Homeಅಂಕಣಗಳುಸಂಪಾದಕೀಯ: ಕಿಸಾನ್ ಮುಕ್ತಿ ಮಾರ್ಚ್ ಆಂದೋಲನದ ಪಾಠಗಳು

ಸಂಪಾದಕೀಯ: ಕಿಸಾನ್ ಮುಕ್ತಿ ಮಾರ್ಚ್ ಆಂದೋಲನದ ಪಾಠಗಳು

- Advertisement -
- Advertisement -

ನವೆಂಬರ್ 30ರಂದು ದೆಹಲಿಯಲ್ಲಿ ನಡೆಯಲಿರುವ ರೈತ ಹೋರಾಟದ ಕುರಿತು ಕಳೆದ ವಾರವೇ ಪತ್ರಿಕೆಯಲ್ಲಿ ಕಾದಂಬಿನಿಯವರು ಬರೆದಿದ್ದರು. ಅದೀಗ ಮುಗಿದಿದೆ. ಆ ಹೋರಾಟ ನಡೆಯಲು 4-5 ದಿನಗಳಿರುವವರೆಗೂ ಏನೂ ಮಾತಾಡದಿದ್ದ ದೊಡ್ಡ ಮಾಧ್ಯಮಗಳೂ ತಿರುಗಿ ನೋಡುವಂತೆ, ಇದು ದೇಶದೆಲ್ಲೆಡೆ ಸದ್ದು ಮಾಡಿದೆ. ನಮ್ಮ ಪತ್ರಿಕಾ ತಂಡವೂ ಇದರ ಬಗ್ಗೆ ಕುತೂಹಲದಿಂದ ಎದುರು ನೋಡುತ್ತಿತ್ತು ಮತ್ತು ನಮ್ಮ ಬಳಗದ ಹಲವರು ಖುದ್ದಾಗಿ ಭಾಗವಹಿಸಿದ್ದರು. ಅವರಿಂದ ನೇರವಾಗಿ ತಿಳಿದುಕೊಂಡ ಕೆಲವು ಅಂಶಗಳು ಆಸಕ್ತಿದಾಯಕವಾಗಿವೆ. ದೊಡ್ಡ ಹೋರಾಟಗಳಿಲ್ಲ ಎಂಬ ಭಾವನೆ ಸ್ಥಿರಗೊಂಡಿರುವ ಸಂದರ್ಭದಲ್ಲಿ ಈ ಪ್ರಯೋಗವು ಕೆಲವು ಸಂಗತಿಗಳನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆ ಕಾಲಕ್ಕೆ ತಕ್ಕುನಾದ ರೀತಿಯಲ್ಲಿ ಕಟ್ಟುವ ಹೋರಾಟದಿಂದ ಇರುವ ಸ್ಥಗಿತ ಪರಿಸ್ಥಿತಿಯಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದು ಬಹಳ ಮುಖ್ಯವಾದ ಸಂಗತಿ.

ಹಲವರ ಅನಿಸಿಕೆಗಳಿಗೆ ವಿರುದ್ಧ ರೀತಿಯಲ್ಲಿ, ಈ ದೆಹಲಿ ಹೋರಾಟವು ಇದ್ದಕ್ಕಿದ್ದಂತೆ ಆರಂಭವಾದ ಒಂದು ದಿನದ ಪ್ರತಿಭಟನೆಯಲ್ಲ. ಅದು ಸುಮಾರು ಒಂದೂವರೆ ವರ್ಷಗಳ ಪ್ರಕ್ರಿಯೆ. ಅದರಲ್ಲೂ ಮಧ್ಯಪ್ರದೇಶದ ಮಂಡಸೂರಿನಲ್ಲಿ ಆದ ಗೋಲೀಬಾರ್ ಸಂದರ್ಭದಲ್ಲಿ ಅಲ್ಲಿಗೆ ಹೋಗಿ ಭೇಟಿಯಿತ್ತು ಹೋರಾಟದಲ್ಲಿ ಭಾಗಿಯಾದ ಸಂಘಟನೆಗಳು ಸಂಕಲ್ಪ ತೊಟ್ಟಂದಿನಿಂದ ಇದು ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಅತ್ಯಂತ ವ್ಯವಸ್ಥಿತವಾದ ರೀತಿಯಲ್ಲಿ ಹಂತ ಹಂತವಾಗಿ ಬೆಳೆದು ಬಂದ ಈ ಆಂದೋಲನದ ಕುರಿತು ಯಾರೂ ಬೆರಳು ಮಾಡಿ ತೋರಿಸಲಾಗದಂತೆ ಗಟ್ಟಿ ನೆಲೆಯಲ್ಲಿ ಅದನ್ನು ಕಟ್ಟಲಾಯಿತು.

ಸ್ವರಾಜ್ ಅಭಿಯಾನದ ಭಾಗವಾಗಿರುವ ಜೈಕಿಸಾನ್ ಆಂದೋಲನದವರು ಈ ಪ್ರಕ್ರಿಯೆಯನ್ನು ಆರಂಭಿಸಿದರಾದರೂ, ಬಹುಬೇಗನೇ ಸುಮಾರು ನೂರಕ್ಕೂ ಹೆಚ್ಚು ರೈತ ಸಂಘಟನೆಗಳು ಒಟ್ಟಾದವು. ಸಮಿತಿಗಳು ರಚನೆಯಾಗುವ ಹೊತ್ತಿಗೆ ಅದರ ಸಂಖ್ಯೆ 175 ಮುಟ್ಟಿತ್ತು. ಅಂತಿಮವಾಗಿ ಸುಮಾರು 200 ಸಂಘಟನೆಗಳು ಜೊತೆಯಾಗಿದ್ದವು. ಸಾಂಪ್ರದಾಯಿಕ ರೈತ ಸಂಘಟನೆಗಳಲ್ಲದೇ, ಎಡಪಕ್ಷಗಳ ಜೊತೆಗಿರುವ ರೈತ, ಕೃಷಿಕಾರ್ಮಿಕ ಸಂಘಟನೆಗಳೂ ಇದರ ಭಾಗವಾದವು.

ರೈತರ ನೂರಾರು ಸಮಸ್ಯೆಗಳ ಕೇಂದ್ರದಲ್ಲಿರುವ ಎರಡು ಅಂಶಗಳನ್ನು ಪಟ್ಟಿ ಮಾಡಲಾಯಿತು. ಇದುವರೆಗಿನ ಬಿಕ್ಕಟ್ಟಿನ ಕಾರಣದಿಂದ ಸಂಚಯಿತವಾಗಿರುವ ಸಾಲಮನ್ನಾ, ಮುಂದೆ ಸಾಲ ಮಾಡದಂತಹ, ಲಾಭ ಕಾಣಲು ಸಾಧ್ಯವಾಗುವಂತೆ ಎಲ್ಲಾ ಬೆಳೆಗಳಿಗೂ ಲಾಭದಾಯಕವಾದ ಬೆಲೆ ಖಾತರಿ. ಇದನ್ನು ಮೇಲ್ನೋಟದ ಘೋಷಣೆಯಾಗಿಯಷ್ಟೇ ಅಲ್ಲದೇ, ಕಾಯ್ದೆ ಬದ್ಧವಾಗಿ ಇವು ಸರಿಯಾಗಿ ಜಾರಿಗೊಳ್ಳಲು ಋಣ ಮುಕ್ತ ಕಾಯ್ದೆ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸ್ಸಾಗಿರುವ ಸಿ 2 + 50% ಬೆಲೆಗಿಂತ ಕಡಿಮೆ ಮಾರಾಟವಾಗದಂತೆ ತಡೆದು ಬೆಂಬಲ ಬೆಲೆಯನ್ನು ಖಾತರಿಗೊಳಿಸುವ ಕಾಯ್ದೆ ಜಾರಿಗೆ ಬರಬೇಕೆಂಬುದು ಪ್ರಮುಖ ಒತ್ತಾಯವಾಗಿತ್ತು.

ಇದಕ್ಕಾಗಿ ತಜ್ಞರ ತಂಡಗಳು ರೂಪುಗೊಂಡವು ಮತ್ತು ಅವರು ಆ ಕಾಯ್ದೆಯ ಕರಡುಗಳನ್ನೂ ರೂಪಿಸಿಕೊಟ್ಟರು. ಈ ಹೊತ್ತಿಗೆ ಇದರ ಸಕ್ರಿಯ ಸಹಭಾಗಿಗಳಾಗಿದ್ದ ಮಹಾರಾಷ್ಟ್ರದ ರೈತ ಸಂಘಟನೆಯ ನಾಯಕ ಮತ್ತು ಲೋಕಸಭಾ ಸದಸ್ಯ ರಾಜುಶೆಟ್ಟಿ ಮತ್ತು ಸಿಪಿಎಂನ ರಾಜ್ಯಸಭಾ ಸದಸ್ಯ ರಾಜೇಶ್ ಅವರುಗಳು ತಮ್ಮ ಸದನಗಳ ಮುಖ್ಯಸ್ಥರಿಗೆ ಖಾಸಗಿ ಮಸೂದೆಗಳಾಗಿ ಇವನ್ನು ಸಲ್ಲಿಸಿಯೂ ಬಿಟ್ಟರು. ಆದರೆ, ಮೋದಿ ಸರ್ಕಾರವು ಈ ಸಾರಿ ಬಜೆಟ್‌ನಲ್ಲಿ ಉತ್ಪಾದನಾ ವೆಚ್ಚದ ಮೇಲೆ 50­%ನಷ್ಟು ಲಾಭದಾಯಕ ಬೆಲೆಯನ್ನು ಖಾತರಿಗೊಳಿಸುವುದಾಗಿ ಬುರುಡೆ ಬಿಟ್ಟಿದ್ದರು. ಸ್ವರಾಜ್ ಅಭಿಯಾನವು ಇದನ್ನೊಂದು ಸವಾಲಾಗಿ ಸ್ವೀಕರಿಸಿ, ಈಗಾಗಲೇ ಘೋಷಿಸಲಾಗಿರುವ ಕನಿಷ್ಠ ಬೆಂಬಲ ಬೆಲೆಯೂ ಹೇಗೆ ನೂರಕ್ಕೆ 95 ಎಪಿಎಂಸಿ ಮಂಡಿಗಳಲ್ಲಿ ಲಭ್ಯವಿಲ್ಲ ಎಂಬುದನ್ನು ತನಿಖೆ/ಸಮೀಕ್ಷೆಯ ಮೂಲಕ ಸಾಬೀತುಪಡಿಸಿತು.

ಹಾಗೆಯೇ ರೈತರು ಮತ್ತು ಕೃಷಿಯ ವಿಚಾರದಲ್ಲಿ ಮೋದಿ ಸರ್ಕಾರ ಹೇಳಿದ್ದೇನು, ಮಾಡಿದ್ದೇನು ಎಂಬುದನ್ನು ದಾಖಲೆಗಳೊಂದಿಗೆ ವಿವರಿಸುವ ಪುಸ್ತಕವನ್ನು ತಂದರು. ದೀರ್ಘವಾಗಿ ಓದಲು ಸಾಧ್ಯವಾಗದವರಿಗೆ ಜೇಬಿನಲ್ಲಿಟ್ಟುಕೊಳ್ಳಬಹುದಾದ ಪುಸ್ತಕವನ್ನೂ ಹೊರತಂದರು.

ಎಡಪಕ್ಷಗಳು ಮತ್ತು ರೈತ ಸಂಘಟನೆಗಳು ಈ ರೀತಿಯಲ್ಲಿ ಒಂದಾಗಿ ಕೆಲಸ ಮಾಡಿ ಒಂದು ತಕ್ಷಣದ ಗುರಿ ಮುಟ್ಟಲು ದುಡಿದ ಉದಾಹರಣೆಗಳು ಹೆಚ್ಚಿಲ್ಲ. ಆದರೆ, ಈ ಸಾರಿ ಅದು ಸಾಧ್ಯವಾಯಿತು. ಮಹಾರಾಷ್ಟ್ರ, ರಾಜಸ್ತಾನ, ಉತ್ತರಖಂಡ್‌ಗಳಲ್ಲಿ ಭಾರೀ ಬೃಹತ್ ಪ್ರಮಾಣದ ಕಾಲ್ನಡಿಗೆಗಳನ್ನು ಆಯೋಜಿಸಿದ್ದ ಎಡಪಕ್ಷಗಳು ಈ ಸಮಿತಿಯ ಜೊತೆಗೂ ಸಕ್ರಿಯವಾಗಿ ಕೆಲಸ ಮಾಡಿದವು. ವಿಜು ಕೃಷ್ಣನ್‌ರಂತಹ ಯುವ ನಾಯಕರು ಅದರ ನಾಯಕತ್ವ ವಹಿಸಿದ್ದರಿಂದಾಗಿಯೂ ಇದು ಸಾಧ್ಯವಾಗಿರಬಹುದು. ಆದರೆ, ಸಾಧ್ಯವಾಗಿದ್ದು ವಾಸ್ತವ.

ವಿವಿಧ ಧಾರೆಗಳ ಕನಿಷ್ಠ 25 ಸಂಘಟನೆಗಳನ್ನೂ ಒಂದೆಡೆ ಸೇರಿಸಿ ನಿರಂತರವಾಗಿ ಕೆಲಸ ಮಾಡುವುದು ಸುಲಭವಲ್ಲವೆಂಬುದು ಅದರಲ್ಲಿ ತೊಡಗಿಕೊಂಡಿರುವ ಯಾರಿಗೇ ಆಗಲಿ ಗೊತ್ತಿರುತ್ತದೆ. ಅಂತಹ ಕಷ್ಟದ ಕೆಲಸವನ್ನು ಸಾಧ್ಯವಾಗಿಸಿಕೊಂಡ ಎಲ್ಲರೂ ಅಭಿನಂದನಾರ್ಹರು. ಹಾಗೆಂದು ಇದರಲ್ಲಿ ಸಮಸ್ಯೆಗಳಿರುವುದಿಲ್ಲವೆಂದೇನಲ್ಲ. ನೂರೆಂಟು ಬಗೆಯ ಕಿತ್ತಾಟಗಳು ಇದರಲ್ಲಿ ಸಹಜವಾಗಿಯೇ ಇರುತ್ತವೆ. ಅವೆಲ್ಲವನ್ನೂ ಹೊರಗೆ ಬರದೇ ನಿಭಾಯಿಸಿದ ಜಾಣ್ಮೆಗೆ ‘ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿ’ಯ ನಾಯಕತ್ವವನ್ನು ಅಭಿನಂದಿಸಲೇಬೇಕು.

ರೈತರ ಹೋರಾಟಕ್ಕೆ ಇತರ ಸಮುದಾಯಗಳ ಬೆಂಬಲವನ್ನು ಸಂಘಟಿಸಿದ್ದು ಇನ್ನೊಂದು ಜಾಣ್ಮೆಯ ನಡೆ. ಕರ್ನಾಟಕದಲ್ಲೂ ಸಿಪಿಎಂ ಪಕ್ಷದ ಮುತುವರ್ಜಿಯಿಂದ ಅದು ನಡೆದದ್ದನ್ನು ಎಲ್ಲರೂ ಗಮನಿಸಿರಬಹುದು. ದೆಹಲಿಯಲ್ಲಿ ನೇಷನ್ ಫಾರ್ ಫಾiರ‍್ಸ್, ಡಿಯು ಫಾರ್ ಫಾರ್ಮರ್ಸ್, ವಕೀಲರು, ಪತ್ರಕರ್ತರು, ವೈದ್ಯರು ಇತ್ಯಾದಿ ಪ್ರಯತ್ನಗಳು ನಡೆದವು. ಇಷ್ಟೇ ಪ್ರಮುಖವಾಗಿ ಮಾಡಿದ ಮತ್ತೊಂದು ಪ್ರಯತ್ನವೆಂದರೆ, ಕೇವಲ ಆಡಳಿತ ಪಕ್ಷವನ್ನು ಗುರಿ ಮಾಡಿದ್ದಲ್ಲದೇ, ವಿರೋಧ ಪಕ್ಷಗಳ ಸಭೆ ಕರೆದು ಅವರ ನಿಲುವನ್ನು ಸ್ಪಷ್ಟಮಾಡಲು ಆಗ್ರಹಿಸಲಾಯಿತು. ಅಂತಿಮವಾಗಿ ಅವರುಗಳು ನ.೩೦ರಂದು ಬಂದು ವೇದಿಕೆಯ ಮೇಲೆಯೇ ತಮ್ಮ ನಿಲುವನ್ನು ಬಹಿರಂಗಪಡಿಸಬೇಕಾಯಿತು.

ವಿರೋಧ ಪಕ್ಷಗಳ ನಾಯಕರುಗಳು ರೈತರ ಪ್ರಮುಖ ಹಕ್ಕೊತ್ತಾಯಗಳ ಮೇಲೆ ಕೇಂದ್ರೀಕರಿಸದೇ ಮೋದಿ ಸರ್ಕಾರವನ್ನು ಬಯ್ಯುವುದರಲ್ಲೇ ಕಾಲ ಕಳೆದರು ಮತ್ತು ಇದು ರೈತ ಸಂಘಟನೆಗಳು ಶ್ರಮದಿಂದ ಸಂಘಟಿಸಿದ ಘನತೆಯುಳ್ಳ ಹೋರಾಟವೆಂಬುದನ್ನು ಮರೆತು, ತಮ್ಮ ‘ಮಹಾಘಟಬಂಧನ್’ ರ‍್ಯಾಲಿಯೇನೋ ಎಂಬಂತೆ ಕೈ ಮೇಲೆತ್ತಿ ಹಿಡಿದು ನಿಂತರು! ಇವೇ ಪಕ್ಷಗಳು (ಶರದ್‌ಪವಾರ್‌ರಂತಹ ವ್ಯಕ್ತಿ ವೇದಿಕೆಯ ಮೇಲೆ ರೈತ ಪರವಾಗಿ ಮಾತಾಡುವುದನ್ನು ನೋಡುವುದು ಕಷ್ಟವಾಗುತ್ತಿತ್ತು) ತಮ್ಮ ಅವಧಿಯಲ್ಲಾದ ಸಮಸ್ಯೆಗಳ ಕುರಿತ ಕನಿಷ್ಠ ಆತ್ಮಾವಲೋಕನವನ್ನೂ ಮಾಡಿಕೊಳ್ಳಲಿಲ್ಲ. ಯುಪಿಎ ಅವಧಿಯಲ್ಲಿ ಸಾಲಮನ್ನಾ ಮಾಡಿದುದರ ಕುರಿತು ರಾಹುಲ್‌ಗಾಂಧಿ ಮಾತನಾಡಿದರಾದರೂ, ಸ್ವಾಮಿನಾಥನ್ ಆಯೋಗದ ಶಿಫಾರಸ್ಸನ್ನು ತಾವೇಕೆ ಜಾರಿ ಮಾಡಲಿಲ್ಲ ಎಂಬುದರ ಕುರಿತು ಹೇಳಲಿಲ್ಲ.

ಇಂತಹ ಕೆಲವು ಸಂಗತಿಗಳ ಹೊರತಾಗಿ ದೆಹಲಿಯ ರೈತ ಹೋರಾಟವು ಈ ಸಂದರ್ಭದ ಅತ್ಯಂತ ಮಹತ್ವದ ವಿದ್ಯಮಾನಗಳಲ್ಲೊಂದಾಗಿದೆ. ಇದರ ಆಧಾರದ ಮೇಲೆಯೇ ದೇಶಾದ್ಯಂತ ರೈತರು ಮತ ಚಲಾಯಿಸುತ್ತಾರೆಂದೇನೂ ಹೇಳಲಾಗದು. ಆದರೆ, ಮೋದಿ ಸರ್ಕಾರದ ಅತ್ಯಂತ ಕರಾಳ ರೈತವಿರೋಧಿ ನೀತಿಗಳನ್ನು ದೇಶದ ರೈತರು ಒಪ್ಪಿಲ್ಲವೆಂದು ಈ ಹೋರಾಟವು ದೇಶಕ್ಕೆ ತೋರಿಸಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...