Homeರಾಜಕೀಯಸೋಲುವ ಭೀತಿಯಲ್ಲಿ ಇವಿಎಂ ಯಂತ್ರಗಳಿಗೇ ಕನ್ನ ಹಾಕಿತೇ ಬಿಜೆಪಿ?

ಸೋಲುವ ಭೀತಿಯಲ್ಲಿ ಇವಿಎಂ ಯಂತ್ರಗಳಿಗೇ ಕನ್ನ ಹಾಕಿತೇ ಬಿಜೆಪಿ?

- Advertisement -
- Advertisement -

ಇ.ವಿ.ಎಮ್ ಬಂದ ಹೊಸತರಲ್ಲಿ ಅದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ, ಮೊದಲು ನಡೆಯುತ್ತಿದ್ದ ಚುನಾವಣೆ ಪ್ರಕ್ರಿಯೆಗಿಂತ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್ (ಇವಿಎಮ್) ನಿಂದ ಡಿಜಟಲೀಕರಣಗೊಂಡು ಹೆಚ್ಚು ನಂಬಿಕಾರ್ಹವಾಗಿರುತ್ತದೆ ಎಂದು ಹೇಳಲಾಗುತ್ತಿತ್ತು. ಅದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎನ್ನುವ ಮಾತುಗಳನ್ನು ಚುನಾವಣೆ ಆಯೋಗವು ಹೇಳುತ್ತಿತ್ತು. ಆದರೆ ಈಗ ಇವಿಎಮ್ ಮಷೀನುಗಳೆ ಮಾಯವಾಗಿ ಖಾಸಗಿ ಹೋಟೆಲ್ ಗಳಲ್ಲಿ, ಎಂ.ಎಲ್.ಎ ಗಳ ಮನೆಗಳಲ್ಲಿ ಪ್ರತ್ಯಕ್ಷವಾಗುತ್ತಿದೆ. ಈ ಹಿಂದೆ ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಬಿಜೆಪಿಗೇ ಮತಗಳು ಹೋಗುತ್ತಿದ್ದವು ಎನ್ನುವ ಆರೋಪಗಳು ಕೇಳಿಬರುತ್ತಿದ್ದವು. ಚಲಾಯಿಸಿದ ಮತಗಳು ಅಧಿಕೃತವಾಗಿದೆ ಎಂದು ಖಾತ್ರಿ ಮಾಡಿಕೊಳ್ಳಲು ವಿವಿ ಪ್ಯಾಟ್ ವ್ಯವಸ್ಥೆಯನ್ನು ತರಲಾಯಿತು. ಮತದಾರರನ್ನು ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ ಎಂದು ನಂಬಿಸಲಾಯಿತು. ಆದರೆ ಈಗ ಮಷೀನುಗಳೇ ಕಳ್ಳತನವಾಗುತ್ತಿವೆ. ಇಂತಹ ವಿಡಿಯೋಗಳು ಇದೀಗ ಸಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಇಂತಹ ಕಳ್ಳತನಗಳಲ್ಲಿ ಈವರೆಗೂ ಬಿಜೆಪಿಗರ ಕೈವಾಡವಿರುವುದು ಮತ್ತೊಂದು ವಿಶೇಷವಾಗಿದೆ.

ಇದೇ ತಿಂಗಳ ಶುಕ್ರವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ರಾಜಸ್ಥಾನದ ಪಾಲಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಆಗಿರುವ ಗ್ಯಾನ್ ಚಂದ್ ಪಾರಾಖ್ ಅವರ ಮನೆಯಲ್ಲಿ ಇವಿಎಮ್ ಮಷೀನ್ ಗಳು ಸಿಕ್ಕಿದ್ದವು. ಸ್ಥಳೀಯ ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿದ್ದರ ಪರಿಣಾಮವಾಗಿ ಈ ವಿಷಯ ಬೆಳಕಿದೆ ಬಂದಿದೆ. ಚುನಾವಣೆ ಆಯೋಗದ ಉಪ ಆಯುಕ್ತರಾದ ಸಂದೀಪ್ ಸಕ್ಸೇನ ಅವರು ಈ ಪ್ರಕರಣವನ್ನು ಒಪ್ಪಿಕೊಂಡಿದ್ದು ಇದರ ಮೇಲೆ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ ಹಾಗೂ ಶಾಸಕರ ಮನೆಗೆ ಇವಿಎಮ್ ತಲುಪಿಸಿದ ಚುನಾವಣೆ ಅಧಿಕಾರಿಯನ್ನು ಅಮಾನತ್ತಿನಲ್ಲಿ ಇಟ್ಟಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೇ ರೀತಿಯಾದ 4 ಪ್ರಕರಣಗಳು ಮಧ್ಯಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ. ನವೆಂಬರ್ 27 ರಂದು ವೈರಲ್ ಆಗಿದ್ದ ಮತ್ತೊಂದು ವಿಡಿಯೋದಲ್ಲಿ ಸೋಹನ್ ಲಾಲ್ ಬಜಾಜ್ ಮತ್ತು ಮೂರು ಜನ ಚುನಾವಣಾಧಿಕಾರಿಗಳು ಇವಿಎಮ್ ಮಷೀನುಗಳನ್ನು ಮಧ್ಯಪ್ರದೇಶದ ಶಹಜಾಪುರ್ ಜಿಲ್ಲೆಯ ರಾಜ್ ಮಹಲ್ ಹೋಟೆಲ್ ನಲ್ಲಿ ಇರಿಸಿಕೊಂಡಿದ್ದರು. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರದಲ್ಲಿ, ಈ ಮಷೀನುಗಳು ಕಾರ್ಯ ಮಾಡುತ್ತಿಲ್ಲ, ನಮಗೆ ಒಳ್ಳೆಯ ಭಧ್ರತಾ ಕೊಠಡಿಗಳು ಇಲ್ಲ ಎಂಬ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಖುರಾಯ್ ನಗರದಲ್ಲಿಯೂ ಚುನಾವಣೆ ನಡೆದ 48 ಗಂಟೆಗಳ ನಂತರದಲ್ಲಿ ಒಂದು ಅನಧಿಕೃತ ಖಾಸಗಿ ವಾಹನದಲ್ಲಿ (ಖಾಸಗಿ ಶಾಲಾ ಬಸ್ ಎಂದು ಹೇಳಲಾಗುತ್ತಿದೆ) 34 ಇವಿಎಮ್ ಮಷೀನ್ ಗಳು ಬಂದವು ಎಂದು ವರದಿಯಾಗಿದೆ.

ಅಲ್ಲದೆ ಛತ್ತೀಸ್ಗಢದಲ್ಲಿ 3 ಇವಿಎಮ್ ಪ್ರಕರಣಗಳು ಜರುಗಿವೆ.

ಅದರಲ್ಲಿ ಈಗಷ್ಟೇ ಬಿಸಿ ಸುದ್ದಿಯಲ್ಲಿರುವುದು ಬಸ್ತಾರ್ ವಲಯದ ಜಗ್ದಲ್ಪುರ್ ನಲ್ಲಿ ಇವಿಎಂ ಮಷೀನುಗಳನ್ನು ಇರಿಸಿದ್ದ ಭಧ್ರತಾ ಕೊಠಡಿಯಲ್ಲಿ ಇಬ್ಬರು ಅನಧಿಕೃತ ವ್ಯಕ್ತಿಗಳು ಸಿಕ್ಕಿಬಿದ್ದಿರೋದು. ಪೊಲೀಸರ ಕೈಗೆ ಸಿಕ್ಕು ಬಂಧನದಲ್ಲಿರುವ ಇವರು ಎ.ಎನ್.ಐ ಟೀಟ್ ನ ಪ್ರಕಾರ ಪೊಲೀಸರು ಇವರು ಜಿಯೋ (ರಿಲಯಾನ್ಸ್) ಕಂಪನಿಯ ನೌಕರರು (ಇದೇ ಜಿಯೋ ಕಂಪನಿಯ ಜಾಹೀರಾತಿಗೆ ಫೋಜು ಕೊಡುವಷ್ಟರ ಮಟ್ಟಿಗೆ ನಮ್ಮ ಪ್ರಧಾನಿ ಮೋದಿಯವರು ಆ ಕಂಪನಿಯ ಮಾಲೀಕ ಅಂಬಾನಿಗೆ ಆಪ್ತ ಗೆಳೆಯರು ಅನ್ನೋದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು) ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಅಧಿಕೃತ ಗುರುತಿನ ಚೀಟಿ ಇಲ್ಲದೆ ಯಾರೂ ಒಳಗೆ ಪ್ರವೇಶ ಮಾಡಲು ಸಾಧ್ಯವಿಲ್ಲ. ಆದರೆ ಇವರು ಹೇಗೆ ಒಳಗೆ ಬಂದರು ಎಂದು ನಮಗೆ ತಿಳಿಯುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಭಧ್ರತಾ ಕೊಠಡಿಯಲ್ಲಿ ಭದ್ರತೆ ಒದಗಿಸುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.

ಈ ಘಟನೆ ನಡೆಯುವ ಒಂದು ದಿನದ ಹಿಂದೆಯಷ್ಟೇ ಛತ್ತಿಸ್ಗಢದ ಬೆಮೆತಾರ ಕ್ಷೇತ್ರದಲ್ಲಿ ಬಿ.ಎಸ್.ಎಫ್. ಭದ್ರತಾ ಆಧಿಕಾರಿ ವಿಕ್ರಮ್ ಕುಮಾರ್ ಮೆಹ್ರ ಎಂಬ ವ್ಯಕ್ತಿ ಅನಧಿಕೃತವಾಗಿ ಇವಿಎಂ ಮಷೀನುಗಳನ್ನು ಇರಿಸಿದ್ದ ಭದ್ರತಾ ಕೊಠಡಿಯ ಬಳಿ ಲ್ಯಾಪ್ ಟಾಪ್ ಅನ್ನು ಬಳಸಿದ್ದರು. ವಿರೋಧಪಕ್ಷ ಇದನ್ನು ವಿರೋಧಿಸಿ ಪ್ರತಿಭಟಿಸಿದ ನಂತರವೆ ಅಧಿಕಾರಿಯನ್ನು ಅಮಾನತ್ತು ಮಾಡಿದ್ದಾರೆ.

ಅಲ್ಲದೆ ಧಾಮತಾರಿ ಕ್ಷೇತ್ರದಲ್ಲಿ ಇವಿಎಮ್ ಮಷೀನುಗಳ್ಳಿದ್ದ ಭಧ್ರತಾ ಕೊಠಡಿಯಲ್ಲಿ ಇಬ್ಬರು ಅನಧಿಕೃತ ವ್ಯಕ್ತಿಗಳು ಇದ್ದದ್ದು ವರದಿಯಾಗಿದೆ.

ಇದಲ್ಲದೆ ಭೂಪಾಲ್ ನಲ್ಲಿ ಭದ್ರತಾ ಕೊಠಡಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಿಸಿ ಟಿವಿ ಕ್ಯಾಮರಾಗಳು ಆಫ್ ಆದ ಘಟನೆ ವರದಿಯಾಗಿದೆ.

ಒಟ್ಟಾರೆ ಮೊದಲಿಂದಲೂ ಇವಿಎಮ್ ವಿರೋಧಿಸಿ ಏಳುತ್ತಿರುವ ಪ್ರಶ್ನೆಗಳಿಗೆ ಪುಷ್ಠಿ ನೀಡುವಂತೆ ಈ ಮೇಲಿನ ಇತ್ತೀಚೆಗಿನ ಘಟನೆಗಳು ನಡೆಯುತ್ತಿವೆ. ಲೋಕ ಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಸಂಧರ್ಭದಲ್ಲಿ ಇನ್ನಾದರು ಚುನಾವಣಾ ಆಯೋಗ ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಇದರ ಹಿಂದಿರುವ ದೊಡ್ಡ ಕೈಗಳನ್ನು ಬಯಲಿಗೆಳೆದು ಬಂಧಿಸಬೇಕಾಗಿದೆ. ಚುನಾವಣೆ ಆಯೋಗ-ಪೊಲೀಸ್ ಇಲಾಖೆ ಚಿಕ್ಕ ಕಳ್ಳರನ್ನು ಅಲ್ಲದೆ ದೊಡ್ಡ ಕಳ್ಳರನ್ನು ಬಂಧಿಸಿತ್ತಾರ ಎಂದು ಕಾದು ನೋಡಬೇಕಿದೆ. ಬಿಜೆಪಿಗಾಗಲಿ, ಮೋದಿಯವರಿಗಾಗಲಿ 2014ರಲ್ಲಿ ಇದ್ದ ಆತ್ಮವಿಶ್ವಾಸ 2019ರ ಚುನಾವಣೆಯ ಮೇಲೆ ಬಾರದಿರುವಂಥಾ ವಾತಾವರಣ ದೇಶದಲ್ಲಿ ಸೃಷ್ಟಿಯಾಗುತ್ತಿರುವ ಹೊತ್ತಿನಲ್ಲೇ ಇಂಥಾ ಇವಿಎಂ ಗೋಲ್ ಮಾಲ್ ಗಳು ಬಿಜೆಪಿ ಸುತ್ತಲೇ ದಟ್ಟೈಸುತ್ತಿಕೊಳ್ಳುತ್ತಿರೋದು ಜಸ್ಟ್ ಕಾಕತಾಳೀಯ ಅಂತ ಹೇಳೋದು ಕಷ್ಟ…..ಎಲ್ಲಾ ಕ್ಷೇತ್ರಗಳ ಎಲ್ಲಾ ಬೂತ್.ಗಳಲ್ಲೂ ಇಸು ನಡೆಯದೇ ಇರಬಹುದು. ಆದರೆ ಒಮ್ಮೆಗೇ ಇಷ್ಟು ಬೂತ್.ಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ. ಸೋಲಿನ ಭೀತಿಯ ಕಾರಣಕ್ಕೆ ಬಿಜೆಪಿ ಈ ಕೃತ್ಯಕ್ಕಿಳಿಯಿತಾ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

https://youtu.be/Rjr9VARzlWI

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...