ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಎರಡು ಭಯೋತ್ಪಾದಕ ಹಣಕಾಸು ಪ್ರಕರಣಗಳಲ್ಲಿ ಲಾಹೋರ್‌ನ ಭಯೋತ್ಪಾದನಾ ವಿರೋಧಿ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ವರ್ಷದ ಫೆಬ್ರವರಿಯಿಂದಲೆ ಜೈಲಿನಲ್ಲಿರುವ ಹಫೀಜ್ ಸಯೀದ್, ಈಗಾಗಲೇ ಎರಡು ಭಯೋತ್ಪಾದಕ-ಹಣಕಾಸು ಪ್ರಕರಣಗಳಲ್ಲಿ 11 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿರುವ ಹಫೀಜ್, ಕಳೆದ ವರ್ಷ ಜುಲೈ 17 ರಂದು ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು ಪ್ರಕರಣಗಳಲ್ಲಿ ಬಂಧಿಸಲಾಗಿತ್ತು.
ಇದನ್ನೂ ಓದಿ: ಪಂಜಾಬ್: ಭಯೋತ್ಪಾದನೆ ವಿರುದ್ಧದ ಹೋರಾಟಗಾರ ಬಲ್ವಿಂದರ್ ಸಿಂಗ್ ಹತ್ಯೆ!
ಸದ್ಯ ಹಫೀಜ್ ಲಾಹೋರ್‌ನ ಉನ್ನತ ಭದ್ರತೆಯಿರುವ ಕೋಟ್ ಲಖ್‌ಪತ್ ಜೈಲಿನದ್ದು, “ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ಗುರುವಾರ ಜಮಾತ್-ಉದ್-ದವಾದ ಮುಖ್ಯಸ್ಥ ಹಫೀಜ್ ಸಯೀದ್ ಸೇರಿದಂತೆ ನಾಲ್ಕು ನಾಯಕರಿಗೆ ಎರಡು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದೆ” ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
”ಎಟಿಸಿ ನ್ಯಾಯಾಲಯದ ನಂ 1 ರ ನ್ಯಾಯಾಧೀಶ ಅರ್ಷದ್ ಹುಸೇನ್ ಭುಟ್ಟಾ ಅವರು ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಸಲ್ಲಿಸಿದ್ದ ಪ್ರಕರಣ ಸಂಖ್ಯೆ 16/19 ಮತ್ತು 25/19 ಗಳ ವಿಚಾರಣೆ ನಡೆಸಿದರು. ಸಾಕ್ಷಿಗಳ ಹೇಳಿಕೆಗಳನ್ನು ವಕೀಲರಾದ ನಸೀರುದ್ದೀನ್ ನಯ್ಯರ್ ಮತ್ತು ಮೊಹಮ್ಮದ್ ಇಮ್ರಾನ್ ಫಜಲ್ ಗುಲ್ ಅವರು ಪರಿಶೀಲನೆ ನಡೆಸಿದ ನಂತರ ತೀರ್ಪನ್ನು ಪ್ರಕಟಿಸಲಾಗಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ಜಮಾತ್-ಉದ್-ದವಾ ನಾಯಕರ ವಿರುದ್ಧ ಒಟ್ಟು 41 ಪ್ರಕರಣಗಳನ್ನು ಭಯೋತ್ಪಾದನಾ ನಿಗ್ರಹ ಇಲಾಖೆ ದಾಖಲಿಸಿದ್ದು, ಈ ಪೈಕಿ 24 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಉಳಿದ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ ಎನ್ನಲಾಗಿದೆ.
ಇದನ್ನೂ ಓದಿ: ಹತ್ರಾಸ್: ಬಂಧಿತ ಪತ್ರಕರ್ತನ ಮೇಲೆ “ಭಯೋತ್ಪಾದನೆ ನಿಗ್ರಹ” ಕಾನೂನಿನಡಿಯಲ್ಲಿ FIR!


