ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ 2023, 2024 ಹಾಗೂ 2025ನೇ ಸಾಲಿನ ಪ್ರತಿಷ್ಠಿತ ‘ಅಂಬೇಡ್ಕರ್ ಪ್ರಶಸ್ತಿ’ಗೆ ಪತ್ರಕರ್ತ ಇಂದೂಧರ ಹೊನ್ನಾಪುರ, ನಿವೃತ್ತ ಅಧಿಕಾರಿ ರುದ್ರಪ್ಪ ಹನಗವಾಡಿ, ಸಾಹಿತಿ ಲಕ್ಷ್ಮೀಪತಿ ಕೋಲಾರ, ಹೋರಾಟಗಾರರಾದ ಶ್ರೀಧರ್ ಕಲಿವೀರ, ಮಾವಳ್ಳಿ ಶಂಕರ್ ಹಾಗೂ ಹೊನ್ನೂರು ಗೌರಮ್ಮ ಸೇರಿದಂತೆ 15 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಯು ತಲಾ 5 ಲಕ್ಷ ರೂಪಾಯಿ ನಗದು, 20 ಗ್ರಾಂ. ಚಿನ್ನದ ಪದಕ ಮತ್ತು ಫಲಕವನ್ನು ಹೊಂದಿದೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಏಪ್ರಿಲ್ 14ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಶಸ್ತಿಗೆ ಆಯ್ಕೆಯಾಗಿರುವವರ ಪಟ್ಟಿ ಕೆಳಗಿದೆ
2023ನೇ ಸಾಲು- ಹರಿಹರಾನಂದ ಸ್ವಾಮಿ, ಮೈಸೂರು (ಸಮಾಜಸೇವೆ), ಇಂದೂಧರ ಹೊನ್ನಾಪುರ, ಬೆಂಗಳೂರು (ಪತ್ರಿಕೋದ್ಯಮ), ರುದ್ರಪ್ಪ ಹನಗವಾಡಿ, ದಾವಣಗೆರೆ (ಆಡಳಿತ), ಸೀತವ್ವ ಜೋಡಟ್ಟಿ, ಬೆಳಗಾವಿ (ದೇವದಾಸಿ ವಿಮೋಚನೆ), ಕೆ.ಪುಂಡಲೀಕರಾವ್ ಶೆಟ್ಟಿಬಾ, ಬೀದರ್ (ಸಮಾಜಸೇವೆ/ರಾಜಕೀಯ).
2024ನೇ ಸಾಲು-ಶ್ರೀಧರ ಕಲಿವೀರ, ಬೆಂಗಳೂರು (ಹೋರಾಟ), ಮಲ್ಲಾಜಮ್ಮ, ಮಂಡ್ಯ (ಸಮಾಜಸೇವೆ/ರಾಜಕೀಯ), ರಾಮದೇವ ರಾಕೆ, ಬೆಂಗಳೂರು (ಪತ್ರಿಕೋದ್ಯಮ), ವೈ.ಬಿ. ಹಿಮ್ಮಡಿ, ಬೆಳಗಾವಿ (ಸಾಹಿತ್ಯ/ಸಮಾಜಸೇವೆ), ಲಕ್ಷ್ಮೀಪತಿ ಕೋಲಾರ, ಕೋಲಾರ (ಸಾಹಿತ್ಯ/ ಸಂಘಟನೆ).
2025ನೇ ಸಾಲು- ದತ್ತಾತ್ರೇಯ ಇಕ್ಕಳಗಿ, ಕಲಬುರಗಿ (ಪ್ರಕಾಶನ), ಮಾವಳ್ಳಿ ಶಂಕರ್, ಬೆಂಗಳೂರು (ಹೋರಾಟ), ಎಫ್.ಎಚ್. ಜಕ್ಕಪ್ಪನವರ್, ಧಾರವಾಡ (ಹೋರಾಟ), ಹೊನ್ನೂರು ಗೌರಮ್ಮ, ಚಾಮರಾಜನಗರ (ಜನಪದ ಕಲೆ), ಈರಪ್ಪ, ಹಾಸನ (ದಲಿತ ಹೋರಾಟ).



It is very pathetic to hear that there still no entry to some section of people in the temples in this modern age. People have reached Moon and there are innovations for reaching other space worlds but there are restrictions in some places in our plannet.