Homeಅಂಕಣಗಳುಯಾವ ಧರ್ಮವೂ ಮಹಿಳೆಯರ ಪರವಲ್ಲ....

ಯಾವ ಧರ್ಮವೂ ಮಹಿಳೆಯರ ಪರವಲ್ಲ….

- Advertisement -
- Advertisement -

ಕಳೆದ ವಾರ ತೀರಿಕೊಂಡ ಪೋಪ್ ಜಾನ್ ಪಾಲ್ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆಯ ಶ್ರದ್ಧಾಂಜಲಿಗಳೇ ಕೇಳಿಬರುತ್ತಿವೆ. ಆತ ಶಾಂತಿಪ್ರಿಯರಾಗಿದ್ದರು ಎಂದೂ, ಮಾನವತಾವಾದಿಯಾಗಿದ್ದರು ಎಂದೂ, ಶೋಷಿತರ ಪರವಾಗಿದ್ದರೆಂದೂ ಅವರನ್ನು ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಆದರೆ ಅದೇ ಜಾನ್ ಪಾಲ್ ಮಹಿಳಾ ಹಕ್ಕುಗಳ ವಿರೋಧಿಯಾಗಿದ್ದರೆಂದೂ, ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ನಿರಾಕರಿಸಿದ್ದರೆಂದೂ, ಕ್ರಿಶ್ಚಿಯನ್ ಧರ್ಮದ ಮೂಲಭೂತವಾದಿಗಳಿಗೆ ಬೆಂಬಲ ನೀಡಿದ್ದರೆಂದೂ ಯಾರೂ ಹೇಳುತ್ತಿಲ್ಲ! ಹಾಗೆ ಯಾರಾದರೂ ಹೇಳಿದ್ದರೂ ಹೊಗಳುಭಟ್ಟರ ಆರ್ಭಟದಲ್ಲಿ ಈ `ಅಪಸ್ವರ’ ಗಳು ಯಾರ ಕಿವಿಗೂ ಬಿದ್ದಂತಿಲ್ಲ!

ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡ ಧರ್ಮಾಧಿಕಾರಿಗಳಲ್ಲಿ ಪೋಪ್ ಮೊದಲನೆ ಯವರೂ ಅಲ್ಲ; ಖಂಡಿತವಾಗಿ ಕೊನೆಯವರೂ ಅಲ್ಲ. ಏಕೆಂದರೆ ಕ್ರಿಶ್ಚಿಯನ್ ಧರ್ಮ ಮಾತ್ರವಲ್ಲ, ಜಗತ್ತಿನ ಬಹಳಷ್ಟು ಪ್ರಮುಖ ಧರ್ಮಗಳೂ ಮಹಿಳಾ ವಿರೋಧಿಯೇ ಆಗಿವೆ.

ಪೈಗಂಬರದು ಮಹಿಳೆಯರನ್ನು ಬುರ್ಕಾಗಳಲ್ಲಿ ಇರಿಸಿ ಅವರನ್ನು ಎರಡನೆ ದರ್ಜೆಯ ಪ್ರಜೆಗಳಂತೆ ಕಾಣಿ ಎಂದು ಹೇಳಿರಲಿಲ್ಲ. ಒಂದು ದಿನ ಪೈಗಂಬರರು ಬಹಳ ದಣಿದಿದ್ದರೂ ಅವರೊಂದಿಗೆ ಮಾತುಕತೆಗೆಂದು ಬಂದಿದ್ದ ಇಬ್ಬರು ಅತಿಥಿ ಗಳು ಅದೆಷ್ಟೇ ಹೊತ್ತಾದರೂ ಹೊರಡಲಿಲ್ಲ ವಾದ್ದರಿಂದ, ಪೈಗಂಬರರು ತಮ್ಮ ಓರ್ವ ಮಡದಿ ಇದ್ದ ಕೋಣೆಯ ಬಾಗಿಲಿಗೆ ಪರದೆಯನ್ನು ಹಾಕಿ ನಿದ್ದೆಗೆ ಸಜ್ಜಾದರು. ಅದನ್ನೇ ನೆಪವಾಗಿಸಿಕೊಂಡು ಇವತ್ತು ಮುಸ್ಲಿಂ ಮಹಿಳೆಯರನ್ನು ಬುರ್ಕಾಗಳಲ್ಲಿ ಇರಿಸಿ ಅವರನ್ನು ಶೋಷಿಸಲಾಗುತ್ತಿದೆ.

ಅಂತಹ ಮೇಧಾವಿ ಗೌತಮ ಬುದ್ಧ ಕೂಡ ಒಂದು ರೀತಿಯಲ್ಲಿ ಮಹಿಳಯರ ಬಗ್ಗೆ ತಾರತಮ್ಯ ನೀತಿ ಅನುಸರಿಸಿದ್ದ. ಆತ ತನ್ನ ಮಡದಿ ಯಶೋಧರೆ ಸೇರಿದಂತೆ ಇತರ ಮಹಿಳೆಯರನ್ನು ಅನುಯಾಯಿ ಗಳಾಗಿ ಸ್ವೀಕರಿಸಿದರೂ, ಮಹಿಳೆಯರು ಬಿಕ್ಕುಗಳಾ ಗಲು ಪ್ರಾರಂಭದಲ್ಲಿ ಅನುಮತಿ ನೀಡಿರಲಿಲ್ಲ. ಬುದ್ಧನ ಚಿಕ್ಕಮ್ಮ ಮಹಾಪ್ರಜಾಪತಿ ತಾನು ಬಿಕ್ಕು ಆಗಬೇಕೆಂದು ಕೇಳಿಕೊಂಡಾಗ ಬುದ್ಧ ನಿರಾಕರಿಸಿದ. ಕೊನೆಗೆ ಬುದ್ಧನ ಆಪ್ತ ಶಿಷ್ಯ ಆನಂದ ಮಹಿಳೆಯರ ಪರವಾಗಿ ವಾದಿಸಿದ ನಂತರ “ಪುರುಷ ಬಿಕ್ಕುಗಳಿಗೆ ಮಹಿಳಾ ಬಿಕ್ಕುಗಳನ್ನು ಹಿರಿಯರು-ಕಿರಿಯರು ಎಂಬ ಭೇದಭಾವವಿಲ್ಲದೆ ಗೌರವಿಸಬೇಕು; ಪುರುಷ ಬಿಕ್ಕುಗಳನ್ನು ಯಾವುದೇ ಕಾರಣಕ್ಕೂ ಮಹಿಳಾ ಬಿಕ್ಕುಗಳು ಟೀಕಿಸಬಾರದು” ಎಂಬಂತಹ ಷರತ್ತುಗಳನ್ನು ಹೇರಿದ ನಂತರವೇ ಒಪ್ಪಿಗೆ ನೀಡಿದ್ದ ಗೌತಮ ಬುದ್ಧ.

ಇನ್ನು ಮನುವಾದಿ `ಹಿಂದೂ’ ಧರ್ಮದ ಬಗ್ಗೆ ಇಲ್ಲಿ ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ಪುರೋಹಿತಶಾಹಿ ವ್ಯವಸ್ಥೆಯಲ್ಲಿ ಶೂದ್ರರಿಗೂ, ದಲಿತರಿಗೂ, ಮಹಿಳೆಯ ರಿಗೂ ಒಂದು ಸ್ಥಾನ, ಮೇಲುಜಾತಿಯ ಪುರುಷರಿಗೆ ಮಾತ್ರ ಮತ್ತೊಂದು ಸ್ಥಾನ….

ಹಾಗೆ ನೋಡಿದರೆ ಮಹಿಳೆಯರನ್ನು ಸಮಾನರೆಂದು ಕಾಣುವ ಒಂದೇ ಒಂದು ಧರ್ಮವೂ ಇದ್ದಂತಿಲ್ಲ. ಮಹಿಳಾ ಹಕ್ಕುಗಳು, ಸ್ವಾತಂತ್ರ್ಯ, ಸ್ವಾಭಿಮಾನ, ಸ್ವಾವಲಂಬಿ ತನ… ಇವೆಲ್ಲವನ್ನು ಗುರುತಿಸಿ, ಅವರನ್ನು ಸಮಾನರಾಗಿ ಕಾಣುವ ಒಂದೇ ಒಂದು ಗ್ರಂಥ ಯಾವುದು ಗೊತ್ತಾ?

ನಮ್ಮ ದೇಶದ ಸಂವಿಧಾನ! ಅದನ್ನೇ ಇನ್ನು ಮುಂದೆ ಎಲ್ಲಾ ಭಾರತೀಯ ನಾರಿಯರು ತಮ್ಮ ಧರ್ಮ ಗ್ರಂಥವನ್ನಾಗಿಸಿಕೊಂಡರೆ ಹೇಗೆ?!

ಗೌರಿ ಲಂಕೇಶ್
ಏಪ್ರಿಲ್ 20, 2005 (`ಕಂಡಹಾಗೆ’ ಸಂಪಾದಕೀಯದಿಂದ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್...

0
"ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿದ್ದಾರೆ. ಕಾವಲುಗಾರ ವಾಹನ ಹೀಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದರೂ ಜಿಹಾದಿಗಳು ವಾಹನವನ್ನು ಹೀಗೆ ಕಳುಹಿಸಲು ಹಠ ಹಿಡಿದಿದ್ದಾರೆ. ಇದು ಯಾವ...