ಪಂಜಾಬ್: ಭಯೋತ್ಪಾದನೆ ವಿರುದ್ಧದ ಹೋರಾಟಗಾರ ಬಲ್ವಿಂದರ್ ಸಿಂಗ್ ಹತ್ಯೆ!

ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಬಲ್ವಿಂದರ್ ಸಿಂಗ್ ಅವರನ್ನು ಪಂಜಾಬ್‌ನ ತಾರ್ನ್ ತರಣ್ ಜಿಲ್ಲೆಯಲ್ಲಿ ಅಪರಿಚಿತ ಹಲ್ಲೆಕೋರರು ಇಂದು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಭಿಖಿವಿಂದ್ ಗ್ರಾಮದಲ್ಲಿರುವ ಬಲ್ವಿಂದರ್ ಸಿಂಗ್ ತಮ್ಮ ಕಚೇರಿಯಲ್ಲಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

62 ವರ್ಷದ ಬಲ್ವಿಂದರ್ ರಾಜ್ಯದಲ್ಲಿ ಭಯೋತ್ಪಾದನೆ ವಿರುದ್ಧ ಧೈರ್ಯದಿಂದ ಹೋರಾಡಿದ್ದು, ಈ ಹಿಂದೆಯೂ ಅನೇಕ ಬಾರಿ ಭಯೋತ್ಪಾದಕರಿಂದ ಹಲ್ಲೆಗೆ ಒಳಗಾಗಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಚಾರ್ಜ್‌ಶೀಟ್ ಸಲ್ಲಿಸಲು ವಿಫಲರಾದ ಪೊಲೀಸರು: ಭಯೋತ್ಪಾದನೆ ಪ್ರಕರಣದಲ್ಲಿ ದೇವಿಂದರ್‌ಗೆ ಜಾಮೀನು!

ತಾರ್ನ್ ತರಣ್ ಪೊಲೀಸರ ಶಿಫಾರಸಿನ ಮೇರೆಗೆ ಬಲ್ವಿಂದರ್ ಅವರ ಭದ್ರತಾ ರಕ್ಷಣೆಯನ್ನು ಒಂದು ವರ್ಷದ ಹಿಂದೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡಿತ್ತು. ತಮ್ಮ ಇಡೀ ಕುಟುಂಬ ಭಯೋತ್ಪಾದಕರ ಹಿಟ್ ಪಟ್ಟಿಯಲ್ಲಿ ಉಳಿದಿದೆ ಎಂದು ಬಲ್ವಿಂದರ್ ಸಹೋದರ ರಂಜಿತ್ ಹೇಳಿದರು.

ರಕ್ಷಣಾ ಸಚಿವಾಲಯವು 1993 ರಲ್ಲಿ ಅವರಿಗೆ ಶೌರ್ಯ ಚಕ್ರವನ್ನು ನೀಡಿತ್ತು. ಅವರ ಧೈರ್ಯದ ಬಗ್ಗೆ ಅನೇಕ ಸಾಕ್ಷ್ಯಚಿತ್ರಗಳನ್ನು ಮಾಡಲಾಗಿದೆ.


ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ, ಭಯೋತ್ಪಾದನೆಯ ಆರೋಪಿ ಪ್ರಗ್ಯಾ ವಿರುದ್ಧ ಐಪಿಎಸ್ ಸಂಘ ಗುಟುರು

LEAVE A REPLY

Please enter your comment!
Please enter your name here