ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾರ್ಚ್ 24 ರಂದು 21 ದಿನಗಳ ಲಾಕ್‌ಡೌನ್ ಘೋಷಿಸಿದಾಗಿನಿಂದ ಕನಿಷ್ಠ 22 ವಲಸೆ ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು “ದಿ ವೈರ್” ವರದಿ ಮಾಡಿದೆ.
ಐದು ಮಕ್ಕಳು ಸೇರಿದಂತೆ 17 ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಮನೆಗೆ ಮರಳುವ ಹತಾಶ ಪ್ರಯತ್ನದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಲಾಕ್‌ಡೌನ್ ಸಂಬಂಧಿತ ಸಾವುಗಳ ಸಂಖ್ಯೆ 22 ಆಗಿದೆ.
ಈ ಸಾವುಗಳನ್ನು ಹೊರತುಪಡಿಸಿ 11 ವರ್ಷದ ಬಾಲಕ ಕೂಡ ಮಾರ್ಚ್ 27 ರಂದು ಬಿಹಾರದ ಭೋಜ್‌ಪುರ ಪ್ರದೇಶದಲ್ಲಿ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ದೆಹಲಿಯ ರೆಸ್ಟೋರೆಂಟ್‌ನಲ್ಲಿ ಹೋಮ್ ಡೆಲಿವರಿ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ 39 ವರ್ಷದ ವ್ಯಕ್ತಿ ಮಾರ್ಚ್ 28 ರಂದು ಆಗ್ರಾದಲ್ಲಿ ಮಧ್ಯಪ್ರದೇಶದ ಮೊರೆನಾ ಜಿಲ್ಲೆಗೆ ತೆರಳುತ್ತಿದ್ದಾಗ ತನ್ನ ಗ್ರಾಮದ 80 ಕಿಲೋ ಮೀಟರ್ ದೂರದಲ್ಲಿ ಸಾವನ್ನಪ್ಪಿದ್ದರು.
ಮಾರ್ಚ್ 29 ರಂದು ಗುರುಗಾಂವ್‌ನಲ್ಲಿ ಕ್ಯಾಂಟರ್ ಹೊಡೆದು ವಲಸೆ ಕಾರ್ಮಿಕ ಕುಟುಂಬಗಳಿಗೆ ಸೇರಿದ ಐವರು ಸಾವಿಗೀಡಾಗಿದ್ದರು. ಸತ್ತವರಲ್ಲಿ ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಚ್ 27 ರಂದು ತೆಲಂಗಾಣದಲ್ಲಿ ರಾಯಚೂರು ಜಿಲ್ಲೆಯಲ್ಲಿ ತಮ್ಮ ಮನೆಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರ ಗುಂಪಿಗೆ ಸೇರಿದ 8 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ 18 ತಿಂಗಳ ಮಗು, ಒಬ್ಬ ಹುಡುಗ ಮತ್ತು ಒಂಬತ್ತು ವರ್ಷದ ಬಾಲಕಿ ಸೇರಿದ್ದಾರೆ.
ಹೈದರಾಬಾದ್‌ನ ಹೊರವಲಯದಲ್ಲಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ತೀವ್ರ ಗಾಯಗೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.
ಮಾರ್ಚ್ 28 ರಂದು ಮುಂಬೈ-ಗುಜರಾತ್ ಹೆದ್ದಾರಿಯ ವಿರಾರ್‌ನಲ್ಲಿ ರಾಜಸ್ಥಾನ ಮೂಲದ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.
ಶನಿವಾರ, ಮೊರಾದಾಬಾದ್‌ನ ಪಕ್ವಾರ್ಹಾ ಪ್ರದೇಶದಲ್ಲಿ 26 ವರ್ಷದ ವಲಸೆ ಕಾರ್ಮಿಕ ಹರಿಯಾಣದ ಸೋನಿಪತ್‌ನಿಂದ ಉತ್ತರ ಪ್ರದೇಶದ ರಾಂಪುರದ ತನ್ನ ಹಳ್ಳಿಗೆ ಹೋಗುತ್ತಿರುವಾಗ ರಸ್ತೆಯಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ.


