Homeಅಂಕಣಗಳುಮಾಧ್ಯಮದ ವಿಪ್ರ ವೈರಸ್ಸನ್ನು ಲಂಕೇಶರು ಆಗಲೇ ಗುರುತಿಸಿದ್ದರು

ಮಾಧ್ಯಮದ ವಿಪ್ರ ವೈರಸ್ಸನ್ನು ಲಂಕೇಶರು ಆಗಲೇ ಗುರುತಿಸಿದ್ದರು

- Advertisement -
ಬ್ರಾಹ್ಮಣ ಮಾಧ್ಯಮ: ಪ್ರತಿಕ್ರಿಯೆ 2
| ಎಲ್.ಎನ್.ಮುಕುಂದರಾಜ್ |
ಜಗತ್ತಿನ ಚರಿತ್ರೆಯನ್ನು ಗಮನಿಸಿ ಸಾಮಾನ್ಯವಾಗಿ ಸರ್ವಾಧಿಕಾರಿಗಳು ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ಮಾಧ್ಯಮಗಳನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿಯೂ ಈಗ ಅಂತಹುದೇ ವಾತಾವರಣ ನಿರ್ಮಾಣವಾಗಿದೆ.
ನಾನು ನನ್ನ ಪ್ರಾಯದ ದಿನಗಳಲ್ಲಿ ಬಿಜೆಪಿಯ ಬಹು ನಿಷ್ಠಾವಂತ ಬೆಂಬಲಿಗನಾಗಿದ್ದೆ. ನಾನು ಬಲ್ಲಂತೆ ಬಿಜೆಪಿ ಒಂದು ರಾಜಕೀಯ ಪಕ್ಷವೇ ಅಲ್ಲ. ಅದರ ಬೆನ್ನು ಕಟ್ಟಿ ನಿಲ್ಲಿಸಿದವರು ಪುರೋಹಿತರು. ಕಳೆದ ಎಪ್ಪತ್ತು ವರ್ಷಗಳಲ್ಲಿ ನಮ್ಮ ದೇಶದ ತಳ ಸಮುದಾಯ, ಮುಖ್ಯವಾಗಿ ನಮ್ಮ ಹೆಣ್ಣು ಮಕ್ಕಳು ವಿದ್ಯೆ, ಉದ್ಯೋಗಗಳನ್ನು ಪಡೆದು ನೆಮ್ಮದಿಯ ಬದುಕು ಕಟ್ಟಿಕೊಂಡರು. ಇದಕ್ಕೆ ಪೂರ್ವದಲ್ಲಿ ಸಾವಿರಾರು ವರ್ಷಗಳಿಂದ ಈ ದೇಶದ ಒಂದು ಮೇಲ್ಜಾತಿ ಮಾತ್ರ ವಿದ್ಯೆ, ಉದ್ಯೋಗದ ಅವಕಾಶ ಪಡೆದಿತ್ತು. ಈಗ ಎಲ್ಲಾ ಜಾತಿಯ ಜನ ವಿದ್ಯಾವಂತರಾಗಿ ಸುಖದ ಬದುಕಿನ ಕಡೆಗೆ ನಡೆದ ಪವಾಡವು ಅವರನ್ನು ಧಿಗ್ಭ್ರಾಂತಗೊಳಿಸಿದೆ. ಜೊತೆಗೆ ಅವರ ಹೊಟ್ಟೆಯುರಿಗೂ ಕಾರಣವಾಗಿದೆ.
ಇದನ್ನು ನಿಯಂತ್ರಿಸಲು ಸಂವಿಧಾನವನ್ನೇ ಬುಡಮೇಲು ಮಾಡಬೇಕಾದ ಅನಿವಾರ್ಯತೆ ವೈದಿಕರಿಗೆ ಇದೆ. ತಮ್ಮ ಈ ಒಳ ದುರುದ್ದೇಶವನ್ನು ಕಾರ್ಯರೂಪಕ್ಕೆ ತರಲು ಅವರು ಬಿಜೆಪಿ ಎಂಬ ಪಕ್ಷವನ್ನು ಕಟ್ಟಿದರು. 90% ಶೂದ್ರರ ಓಟು ಗಿಟ್ಟಿಸಲು ಮುಸ್ಲಿಮರೆಂಬ ಬೆದರು ಗೊಂಬೆಯನ್ನು ಮುಂದು ಮಾಡಿದರು. ತಮ್ಮ ನೀತಿಯನ್ನು ಶೂದ್ರರ ದಡ್ಡ ತಲೆಗಳಿಗೆ ತುಂಬುವ ಆಧುನಿಕ ಮಾಧ್ಯಮಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು.
ಖಾಸಗಿ ಟಿ.ವಿ ವಾಹಿನಿಗಳಿಗೆ ಬಂಡವಾಳ ಹೂಡುವವರು ಶ್ರೀಮಂತ ಶೂದ್ರರು. ಆದರೆ ಅಲ್ಲಿ ಕೆಲಸ ಮಾಡುವವರು ಬಹುತೇಕ ಬ್ರಾಹ್ಮಣರು. ಇಂದಿನ 99% ಮಾಧ್ಯಮಗಳು ಬ್ರಾಹ್ಮಣರು ಹಿಡಿತದಲ್ಲಿವೆ. ಅವರು ಜಾತಿ ಮತ್ತು ಹಣದ ಕಾರಣಕ್ಕಾಗಿ ಸಂಪೂರ್ಣ ಬಿಜೆಪಿಯ ಬೆಂಬಲಿಗರಾಗಿ ಕೆಲಸ ಮಾಡುತ್ತಿದ್ದಾರೆ.
ರಾಮಕೃಷ್ಣ ಹೆಗಡೆಯಂತಹ ಗುಳ್ಳೆನರಿಯಂತಹ ರಾಜಕಾರಣಿಯನ್ನು ಬಹು ದೊಡ್ಡ ತತ್ವಜ್ಞಾನಿಯಂತೆ ಆ ಕಾಲದ ಪತ್ರಿಕೆಗಳು ಬಿಂಬಿಸಿದ್ದವು. ಇದಕ್ಕೆ ಏಕೈಕ ಕಾರಣ ಹೆಗಡೆ ಜಾತಿ. ಆಗಲೆ ವೈದಿಕ ವಿಕೃತತೆಯನ್ನು ಲಂಕೇಶರಂತಹ ಲೇಖಕರು ಗ್ರಹಿಸಿದ್ದರು. ನಂತರ ನಿಧಾನವಾಗಿ ಈ ವಿಕೃತ ವೈರಸ್ ಎಲ್ಲ ಮಾಧ್ಯಮಗಳನ್ನೂ ಆಕ್ರಮಿಸತೊಡಗಿತು.
ಬಿಜೆಪಿಯ ಸರ್ವಾಧಿಕಾರಿ ಆಡಳಿತಕ್ಕೆ ತಡೆಯೊಡ್ಡಲು ಪ್ರತಿಯೊಬ್ಬರು ಆಲೋಚಿಸಬೇಕು. ಟಿ.ವಿ ವಾಹಿನಿಗಳು ಸೇರಿದಂತೆ ಎಲ್ಲ ಮಾಧ್ಯಮಗಳಿಗೂ ದಲಿತ, ಶೂದ್ರ ಹುಡುಗರನ್ನು ಪತ್ರಕರ್ತರನ್ನಾಗಿ ಸೇರಿಸುವ ಬಗ್ಗೆ ಜಾತ್ಯತೀತರು ಪ್ರಯತ್ನ ಪಡಬೇಕು. ಆ ಮೂಲಕ ಮಾಧ್ಯಮಕ್ಕೆ ಹತ್ತಿದ ವಿಪ್ರ ವೈರಸ್ಸನ್ನು ನಾಶ ಮಾಡಬೇಕು.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...