Homeಮುಖಪುಟಚೀನಾ ಮೇಲಿನ ಸುಂಕ ಶೇ.125ಕ್ಕೆ ಏರಿಸಿದ ಟ್ರಂಪ್: ಇತರ ದೇಶಗಳಿಗೆ 90 ದಿನಗಳ ವಿನಾಯಿತಿ

ಚೀನಾ ಮೇಲಿನ ಸುಂಕ ಶೇ.125ಕ್ಕೆ ಏರಿಸಿದ ಟ್ರಂಪ್: ಇತರ ದೇಶಗಳಿಗೆ 90 ದಿನಗಳ ವಿನಾಯಿತಿ

- Advertisement -
- Advertisement -

ಜಾಗತಿಕ ವ್ಯಾಪಾರ ಸಮರಕ್ಕೆ ಕಾರಣವಾಗಿರುವ ‘ಪ್ರತಿ ಸುಂಕ’ ಜಾರಿಗೆ ಬಂದ 24 ಗಂಟೆಯೊಳಗೆ ಚೀನಾ ಹೊರತುಪಡಿಸಿ, ಇತರ ದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 90 ದಿನಗಳ ಸುಂಕ ವಿನಾಯಿತಿ ಘೋಷಿಸಿದ್ದಾರೆ.

ಇದೇ ವೇಳೆ ಚೀನಾ ಮೇಲಿನ ಸುಂಕವನ್ನು ಶೇಕಡ 125ರಷ್ಟು ಹೆಚ್ಚಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಚೀನಾ ಮೇಲೆ ಪ್ರತೀಕಾರ ತೀರಿಸಲು ಟ್ರಂಪ್ ಮುಂದಾಗಿದ್ದಾರೆ.

“ನಮ್ಮ ಪ್ರತಿಸುಂಕ ನೀತಿಗೆ ಪ್ರತೀಕಾರ ತೀರಿಸದ ದೇಶಗಳಿಗೆ ನಾವು 90 ದಿನಗಳ ವಿನಾಯಿತಿ ನೀಡಿದ್ದೇವೆ. ಪ್ರತೀಕಾರಕ್ಕೆ ಮುಂದಾದವರ ಮೇಲಿನ ಸುಂಕವನ್ನು ದ್ವಿಗುಣಗೊಳಿಸಿದ್ದೇವೆ”ಎಂದು ಚೀನಾ ಮೇಲೆ ಹೆಚ್ಚುವರಿ ಸುಂಕ ಘೋಷಣೆ ಮಾಡುವಾಗ ಟ್ರಂಪ್ ಹೇಳಿದ್ದಾರೆ.

ಭಾರತ, ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಅಮೆರಿಕಕ್ಕೆ ಆಮದಾಗುವ ಉತ್ಪನ್ನಗಳ ಮೇಲೆ ಏಪ್ರಿಲ್ 2ರಂದು ಟ್ರಂಪ್ ಪ್ರತಿ ಸುಂಕ ಘೋಷಣೆ ಮಾಡಿದ್ದರು. ಭಾರತದ ಮೇಲೆ ಶೇ.26 ಮತ್ತು ಚೀನಾ ಮೇಲೆ ಶೇ.34 ಪ್ರತಿಸುಂಕ ವಿಧಿಸಿದ್ದಾರೆ. ಹೊಸ ಸುಂಕ ನೀತಿ ಏಪ್ರಿಲ್ 9ರಿಂದ ಜಾರಿಗೆ ಬಂದಿದೆ.

ಚೀನಾದ ಮೇಲೆ ಅಮೆರಿಕದ ಸುಂಕ ಶೇ.20ರಷ್ಟು ಮೊದಲೇ ಇತ್ತು. ಟ್ರಂಪ್ ಶೇ.34ರಷ್ಟು ಪ್ರತಿ ಸುಂಕ ವಿಧಿಸಿದ್ದರಿಂದ ಚೀನಾದ ಮೇಲಿನ ಅಮೆರಿಕದ ಸುಂಕ ಶೇ. 54ರಷ್ಟು ಆಗಿತ್ತು. ಇದಕ್ಕೆ ಪ್ರತಿಯಾಗಿ ಚೀನಾ ಸರ್ಕಾರ ಅಮೆರಿಕದ ಮೇಲೆ ಶೇ.34ರಷ್ಟು ಪ್ರತಿಸುಂಕ ವಿಧಿಸಿತ್ತು. ಅದನ್ನು ಹಿಂತೆಗೆದುಕೊಳ್ಳಲು ಅಮೆರಿಕ ಮಂಗಳವಾರದವರೆಗೆ ಗಡುವು ನೀಡಿತ್ತು. ಇಲ್ಲದಿದ್ದರೆ ಶೇ. 50ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿತ್ತು.

ಚೀನಾ ಅಮೆರಿಕದ ಬೆದರಿಕೆಗೆ ಸೊಪ್ಪು ಹಾಕದ ಕಾರಣ ಟ್ರಂಪ್ ಚೀನಾ ಮೇಲೆ ಬುಧವಾರದಿಂದಲೇ ಹೆಚ್ಚುವರಿ ಶೇ. 50ರಷ್ಟು ಸುಂಕ ವಿಧಿಸಿದ್ದರು. ಇದರಿಂದ ಚೀನಾ ಮೇಲಿನ ಅಮೆರಿಕದ ಸುಂಕ ಶೇ.104 ಆಗಿತ್ತು. ಚೀನಾ ಜೊತೆ ಪ್ರತೀಕಾರಕ್ಕೆ ಮುಂದಾಗಿರುವ ಟ್ರಂಪ್ ಸುಂಕವನ್ನು ಬುಧವಾರ ಶೇ.125ಕ್ಕೆ ಏರಿಸಿದ್ದಾರೆ ಎಂದು ವರದಿಯಾಗಿದೆ.

ಟ್ರಂಪ್ ಚೀನಾ ಮೇಲೆ ಭಾರೀ ಪ್ರಮಾಣದ ಸುಂಕ ವಿಧಿಸಿದ ಬಳಿಕ “ಪ್ರತೀಕಾರಕ್ಕೆ ಮುಂದಾಗಬೇಡಿ, ಪ್ರತಿಫಲ ಸಿಗುತ್ತದೆ” ಎಂದು ಶ್ವೇತ ಭವನ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದೆ.

ಟ್ರಂಪ್ ಸುಂಕ ವಿನಾಯಿತಿ ಘೋಷಿಸಿದ್ದು ಏಕೆ?

“ನಾವು ಪ್ರತಿ ಸುಂಕ ವಿಧಿಸಿದರೂ ಸುಮಾರು 75 ರಾಷ್ಟ್ರಗಳು ಪ್ರತಿಕಾರಕ್ಕೆ ಮುಂದಾಗಿಲ್ಲ. ಹಾಗಾಗಿ, ಅವರಿಗೆ 90 ದಿನಗಳ ವಿನಾಯಿತಿ ನೀಡಲಾಗಿದೆ. ಅಮೆರಿಕದ ಜೊತೆಗಿನ ವ್ಯಾಪಾರದ ಅಸಮತೋಲನ ಪರಿಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಟ್ರಂಪ್ ಹೇಳಿದ್ದಾರೆ.

“ಪ್ರತಿ ಸುಂಕ ವಿಧಿಸಿದ ಬಳಿಕ 75 ರಾಷ್ಟ್ರಗಳು ಯುಎಸ್‌ ಪ್ರತಿನಿಧಿಗಳೊಂದಿಗೆ ವ್ಯಾಪಾರ ಅಡೆತಡೆಗಳು, ಕರೆನ್ಸಿ ಮೌಲ್ಯ, ಹೊಸ ಸುಂಕ ನೀತಿಯಿಂದ ಆದ ವ್ಯತ್ಯಾಸಗಳ ಬಗ್ಗೆ ಚರ್ಚಿಸಿವೆ. ಯಾವುದೇ ರಾಷ್ಟ್ರಗಳು ನಮ್ಮೊಂದಿಗೆ ಪ್ರತೀಕಾರಕ್ಕೆ ಮುಂದಾಗಿಲ್ಲ. ಹಾಗಾಗಿ, ಅವರಿಗೆ 90 ದಿನಗಳ ವಿರಾಮ ನೀಡಿದ್ದೇನೆ” ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಟ್ರುತ್‌ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

“ಜಾಗತಿಕ ಮಾರುಕಟ್ಟೆಗೆ ಚೀನಾ ಅಗೌರವ ತೋರಿದೆ. ಅದಕ್ಕಾಗಿ ಅವರಿಗೆ ನಾವು ಶೇ. 125 ಸುಂಕ ವಿಧಿಸುತ್ತಿದ್ದೇವೆ. ಅಮೆರಿಕ ಸೇರಿದಂತೆ ಇತರ ದೇಶಗಳನ್ನು ಎದುರು ಹಾಕಿಕೊಂಡು ಮಾರುಕಟ್ಟೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂಬುವುದನ್ನು ಚೀನಾಕ್ಕೆ ಅರಿವಾಗಲಿದೆ” ಎಂದು ಟ್ರಂಪ್ ಹೇಳಿದ್ದಾರೆ.

ತಾನು ವಿಧಿಸಿದ ಪ್ರತಿ ಸುಂಕಕ್ಕೆ ಪ್ರತೀಕಾರ ತೋರದ ದೇಶಗಳಿಗೆ 90 ದಿನಗಳ ಸುಂಕ ವಿನಾಯಿತಿ ನೀಡಿದ್ದೇನೆ ಎಂದು ಟ್ರಂಪ್ ಹೇಳಿದ್ದರೂ, ತನ್ನ ವಿರುದ್ದ ಸಮರ ಸಾರಿರುವ ಚೀನಾಗೆ ಬುದ್ದಿ ಕಲಿಸಲು, ಇತರ ದೇಶಗಳಿಂದ ಅದನ್ನು ಒಬ್ಬಂಟಿಯಾಗಿಸಲು ಅಥವಾ ಅಮೆರಿಕ ವಿರುದ್ದದ ಹೋರಾಟಕ್ಕೆ ಚೀನಾಗೆ ಯಾವುದೇ ರಾಷ್ಟ್ರಗಳು ಬೆಂಬಲ ನೀಡದಂತೆ ತಡೆಯಲು ಇತರ ದೇಶಗಳಿಗೆ ಟ್ರಂಪ್ ಸುಂಕ ವಿರಾಮ ಘೋಷಿಸಿದಂತೆ ಕಾಣುತ್ತಿದೆ.

ಏಕೆಂದರೆ, ಅಮೆರಿಕ ಚೀನಾ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ ಬಳಿಕ, “ಅಮೆರಿಕದ ಸುಂಕ ಹೇರಿಕೆ ವಿರುದ್ದ ಜೊತೆಯಾಗಿ ಹೋರಾಡೋಣ” ಎಂದು ಚೀನಾ ಭಾರತಕ್ಕೆ ಹೇಳಿತ್ತು.

ಅಮೆರಿಕದ ‘ಸುಂಕ ಹೇರಿಕೆ’ಯನ್ನು ಜೊತೆಯಾಗಿ ಎದುರಿಸೋಣ: ಭಾರತಕ್ಕೆ ಚೀನಾ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...