Homeಮುಖಪುಟ‘ಎರಡು ವರ್ಷಗಳಲ್ಲಿ 157 ಲಾಕಪ್ ಡೆತ್’- ಆಘಾತಕಾರಿ ಮಾಹಿತಿ ನೀಡಿದ ಗುಜರಾತ್ ಸರ್ಕಾರ‌

‘ಎರಡು ವರ್ಷಗಳಲ್ಲಿ 157 ಲಾಕಪ್ ಡೆತ್’- ಆಘಾತಕಾರಿ ಮಾಹಿತಿ ನೀಡಿದ ಗುಜರಾತ್ ಸರ್ಕಾರ‌

- Advertisement -
- Advertisement -

2019 ರಿಂದ 2020 ರವರೆಗಿನ ಎರಡು ವರ್ಷಗಳಲ್ಲಿ ರಾಜ್ಯದಾದ್ಯಂತ 157 ಕಸ್ಟೋಡಿಯಲ್ ಸಾವುಗಳು ವರದಿಯಾಗಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಜರಾತ್ ಸರ್ಕಾರ ಮಂಗಳವಾರ ನೀಡಿದೆ. ಈ ಸಾವುಗಳ ಪೈಕಿ ಒಬ್ಬ ವ್ಯಕ್ತಿಯ ರಕ್ತ ಸಂಬಂಧಿಗಷ್ಟೇ 2,50,000 ರೂಗಳನ್ನು ಪರಿಹಾರವಾಗಿ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಪೆಟ್ಲ್ಯಾಡ್‌ನ ಕಾಂಗ್ರೆಸ್ ಶಾಸಕರಾದ ನಿರಂಜನ್ ಪಟೇಲ್ ಅವರು 2019 ರಿಂದ 2020 ರ ಅವಧಿಯಲ್ಲಿ ರಾಜ್ಯದಲ್ಲಿ ಸಂಭವಿಸಿದ ಪೊಲೀಸ್ ಕಸ್ಟಡಿ ಸಾವುಗಳ ಬಗ್ಗೆ ಮಾಹಿತಿಯನ್ನು ಕೋರಿದ್ದರು.

2019 ರಲ್ಲಿ ಒಟ್ಟು 70 ಕಸ್ಟೋಡಿಯಲ್ ಸಾವುಗಳು ವರದಿಯಾಗಿದ್ದರೆ, 2020 ರಲ್ಲಿ ಇಂತಹ 87 ಘಟನೆಗಳು ವರದಿಯಾಗಿವೆ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.

ಇದನ್ನೂ ಓದಿ: ಹೋರಾಟಕ್ಕೆ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಬೆಂಬಲ: ರೈತರ ಬೆನ್ನಿಗೆ ನಿಂತ ‘ಲಿಲ್ಲಿ ಸಿಂಗ್’

ಗುಜರಾತ್ ಗೃಹ ಸಚಿವ ಪ್ರದೀಪ್ಸಿಂಗ್ ಜಡೇಜಾ ಅವರು, ರಾಜ್ಯ ಸರ್ಕಾರ ಪ್ರಸ್ತಾಪಿಸಿದಂತೆ ಸೂರತ್‌ನ ಒಂದು ಕುಟುಂಬಕ್ಕೆ 2,50,000 ರೂ.ಗಳ ಪರಿಹಾರವನ್ನು ನೀಡಲಾಗಿದೆ. ಇತರರಿಗೆ ಪರಿಹಾರವನ್ನು ನೀಡುವ ಅಗತ್ಯವಿಲ್ಲ ಎಂದು ಸದನಕ್ಕೆ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಅಹಮದಾಬಾದ್ ಮತ್ತು ಕಚ್‌ನಲ್ಲಿ ನಡೆದ ಕಸ್ಟೋಡಿಯಲ್ ಸಾವಿನ ಕುರಿತು ಜಮಲ್‌ಪುರ-ಖಾದಿಯಾ ಶಾಸಕ ಇಮ್ರಾನ್ ಖೇದವಾಲಾ ಕೇಳಿರುವ ಮತ್ತೊಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಜ್ಯ ಸರ್ಕಾರ ಪೊಲೀಸರ ವರದಿಯಂತೆ ಈ ಪ್ರದೇಶದಲ್ಲಿ ಎರಡು ವರ್ಷಗಳಲ್ಲಿ ಒಟ್ಟು 48 ಸಾವುಗಳು ಸಂಭವಿಸಿದೆ ಎಂದು ಹೇಳಿದೆ.

ಈ ಎರಡು ವರ್ಷಗಳಲ್ಲಿ ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 5 ಮಂದಿ ಸಬ್ ಇನ್ಸ್‌ಪೆಕ್ಟರ್‌ಗಳು, 19 ಮಂದಿ ಕಾನ್‌ಸ್ಟೆಬಲ್‌ಗಳು, 4 ಎಎಸ್‌ಐ ಮತ್ತು ಇತರ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಯಿತು ಎಂದು ಸರ್ಕಾರ ಹೇಳಿದೆ.


ಇದನ್ನೂ ಓದಿ: ಎಡಪಕ್ಷಗಳ ಬೃಹತ್ ರ‍್ಯಾಲಿಯ ಫೋಟೊಗಳನ್ನು ಮೋದಿ ರ‍್ಯಾಲಿಯೆಂದು ತಪ್ಪಾಗಿ ಹಂಚಿದ ಬಿಜೆಪಿಗರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...