Homeಮುಖಪುಟಕಾಫಿ ಡೆ ಸಂಸ್ಥಾಪಕ ಸಿದ್ದಾರ್ಥರ ಖಾತೆಯಿಂದ 20 ಬಿಲಿಯನ್ ಕಾಣೆ...!!

ಕಾಫಿ ಡೆ ಸಂಸ್ಥಾಪಕ ಸಿದ್ದಾರ್ಥರ ಖಾತೆಯಿಂದ 20 ಬಿಲಿಯನ್ ಕಾಣೆ…!!

- Advertisement -
- Advertisement -

ಕೆಫೆ ಕಾಫಿ ಡೆ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಖಾತೆಯಿಂದ 20 ಬಿಲಿಯನ್ ರೂಪಾಯಿಗಳು ಕಾಣೆಯಾಗಿದೆ ಎಂದು ಅವರ ನಿಧನದ ನಂತರ ಅದರ ಮಂಡಳಿಯು ಪ್ರಾರಂಭಿಸಿದ ತನಿಖೆಯಿಂದ ತಿಳಿದು ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸಿದ್ಧಾರ್ಥ ಅವರ ಆತ್ಮಹತ್ಯೆಯ ನಂತರ ತಿಂಗಳುಗಳ ಕಾಲ ನಡೆದ ಈ ತನಿಖೆಯು ಭಾರತದ ಅತಿದೊಡ್ಡ ಕಾಫಿ ಕೆಫೆಯ ಹಣಕಾಸಿನ ವಹಿವಾಟುಗಳನ್ನು ಮತ್ತು ಡಜನ್ ಗಟ್ಟಲೆ ಉದ್ಯಮಿಗಳ ಒಡೆತನದ ಖಾಸಗಿ ಕಂಪನಿಗಳೊಂದಿಗಿನ ವ್ಯವಹಾರಗಳನ್ನು ಪರಿಶೀಲಿಸಿದೆ. ಕರಡು ವರದಿಯಲ್ಲಿ ನೂರಕ್ಕಿಂತಲೂ ಹೆಚ್ಚು ಪುಟಗಳಿವೆ. ಇದು ಕಾಣೆಯಾದ ಕೋಟ್ಯಂತರ ರೂಪಾಯಿಗಳ ಬಗ್ಗೆ ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ.

ವರದಿಯು ಈ ವಾರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವರದಿ ಅಂತಿಮ ಹಂತದಲ್ಲಿದೆ ಅದು ಬಿಡುಗಡೆಯ ಮೊದಲು ನಿಖರವಾದ ವಿವರಗಳು ಬದಲಾಗಬಹುದು. ಒಬ್ಬರ ಪ್ರಕಾರ ಕಾಣೆಯಾದ ಹಣವು 25 ಬಿಲಿಯನ್ ರುಪಾಯಿಗಿಂತಳಲೂ ಹೆಚ್ಚಿದೆ ಎನ್ನಲಾಗಿದೆ.

“ತನಿಖಾ ವರದಿಯು ಇನ್ನೂ ಅಂತಿಮಗೊಂಡಿಲ್ಲ, ಪ್ರಗತಿಯಲ್ಲಿದೆ. ನಿರ್ದೇಶಕರ ಮಂಡಳಿ ಮತ್ತು ಕಂಪನಿಗೆ ಈ ಸಮಯದಲ್ಲಿ ಅದರ ವಿಷಯದ ಬಗ್ಗೆ ತಿಳಿದಿಲ್ಲ. ಆದ್ದರಿಂದ ತನಿಖೆಯ ಬಗ್ಗೆ ಊಹಿಸುವುದು ಸರಿಯಲ್ಲ” ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಸಿದ್ಧಾರ್ಥರವರ ಕುಟುಂಬ ಹಾಗೂ ಆಡಳಿತ ಮಂಡಳಿಯ ಆದ್ಯತೆ ಏನೆಂದರೆ, ಇಂತಹ ಪ್ರತಿಕೂಲ ವಾತಾವರಣದಲ್ಲೂ ವ್ಯವಹಾರವನ್ನು ನಡೆಸುವುದು, ಎಲ್ಲಾ ಶೇರುದಾರರ ಹಾಗೂ 30,000 ಉದ್ಯೋಗಿಗಳ ಭಾದ್ಯತೆಯನ್ನು ಪೂರೈಸುವುದಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಕಳೆದ ವರ್ಷ 59 ​​ವರ್ಷದ ಕೆಫೆ ಕಾಫಿ ಡೆ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಮಂಗಳೂರಿನ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿದ್ಧಾರ್ಥ ಸಹಿ ಮಾಡಿದಂತೆ ಕಂಡುಬರುವ ಕಾಫಿ ಡೆ ಮಂಡಳಿ ಮತ್ತು ಉದ್ಯೋಗಿಗಳಿಗೆ ನೀಡಿದ ಪತ್ರಗಳಲ್ಲಿ ಭಾರಿ ಸಾಲಗಳ ಬಗ್ಗೆ ವಿವರಿಸಲಾಗಿತ್ತು. ಅದರಲ್ಲಿ ಸಾಲದಾತರು ಮತ್ತು ತೆರಿಗೆ ಅಧಿಕಾರಿಗಳ ಒತ್ತಡದ ಬಗ್ಗೆ ಕೂಡ ದೂರಲಾಗಿತ್ತು. ಕಂಪನಿಯ ಹಣಕಾಸು ವಹಿವಾಟಿನ ಸಂಪೂರ್ಣ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆಂದು ಅದು ಹೇಳಿತ್ತು.

ಕೆಫೆ ಕಾಫಿ ಡೆ 1,500 ಕ್ಕೂ ಹೆಚ್ಚು ಶಾಖೆಗಳು ದೇಶದಾದ್ಯಂತ ಹರಡಿದೆ. ಆದರೆ ಸಿದ್ದಾರ್ಥದ ಮರಣದ ನಂತರ ಅದರ ಷೇರುಗಳು ಸುಮಾರು 90% ನಷ್ಟು ಕುಸಿದವು ಮತ್ತು ಅದರ ಮಾರುಕಟ್ಟೆ ಮೌಲ್ಯವು ಸುಮಾರು 80 ದಶ ಲಕ್ಷಕ್ಕೆ ಇಳಿಯಿತು. ಫೆಬ್ರವರಿಯಲ್ಲಿ ವ್ಯಾಪಾರವನ್ನು ಸ್ಥಗಿತಗೊಳಿಸಲಾಯಿತು. ಮಾರ್ಚ್ 2019 ರ ಹೊತ್ತಿಗೆ ಕಾಫಿ ಡೇ ತನ್ನ ಬ್ಯಾಲೆನ್ಸ್ ಶೀಟ್‌ನಲ್ಲಿ ಸುಮಾರು 24 ಶತಕೋಟಿ ರೂಪಾಯಿ ನಗದು ಮತ್ತು ನಗದು ಸಮಾನತೆಯನ್ನು ತೋರಿಸಿದೆ. ಇದು ಕಂಪನಿಯು ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು.

ಆದಾಗ್ಯೂ ಸಿದ್ಧಾರ್ಥರ ಮರಣದ ನಂತರ, ಕಂಪನಿಯು ತೀವ್ರ ಬಿಕ್ಕಟ್ಟನ್ನು ಎದುರಿಸಿತು. ಕಂಪೆನಿಯು ದಿನನಿತ್ಯದ ಖರ್ಚಿಗೆ ಹೆಣಗಾಡುತ್ತಿದೆ ಮತ್ತು ಸಂಬಳವನ್ನು ಪಾವತಿಸುವುದು ಕೂಡಾ ಕಷ್ಟಕರವಾಗಿದೆ ಎಂದು ಹೇಳಲಾಗಿದೆ.

ಸಿದ್ಧಾರ್ಥ ಮತ್ತು ಅವರ ಹಲವಾರು ಉದ್ಯೋಗಿಗಳ ಒಡೆತನದ ಕಾಫಿ ಎಸ್ಟೇಟ್‌ಗಳನ್ನು ಬ್ಯಾಂಕ್ ಸಾಲಗಳಿಗೆ ಮೂಲಾಧಾರವಾಗಿ ಬಳಸಲಾಗಿದೆ. ಸಾಲವನ್ನು ಪಡೆಯಲು ಆಸ್ತಿಗಳ ಮೌಲ್ಯಮಾಪನಗಳನ್ನು ಹೆಚ್ಚಿಸಲಾಗಿದೆ ಎಂದು ವರದಿಯಲ್ಲಿ ಕಂಡುಬಂದಿದೆ.

ಸಿದ್ಧಾರ್ಥರು ತಮ್ಮ ಪತ್ರದಲ್ಲಿ, “ನಾನು ಅತ್ಯುತ್ತಮವಾಗಿ ಪ್ರಯತ್ನಿಸಿದ್ದೇನೆ ಆದರೆ ಉದ್ಯಮಿಯಾಗಿ ವಿಫಲವಾದೆ” ಎಂದು ಬರೆದಿದ್ದರು. “ಎಲ್ಲಾ ತಪ್ಪುಗಳಿಗೆ ನಾನು ಮಾತ್ರ ಜವಾಬ್ದಾರನಾಗಿರುತ್ತೇನೆ” ಎಂದು ಪತ್ರವನ್ನು ಬರೆಯಲಾಗಿದೆ. “ಪ್ರತಿ ಹಣಕಾಸಿನ ವಹಿವಾಟು ನನ್ನ ಜವಾಬ್ದಾರಿಯಾಗಿದೆ. ನನ್ನ ತಂಡ, ಲೆಕ್ಕಪರಿಶೋಧಕರು ಮತ್ತು ಹಿರಿಯ ನಿರ್ವಹಣೆಗಾರರಿಗೆ ನನ್ನ ಎಲ್ಲಾ ವಹಿವಾಟುಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ನನ್ನ ಕುಟುಂಬ ಸೇರಿದಂತೆ ಪ್ರತಿಯೊಬ್ಬರಿಂದಲೂ ಈ ಮಾಹಿತಿಯನ್ನು ನಾನು ಕೊಡದಿರುವ ಕಾರಣ ಎಲ್ಲದಕ್ಕೂ ನಾನು ಮಾತ್ರ ಜವಾಬ್ದಾರ” ಎಂದು ಬರೆದಿದ್ದರು.

ವರದಿ ಬಿಡುಗಡೆಯಾಗಲು ಹತ್ತಿರವಾಗುತ್ತಿದ್ದಂತೆ , ಕಾಫಿ ಡೇ ರಿಯಲ್ ಎಸ್ಟೇಟ್ ಆಸ್ತಿಗಳಿಗಾಗಿ ಬ್ಲ್ಯಾಕ್‌ಸ್ಟೋನ್ ಗ್ರೂಪ್ ನೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ. ಸುಮಾರು ಒಂದು ವಾರದಲ್ಲಿ ದೊಡ್ಡ ಮೊತ್ತವನ್ನು ಪಾವತಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

“ಉದ್ಯೋಗವನ್ನು ಉಳಿಸುವುದು ಮತ್ತು ಈ ಸಾಂಪ್ರದಾಯಿಕ ಭಾರತೀಯ ಬ್ರಾಂಡ್ ಅನ್ನು ಕಾಪಾಡುವುದು ಇದರ ಉದ್ದೇಶ” ಎಂದು ವಕ್ತಾರರು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...