Homeಮುಖಪುಟ2024 ಭಾರತದ ಗರಿಷ್ಠ ತಾಪಮಾನದ ವರ್ಷ : ಹವಾಮಾನ ಇಲಾಖೆ

2024 ಭಾರತದ ಗರಿಷ್ಠ ತಾಪಮಾನದ ವರ್ಷ : ಹವಾಮಾನ ಇಲಾಖೆ

- Advertisement -
- Advertisement -

2024ನೇ ವರ್ಷವು 1901ರಿಂದ ಇದುವರೆಗೆ ಭಾರತದಲ್ಲಿ ದಾಖಲಾದ ಗರಿಷ್ಠ ತಾಪಮಾನದ ವರ್ಷವಾಗಿದೆ. ಸರಾಸರಿ ಕನಿಷ್ಠ ತಾಪಮಾನವು ದೀರ್ಘಾವಧಿಯ ಸರಾಸರಿಗಿಂತ 0.90 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ (ಜ.1) ತಿಳಿಸಿದೆ.

ವರ್ಷದ ಕೊನೆಯ ಮೂರು ತಿಂಗಳುಗಳು (ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್) ಅತಿ ಹೆಚ್ಚು ತಾಪಮಾನ ದಾಖಲಾದ ಜಂಟಿ ತಿಂಗಳುಗಳಾದರೆ, ಅಕ್ಟೋಬರ್ 2024 ಅತಿ ಹೆಚ್ಚು ತಾಪಮಾನ ದಾಖಲಾದ ಒಂಟಿ (ಪ್ರತ್ಯೇಕ) ತಿಂಗಳಾಗಿದೆ ಎಂದು ಐಎಂಡಿ ಹೇಳಿದೆ.

2024ರ ವಾರ್ಷಿಕ ಸರಾಸರಿ ತಾಪಮಾನವು 25.75 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಇದು ದೀರ್ಘಾವಧಿ ಸರಾಸರಿ ತಾಪಮಾನಕ್ಕಿಂತ 0.65 ಹೆಚ್ಚು. ಸರಾಸರಿ ಗರಿಷ್ಠ ತಾಪಮಾನವು 31.25 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಇದು ಸಾಮಾನ್ಯಕ್ಕಿಂತ 0.20 ಡಿಗ್ರಿ ಹೆಚ್ಚು ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ವಿವರಿಸಿದ್ದಾರೆ.

ಈ ಹಿಂದೆ 2016ರಲ್ಲಿ ಗರಿಷ್ಠ ತಾಪಮಾನ ದಾಖಲಾಗಿತ್ತು. ದೀರ್ಘಾವಧಿ ಸರಾಸರಿ ತಾಪಮಾನಕ್ಕಿಂತ 0.54 ಹೆಚ್ಚು ಇತ್ತು. 2016 ಮತ್ತು 2024ರ ಸರಾಸರಿ ತಾಪಮಾನದ ನಡುವೆ 0.11 ಡಿಗ್ರಿ ವ್ಯತ್ಯಾಸ ಕಂಡು ಬಂದಿದೆ.

ಭಾರತದಲ್ಲಿ ತಾಪಮಾನ ಏರಿಕೆಯೊಂದಿಗೆ ಜಾಗತಿಕ ತಾಪಮಾನದಲ್ಲೂ ಹೆಚ್ಚಳ ಕಂಡು ಬಂದಿದೆ. ವಿಶ್ವ ಹವಾಮಾನ ಸಂಸ್ಥೆ ಕೂಡ 2024ನ್ನು ಅತ್ಯಂತ ಬೆಚ್ಚಗಿನ ವರ್ಷ ಎಂದು ಹೇಳಿದೆ. ಜಾಗತಿಕ ತಾಪಮಾನ ಪ್ಯಾರಿಸ್ ಒಪ್ಪಂದದ ಮಿತಿಯನ್ನು ಮೀರಿ 1.5ರಷ್ಟು ಹೆಚ್ಚಳವಾಗಿದೆ. ಪ್ಯಾರಿಸ್ ಒಪ್ಪಂದವು ಕೈಗಾರಿಕಾ ಪೂರ್ವದ(1850-1900) ತಾಪಮಾನವನ್ನು ಮಿತಿಯಾಗಿಟ್ಟುಕೊಂಡಿದೆ. 2023ರಲ್ಲಿ ಜಾಗತಿಕ ತಾಪಮಾನ 1.45 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿತ್ತು. ಈ ಬಾರಿ ಆ ದಾಖಲೆ ಮುರಿದಿದೆ.

ಜನವರಿಯಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಪೂರ್ವ ವಾಯುವ್ಯ ಮತ್ತು ಪಶ್ಚಿಮ-ಮಧ್ಯ ಪ್ರದೇಶಗಳ ಕೆಲವು ಪ್ರದೇಶಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಐಎಂಡಿಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಜನವರಿಯಲ್ಲಿ ಮಧ್ಯ ಭಾರತದ ಪಶ್ಚಿಮ ಮತ್ತು ಉತ್ತರ ಭಾಗಗಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಶೀತದ ವಾತವರಣವಿರುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಭೀಮಾ-ಕೋರೆಗಾಂವ್ ಶೌರ್ಯ ದಿನ : ಸ್ಮಾರಕ ವಿಸ್ತರಣೆಗೆ ₹200 ಕೋಟಿ ಬೇಡಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ದೌರ್ಜನ್ಯಕ್ಕೆ ದಲಿತ ವಿದ್ಯಾರ್ಥಿ ಬಲಿ | ಸಂತಾಪ ಸೂಚಿಸಲು ಬಾರದ ಕಾಲೇಜು ಸಿಬ್ಬಂದಿ : ಅನುಮಾನ ವ್ಯಕ್ತಪಡಿಸಿದ ಶಿಕ್ಷಣ ಸಚಿವ

ಜಾತಿ ದೌರ್ಜನ್ಯದ ಆರೋಪ ಮಾಡಿ ದಲಿತ ವಿದ್ಯಾರ್ಥಿ ನಿತಿನ್ ರಾಜ್ ಸಾವಿಗೆ ಶರಣಾದ ನಂತರ, ಅವರ ಕಾಲೇಜಿನ ಒಬ್ಬನೇ ಒಬ್ಬ ಪ್ರತಿನಿಧಿಯೂ ಮನೆಗೆ ಭೇಟಿ ನೀಡದಿರುವುದು 'ಗಂಭೀರವಾದ ವಿಷಯ' ಎಂದು ಕೇರಳದ ಸಾರ್ವಜನಿಕ...

ಹಂಗೇರಿ ಚುನಾವಣೆಯಲ್ಲಿ ತೀವ್ರ ಬಲಪಂಥೀಯ ವಿಕ್ಟರ್ ಒರ್ಬಾನ್‌ಗೆ ಸೋಲು : ಟ್ರಂಪ್ ಆಪ್ತನ ಯುಗಾಂತ್ಯ

ಹಂಗೇರಿಯ ಸಾರ್ವತ್ರಿಕ ಚುನಾವಣೆಯಲ್ಲಿ, ಕಳೆದ 16 ವರ್ಷಗಳಿಂದ ದೇಶವನ್ನು ಆಳಿದ ತೀವ್ರ ಬಲಪಂಥೀಯ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ವಿಕ್ಟರ್ ಒರ್ಬಾನ್ ಸೋಲಾಗಿದೆ. ಆರ್ಥಿಕ ಸ್ಥಗಿತ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ...

ಹಾರ್ಮುಝ್ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸಲು ಮುಂದಾದ ಅಮೆರಿಕ : ಕಠಿಣ ಕ್ರಮದ ಎಚ್ಚರಿಕೆ ನೀಡಿದ ಇರಾನ್

ಇಸ್ಲಾಮಾಬಾದ್‌ನಲ್ಲಿ ಆಯೋಜಿಸಿದ್ದ ಅಮೆರಿಕ-ಇರಾನ್ ನಡುವಿನ ಐತಿಹಾಸಿಕ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಹಾರ್ಮುಝ್ ಜಲಸಂಧಿಯ ಸುತ್ತಲಿನ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ.  ಮಾತುಕತೆ ವಿಫಲವಾದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಝ್...

ಕೇರಳ: ಕಣ್ಣೂರು ದಂತ ಕಾಲೇಜಿನಲ್ಲಿ ದಲಿತ ಬಿಡಿಎಸ್ ವಿದ್ಯಾರ್ಥಿ ಆತ್ಮಹತ್ಯೆ, ಕ್ರೂರ ಜಾತಿ ನಿಂದನೆ, ಅವಮಾನ ಆರೋಪ

ಕೇರಳದಲ್ಲಿ ನಡೆದ ಜಾತಿ ಆಧಾರಿತ ಕಿರುಕುಳದ ಆಘಾತಕಾರಿ ಪ್ರಕರಣದಲ್ಲಿ, ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ.   ಆರ್‌.ಎಲ್ ನಿತಿನ್ ರಾಜ್ ಅವರ ಕುಟುಂಬವು...

ಜಬ್ಬಾರ್​ರನ್ನು ಎಂಎಲ್‌ಸಿ ಮಾಡಿದ್ದು ನಾವು, ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು : ಸಚಿವ ಎಸ್.ಎಸ್ ಮಲ್ಲಿಕಾರ್ಜುನ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನರ ಪ್ರತಿಕ್ರಿಯೆ ಚೆನ್ನಾಗಿತ್ತು, ನಾವು ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ. ನಮ್ಮ ಮತದಾರ ಬಂಧುಗಳು ಉತ್ತಮವಾಗಿ ಮತದಾನ ಮಾಡಿದ್ದಾರೆ. ಒಳ್ಳೆಯ ಅಂತರದಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲುತ್ತೆ,...

ಧಾರವಾಡ: ಯುವ ಕಾಂಗ್ರೆಸ್ ನಾಯಕ ಫೈರೋಜ್ ಖಾನ್ ಪಠಾಣ್ ಹತ್ಯೆ; ಮೂವರು ಆರೋಪಿಗಳ ಬಂಧನ

ಧಾರವಾಡದಲ್ಲಿ ಶುಕ್ರವಾರ ತಡರಾತ್ರಿ ಯುವ ಕಾಂಗ್ರೆಸ್ ನಾಯಕನೊಬ್ಬನನ್ನು ಅವರ ನಿವಾಸದೊಳಗೆ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ನಗರದಾದ್ಯಂತ ಆಘಾತದ ಅಲೆಗಳನ್ನು ಸೃಷ್ಟಿಸಿದೆ. ಮೃತ ವ್ಯಕ್ತಿಯನ್ನು ಫೈರೋಜ್ ಖಾನ್ ಪಠಾಣ್ (34) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ,...

ಮಧ್ಯಪ್ರದೇಶದ ಕಟ್ನಿಯಲ್ಲಿ ಮಹಾರಾಷ್ಟ್ರಕ್ಕೆ ರೈಲಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 163 ಅಪ್ರಾಪ್ತ ಬಾಲಕರ ರಕ್ಷಣೆ; 8 ಮಂದಿ ಬಂಧನ

ಕಟ್ನಿ: ಬಿಹಾರದಿಂದ ಮಹಾರಾಷ್ಟ್ರಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನಲಾದ 163 ಅಪ್ರಾಪ್ತ ಬಾಲಕರನ್ನು ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಎಕ್ಸ್‌ಪ್ರೆಸ್ ರೈಲಿನಿಂದ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಆರು ರಿಂದ 13 ವರ್ಷದೊಳಗಿನ...

ನಗರಪಾಲಿಕೆ ಚುನಾವಣೆಯಲ್ಲಿ ನಮಗೆ ಅಧಿಕಾರಕ್ಕೆ ಬರಲು ಒಂದು ಅವಕಾಶ ನೀಡಿ: ಬೆಂಗಳೂರಿಗರಿಗೆ ಎಚ್‌.ಡಿ ಕುಮಾರಸ್ವಾಮಿ ಮನವಿ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿರುವ ಐದು ಮಹಾನಗರ ಪಾಲಿಕೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವ ಮೂಲಕ ಅಧಿಕಾರಕ್ಕೆ ಬರುವ ಅವಕಾಶ ನೀಡುವಂತೆ ದೇವೇಗೌಡ ನೇತೃತ್ವದ ಜೆಡಿಎಸ್ ಶನಿವಾರ ಬೆಂಗಳೂರಿನ ಜನರನ್ನು...

ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಡಿ.ಕೆ ಶಿವಕುಮಾರ್; ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಸಮಿತಿ ವಿಸರ್ಜನೆ

ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗಕ್ಕೆ ನೀಡಿದ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಂಗೀಕರಿಸಿದ್ದಾರೆ, ಜೊತೆಗೆ ಅಲ್ಪಸಂಖ್ಯಾತ ಘಟಕ ಸಮಿತಿಯನ್ನೂ ವಿಸರ್ಜಿಸಿದ್ದಾರೆ ಎಂದು ವರದಿಯಾಗಿದೆ. ಕೆಪಿಸಿಸಿ ಅಲ್ಪಸಂಖ್ಯಾತ...

‘ಯುದ್ಧ ಭುಗಿಲೆದ್ದು ಪಾಕಿಸ್ತಾನ ಶಾಂತಿ ಸ್ಥಾಪಿಸಲು ವಿಫಲವಾದರೆ, ಇಸ್ರೇಲ್ ಮೇಲೆ ದಾಳಿ ಮಾಡುವುದು ನಮ್ಮ ಕರ್ತವ್ಯ’: ಟರ್ಕಿ ಅಧ್ಯಕ್ಷ ಎರ್ಡೋಗನ್

ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಇಸ್ರೇಲ್ ವಿರುದ್ಧ ತೀಕ್ಷ್ಣ ಎಚ್ಚರಿಕೆ ನೀಡಿದ್ದು, ನಡೆಯುತ್ತಿರುವ ಸಂಘರ್ಷವನ್ನು ಶಮನಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದರೆ ಸಂಭಾವ್ಯ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಕಠಿಣ ಪದಗಳ ಹೇಳಿಕೆಯಲ್ಲಿ,...