ಗಾನ ಕೋಗಿಲೆ ಲತಾ ಮಂಗೇಶ್ಕರ್ ನಮ್ಮನ್ನೆಲ್ಲ ಇಂದು ಅಗಲಿದ್ದಾರೆ. ದೇಶದ ಸಂಗೀತ ಸಂಸ್ಕೃತಿಯನ್ನು ರೂಪಿಸುವಲ್ಲಿ ಅವರ ಧ್ವನಿಯು ಪ್ರಮುಖ ಪಾತ್ರವಹಿಸಿದೆ. ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 15 ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು, ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು, ಎರಡು ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಗಳು, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಏಳು ದಶಕಗಳ ವೃತ್ತಿ ಜೀವನದಲ್ಲಿ ಲತಾ ಮಂಗೇಶ್ಕರ್ ಹಿಂದಿ ಸೇರಿದಂತೆ ಭಾರತದ 20 ಭಾಷೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಕನ್ನಡದ ಸಂಗೊಳ್ಳಿ ರಾಯಣ್ಣ ಚಿತ್ರದ ಬೆಳ್ಳನೆ ಬೆಳಗಾಯಿತು ಗೀತೆ ಸೇರಿದಂತೆ ಎರಡು ಹಾಡುಗಳನ್ನು ಹಾಡಿದ್ದಾರೆ. ಈ ಪೈಕಿ ನೂರಾರು ಹಾಡುಗಳು ಎಂದಿಗೂ ಮರೆಯದ ಗೀತೆಗಳ ಸಾಲಿನಲ್ಲಿವೆ. ಲತಾ ಮಂಗೇಶ್ಕರ್ ಅವರ ಕೆಲವು ಭಾವಪೂರ್ಣ ಹಾಡುಗಳ ನೆನಪು ಇಲ್ಲಿದೆ.
1. ‘ಹೋತೊನ್ ಮೈನ್ ಐಸಿ ಬಾತ್’
`ಹೋತೊನ್ ಮೈನ್ ಐಸಿ ಬಾತ್’ ಭೂಪಿಂದರ್ ಸಿಂಗ್ ಮತ್ತು ಲತಾ ಮಂಗೇಶ್ಕರ್ ಒಳಗೊಂಡ ಯುಗಳ ಗೀತೆಯಾಗಿದೆ. ಈ ಹಾಡಿನ ರೆಕಾರ್ಡ್ ಮತ್ತು ಚಿತ್ರೀಕರಣದ ರೀತಿಯಲ್ಲಿ ಆ ಸಮಯದಲ್ಲಿ ಗಮನಾರ್ಹವಾಗಿತ್ತು. ಜ್ಯುವೆಲ್ ಥೀಫ್ ಚಲನಚಿತ್ರವು ಮುಖ್ಯವಾಹಿನಿಯ ಬಾಲಿವುಡ್‌ನ ಅತ್ಯುತ್ತಮ ಥ್ರಿಲ್ಲರ್‌ಗಳಲ್ಲಿ ಒಂದಾಗಿದೆ.
2. ತುಜೆ ದೇಖಾ ತೋ ಯೇ ಜಾನಾ ಸನಂ
ಕುಮಾರ್ ಸಾನು ಮತ್ತು ಲತಾ ಮಂಗೇಶ್ಕರ್ ಹಾಡಿರುವ ’ತುಜೆ ದೇಖಾ ತೋ ಯೇ ಜಾನಾ ಸನಂ’ ದಿಲ್ವಾಲೆ ದುನಿಯಾ ಲೇ ಜಾಯೆಂಗೇ ಸಿನಿಮಾದ ಈ ಹಾಡು ಹಿಟ್ ಆಯಿತು.
3. ’ಆಜ್ ಫಿರ್ ಜೀನೆ ಕಿ ತಮನ್ನಾ’
ಆರ್.ಕೆ. ನಾರಾಯಣ್ ಅವರ ಕಾದಂಬರಿ ಆಧಾರಿತ ಸಿನಿಮಾ ‘ಗೈಡ್’ ಚಿತ್ರದ ಹಾಡು. ಶೈಲೇಂದ್ರ ಬರೆದಿರುವ ಎಸ್.ಡಿ. ಬ್ರೂಮನ್ ಸಂಗೀತ ಸಂಯೋಜನೆಯ ಈ ಹಾಡು ತುಂಬಾ ಜನಪ್ರಿಯವಾಗಿತ್ತು. ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಒಳಗೊಂಡ ಈ ಯುಗಳ ಗೀತೆ ನಿಮ್ಮನ್ನು 60 ರ ದಶಕಕ್ಕೆ ಕೊಂಡೊಯ್ಯುತ್ತದೆ.
4. ಪಿಯಾ ತೋಸೆ
1965 ರ ರೊಮ್ಯಾಂಟಿಕ್ ಸಿನಿಮಾ ‘ಗೈಡ್’. ವಹೀದಾ ರೆಹಮಾನ್ ಮತ್ತು ದೇವ್ ಆನಂದ್ ಈ ಹಾಡಿನಲ್ಲಿ ಚಿತ್ರಿಸಲಾಗಿದೆ. ಬಾಲಿವುಡ್ ನಿರ್ಮಿಸಿದ ಅತ್ಯಂತ ಭಾವಪೂರ್ಣ ರೊಮ್ಯಾಂಟಿಕ್ ಹಾಡುಗಳಲ್ಲಿ ಒಂದಾಗಿದೆ.
5. ಕೋರಾ ಕಾಗಜ್ ಥಾ ಯೇ ಮನ್ ಮೇರಾ
ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಒಳಗೊಂಡ ಡ್ಯುಯೆಟ್ ನಿಮ್ಮನ್ನು 60 ರ ದಶಕಕ್ಕೆ ಕೊಂಡೊಯ್ಯುತ್ತದೆ.
6. ಆಪ್ ಕಿ ನಝ್ರೋನ್ ನೆ ಸಮ್ಜಾ
ಮಾಲಾ ಸಿನ್ಹಾ, ಧರ್ಮೇಂದ್ರ ಮತ್ತು ಬಾಲರಾಜ್ ಸಹನ್ ನಟಿಸಿದ 1962ರ ಅನ್ಪರ್ ಚಿತ್ರಕ್ಕಾಗಿ ಲತಾ ಮಂಗೇಶ್ಕರ್ ಹಾಡಿದ್ದಾರೆ. ಸಾಹಿತ್ಯವನ್ನು ರಾಜಾ ಮೆಹದಿ ಅಲಿ ಖಾನ್ ಬರೆದಿದ್ದಾರೆ.
7. ಮೇರಾ ಸಾಯಾ ಸಾಥ್ ಹೋಗಾ, ಮೇರಾ ಸಾಯಾ
ಕಾಡುವ ಮೆಲೋಡಿ ‘ಮೇರಾ ಸಾಯಾ ಸಾಥ್ ಹೋಗಾ’ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾಗಿದೆ, ಇಂದಿಗೂ ಈ ಚಲನಚಿತ್ರವನ್ನು ನೋಡಲೇಬೇಕು.
8. ಹುಮೇನ್ ಔರ್ ಜೀನೆ ಕಿ, ಅಗರ್ ತುಮ್ ನಾ ಹೋತೆ
ರಾಜೇಶ್ ಖನ್ನಾ, ರೇಖಾ ಮತ್ತು ರಾಜ್ ಬಬ್ಬರ್ ನಟಿಸಿರುವ, ಲತಾ ಮಂಗೇಶ್ಕರ್ ಹಾಡಿರುವ ಈ ಹಾಡು ಸೂಪರ್ಹಿಟ್ ಆಗಿತ್ತು . ಈ ಹಾಡು ಮೂರು ಆವೃತ್ತಿಗಳನ್ನು ಹೊಂದಿತ್ತು – ಕಿಶೋರ್ ಕುಮಾರ್ ಆವೃತ್ತಿ, ಲತಾ ಮಂಗೇಶ್ಕರ್ ಆವೃತ್ತಿ ಮತ್ತು ಯುಗಳ ಗೀತೆ.
9. ಜಿಯಾ ಚಲೆ ಜಾ ಚಲೆ
ಮಣಿರತ್ನಂ ಅವರ 1998ರಲ್ಲಿ ಬಿಡುಗಡೆಯಾದ ದಿಲ್ ಸೆ ಸಿನಿಮಾದ ಈ ಹಾಡನ್ನು ಪ್ರೀತಿ ಜಿಂಟಾ ಮತ್ತು ಶಾರುಖ್ ಖಾನ್ ಅವರ ಮೇಲೆ ಚಿತ್ರಿಸಲಾಗಿದೆ. ಎ.ಆರ್. ರೆಹಮಾನ್ ಈ ಸಿನಿಮಾದ ಸಂಗೀತ ಸಂಯೋಜನೆ ಮಾಡಿದ್ದಾರೆ.
10. ಕಭಿ ಖುಷಿ ಕಭಿ ಗಮ್
ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಶಾರುಖ್ ಖಾನ್, ಕಾಜೋಲ್, ಹೃತಿಕ್ ರೋಷನ್, ಕರೀನಾ ಕಪೂರ್ ಮುಂತಾದ ಬಾಲಿವುಡ್‌ನ ಸ್ಟಾರ್ ನಟರು ನಟಿಸಿದ ಈ ಚಿತ್ರವು ಭಾರಿ ಹಿಟ್ ಆಗಿತ್ತು. ಈ ಸಿನಿಮಾದ ಶೀರ್ಷಿಕೆ ಗೀತೆಯನ್ನು ಹಾಡಿದ್ದು ಲತಾ ಮಂಗೇಶ್ಕರ್.
ಇದನ್ನೂ ಓದಿರಿ: ಲತಾ ಮಂಗೇಶ್ಕರ್ : ನಿಮಗೆ ಗೊತ್ತಿರದ ಲತಾಜಿ ಬಗ್ಗೆ ವಿಶೇಷ ಮಾಹಿತಿ ಇಲ್ಲಿವೆ


