Homeಅಂಕಣಗಳುರಾಮ, ಅಯ್ಯಪ್ಪನ ಹೆಸರಲ್ಲಿ ಬಿಜೆಪಿಯ ಕುತಂತ್ರಗಳು

ರಾಮ, ಅಯ್ಯಪ್ಪನ ಹೆಸರಲ್ಲಿ ಬಿಜೆಪಿಯ ಕುತಂತ್ರಗಳು

- Advertisement -
- Advertisement -

ಎಚ್.ಎಸ್.ದೊರೆಸ್ವಾಮಿ |

ಬಿಜೆಪಿಯ ಬತ್ತಳಿಕೆಯಲ್ಲಿದ್ದ ಎಲ್ಲಾ ಆಯುಧಗಳು ಠುಸ್ಸೆಂದಿವೆ. ಅದರಿಂದ ಮಧ್ಯಪ್ರದೇಶ, ರಾಜಸ್ಥಾನ ಶಾಸನಸಭೆ ಚುನಾವಣೆಗಳನ್ನು ಎದುರಿಸಲು ಬಿಜೆಪಿಗೆ ನಡುಕ ಹುಟ್ಟಿದೆ. ರಫೇಲ್ ಡೀಲ್, ನೋಟುಗಳ ಅಮಾನ್ಯೀಕರಣ, ಸ್ವಚ್ಛ ಭಾರತ, ಜನರ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುವುದು ಮುಂತಾದ ಮೋದಿಯ ಎಲ್ಲಾ ತಂತ್ರಗಾರಿಕೆಯೂ ವಿಫಲಗೊಂಡು ಮೋದಿ, ಷಾಗಳು ತತ್ತರಿಸ ಹತ್ತಿದ್ದಾರೆ. ಸೀಮಾಂದ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯುಡು ಎಲ್ಲ ವಿರೋಧ ಪಕ್ಷಗಳನ್ನು ಒಂದುಗೂಡಿಸಿ ಲೋಕಸಭೆಯ ಚುನಾವಣೆಯನ್ನು ಎದುರಿಸಲು ಭಾರಿ ಪ್ರಯತ್ನ ಮಾಡುತ್ತಿರುವುದೂ ಬಿಜೆಪಿಗೆ ಭಾರಿ ತಲೆನೋವಾಗಿದೆ. ಆದ್ದರಿಂದ ಮೋದಿ, ಷಾಗಳು ಚುನಾವಣೆ ಎದುರಿಸಲು ಹೊಸತಂತ್ರ ರೂಪಿಸಲು ಹೆಣಗುತ್ತಿದ್ದಾರೆ.

ಅವರಿಗೆ ರಾಮಚಂದ್ರ ಭೂಮಿಯ ನೆನಪಾಗಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕೂಡಲೇ ಕಟ್ಟುವ ಮಾತನ್ನಾರಂಭಿಸಿದ್ದಾರೆ. ವಿಶ್ವಹಿಂದೂ ಪರಿಷತ್ ಮುಂತಾದ ಹಿಂದೂ ಮತಾಂಧ ಸಂಸ್ಥೆಗಳ ನೆರವಂತೂ ಬಿಜೆಪಿಗೆ ಇದ್ದೇ ಇದೆ. ಆರೆಸ್ಸೆಸ್ ಏರ್ಪಡಿಸಿದ್ದ ಬೈಠಕ್‍ಗೆ ಬಿಜೆಪಿ ಅಧ್ಯಕ್ಷ ಷಾ ಹೋಗಿ ಅಯೋಧ್ಯೆಯಲ್ಲಿ ಒಂದು ಗದ್ದಲ ಎಬ್ಬಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲೇಬೇಕೆಂಬ ಉದ್ದೇಶ ಬಿಜೆಪಿಗಂತೂ ಇಲ್ಲ. ರಾಮಮಂದಿರ ನಿರ್ಮಾಣದ ಪ್ರಶ್ನೆಯನ್ನು ಜೀವಂತ ಇಟ್ಟು ಮತ ಕೀಳುವ ತಂತ್ರಗಾರಿಕೆ ಬಿಜೆಪಿಯದ್ದು. ಒಂದೊಮ್ಮೆ ರಾಮಚಂದ್ರನ ದೇವಾಲಯವನ್ನು ಕಟ್ಟಿಬಿಟ್ಟರೆ ಚುನಾವಣೆ ಎದುರಾದಾಗ ಅಯೋಧ್ಯೆ ಟ್ರಂಪ್‍ಕಾರ್ಡ್ ಬಳಸಲು ಎಲ್ಲಿ ಸಾಧ್ಯವಾದೀತು? ರಾಮ ಮಂದಿರದ ನೆಪದಲ್ಲಿ ಹಿಂದೂಗಳ ಮತಗಳನ್ನು ಕೀಳುತ್ತಾ ಹೋಗುವುದು ಬಿಜೆಪಿಯ ಹುನ್ನಾರ. ಇದಕ್ಕಾಗಿ ಅಯೋಧ್ಯೆಯಲ್ಲಿ ಒಂದು ಲಕ್ಷ ಹಿಂದೂಗಳ ಸಮಾವೇಶವನ್ನು ನಡೆಸಿದ್ದಾರೆ. ಮೋದಿಗೆ ಸಾಥ್ ಕೊಡಲು ಉತ್ತರ ಪ್ರದೇಶದ ಸನ್ಯಾಸದ ಛದ್ಮ ವೇಷಧಾರಿ ಮುಖ್ಯಮಂತ್ರಿ ಆದಿತ್ಯನಾಥ್ ಇದ್ದೇ ಇದ್ದಾನೆ. ಉತ್ತರಪ್ರದೇಶ ಸರ್ಕಾರ ಈ ಮಾರೀಚನ ಕೈಯಲ್ಲಿರುವುದರಿಂದ ಬಿಜೆಪಿ ರಕ್ಷಣೆಗೆ ಬೇಕಾದ ಎಲ್ಲ ಕ್ರಮಗಳೂ ಸುಲಭ. ಅಯೋಧ್ಯೆಯಲ್ಲಿ ತಲೆತಲಾಂತರದಿಂದ ನೆಲೆಸಿರುವ ಮುಸ್ಲಿಂ ಜನಾಂಗಕ್ಕೆ ತಮಗೇನು ಕೇಡು ಕಾದಿದೆಯೋ ಎಂಬ ಆತಂಕ ಉಂಟಾಗಿದೆ. ಈ ಹಿಂದೂ ಮತಾಂಧರ ಸಮಾವೇಶದಲ್ಲಿ ಎಷ್ಟು ಹೆಣಗಳು ಬೀಳುವುದೋ ಎಂಬ ಆತಂಕ ಅಲ್ಲಿಯ ಮಹಮದೀಯರದಾಗಿದೆ. ಆದರೂ ಸಾಮೂಹಿಕವಾಗಿ ಸಮಾವೇಶ ನಡೆಯುವ ಕಾಲದಲ್ಲಿ ಅಯೋಧ್ಯೆ ಬಿಟ್ಟುಹೋಗುವುದಾಗಿ ಘೋಷಿಸಿದ್ದಾರೆ.

ಅಯೋಧ್ಯೆಯಲ್ಲಿ ಅನೇಕ ಕಾಲದಿಂದ ಹಿಂದೂ ಮುಸ್ಲಿಮರು ಅನ್ಯೋನ್ಯವಾಗಿ ಬಾಳುತ್ತಿದ್ದಾರೆ. ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಅಡ್ವಾಣಿಯವರ ನೇತೃತ್ವದಲ್ಲಿ ಕರಸೇವಕರು ಕೆಡಿಸಿದ ಸಂದರ್ಭ ಹೊರತುಪಡಿಸಿ, ಅದಕ್ಕೆ ಹಿಂದಿನ ದಿನಗಳಲ್ಲಾಗಲಿ, ಅನಂತರದ ದಿನಗಳಲ್ಲಾಗಲಿ ಅಯೋಧ್ಯೆಯಲ್ಲಿ ಕೋಮುಗಲಭೆ ಆಗಿಲ್ಲ. ಲೋಕಸಭೆ ಚುನಾವಣೆಯ ನಿಮಿತ್ತ ಈಗ ಮತ್ತೆ ಅಯೋಧ್ಯೆಯಲ್ಲಿ ಗದ್ದಲ ಎಬ್ಬಿಸಿ ಗೊಂದಲ ಉಂಟುಮಾಡಿ ಚುನಾವಣೆಯಲ್ಲಿ ಗೆದ್ದು ಬರುವ ಸಂಚನ್ನು ರೂಪಿಸಲಾಗಿದೆ.

ಎರಡನೆಯದಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯದ ಸಮಸ್ಯೆಯೊಂದನ್ನು ಬಿಜೆಪಿ ಹುಟ್ಟುಹಾಕಿ ಅದರ ದುರ್ಲಾಭ ಪಡೆಯುವ ಹುನ್ನಾರವೂ ರೂಪುಗೊಳ್ಳುತ್ತಿದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಸ್ತ್ರೀಯರಿಗೂ ಪ್ರವೇಶ ಮಾಡುವ ಹಕ್ಕಿದೆಯೆಂದು ಸರ್ವೋಚ್ಛ ನ್ಯಾಯಾಲಯ ತೀರ್ಪಿತ್ತಿದೆ. ದೇವಸ್ಥಾನದ ಮುಖ್ಯ ಅರ್ಚಕರು, ಆಡಳಿತ ಮಂಡಳಿಯವರು ಸರ್ವೋಚ್ಛ ನ್ಯಾಯಾಲಯದ ಈ ತೀರ್ಪನ್ನು ಪರಿಶೀಲಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ. ಕೇರಳ ಸರ್ಕಾರಕ್ಕೆ ಈಗಂತೂ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸದೆ ಬೇರೆದಾರಿ ಇಲ್ಲವಾಗಿದೆ. ಭಾರತೀಯ ಜನತಾ ಪಕ್ಷಕ್ಕೆ ಈಗ ಮೋದಿಯೇ ಆದರ ಸರ್ವಾಧಿಕಾರಿ. ‘any stick is good to beat’ ಇದು ಮೋದಿಯ ನಿಲುವು. ಹೀಗಾಗಿ ಬೇಜವಾಬ್ದಾರಿಯ ಪ್ರಧಾನಮಂತ್ರಿ ಮೋದಿ ಚುನಾವಣೆ ದೃಷ್ಟಿಯಿಂದ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸಿ ನಡೆದುಕೊಳ್ಳಲು ಹೊರಟಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಕೇರಳೀಯ ಹಿಂದೂಗಳ ಮತಗಳನ್ನೆಲ್ಲ ತನ್ನದಾಗಿಸಿಕೊಳ್ಳುವ ಏಕೈಕ ಉದ್ದೇಶದಿಂದ ಅಯ್ಯಪ್ಪ ಭಕ್ತರನ್ನು ಕೇರಳ ಸರ್ಕಾರದ ವಿರುದ್ಧ ಎತ್ತಿ ಕಟ್ಟಲು ಸಂಚು ಮಾಡಲಾಗಿದೆ. ಮಹಿಳೆಯರಿಗೂ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶ ದೊರೆಯಬೇಕು ಎಂಬುದು ಹಿಂದೂಗಳೆಲ್ಲರ ಅಭಿಮತವಾಗಿದೆ. ಹಿಂದೂ ಮತಾಂಧರು ಇದನ್ನು ಅರ್ಥಮಾಡಿಕೊಳ್ಳಬೇಕು. ಚುನಾವಣೆ ಗೆಲ್ಲುವುದಕ್ಕೆ ಇದು ಸಾಧನ ಎಂದು ಸರ್ವಾಧಿಕಾರಿ ಮೋದಿ ನಂಬಿದ್ದರೆ, ಬಿಜೆಪಿಯೇತರ ಹಿಂದೂಗಳು ದೇವಾಲಯ ಪ್ರವೇಶದ ವಿಚಾರದಲ್ಲಿ ಸ್ತ್ರೀ-ಪುರುಷರ ಭೇದ ಮಾಡಬಾರದೆಂದು ಘೋಷಣೆ ಮಾಡುತ್ತಾರೆ.

ಮೋದಿ ಅಮಿತ್ ಷಾಗಳಿಗೆ ಅಂತಿಮ ತೀರ್ಪು ಬರುವವರೆಗೂ ಕಾಯುವ ವ್ಯವಧಾನ ಇಲ್ಲ. ಮತದಾರರ ಮನಸ್ಸುಗಳನ್ನು ಕೆಡಿಸಿ, ಮತ ಕಸಿಯುವ ಏಕೈಕ ಗುರಿಯನ್ನೇ ಹೊಂದಿರುವ ಅವರು ಕಿವಿಗೆ ಕಣಜ ಹೊಕ್ಕವರಂತೆ ನಡೆದುಕೊಳ್ಳುತ್ತಿದ್ದಾರೆ. ಶಬರಿಮಲೆಗೆ ಹರಕೆ ಹೊತ್ತು ಹೋಗುವ ಜನ ದಕ್ಷಿಣ ರಾಜ್ಯಗಳಲ್ಲಂತೂ ತುಂಬ ಇದ್ದಾರೆ. ಇವರಿರುವ ಸ್ಥಳಗಳಲ್ಲಿ ಅಯ್ಯಪ್ಪನ ದೇವಾಲಯಗಳನ್ನೂ ಕಟ್ಟಲಾಗಿದೆ. ಅದರ ಮೇಲ್ವಿಚಾರಣೆಗೆ ಇರುವವರನ್ನೆಲ್ಲಾ ಕರೆದು ಸಭೆ ಮಾಡಿ ಅಯ್ಯಪ್ಪ ಭಕ್ತರ ಎಲ್ಲ ಓಟನ್ನೂ ನಮಗೆ ಹಾಕಿಸಿ ಎಂದು ಕೇಳುವ ಪ್ರಸ್ತಾಪವನ್ನು ಮೋದಿ, ಷಾ ಜೋಡಿ ಈಗಾಗಲೇ ಮಾಡಿದೆ. ಈ ಮುಗ್ಧ ಭಕ್ತರ ಧಾರ್ಮಿಕ ಭಾವನೆಯನ್ನು ಕೆರಳಿಸಿ ಅವರಲ್ಲಿ ವಿಷ ತುಂಬಿ ಅವರ ಮತಗಳನ್ನೆಲ್ಲ ಕಸಿಯುವ ತಂತ್ರಗಾರಿಕೆಗೆ ಈಗಾಗಲೇ ಕೈಹಾಕಿದ್ದಾರೆ.

ತಮ್ಮದೇ ಪಕ್ಷ ಇಡೀ ದೇಶದಲ್ಲಿ ಮತ್ತು ಅಯೋಧ್ಯೆ ವಿವಾದವಿರುವ ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದರು ಇಷ್ಟು ದಿನ ತೆಪ್ಪಗಿದ್ದು ಚುನಾವಣೆಯ ಹೊಸ್ತಿಲಲ್ಲಿ ಅಯೋಧ್ಯೆ, ಅಯ್ಯಪ್ಪರನ್ನು ಭಜಿಸುತ್ತಿರುವ ಬಿಜೆಪಿಯವರ ಈ ಎರಡೂ ಹುನ್ನಾರಗಳನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ. ಮೋದಿ-ಷಾ-ಆರೆಸ್ಸೆಸ್, ಹೇಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೇಗೆ ಈ ಮುಗ್ಧ ಜನರನ್ನು ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದಾರೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ನಮ್ಮೆಲ್ಲರ ಮೇಲಿರುವ ಹೊಣೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...