Homeಅಂತರಾಷ್ಟ್ರೀಯನೀರಿಗೆ ಹಾರಿದ ಮಲೇಷ್ಯಾದ 24 ರೋಹಿಂಗ್ಯಾ ವಲಸಿಗರು! ಬದುಕಿದ್ದ ಒಬ್ಬ ಮಾತ್ರ..

ನೀರಿಗೆ ಹಾರಿದ ಮಲೇಷ್ಯಾದ 24 ರೋಹಿಂಗ್ಯಾ ವಲಸಿಗರು! ಬದುಕಿದ್ದ ಒಬ್ಬ ಮಾತ್ರ..

ಬೌದ್ಧರ ತಾಯ್ನಾಡಾದ ಮ್ಯಾನ್ಮಾರ್‌ನಲ್ಲಿ ಕಿರುಕುಳವನ್ನು ಅನುಭವಿಸುತ್ತಿರವ ರೋಹಿಂಗ್ಯಾಗಳಿಗೆ ಮುಸ್ಲಿಂ ಬಹುಸಂಖ್ಯಾತ ಮಲೇಷ್ಯಾ ಅನುಕೂಲಕರ ತಾಣವಾಗಿದೆ. ಆದರೆ ಕೊರೊನಾ ವೈರಸ್ ಕಾರಣಕ್ಕೆ ಅಧಿಕಾರಿಗಳು ಮಲೇಷ್ಯಾಗೆ ಬರಲು ಬಿಡುತ್ತಿಲ್ಲ ಎನ್ನಲಾಗಿದೆ.

- Advertisement -
- Advertisement -

ರೋಹಿಂಗ್ಯಾ ವಲಸಿಗರು ಥೈಲ್ಯಾಂಡ್ ಬಳಿಯ ಮಲೇಷಿಯಾದ ಕರಾವಳಿಯಲ್ಲಿ ತೊಂದರೆಗೆ ಸಿಲುಕಿದ ಕಾರಣ ನೀರಿಗೆ ಹಾರಿದ್ದು, 24 ಜನರಲ್ಲಿ ಒಬ್ಬ ವ್ಯಕ್ತಿ ಮಾತ್ರ ದಡ ಸೇರಿದ್ದಾನೆ ಎಂದು ಕೋಸ್ಟ್‌ಗಾರ್ಡ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

27 ವರ್ಷದ ನಾರ್ ಹೊಸೇನ್ ಎನ್ನುವವನು ಲಂಗ್ಕಾವಿ ರೆಸಾರ್ಟ್ ದ್ವೀಪದ ದಡಕ್ಕೆ ಈಜಿ ಬಂದ ನಂತರ ಅವರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಉತ್ತರ ರಾಜ್ಯಗಳಾದ ಕೆಡಾ ಮತ್ತು ಪರ್ಲಿಸ್‌ನ ಕೋಸ್ಟ್‌ಗಾರ್ಡ್ ಮುಖ್ಯಸ್ಥ ಮೊಹಮದ್ ಜವಾವಿ ಅಬ್ದುಲ್ಲಾ ಹೇಳಿದ್ದಾರೆ.

“ಅಕ್ರಮ ರೋಹಿಂಗ್ಯಾ ವಲಸಿಗರು ಇತರ 24 ಜನರು ದೋಣಿಯಿಂದ ಹಾರಿದ್ದಾರೆ. ಆದರೆ ಈತ ಮಾತ್ರ ಸುರಕ್ಷಿತವಾಗಿ ದಡಕ್ಕೆ ಈಜುವಲ್ಲಿ ಯಶಸ್ವಿಯಾಗಿದ್ದಾನೆ” ಎಂದು ಜವಾವಿ ಹೇಳಿದ್ದಾರೆ.

ದೋಣಿಗೆ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ, ಆದರೆ ಯಾವುದೇ ಶವಗಳು ಅಥವಾ ಬದುಕುಳಿದವರು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೌದ್ಧರ ತಾಯ್ನಾಡಾದ ಮ್ಯಾನ್ಮಾರ್‌ನಲ್ಲಿ ಕಿರುಕುಳವನ್ನು ಅನುಭವಿಸುತ್ತಿರವ ರೋಹಿಂಗ್ಯಾಗಳಿಗೆ ಮುಸ್ಲಿಂ ಬಹುಸಂಖ್ಯಾತ ಮಲೇಷ್ಯಾ ಅನುಕೂಲಕರ ತಾಣವಾಗಿದೆ. ಆದರೆ ಕೊರೊನಾ ವೈರಸ್ ಕಾರಣಕ್ಕೆ ಅಧಿಕಾರಿಗಳು ಮಲೇಷ್ಯಾಗೆ ಬರಲು ಬಿಡುತ್ತಿಲ್ಲ ಎನ್ನಲಾಗಿದೆ.

ಮೂರು ವರ್ಷಗಳ ಹಿಂದೆ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದೌರ್ಜನ್ಯದಿಂದ ಪಲಾಯನ ಮಾಡಿದ 7,00,000 ಕ್ಕಿಂತಲೂ ಹೆಚ್ಚಿನ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶದ ಕಾಕ್ಸ್ ಬಜಾರ್ ಜಿಲ್ಲೆಯಲ್ಲಿ ಕಿಕ್ಕಿರಿದ ನಿರಾಶ್ರಿತರ ಶಿಬಿರಗಳಲ್ಲಿದ್ದಾರೆ. ಅಲ್ಲಿಂದ ಮಲೇಷ್ಯಾ ಮತ್ತು ನೆರೆಯ ಇಂಡೋನೇಷ್ಯಾಕ್ಕೆ ದೋಣಿಗಳಲ್ಲಿ ತೆರಳಲು ಯತ್ನಿಸುತ್ತಿದ್ದಾರೆ.

ಅವರು ದೋಣಿಯಿಂದ ಹಾರಿದ ಪ್ರದೇಶವನ್ನು ಹುಡುಕಲು ಎರಡು ಕೋಸ್ಟ್‌ಗಾರ್ಡ್ ವಿಮಾನಗಳು ಮತ್ತು ಎರಡು ದೋಣಿಗಳನ್ನು ನಿಯೋಜಿಸಲಾಗಿದೆ ಎಂದು ಜವಾವಿ ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗ ಹರಡಿದ ನಂತರ, ರೋಹಿಂಗ್ಯಾ ದೋಣಿಗಳನ್ನು ತಡೆಯುವ ಉದ್ದೇಶದಿಂದ ಮಲೇಷ್ಯಾ ಪಡೆ ಕಡಲ ಗಸ್ತು ತಿರುಗಿಸುತ್ತಿದೆ. ಕೆಲವರು ದೋಣಿಗಳಲ್ಲಿ ಮಲೇಷ್ಯಾದ ತೀರಕ್ಕೆ ಬಂದರೂ ಸಹ ರೋಗದ ಕಾರಣಕ್ಕಾಗಿ ಅವುಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.


ಇದನ್ನೂ ಓದಿ: ಕೂಡಲೇ ಕಾಶ್ಮೀರದಿಂದ ರೋಹಿಂಗ್ಯಾಗಳನ್ನು ಗಡಿಪಾರು ಮಾಡುತ್ತೇವೆ: ಕೇಂದ್ರ ಸಚಿವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...