Homeಚಳವಳಿದೆಹಲಿ ಗಲಭೆ: ಸುಳ್ಳು ಸುದ್ದಿ ಬಿತ್ತರಿಸಿದ್ದ ಟೈಮ್ಸ್ ನೌ, ವಿಡಿಯೋ ಡಿಲೀಟ್ ಮಾಡಲು ಸೂಚನೆ

ದೆಹಲಿ ಗಲಭೆ: ಸುಳ್ಳು ಸುದ್ದಿ ಬಿತ್ತರಿಸಿದ್ದ ಟೈಮ್ಸ್ ನೌ, ವಿಡಿಯೋ ಡಿಲೀಟ್ ಮಾಡಲು ಸೂಚನೆ

- Advertisement -
- Advertisement -

ಫೆಬ್ರವರಿ 2020ರಲ್ಲಿ ನಡೆದ ದೆಹಲಿ ಗಲಭೆಯಲ್ಲಿ ಎಡಪಂಥೀಯರ ಕೈವಾಡವಿದೆ ಎಂದು ಎರಡು ಸುಳ್ಳು ಸುದ್ದಿ ಬಿತ್ತರಿಸಿದ್ದ ಟೈಮ್ಸ್‌ ನೌ ಸುದ್ದಿ ವಾಹಿನಿ ವಿರುದ್ಧ ನ್ಯಾಷನಲ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBDSA) ಆಕ್ಷೇಪ ವ್ಯಕ್ತಪಡಿಸಿದ್ದು, ಆ ಎರಡು ವಿವಾದಾತ್ಮಕ ಚರ್ಚೆಗಳನ್ನು ತಮ್ಮ ಚಾನಲ್ ಮತ್ತು ಯೂಟ್ಯೂಬ್‌ನಿಂದ ತೆಗೆದುಹಾಕುವಂತೆ ಸೂಚನೆ ನೀಡಿದೆ.

ಟೈಮ್ಸ್ ನೌ ವಾಹಿನಿ ಆ ಸುದ್ದಿಗಳನ್ನು “ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ರೀತಿಯಲ್ಲಿ” ವರದಿ ಮಾಡಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ. 

ಸೆಪ್ಟೆಂಬರ್ 14ರಂದು ‘ಇಂಡಿಯಾ ಅಪ್‌ಫ್ರಂಟ್’ ಕಾರ್ಯಕ್ರಮವನ್ನು ಆಯೋಜಿಸಿದ್ದ ಟೈಮ್ಸ್‌ ನೌನ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್, “ಎಡಪಂಥೀಯರ ರಹಸ್ಯ ಸಭೆ” ಎಂದು ಸುದ್ದಿ ಕಾರ್ಯಕ್ರಮ ಮಾಡಿದ್ದರು. ಈ ಬಗ್ಗೆ NBDSA ದೂರು ನೀಡಿದ್ದ ಉತ್ಕರ್ಷ್ ಮಿಶ್ರಾ ಅವರು ಟೈಮ್ಸ್‌ ನೌನಲ್ಲಿ ಹೇಳಲಾದ ಎಡಪಂತೀಯ ಸಭೆಯು ವಾಸ್ತವವಾಗಿ ಜೂಮ್‌ ವೆಬ್‌ನಾರ್ ಆಗಿತ್ತು. ಆ ವೆಬಿನಾರ್‌ಅನ್ನು ಫೇಸ್‌ಬುಕ್‌ನಲ್ಲಿ ಲೈವ್ ಮಾಡಿ, ವೀಡಿಯೊ ಅಪ್‌ಲೋಡ್ ಮಾಡಲಾಗಿದೆ. ಆದರೆ, “ಟೈಮ್ಸ್‌ ನೌ ಪ್ರಸಾರಕರು ವೀಕ್ಷಕರನ್ನು ದಾರಿತಪ್ಪಿಸಲು, ಸಮುದಾಯಗಳ ನಡುವೆ ದ್ವೇಷವನ್ನು ಬೆಳೆಸಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ” ಎಂದು ತಿಳಿಸಿದ್ದರು. 

ಚರ್ಚೆ ಕಾರ್ಯಕ್ರಮಗಳನ್ನು ನಿರೂಪಕರಾದ ರಾಹುಲ್ ಶಿವಶಂಕರ್ ಮತ್ತು ಪದ್ಮಜಾ ಜೋಶಿಯವರು ನಡೆಸುತ್ತಿದ್ದರು. ನಿರೂಪಕರು “ನೈತಿಕ ಸಂಹಿತೆ ಮತ್ತು ಬ್ರಾಡ್‌ಕಾಸ್ಟಿಂಗ್ ಮಾನದಂಡಗಳು ಮತ್ತು NBDSA ಹೊರಡಿಸಿದ ವಿವಿಧ ಮಾರ್ಗಸೂಚಿಗಳಲ್ಲಿ ನಮೂದಿಸಲಾದ ಮೂಲಭೂತ ತತ್ವಗಳನ್ನು ಉಲ್ಲಂಘಿಸಿದ್ದಾರೆ” ಎಂದು NBDSA ಘೋಷಿಸಿದೆ. 

ಇದನ್ನೂ ಓದಿ: ರೈತ ಹೋರಾಟ: ಸುಳ್ಳು ಸುದ್ದಿ ವರದಿ ಮಾಡಿದ್ದ ಝೀ ನ್ಯೂಸ್‌ಗೆ NBDSA ಛೀಮಾರಿ

“ಸೆಪ್ಟೆಂಬರ್ 14, 2020 ಮತ್ತು ಸೆಪ್ಟೆಂಬರ್ 23, 2020 ರಂದು ಟೈಮ್ಸ್‌ ನೌನ ಇಂಡಿಯಾ ಅಪ್‌ಫ್ರಂಟ್‌ನ ಎರಡು ಸಂಚಿಕೆಗಳನ್ನು ತೆಗೆದು ಹಾಕಬೇಕು. ಈ ಬಗ್ಗೆ, ಏಳು ದಿನಗಳೊಳಗೆ ಲಿಖಿತವಾಗಿ ದೃಢೀಕರಣವನ್ನು ಕಳುಹಿಸಬೇಕು” ಎಂದು NBDSA ಆದೇಶ ನೀಡಿದೆ.

ನಿರೂಪಕ ರಾಹುಲ್ ಶಿವಶಂಕರ್ “ರಹಸ್ಯ ಎಡಪಂಥೀಯರ ಸಭೆ” ಎಂದು ಸುಳ್ಳು ಹೇಳಿಕೆಗಳನ್ನು ನೀಡಿದ್ದು ಮಾತ್ರವಲ್ಲದೆ, ಗಲಭೆಯ ಸಮಯದಲ್ಲಿ ನ್ಯಾಯಾಂಗ ದೆಹಲಿ ಪೊಲೀಸರ ಕ್ರಮ ಮತ್ತು ಉದ್ದೇಶವನ್ನು ಪ್ರಶ್ನಿಸಿದ್ದು ಸೇರಿದಂತೆ, ಇತರ ಚಾನೆಲ್‌ಗಳಲ್ಲಿ ವರದಿಯಾದ ಸತ್ಯಗಳನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

“ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ದೆಹಲಿ ಪೊಲೀಸರು ಪರಿಶೀಲಿಸದೇ ಮಾಡಿದ್ದ ಆರೋಪಗಳನ್ನು ಮಾತ್ರ ಚಾನೆಲ್ ವರದಿ ಮಾಡಿದೆ. ಚಾನೆಲ್‌ನ ಆಂತರಿಕ ಭದ್ರತಾ ಸಂಪಾದಕರು ಇಡೀ ವಿಷಯದಲ್ಲಿ ದೆಹಲಿ ಪೊಲೀಸರ ಪಾತ್ರವನ್ನು ನ್ಯಾಯಾಂಗವು ಪ್ರಶ್ನಿಸಿದ್ದರೂ ಸಹ, ಪೊಲೀಸರ ನಡೆಯನ್ನು ಮೌಲ್ಯೀಕರಿಸಲು ಮುಂದಾಗಿದ್ದಾರೆ ಎಂದು ದೂರುದಾರ ಆರೋಪಿಸಿದ್ದರು.

“ಈ ವಿಷಯದ ಬಗ್ಗೆ ವೀಕ್ಷಕರು ಸತ್ಯಾಧಾರಿತ ದೃಷ್ಟಿಕೋನವನ್ನು ಪಡೆದುಕೊಳ್ಳಲು ವಾಹಿನಿ ಅಡ್ಡಿಪಡಿಸಿದೆ. ಇದಲ್ಲದೆ, ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಅಪಖ್ಯಾತಿಗೊಳಿಸಲು ಪದ್ಮಜಾ ಜೋಶಿ ಪ್ರಯತ್ನಿಸಿದ್ದಾರೆ. ವಿವಾದಾತ್ಮಕ ವಿಷಯದ ಒಂದು ಬದಿಯ ಪರವಾಗಿ ಮತ್ತು ಮತ್ತೊಂದು ಬದಿಗೆ ಅಡ್ಡಿಪಡಿಸಲು ಮಾಧ್ಯಮ ಪ್ರಯೋಗ ನಡೆದಿದೆ” ಎಂದು ಪ್ರಾಧಿಕಾರದ ಆದೇಶ ಹೇಳಿದೆ.

ಆದರೆ ಟೈಮ್ಸ್ ನೌ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, “ದೂರುದಾರರು ಅದೇ ಆ್ಯಂಕರ್‌ಗಳು/ಪತ್ರಕರ್ತರ ವಿರುದ್ಧ ಪದೇ ಪದೇ ಅನಗತ್ಯ ಮತ್ತು ಕ್ಷುಲ್ಲಕ ದೂರುಗಳನ್ನು ಮಾಡುತ್ತಿದ್ದಾರೆ” ಎಂದು ಚಾನೆಲ್ ಹೇಳಿದೆ. ಆದರೆ, ಎನ್‌ಬಿಡಿಎಸ್‌ಎ ಚಾನೆಲ್‌ನ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು, ನೋಟಿಸ್ ನೀಡಿದೆ.

ಇತ್ತ, ರೈತ ಹೋರಾಟದ ವರದಿಗಾರಿಕೆಯ ವೇಳೆ ಸುಳ್ಳು ವರದಿ ಮಾಡಿದ್ದಕ್ಕಾಗಿ ಝೀ ನ್ಯೂಸ್‌ ಚಾನಲ್‌ ವಿರುದ್ದ ಸಲ್ಲಿಸಲಾಗಿದ್ದ ದೂರನ್ನು NBDSA ಪರಿಶೀಲನೆ ನಡೆಸಿ ಸುದ್ದಿ ಸಂಸ್ಥೆಗೆ ಛೀಮಾರಿ ಹಾಕಿದೆ. ಮಾತ್ರವಲ್ಲದೆ, ರೈತ ಹೋರಾಟದ ವಿರುದ್ದ ಪ್ರಸಾರ ಮಾಡಲಾಗಿದ್ದ, ಸುಳ್ಳು ವರದಿಗಳ ವೀಡಿಯೊಗಳನ್ನು ತಕ್ಷಣ ತೆಗೆದುಹಾಕಬೇಕೆಂದು ಸೂಚನೆ ನೀಡಿದೆ.


ಇದನ್ನೂ ಓದಿ: ಉಂಡ ಮನೆಗೆ ದ್ರೋಹ ಬಗೆದ ಭಾರತೀಯ ಮಾಧ್ಯಮಗಳು; ಅನ್ನದಾತರನ್ನೇ ಭಯೋತ್ಪಾದಕರು-ದೇಶದ್ರೋಹಿಗಳು ಎನ್ನುತ್ತಿವೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...