಹೋಲಿಸಲಾಗುತ್ತದೆ. ಮೊದಲ ಬಾರಿಗೆ ದುಡಿಯುವ ಜನರ ಮಕ್ಕಳು ಕಾಲೇಜು ವಿಶ್ವವಿದ್ಯಾನಿಲಯಗಳ ಮೆಟ್ಟಿಲು ಏರುವಂತಾಯಿತು. ಶಿಕ್ಷಣ ಎಲ್ಲರಿಗೂ ಉಚಿತವಾಗಿ ದೊರೆಯುವಂತಾಯಿತು. ಬಡವರ ಪರವಾಗಿ ಏವ ಪೇರೋನ್ ರೂಪಿಸಿದ ನೀತಿಗಳನ್ನು ಅರ್ಜೆಂಟಿನಿಯನ್ನರು ಇನ್ನೂ ಸ್ಮರಿಸುತ್ತಾರೆ. ಪೇರೋನಿಸ್ಮ್‍ನ ಮುಖ್ಯ ಧ್ಯೇಯ ಕಮ್ಯೂನಿಸಮ್ ಮತ್ತು ಕ್ಯಾಪಿಟಲಿಸಮ್ ವಿರೋಧಿಸಿ ನ್ಯಾಯ ಮತ್ತು ಕಲ್ಯಾಣದ ಸವಲತ್ತುಗಳನ್ನು ಅರ್ಜೆಂಟೀನಾ ಪ್ರಭುತ್ವದ ಮೂಲಕ ಪಡೆಯಬಹುದಾದ ಮೂರನೇ ಪರ್ಯಾಯವನ್ನು ಕಂಡುಕೊಳ್ಳುವುದು. ಇವರ ಘೋಷಣೆಯೇ “ವರ್ಗ ಸಂಘರ್ಷವನ್ನು ಬಿಟ್ಟು, ದುಡಿಯುವ ಜನ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ” ಹೋಗಿ ಪ್ರಭುತ್ವದ ಸವಲತ್ತುಗಳನ್ನು ಪಡೆಯುವುದು. ಹಲವು ಆರ್ಥಿಕ ರಕ್ಷಣಾತ್ಮಕ ನೀತಿಗಳನ್ನು ಅನುಸರಿಸಿದ್ದ ಪೆರೋನ್ ಮುಂದೆ ಹೋಗುತ್ತಾ 1948ರಲ್ಲಿ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಕಸರತ್ತು ಮಾಡಿದರು. ವಿದೇಶಿ ಬಂಡವಾಳವನ್ನು ಆಕರ್ಷಿಸಲು ಮತ್ತು ಉತ್ಪಾದನೆ ಹೆಚ್ಚಿಸಲು ಶಿಸ್ತುಬದ್ದ ದುಡಿಯುವ ವರ್ಗ ಬೇಕು. ಆದರೆ ಪೇರೋನ್ ಅವರಿಗೆ ಸವಲತ್ತುಗಳನ್ನು ಕೊಟ್ಟು ಕಾರ್ಮಿಕ ವರ್ಗವನ್ನು ಹಾಳು ಮಾಡುತ್ತಿದ್ದಾನೆ ಎಂದು ಆಳುವ ವರ್ಗ ಪೇರೋನ್ ವಿರುದ್ದ ತಿರುಗಿ ಬಿದ್ದರು. 1955ರಲ್ಲಿ ಮಿಲಿಟರೀ ನಡೆಸಿದ ಕ್ಷಿಪ್ರ ಕ್ರಾಂತಿಯಿಂದ ಪೇರೊನ್‍ಅನ್ನು ಸ್ಪೇನ್ ದೇಶಕ್ಕೆ ಉಚ್ಚಾಟಿಸಲಾಗಿತ್ತು. ನಂತರ ಬಂದ ಮಿಲಿಟರೀ ಸರ್ವಾಧಿಕಾರ ಒಂದು ರೀತಿಯಲ್ಲಿ ಸಂಘಟಿತರಾಗಿದ್ದ ಕಾರ್ಮಿಕ ವರ್ಗವನ್ನು ಒಡೆಯಲು ಪ್ರಯತ್ನಿಸಿತು. 60ರಿಂದ 80ರ ದಶದವರೆಗೂ ಅತಿ ಹೆಚ್ಚು ಕಾರ್ಮಿಕ ವರ್ಗವನ್ನು ಹೊಂದಿದ್ದ ದಕ್ಷಿಣ ಅಮೆರಿಕಾದ ಈ ದೇಶವು ಅವರಿಗೆ ಪ್ರತಿರೋಧಗಳನ್ನೂ ಒಡ್ಡುತ್ತಲಿತ್ತು.
ಮಿಲಿಟರಿ ಸರ್ವಾಧಿಕಾರ
1959ರಲ್ಲಿ ಫಿಡೆಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಚೆ ಗುವೇರ ಮತ್ತು ಸಂಗಡಿಗರು ಮಾಡಿದ ಕ್ಯೂಬ ಕ್ರಾಂತಿ ನಂತರದ ಬೆಳವಣಿಗೆಯಲ್ಲಿ ದಕ್ಷಿಣ ಅಮೆರಿಕಾದಲ್ಲಿ ಹಬ್ಬುತ್ತಿದ್ದ ಕಮ್ಯೂನಿಸಮ್ ತಡೆಯಲು ಮತ್ತು ಉಳ್ಳವರ ಪರವಾದ ನವ ಉದಾರೀಕರಣದ ಹೊಸ ರೀತಿಯ ಆರ್ಥಿಕ ವ್ಯವಸ್ಥೆಯನ್ನು ದೇಶಗಳ ಮೇಲೆ ಹೇರಲು ಜಾಗತಿಕ ಬಂಡವಾಳಶಾಹಿಗಳು ಬಳಸಿಕೊಂಡದ್ದೆ ಚಿಲಿ ಮತ್ತು ಅರ್ಜೆಂಟಿನವನ್ನು. 1955ರಿಂದ 1969ವರೆಗೂ ಈ ಸಂಘರ್ಷವೇ ಒಂದು ಸಾಮಾನ್ಯ ಸ್ಥಿತಿಯಾಗಿತ್ತು. ಬೆಳೆಯುತ್ತಿದ್ದ ಸಾಮಾಜಿಕ ಉದ್ವೇಗದ ನಡುವೆ 1966ರಲ್ಲಿ ವಿದ್ಯಾರ್ಥಿಗಳ ದೊಡ್ಡ ಹೋರಾಟ ಅರ್ಜೆಂಟಿನಾದ್ಯಂತ ಭುಗಿಲೆದ್ದಿತ್ತು. ಆರ್ಥಿಕ ಬಿಕ್ಕಟ್ಟು, ಏರುತ್ತಿರುವ ಬೆಲೆ, ಕ್ಷೀಣಿಸುತ್ತಿರುವ ಸಂಬಳ ಮತ್ತು ಸವಲತ್ತುಗಳು 60 ಮತ್ತು 80ರ ದಶಕದಲ್ಲಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿದ್ದ ದಕ್ಷಿಣ ಅಮೆರಿಕಾದ್ಯಂತ ತೀವ್ರ ಹೋರಾಟಗಳಿಗೆ, ಬಂಡಾಯಗಳಿಗೆ ದಾರಿ ಮಾಡಿಕೊಟ್ಟಿತ್ತು. 1973ರ ಹೊತ್ತಿಗೆ ಕಚ್ಚಾ ತೈಲ ಬೆಲೆ ಬಿಕ್ಕಟ್ಟಿನಿಂದ ತೈಲ ಬೆಲೆ ನಾಲ್ಕು ಪಟ್ಟು ಹೆಚ್ಚಾದಾಗ ಜಾಗತಿಕ ಬಂಡವಾಳಿಗರು ಹೊಸ ದಾರಿಯನ್ನು ಹುಡುಕಿಕೊಂಡರು. ಹೊಸದಾಗಿ ಸೃಷ್ಟಿಯಾಗಿದ್ದ ಪೆಟ್ರೋ ಡಾಲರ್ ಹಣವನ್ನು ಹೂಡಲು ಗಲ್ಫ್ ರಾಷ್ಟ್ರಗಳು ಅಮೆರಿಕ ಬ್ಯಾಂಕುಗಳನ್ನು ಬಳಸಿಕೊಂಡಿದ್ದರು. ಈ ಹಣವನ್ನು ಜಾಗತಿಕ ಬಂಡವಾಳಶಾಹಿಗಳು ಶಿಕಾಗೋ ಸ್ಕೂಲ್ ಆಫ್ ಎಕನಾಮಿಕ್ಸ್‍ನ ಮುಕ್ತ ಮಾರುಕಟ್ಟೆ ಪ್ರತಿಪಾದಕ ಮಿಲ್ಟನ್ ಫ್ರೀಡ್‍ಮೆನ್ ಮೂಲಕ ಹೊಸದಾದ ನವಉದಾರೀಕರಣದ ಆರ್ಥಿಕತೆಯನ್ನು ಪರಿಚಯಿಸಿದರು. ಅದಕ್ಕೆ ಅವರು ಮಿಲಿಟರೀ ಸರ್ವಾಧಿಕಾರದ ನೆರವು ಪಡೆದುಕೊಂಡಿದ್ದರು.
ಮೊದಲು ಚಿಲಿಯಲ್ಲಿ ಪ್ರಜಾತಾಂತ್ರಿಕ ಮಾರ್ಗದಲ್ಲಿ ಚುನಾಯಿತರಾಗಿದ್ದ ಸ್ಯಾಲ್ವಡಾರ್ ಅಲೆಂಡೆಯನ್ನು ಸೆಪ್ಟೆಂಬರ್ 11, 1973ರಂದು ಯುದ್ದ ವಿಮಾನಗಳಿಂದ ಬಾಂಬ್ ಹಾಕಿ ಕೊಂದರು ಮತ್ತು ಆಗುಸ್ತೋ ಪಿಣೋಚೆ ಎಂಬ ಮಿಲಿಟರೀ ಸರ್ವಾಧಿಕಾರಿಯನ್ನು ಅಧ್ಯಕ್ಷನನ್ನಾಗಿಸಲಾಯಿತು. ಕಲ್ಯಾಣ ರಾಜ್ಯದ ಸವಲತ್ತುಗಳನ್ನು ತೆಗೆದು ಹಾಕಿ, ಸಂಬಳವನ್ನು ಅರ್ಧ ಮಾಡಿ ಕಾರ್ಮಿಕ ಹೋರಾಟಗಳನ್ನು ನಿರ್ದಾಕ್ಷಿಣ್ಯವಾಗಿ ಧ್ವಂಸ ಮಾಡಲಾಯಿತು. ಏರುತ್ತಿರುವ ನಿರುದ್ಯೋಗ ಮತ್ತು ಸತತ ಕಾರ್ಮಿಕ ಬಂಡಾಯಗಳಿಂದ ಅತಂತ್ರ ರಾಜಕೀಯ ಸ್ಥಿತಿಯಲ್ಲಿದ್ದ ಅರ್ಜೆಂಟೀನಾ ಕೂಡ ಅದನ್ನೇ 1976ರಲ್ಲಿ ಅನುಸರಿಸಿತು. ಅದಕ್ಕೆ ಅವರು ಕೊಟ್ಟ ಕಾರಣ ಸಮಾಜದಲ್ಲಿ ತಲೆದೋರುತ್ತಿರುವ ಗೆರಿಲ್ಲಾ ದಂಗೆಗಳ ವಿರುದ್ಧ ನಿರ್ಣಾಯಕ ಹೋರಾಟ ಅಗತ್ಯವೆಂದು. ತನ್ನ ಅರೆಸೈನಿಕ ಗುಂಪುಗಳ ಸಹಯೋಗದೊಂದಿಗೆ ಮಿಲಿಟೆಂಟ್ ಕಾರ್ಮಿಕರ ಮತ್ತು ಯೂನಿಯನ್ ಮುಖಂಡರ ಬಂಧನ, ಚಿತ್ರಹಿಂಸೆ ಮತ್ತು ಕೊಲೆಗಳನ್ನು ನಿರಂತರವಾಗಿ ನಡೆಸಿದರು. ಒಂದು ಅಂದಾಜಿನ ಪ್ರಕಾರ 50 ಸಾವಿರ ಎಡಪಂಥೀಯ ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು, ಕಾರ್ಮಿಕ ಒಕ್ಕೂಟದ ನಾಯಕರುಗಳು ಕಾಣೆಯಾಗತೊಡಗಿದರು. ನಂತರ ಹೊರಬಂದ ಗೌಪ್ಯ ದಾಖಲೆಗಳ ಪ್ರಕಾರ ಅಮೆರಿಕ ಈ “ಕೊಳಕು ಯುದ್ಧದಲ್ಲಿ” ನೇರ ಭಾಗಿಯಾಗಿತ್ತಲ್ಲದೆ ಪೊಲೀಸ್ ಹಾಗೂ ಮಿಲಿಟರೀ ತರಬೇತಿ ಸಹಿತ ಸೇನೆ ಉಪಕರಣಗಳನ್ನು ಧಾರಾಳವಾಗಿ ಅರ್ಜೆಂಟೀನದ ಮಿಲಿಟರೀ ಸರ್ವಾಧಿಕಾರಕ್ಕೆ ನೀಡಿತ್ತು. ಇವೆಲ್ಲದರ ನಡುವೆಯೂ ಅರ್ಜೆಂಟೀನದ ಸಾಮಾನ್ಯ ಪ್ರಜೆಗಳು ಮತ್ತು ಕಾರ್ಮಿಕ ವರ್ಗವು ಸರ್ವಾಧಿಕಾರದ ವಿರುದ್ಧ ನಿರಂತರ ಪ್ರತಿರೋಧವನ್ನು ಒಡ್ಡಿತು.
ಪ್ರಭುತ್ವದ ಭಯೋತ್ಪಾದನೆ ಮತ್ತು ಕಣ್ಮರೆಯಾಗುತ್ತಿದ್ದ ಯುವಕ/ಯುವತಿಯರ ಅಮ್ಮಂದಿರು ಏಪ್ರಿಲ್ 30, 1977ರಲ್ಲಿ ಇತಿಹಾಸಿಕ “ಪ್ಲಾಜಾ ಡೆ ಮಾಯೊವಿನ ಅಮ್ಮಂದಿರು” ಪ್ರತಿಭಟನೆ ಮಾಡಿದರು ಮತ್ತು ಅದು ಈಗಲೂ ಜೀವಂತವಾಗಿದೆ. ಅರ್ಜೆಂಟೀನಾದ ಸವಾಧಿಕಾರಿ ಆಡಳಿತವು 1979ರ ಕಚ್ಚಾ ತೈಲ ಬಿಕ್ಕಟ್ಟಿನ ನಂತರ 1981ರಲ್ಲಿ ವಿದೇಶಿ ಸಾಲದ ಸುಳಿಯಲ್ಲಿ ಸಿಲುಕಿತು. 1982ರಲ್ಲಿ ಫಾಕ್‍ಲ್ಯಾಂಡ್ ದ್ವೀಪ ಅಥವಾ ಮ್ಯಾಲ್ವೀನೇಸ್ ಎಂದು ಕರೆಯಲ್ಪಡುವ ಬ್ರಿಟಿಷ್ ದ್ವೀಪವನ್ನು ಆಕ್ರಮಿಸಲು ಹೋಗಿ ಸೋತುಹೋಯಿತು. ಅದು ಸಾಮಾನ್ಯ ನಾಗರಿಕರ ಸಂಘಟಿತ ಪ್ರತಿರೋಧದ ಕಾರಣದಿಂದ ಪ್ರಜಾತಾಂತ್ರಿಕ ವ್ಯವಸ್ಥೆಗೆ ಹಿಂದಿರುಗಲು ನಾಂದಿಯಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...