Homeಸಾಹಿತ್ಯ-ಸಂಸ್ಕೃತಿಕಥೆಸ್ವರ್ಗಕ್ಕೆ ಸ್ವಾಗತ.

ಸ್ವರ್ಗಕ್ಕೆ ಸ್ವಾಗತ.

- Advertisement -
- Advertisement -

ಭಾರತದ ರಾಜಕಾರಣಿಯೊಬ್ಬ ವಾಯುವಿಹಾರಕ್ಕಾಗಿ ರಸ್ತೆಯಲ್ಲಿ ನಡೆಯುತ್ತಿರುವಾಗ ಕಾರೊಂದು ಗುದ್ದಿ ಸಾವನ್ನಪ್ಪಿದರು. ಅವರ ಆತ್ಮವು ಸ್ವರ್ಗದೊಳಗೆ ಆಗಮಿಸುತ್ತದೆ. ಪ್ರವೇಶ ದ್ವಾರದ ಬಳಿ ಚಿತ್ರಗುಪ್ತ ಅವರನ್ನು ಬರಮಾಡಿಕೊಂಡರು.  “ಸ್ವರ್ಗಕ್ಕೆ ಸ್ವಾಗತ” ಎಂದು ಹೇಳಿ, “ಇಲ್ಲಿ ನೀವು ನೆಲೆಗೊಳ್ಳುವುದಕ್ಕಿಂತ ಮುಂಚೆ ಇಲ್ಲಿನ ಎಲ್ಲವೂ ಅಧಿಕೃತವಾಗಿ ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿವೆಯೇ ಎಂದು ನೀವೊಮ್ಮೆ ಪರೀಕ್ಷಿಸಿಕೊಳ್ಳಬೇಕಿದೆ, ಅದಕ್ಕಾಗಿ ಒಂದು ದಿನ ಸ್ವರ್ಗದಲ್ಲಿಯೂ, ಇನ್ನೊಂದು ನರಕದಲ್ಲಿಯೂ ಇದ್ದು ನಿಮಗೆ ಸೂಕ್ತವಾದುದ್ದನ್ನು ಆರಿಸಿಕೊಳ್ಳಬಹುದೆಂದು ಚಿತ್ರಗುಪ್ತ ಹೇಳಿದರು. ಆಗ ರಾಜಕಾರಣಿ “ಸಮಸ್ಯೆ ಇಲ್ಲ, ಇಲ್ಲಿ ಎಲ್ಲ ಚೆನ್ನಾಗಿದೆ, ನನಗೆ ಇಷ್ಟ ಆಯಿತು. ನರಕ ನೋಡುವ ಅಗತ್ಯವಿಲ್ಲ, ಸ್ವರ್ಗದಲ್ಲೇ ಇರುತ್ತೇನೆ ಒಳಗೆ ಹೋಗೋಣ” ಎಂದು ಹೇಳಿದರು.

ಆಗ ಚಿತ್ರಗುಪ್ತ “ಕ್ಷಮಿಸಿ, ನಮಗೆ ನಮ್ಮದೇ ಆದ ನಿಯಮಗಳಿವೆ, ನಾನು ಮೇಲಿನವರಿಂದ ಆದೇಶಗಳನ್ನು ಹೊಂದಿದ್ದೇನೆ, ಹಾಗಾಗಿ ನೀವು ಇದನ್ನು ಪಾಲಿಸಲೇಬೇಕೆಂದು ಮನವಿ ಮಾಡಿದನು. ಆಗ ರಾಜಕಾರಣಿ ಇರಲಿ ಒಂದು ದಿನ ತಾನೇ ನರಕ ಹೇಗಿರುತ್ತೆ ಅಂತ ನೋಡೇ ಬಿಡೋಣ ಎಂದು ಒಪ್ಪಿಕೊಂಡರು. ಆಗ ಚಿತ್ರಗುಪ್ತ ಮತ್ತೆ ಕೇಳಿದನು ಮೊದಲು ನರಕಕ್ಕೆ ಹೋಗೋಣವೋ ಅಥವಾ ಸ್ವರ್ಗಕ್ಕೆ ಹೋಗೋಣವೋ ಅಂದಾಗ, ರಾಜಕಾರಣಿ ಮೊದಲು ನರಕವೇ ಇರಲಿ ಎಂದನು.

ನಂತರ ಚಿತ್ರಗುಪ್ತ ಅವರನ್ನು ಲಿಫ್ಟಿಗೆ ಹತ್ತಿಸಿಕೊಂಡನು. ಲಿಪ್ಟು ಅವರನ್ನು ಹೊತ್ತು ಕೆಳಕ್ಕೆ ಹೋಯಿತು. ಅದು ಎಷ್ಟು ಆಳಕ್ಕೆ ಹೋಗುತ್ತಿದೆ ಎಂದು ಗಾಬರಿಗೊಳ್ಳುವಷ್ಟರಲ್ಲೇ ಅವರು ನರಕದಲ್ಲಿದ್ದರು. ಬಾಗಿಲು ತೆರೆದಾಗ ರಾಜಕಾರಣಿ ಸುತ್ತಲೂ ವಿಶಾಲವಾದ ಗಾಲ್ಫ್ ಮೈದಾನವಿತ್ತು. ದೂರದಲ್ಲಿ ಕಾಣುತ್ತಿದ್ದ ಅಂಗಳದಲ್ಲಿ ಅವನ ಸ್ನೇಹಿತರು ಮತ್ತು ಜತೆಗೆ ಕೂಡಿ ಕೆಲಸ ಮಾಡಿದ್ದ ರಾಜಕಾರಣಿಗಳು ಸಾಲಾಗಿ ನಿಂತಿದ್ದರು. ಎಲ್ಲರ ಮೊಗದಲ್ಲೂ ಮಂದಹಾಸ, ಶುಭ್ರ ಬಟ್ಟೆಗಳು ಮನ ತಣಿಸುತ್ತಿದ್ದವು. ಅವರೆಲ್ಲರೂ ಓಡಿಬಂದು ತಮ್ಮ ಗೆಳೆಯನಿಗೆ ಶುಭ ಕೋರಿ, ಕೈಕುಲುಕಿದರು. ಬದುಕಿದ್ದಾಗ ಜನರನ್ನು ತುಳಿದು ತಾವು ಹೇಗೆ ಸಿರಿವಂತರಾದೆವು ಎಂಬ ನೆನಪುಗಳನ್ನು ಮೆಲುಕು ಹಾಕಿದರು.

ಎಲ್ಲರೂ ಸೇರಿ ಒಂದು ಸುತ್ತು ಗಾಲ್ಫ್ ಆಡಿ, ಅಲ್ಲಿದ್ದ ಬಗೆಬಗೆಯ ಕಡಲ ತಿನಿಸುಗಳನ್ನು ಸವಿದರು. ಬಳಿಕ, ದ್ರಾಕ್ಷಾರಸ ಅವರೆಲ್ಲರನ್ನು ಉಲ್ಲಸಿತರನ್ನಾಗಿ ಮಾಡಿತು. ಔತಣಕೂಟದಲ್ಲಿ ವಿದೂಷಕನೊಬ್ಬನು ಥರೇವಹಾರಿ ಜೋಕ್ಸ್ ಮಾಡುತ್ತಾ ನಗುತ್ತಾ, ನಗಿಸುತ್ತಾ ಅವರೊಡನೆ ಸಂತಸದ ಕ್ಷಣಗಳಿಗೆ ಸಾಕ್ಷಿಯಾದನು. ಇವರೆಲ್ಲರೂ ಸಂತೋಷ ಕೂಟದಲ್ಲಿ ಮೈಮರೆತಿದ್ದಾಗ, ರಾಜಕಾರಣಿಗೆ ಅರಿವಾಯಿತು. “ಒಂದು ದಿನ ಮುಗೀತು ಇದು ಹೊರಡುವ ಸಮಯ”. ಪ್ರತಿಯೊಬ್ಬರು ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು, ಲಿಫ್ಟ್ ಮೇಲಕ್ಕೆ ಹೋಯಿತು.

ಲಿಫ್ಟ್ ಮೇಲಕ್ಕೆ, ಮತ್ತಷ್ಟು ಮೇಲಕ್ಕೆ ಹೋಗಿ ಸ್ವರ್ಗದಲ್ಲಿ ಬಾಗಿಲು ತೆರೆದುಕೊಳ್ಳುತ್ತದೆ. ಅಲ್ಲಿ ಪ್ರಶಾಂತತೆ ಇರುತ್ತದೆ. ಅವರು ಮೋಡಗಳಿಂದ ಮೋಡಕ್ಕೆ ನೆಗೆಯುತ್ತಾರೆ, ತಂತಿವಾದ್ಯಗಳನ್ನು ನುಡಿಸುತ್ತಾರೆ, ಗಿಟಾರ್‍ರನ್ನು ಬಾರಿಸುತ್ತಾರೆ, ಹಾಡು ಹೇಳುತ್ತಾರೆ. ಅವರು ಬಹಳ ಸಂತೋಷದಿಂದ ಸಮಯವನ್ನು ಕಳೆಯುತ್ತಾರೆ ಮತ್ತು ಆಗಷ್ಟೇ ಅವರಿಗೆ ಹೊಳೆಯುತ್ತದೆ 24 ಗಂಟೆಗಳು ಮುಗಿದು ಹೋಗಿದೆ ಎಂದು. ಮತ್ತೆ ಚಿತ್ರಗುಪ್ತ ರಾಜಕಾರಣಿಯ ಬಳಿ ಬರುತ್ತಾರೆ, “ನೀವು ಒಂದು ದಿನ ನರಕದಲ್ಲೂ ಮತ್ತೊಂದು ದಿನ ಸ್ವರ್ಗದಲ್ಲೂ ಕಳೆದಿದ್ದೀರಾ. ಈಗ ನಿಮ್ಮ ಶಾಶ್ವತ ನೆಲೆಯನ್ನು ಆಯ್ಕೆ ಮಾಡಿ”.

ರಾಜಕಾರಣಿ ಒಂದು ನಿಮಿಷ ಯೋಚಿಸಿ ಉತ್ತರ ನೀಡುತ್ತಾರೆ: “ನಾನು ಮುಂಚೆ ಸ್ವರ್ಗ ಸುಖಕರವಾಗಿಯೂ ನರಕ ಭಯಾನಕವಾಗಿಯೂ ಇರುತ್ತದೆ ಎಂದು ತಪ್ಪು ತಿಳಿದಿದ್ದೆ. ಆದರೆ ಇಲ್ಲಿ ಬಂದು ನೋಡಿದ ನಂತರ ಸ್ವರ್ಗಕ್ಕಿಂತ ನರಕವೇ ಅದ್ಭುತವಾಗಿದೆ ಅನ್ನಿಸುತ್ತಿದೆ. ಹಾಗಾಗಿ ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದನು. ಇಂದು ಅಂತಿಮ ನಿರ್ಧಾರವೇ ಎಂದು ಚಿತ್ರಗುಪ್ತ ಕೇಳಿದರೆ ರಾಜಕಾರಣಿ ಯೆಸ್ 100% ಎಂದನು. ಸರಿ ಎಂದು ಚಿತ್ರಗುಪ್ತ ರಾಜಕಾರಣಿಯನ್ನು ನರಕಕ್ಕೆ ತಂದು ಬಿಡುತ್ತಾನೆ.

ಆಗ ರಾಜಕಾರಣಿ ಅವನ ಕಣ್ಣನ್ನು ಅವನೇ ನಂಬಲು ಸಿದ್ದವಿಲ್ಲ. ಏಕೆಂದರೆ ಅವನು ಬಂಜರು ಭೂಮಿಯ ಮಧ್ಯ ಭಾಗದಲ್ಲಿ ನಿಂತಿರುತ್ತಾನೆ. ಸುತ್ತಲೂ ತ್ಯಾಜ್ಯ, ಕಸ ತುಂಬಿ ಹೋಗಿರುತ್ತದೆ. ತನ್ನ ಎಲ್ಲಾ ಸ್ನೇಹಿತರು ಚಿಂದಿಬಟ್ಟೆ ತೊಟ್ಟು ಕಸ ಆಯ್ದು ಕಪ್ಪು ಚೀಲದಲ್ಲಿ ತುಂಬುತ್ತಿರುತ್ತಾರೆ. ಮೇಲಿನಿಂದ ಇನ್ನಷ್ಟು ಕಸ ಬೀಳುತ್ತಿರುತ್ತದೆ. ರೋಧನೆ, ನೋವಿನ ವಾತವರಣವಿರುತ್ತದೆ.

ಆತನ ಸ್ನೇಹಿತರು ಅವನನ್ನು ಕೂಗಿ, ಏನು ನೋಡುತ್ತಿದ್ದೀಯ ಬಾ ಕೆಲಸ ಮಾಡು ಅನ್ನುತ್ತಾರೆ. ಆಗ ರಾಜಕಾರಣಿ ಕಣ್ಣುಜ್ಜಿಕೊಂಡು “ನನಗೆ ಏನೊಂದು ಅರ್ಥವಾಗುತ್ತಿಲ್ಲ” ಎಂದು ತೊದಲುತ್ತಾ ಹೇಳುತ್ತಾನೆ.“ಮೊನ್ನೆ ದಿನ ನಾನು ಇಲ್ಲಿಗೆ ಬಂದಿದ್ದೆ. ಇಲ್ಲಿ ಗಾಲ್ಫ್ ಕೋರ್ಟ್, ಕ್ಲಬ್ ಹೌಸ್ ಇತ್ತು. ನಾವು ಕಡಲನಳ್ಳಿ, ಮೀನಿನ ಚಟ್ನಿ, ದ್ರಾಕ್ಷಿಯ ಮದ್ಯವನ್ನು ಸೇವಿಸಿದ್ದೆವು. ನಾವೆಲ್ಲಾರೂ ಒಟ್ಟಿಗೆ ಕುಣಿದು, ತುಂಬಾ ಸಂತೋಷದಿಂದ ಸಮಯವನ್ನು ಕಳೆದಿದ್ದೆವು. ಆದರೆ ಈಗ ಕೇವಲ ಪಾಳು ಭೂಮಿ ಮಾತ್ರ ಇದೆ. ಕಸದಿಂದ ತುಂಬಿ ಹೋಗಿದೆ, ನನ್ನ ಸ್ನೇಹಿತರು ಶೋಚನೀಯವಾಗಿ ಕಾಣುತ್ತಿದ್ದಾರೆ. ಏನು ಆಯಿತು?” ಎಂದು ವಿದೂಷಕನನ್ನು ಕೇಳುತ್ತಾನೆ.

ಆಗ ವಿದೂಷಕ ಅವನ ಕಡೆಗೆ ನಗೆ ಬೀರುತ್ತಾ  “ಮೊನ್ನೆ ದಿನ ನೀನು ಬಂದಾಗ ನಾವು ಚುನಾವಣಾ ಪ್ರಚಾರ ಮಾಡುತ್ತಿದ್ದೆವು. ಇವತ್ತು ನೀನು ನಮಗೆ ಓಟ್ ಮಾಡಿದೆ ಅಷ್ಟೇ” ಎಂದರು.

ನೀವೂ ಮೋಸಹೋಗಬೇಡಿ 2019ರ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ಓಟ್ ಮಾಡಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...