Homeಅಂತರಾಷ್ಟ್ರೀಯ2019ರ ನೋಬೆಲ್ ಪ್ರಶಸ್ತಿಗೆ ಕೆನಡಾದ ಮೂವರು ವಿಜ್ಞಾನಿಗಳು ಆಯ್ಕೆ

2019ರ ನೋಬೆಲ್ ಪ್ರಶಸ್ತಿಗೆ ಕೆನಡಾದ ಮೂವರು ವಿಜ್ಞಾನಿಗಳು ಆಯ್ಕೆ

- Advertisement -
- Advertisement -

ವಿಶ್ವ ವಿಜ್ಞಾನದಲ್ಲಿ ಬ್ರಹ್ಮಾಂಡದ ವಿಕಾಸ ಮತ್ತು ತಿಳುವಳಿಕೆ ಸುಧಾರಣೆ ಹಾಗೂ ಕ್ರಾಂತಿಕಾರಕ ಸಂಶೋಧನೆಯ ಸಾಧನೆಗೆ ಮೂವರು ವಿಜ್ಞಾನಿಗಳು ನೋಬೆಲ್ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಭೌತಶಾಸ್ತ್ರದಲ್ಲಿ ಮಾಡಿದ ಮಹಾನ್‌ ಸಾಧನೆಗಾಗಿ 2019ರ ನೋಬೆಲ್ ಪ್ರಶಸ್ತಿಯನ್ನು ಜೇಮ್ಸ್ ಪೀಬಲ್ಸ್, ಮೈಕೆಲ್ ಮೇಯರ್, ಡೀಡಿಯರ್ ಕ್ವೆಲೋಜ್ ಪಡೆದುಕೊಂಡಿದ್ದಾರೆ.

ಕೆನಡಾ ವಿಜ್ಞಾನಿ ಜೇಮ್ಸ್ ಪೀಬಲ್ಸ್‍ಗೆ ಬ್ರಹ್ಮಾಂಡದ ವಿಕಾಸದ ಸೈದ್ಧಾಂತಿಕ ಆವಿಷ್ಕಾರಗಳಿಗಾಗಿ ಸ್ವೀಡಿಶ್ ಕ್ರೋನರ್ ಬಹುಮಾನ ನೀಡಲಾಗಿದೆ. ಸ್ಟಾಕ್‍ಹೋಮ್‍ನ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸ್ ಪ್ರಶಸ್ತಿ ಪ್ರದಾನ ಮಾಡಿದೆ. ಇನ್ನು ಖಗೋಳ ವಿಜ್ಞಾನಿಗಳಾದ ಮೈಕೆಲ್ ಮೇಯರ್, ಡೀಡಿಯರ್ ಕ್ವೆಲೋಜ್ ಜೋಡಿ, ಸೌರವ್ಯೂಹದಿಂದ ಹೊರಗಿರುವ ಮೊದಲ ಗ್ರಹ ಕಂಡು ಹಿಡಿದಿದ್ದಕ್ಕಾಗಿ ಪ್ರಶಸ್ತಿ ನೀಡಲಾಗಿದೆ.

ಜೇಮ್ಸ್ ಪೀಬಲ್ಸ್ ಅವರು ಭೌತಿಕ ವಿಶ್ವವಿಜ್ಞಾನದ ಕುರಿತು ಸಂಶೋಧನೆ ನಡೆಸಿದ್ದರು. ಕಳೆದ 50 ವರ್ಷಗಳಲ್ಲಿ ಭೌತಿಕ ವಿಶ್ವ ವಿಜ್ಞಾನದಲ್ಲಿ ನಡೆದ ಬೆಳವಣಿಗೆಗಳು, ಊಹಾಪೋಹಗಳು, ರೂಪಾಂತರಕ್ಕೆ ಅಡಿಪಾಯ ಹಾಕಿದ ಸಂಗತಿಗಾಗಿ ಪೀಬಲ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೇಯರ್ ಮತ್ತು ಕ್ವೆಲೋಜ್ 1995ರಲ್ಲಿ ಪೆಗಾಸನ್ ನಕ್ಷತ್ರಪುಂಜದಲ್ಲಿ 50 ವರ್ಷಗಳವರೆಗೆ ಬೆಳಕಿನಿಂದ ದೂರವಿದ್ದ ಮೊದಲ ಗ್ರಹವನ್ನು ಕಂಡು ಹಿಡಿದಿದ್ದರು. ಅಂದಿನಿಂದ ಇಬ್ಬರೂ ಖಗೋಳಶಾಸ್ತ್ರಜ್ಞರು ಸಾವಿರಾರು ಗ್ರಹಗಳನ್ನು ಕಂಡು ಹಿಡಿದಿದ್ದಾರೆ. ಅಲ್ಲದೇ ಸೌರವ್ಯೂಹವನ್ನು ಮೀರಿದ ಪ್ರಪಂಚಗಳ ಕುರಿತು ಆವಿಷ್ಕಾರ, ಕ್ಷೀರಪಥದ ಬಗ್ಗೆ ಇರುವ ಮಾಹಿತಿ ಹಾಗೂ ಹೆಚ್ಚಿನ ತಿಳುವಳಿಕೆ ಮೂಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂತಸ ಹಂಚಿಕೊಂಡ ಜೇಮ್ಸ್ ಪೀಬಲ್ಸ್, ನಾನು ಅಂದುಕೊಂಡಿದ್ದ ಒಂದೆರಡು ಸಂಗತಿಗಳನ್ನು ಸಂಶೋಧಿಸಿದ್ದೇನೆ. ವಿಶ್ವವಿಜ್ಞಾನದಲ್ಲಿ ಅವುಗಳ ಪ್ರಾಮುಖ್ಯವನ್ನು ಇದ್ದಂತೆ ಸ್ವೀಕರಿಸಿ, ಕೆಲ ಸಂಗತಿಗಳನ್ನು ಕಂಡುಕೊಂಡಿದ್ದೇನೆ. ಪ್ರಶಸ್ತಿ ಮತ್ತು ಪದಕಗಳು ಪ್ರಶಂಸೆಗಿಂತ ಹೆಚ್ಚು ಆಕರ್ಷಕವಾಗಿರುತ್ತವೆ. ಆದರೆ ಪ್ರಶಸ್ತಿಗಳು ನಮ್ಮ ಯೋಜನೆಗಳ ಭಾಗವಾಗಿರುವುದಿಲ್ಲ. ನಿಮ್ಮನ್ನು ವಿಜ್ಞಾನ ಆಕರ್ಷಿಸಿದಾಗ ಮಾತ್ರ ನೀವು ವಿಜ್ಞಾನದೊಳಗೆ ಒಂದಾಗಲು ಸಾಧ್ಯ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...