Homeಅಂಕಣಗಳುಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!

ಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!

- Advertisement -
- Advertisement -

’ಎರಡೂವರೆ ಸಾವಿರ ಕೋಟಿ ಕೊಟ್ಟರೆ ನಿಮ್ಮನ್ನ ಮುಖ್ಯಮಂತ್ರಿ ಮಾಡುತ್ತೇವೆ’ ಎಂದು ದೆಹಲಿಯಿಂದ ಮಧ್ಯವರ್ತಿಗಳು ಬಂದಿದ್ದರೆಂದು ನಂಬಲನರ್ಹವಾದ, ಆದರೆ ಸದ್ಯದ ಬಿಜೆಪಿ ನೋಡಿದರೆ ನಂಬಬಹುದಾದ ಬಾಂಬನ್ನು ವಿಜಯಪುರದ ಯತ್ನಾಳ್ ಬಿಜೆಪಿ ಮೇಲೆ ಎಸೆದಿದ್ದಾರಲ್ಲಾ. ಕೂಡಲೇ ಆ ಪಾರ್ಟಿಯ ಅಧ್ಯಕ್ಷ ಕಟೀಲು ಯಕ್ಷಗಾನದ ಮಾತುಗಳನ್ನು ನೆನಪಿಸುವಂತೆ, ಯತ್ನಾಳ್ ಮಾತಿಗೂ ಬಿಜೆಪಿಗೂ ಸಂಬಂಧವಿಲ್ಲವೆಂದು ಹಾಸ್ಯ ಮಾಡಿದ್ದಾರಲ್ಲಾ. ಹಾಗದರೆ ಯತ್ನಾಳ್ ಯಾವ ಪಾರ್ಟಿಯಲ್ಲಿದ್ದಾರೆ? ದೆಹಲಿಯಿಂದ ಬಂದ ದಲ್ಲಾಳಿಗಳು ನಿಮ್ಮನ್ನ ಜೆಡಿಎಸ್‌ನಿಂದ ಮುಖ್ಯಮಂತ್ರಿ ಮಾಡುತ್ತೇವೆ ಅಥವಾ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಮಾಡುತ್ತೇವೆ ಎಂದಿದ್ದರೆ ಯತ್ನಾಳ್ ಮಾತಿಗೂ ನಮ್ಮ ಪಾರ್ಟಿಗೂ ಸಂಬಂಧವಿಲ್ಲ ಅನ್ನಬಹುದಿತ್ತು. ಇದಕ್ಕಿಂತ ತಮಾಷೆಯ ಮಾತ್ಯಾವುದೆಂದರೆ ಅಷ್ಟು ಹಣವನ್ನು ಹೇಗೆ ಇಡುವುದು, ಸಂಗ್ರಹಿಸುವುದು ಎಂಬ ದೂಡ್ಡ ಪ್ರಶ್ನೆ ಯತ್ನಾಳ್‌ರಿಂದ ಹೊರಬಿದ್ದಿದೆ. ನುರಿತ ರಾಜಕಾರಣಿಗಳ ಪ್ರಕಾರ 2500 ಸಾವಿರ ಕೋಟಿ ವಸೂಲಿ ಹಲವಾರು ಕಂತಿನಿಂದ ಸಂದಾಯವಾಗುತ್ತದೆ. ಪಿ.ವಿ ನರಸಿಂಹರಾಯ ವಿಶ್ವಾಸ ಮತ ಗಳಿಸಲು ಕರ್ನಾಟಕದಿಂದ ತರಿಸಿಕೂಂಡ ಹಣದ ಬಗ್ಗೆ ಕೇಳಿದ್ದರೆ ಯತ್ನಾಳ್‌ಗೆ ಉತ್ತರ ಸಿಗುತ್ತಿತ್ತಂತಲ್ಲಾ ಥೂತ್ತೇರಿ.

******

ಯತ್ನಾಳರ ಮಾತಿಗೆ ಮತ್ತೂಂದು ಕುಚ್ಯೋದ್ಯದ ಸಾಕ್ಷಿ ಒದಗಿಸುವುದಾದರೆ, ಸರ್ಕಾರಿ ಹುದ್ದೆ ನೀಡಲು ಸರಕಾರದ ಕೆಲವು ಪ್ರಮುಖರಿಂದಲೇ ಕೋಟಿಕೋಟಿ ಹಣ ಸಂಗ್ರಹ ಮಾಡಿದ ಹಗರಣ ಇಡೀ ಕರ್ನಾಟಕವನ್ನೇ ಅಲ್ಲೋಲ ಕಲ್ಲೋಲ ಮಾಡಿದೆಯಂತಲ್ಲಾ. ಈ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ, ಹಿಂದಿ ಸಿನಿಮಾದಲ್ಲಿ ಸಮುದ್ರ ದಡದಲ್ಲಿ ಹೆಲಿಕಾಪ್ಟರಲ್ಲಿ ಇಳಿಯುವ ಡಾನ್ ಒಬ್ಬ, ಮತ್ತೊಂದು ಕಡೆಯಿಂದ ಬಂದವನಿಂದ ಸೂಟ್‌ಕೇಸ್ ಪಡೆದು ಮತ್ತೆ ಹೆಲಿಕಾಪ್ಟರ್ ಹತ್ತಿ ಮಾಯವಾದ ದೃಶ್ಯವನ್ನ ನೆನಪಿಸಿದರಂತಲ್ಲಾ. ಕರ್ನಾಟಕದ ಹಗರಣದ ಬಗ್ಗೆ ಒಂದಾದರೂ ಮಾತನಾಡಿದ್ದರೆ ಶಾ ಭೇಟಿ ಸಂಶಯಕ್ಕೊಳಪಡುತ್ತಿರಲಿಲ್ಲವೆಂಬುದು
ಒಂದಾಣಿಯಷ್ಟು ಮಾನವನ್ನು ಇನ್ನೂ ಉಳಿಸಿಕೂಂಡಿರುವ ಬಿಜೆಪಿ ಹಿರಿಯರ ಮಾತಾಗಿರುವಾಗಲೆ, ಜೆಡಿಎಸ್‌ನ ಕುಮಾರಸ್ವಾಮಿಯವರು ಪಿಎಸ್‌ಐ ನೇಮಕಾತಿ ಅವ್ಯವಹಾರದ ಕಿಂಗ್‌ಪಿನ್ ಯಾರೆಂದು ನಾನು ಹೇಳಿದರೆ ಕ್ಷಣಮಾತ್ರದಲ್ಲಿ ಬಾಬರಿ ಮಸೀದಿ ಉರುಳಿಸಿದಂಗೆ ಬಿಜೆಪಿ ಸರಕಾರ ಉರುಳಿಹೋಗುತ್ತದೆ ಎಂದುಬಿಟ್ಟಿದ್ದಾರಲ್ಲಾ. ಆದರೆ ಕುಮಾರಣ್ಣ ಎಂದಿನಂತೆ ಕಿಂಗ್‌ಪಿನ್ ಹೆಸರೇಳಲ್ಲ, ಕೇಳಿದರೆ ಸಮಯ ಬಂದಾಗ ಹೇಳುತ್ತೇನೆ ಎನ್ನುತ್ತಾರೆ. ಆ ಸಮಯ ಬರುವುದು ಸರಕಾರದ ಅವಧಿ ಮುಗಿದ ಮೇಲೆ, ಬಹುಶಃ ಚುನಾವಣಾ ಭಾಷಣದಲ್ಲಿ ಅಥವ ಅದೂ ಮುಗಿದ ಮೇಲೆ ಬರಬಹುದು. ಆದ್ದರಿಂದ ಕುಮಾರಣ್ಣನ ಕಿಂಗ್‌ಪಿನ್ ಬೆದರಿಕೆಗೆ ಯಾರೂ ಹೆದರಿಲ್ಲವಂತಲ್ಲಾ ಥೂತ್ತೇರಿ

ಅಪ್ಪ- ಮಗನ ನಿಜ ಬಣ್ಣ ಬಯಲಾಗಲಿದೆ: ಸಿಎಂ ಮತ್ತು ವಿಜಯೇಂದ್ರ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ | Naanu gauri

******

ಯತ್ನಾಳ್ ಆರೋಪಕ್ಕೆ ಎಡೂರಪ್ಪನವರ ಮಗ ಎಗರಿಬಿದ್ದರಂತಲ್ಲಾ. ಅಲ್ಲದೆ, ಆಡಳಿತ ಮತ್ತು ವಿರೋಧ ಪಕ್ಷದ ಮಾತಿಗೆ ಮಣಿದು ಸದ್ಯದ ಹಗರಣಗಳಿಂದ ಕರ್ನಾಟಕದ ಗಮನವನ್ನು ಡೈವರ್ಟು ಮಾಡಲು ಸರಕಾರ ಯತ್ನಾಳ್ ಹೇಳಿಕೆಯನ್ನು ತನಿಖೆ ಮಾಡಲು ಆಯೋಗವೊಂದು ರಚನೆಯಾದರೆ, ಅದರ ಮುಂದೆ ಹಾಜರಾಗಿ ಹೇಳಿಕೆ ಕೊಡುವುದಕ್ಕೆ ಕಿಂಚಿತ್ತೂ ಅಂಜಿಕೆ ಯತ್ನಾಳ್‌ರಿಗಿಲ್ಲಾವಂತಲ್ಲಾ. ಒಂದು ವೇಳೆ ತನಿಖಾ ತಂಡ ರಚನೆಗೂಂಡು ವಿಜಯಪುರಕ್ಕೆ ಬಂದು ಎಮ್ಮೆ ಕೊಟ್ಟಿಗೆಯಲ್ಲಿ ಹಾಲಿಂಡುತ್ತಿರುವ ಯತ್ನಾಳರನ್ನ ಹಿಗ್ಗಾಮುಗ್ಗಾ ಪ್ರಶ್ನಿಸಿತು ಅನ್ನಿ ಆಗ,

“ತಮ್ಮ ಹೆಸರೇನ್ರಿ?”.

“ಬಸನಗೌಡ ಪಾಟೀಲ್ ಯತ್ನಾಳ್ ಅಂತ, ಯಮ್ಮಿ ಬೇಕಿತ್ತೇನ್ರಿ?”.

“ಇಲ್ಲ”.

“ಮತ್ತ ಕ್ವಾಣ ಬೇಕಿತ್ತೆನ?”.

“ಇಲ್ಲ”.

“ಗಬ್ಬದ ಯಮ್ಮಿ ಬೇಕಿದ್ರ ನೋಡ್ರಿ, ಅದೈತಿ. ಲಕ್ಷದ ಮ್ಯಾಲಾಕ್ಯತಿ. ಒಂದ ಹೂತ್ತಿಗೆ ಹತ್ತ ಲೀಟ್ರು ಹಾಲು ಕರಿತೈತೆ. ಆಂದ್ರ ದಿನ ಇಪತ್ತ ಲೀಟ್ರು. ಒಂದು ಲೀಟ್ರು ಹಾಲು ಮುವ್ವತ್ತು ರೂಪಾಯಂದ್ರ ಇಪ್ಪತ್ತು ಇಂಟು ಮೂವ್ವತ್ತು ಏಟಾತು ಮತ್ತ ಡೈರಿ ಹಾಲಿಗ ಲೀಟ್ರಗ ನಲವತ್ರ ಮಟ ಐತಿ”.

“ರೀ ನಾವು ಹಾಲಿನ ವ್ಯಾಪಾರದೊರಲ್ಲ”.

“ಮತ್ತ ಯಾರಂತ ಹೇಳ್ರಿ ಲಗೂನ, ಯಮ್ಮಿಗೆ ಹಿಂಡಿ ಹಾಕಬೇಕು”.

“ನಾವು ತನಿಖಾಧಿಕಾರಿಗಳು”.

“ದನ, ಯಮ್ಮಿ, ಕೊಟಗಿ ಹಿಂಡಿ ತನಿಖ ಮಾಡುವುರೇನು”.

“ನಿಮ್ಮನ್ನೆ ತನಿಖೆ ಮಾಡಕ್ಕೆ ಬಂದಿದ್ದೀವಿ”.

“ನನ್ನನ್ನು ತನಿಖೆ ಮಾಡ್ತಿರೇನು, ಬಪ್ಪರ ಮಕ್ಕಳ, ಮಾಡ್ರಲ”.

“ನಾವು ಸಿಐಡಿ ಅಧಿಕಾರಿಗಳು”.

“ನನಗ ಗುರುತಿಲ್ಲೇನು, ಏನ ತನಿಖಿ ಮಾಡುವುರದಿರಿ ಹೇಳ್ರಲ”.

“ನಿಮ್ಮನ್ನ ಮುಖ್ಯಮಂತ್ರಿ ಮಾಡ್ತಿವಿ. ಎರಡೂವರೆ ಸಾವಿರ ಕೋಟಿ ಕೂಡಿ ಅಂತ ನಿಮ್ಮನ್ನ ಕೇಳಿದ್ರ?”

“ಹೌದ್ರಿ”.

“ಯಾರವುರು?”.

“ಯಾರಿಗೊತ್ತರಿ”.

“ಎಲ್ಲಿಂದ ಬಂದಿದ್ರು?”.

“ಡೆಲ್ಲಿಯಿಂದ ಅಂತ ಹೇಳಿದ್ರು”.

“ಹೆಸರೇನವುರದು”.

“ಗೊತ್ತಿಲ್ರಿ”.

“ನಿಮ್ಮತ್ರಕೇ ಯಾಕೆ ಬಂದ್ರು?”.

“ನಾನು ವಾಜಪೇಯಿ ಸಂಪುಟದಾಗ ಮಂತ್ರಿಯಾಗಿದ್ನಿ. ನಾನು ಎತ್ತರಕ್ಕೆ ಕೆಂಪಗೆ ಸಿಂದೂರ ಲಕ್ಷ್ಮಣನಂಗಿದ್ದಿನಿ. ಅದೂ ಅಲ್ದೆ ಹಿಂದೂವಾದಿ ಭಾಷಣಕಾರ. ಬಿಜಾಪುರದ ಸುಲ್ತಾನರ ನಾಡಿನಿಂದ ಬಂದವ. ನನ್ನ ನೋಡಿದ್ರೆ ಸಾಬರಿಗೆ ಅಂಜಿಕಿ ಬರತೈತಿ. ನಾನು ಕೇಂದ್ರ ಮಂತ್ರಿಯಾಗಕ್ಕೆ ಇವೆಲ್ಲ ಕಾರಣದಾವು. ಅಂಗ ರಾಜ್ಯದ ಮುಖ್ಯಮಂತ್ರಿಯಾಗಕ್ಕು ಬೇಷದಿನಿ ಅಂತ ಯಾರೊ ಕೇಳಿಕೂಂಡು ಬಂದಿದ್ರು”.

“ಏನು ಕೇಳಿದ್ರು?”

“ನಿಮ್ಮನ್ನ ರಾಜ್ಯದ ಮುಖ್ಯಮಂತ್ರಿ ಮಾಡ್ತಿವಿ ಅಂದ್ರು”.

“ಅದಕೆ ನೀವೇನೇಳಿದ್ರಿ?”.

“ಮಾಡ್ರಲ ಅಂದ್ನಿ”.

“ಅದಕವುರೇನೇಳಿದ್ರು?”.

“ಎರಡೂವರೆ ಸಾವಿರ ಕೋಟಿ ಕೂಡಿ ಅಂದ್ರು.

“ಅದಕ್ಕೆ ನೀವೇನಂದ್ರಿ?”.

“ಅಲ್ಲಲೇ ಮಕ್ಕಳ ಎರಡೂವರೆ ಸಾವಿರ ಕೋಟಿ ಅಂದ್ರೆ ಏನು ಹುಣುಸಿ ಪಿಕ್ಕ ಅನಕೊಂಡಿರೇನು? ಅಷ್ಟು ರ್‍ವಕ್ಕ ಯಂಗ ತುಗಂಡೋಕ್ಕಿ? ಎಲ್ಲಿ ಮಡಗತಿರೀ? ಗೋದಾಮೆಲೆ ಸಿಕ್ಕಿಬಿದ್ರ ಯಾವ ರ್‍ವಕ್ಕ ಅಂತ ಹೇಳತಿ. ಯಾರದು ಅಂತ ಹೇಳತಿರಿ? ಅಂತ ಪ್ರಶ್ನಿ ಮ್ಯಾಲೆ ಪ್ರಶ್ನಿ ಹಾಕಿದಿನ್ರಿ. ಅವತ್ತು ಹೋದ ಮಕ್ಕಳು ಮತ್ತ ವಳ್ಳಿ ನನ್ನ ಸನೇಕ ಬರಲಿಲ್ಲರಿ. ಆ ನಂತರ ಎರಡೂವರಿ ಸಾವಿರ ಕೋಟಿ ಯಾರು ಕೊಟ್ರು, ಯಾರು ಮುಖ್ಯಮಂತ್ರಿಯಾದ್ನೊ, ನನಗೆನ ಖರಿ ಗೊತ್ತಿಲ್ರಾ ಎಂದಾಗ ಅಲ್ಲಿಗೆ ತನಿಖೆ ಮುಗಿಯಿತಂತಲ್ಲಾ.
ಥೂಥೂ ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕೊರೊನಾ ಅಲೆ ಬಿಜೆಪಿ ಒಂದೇ ತರ ಕಾಣುತ್ತಿವೆಯಲ್ಲಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...