ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟವು 4 ನೇ ತಿಂಗಳನ್ನು ಪೂರೈಸುವತ್ತ ಸಾಗುತ್ತಿದೆ. ಆದರೆ ಇದರಲ್ಲಿ ಇದುವರೆಗೂ ಸುಮಾರು 300 ರೈತರು ಸಾವನ್ನಪ್ಪಿದ್ದಾರೆ ಎಂದು ರೈತ ಒಕ್ಕೂಟ ತಿಳಿಸಿದೆ. ಈ ಹಿನ್ನೆಲೆಯಲ್ಲಿ #300DeathsAtProtest ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡುವಂತೆ ರೈತ ಒಕ್ಕೂಟ ಮನವಿ ಮಾಡಿದೆ. ಈ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದೆ.
ರೈತ ಹೋರಾಟದ ಇಂದಿನ ಹ್ಯಾಶ್‌ಟ್ಯಾಗ್ #300DeathsAtProtest ಅನ್ನು ಬಳಸಿ ಕಿಸಾನ್ ಏಕ್ತಾ ಮೋರ್ಚ ಟ್ವೀಟ್ ಮಾಡಿದೆ. “ಕೊರೆವ ಚಳಿಯಲ್ಲಿ ರಸ್ತೆಯಲ್ಲಿ ಕುಳಿತಿರುವುದು ಕೇಂದ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮವನ್ನುಂಟುಮಾಡಿಲ್ಲ. ಸರ್ಕಾರಕ್ಕೆ ನಾಚಿಕೆಯಾಗಬೇಕು. ಮನೆಮನೆಗೆ ಹೋಗಿ ಮತ ಕೇಳುವವರು ಹೋರಾಟ ನಿರತ ರೈತರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. 300 ಜನ ರೈತ ಹುತಾತ್ಮರನ್ನು ನೆನೆಯುವ ಸಮಯ ಇದು. ಮತ್ತು ಬಿಜೆಪಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವ ಸಮಯ” ಎಂದು ಬರೆದುಕೊಂಡಿದೆ.
Sitting on Delhi roads in chilling cold didn't make any difference to the Centre.
A big shame on the govt. who could go & ask for votes door to door but couldn't visit farmers protesting at borders. Its time to remember 300 martyrs & stop supporting BJP. #300DeathsAtProtest pic.twitter.com/fwa8oLYIyK— Kisan Ekta Morcha (@Kisanektamorcha) March 18, 2021
ರೈತ ಹೋರಾಟದ ಮುಖವಾಣಿಯಾಗಿರುವ ಕಿಸಾನ್ ಏಕ್ತಾ ಮೋರ್ಚಾ ಟ್ವಿಟ್ಟರ್, ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿ ಪ್ರತಿದಿನವು ಒಂದೊಂದು ಹೋರಾಟದ ಹ್ಯಾಷ್‌ಟ್ಯಾಗ್‌ಗಳನ್ನು ನೀಡಲಾಗುತ್ತದೆ. ಈ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಲು ಕರೆ ನೀಡಲಾಗುತ್ತದೆ. ಅದರಂತೆ ಇಂದು #300DeathsAtProtest ಎಂಬ ಹ್ಯಾಷ್‌ಟ್ಯಾಗ್ ನೀಡಿದ್ದಾರೆ.
ಈ ಹ್ಯಾಶ್‌ಟ್ಯಾಗ್ ಬಳಸಿ 66,000 ಕ್ಕೂ ಹೆಚ್ಚು ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ಸಾಮಾಜಿಕ ಮಾಧ್ಯಮ ವಕ್ತಾರರಾದ ಆರತಿ ಟ್ವೀಟ್ ಮಾಡಿ, ” ರೈತ ಹೋರಾಟಕ್ಕೆ 112 ದಿನಗಳು, 300 ಕ್ಕೂ ಹೆಚ್ಚು ಸಾವುಗಳು… ಆದರೆ ಪ್ರಧಾನಿ ಮೌನವಹಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
112 Days of #FarmersProtest
300 + Deaths
PM – in Mute Mode#300DeathsAtProtest pic.twitter.com/NTnt54Z3K1— Aarti (@aartic02) March 18, 2021
ರಾಷ್ಟ್ರೀಯ ವಿದ್ಯಾರ್ಥಿಗಳ ಯೂನಿಯನ್ ಆಫ್ ಇಂಡಿಯಾ ಟ್ವೀಟ್ ಮಾಡಿ, “300ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ ನಂತರವೂ ಮೋದಿ ಸರ್ಕಾರ ನಮ್ಮ ರೈತರ ಯಾವುದೇ ಬೇಡಿಕೆಯನ್ನೂ ಸಹ ಈಡೇರಿಸಿಲ್ಲ. ಈ ಸರ್ಕಾರವು ತಮ್ಮ ಸಾಂಸ್ಥಿಕ ಪಾಲುದಾರರ ಬಗ್ಗೆ ಮಾತ್ರ ಯೋಚಿಸುತ್ತದೆ, ಅವರಿಗೆ ನಾಗರಿಕರ ಜೀವನದ ಬಗ್ಗೆ ಕಾಳಜಿಯಿಲ್ಲ” ಎಂದು ರೈತರಿಗೆ ಬೆಂಬಲ ಸೂಚಿಸಿದೆ.
Even after death of more than 300 farmers & more than 114 days of farmers agitation Modi Govt don't even listen any single demand of our farmers. This Govt only thinks about their corporate partners, for them there's no value of citizen's life.#300DeathsAtProtest
— NSUI (@nsui) March 18, 2021
ಇದನ್ನೂ ಓದಿ: ರೈತ ಹೋರಾಟ ಸರ್ಕಾರದ ವಿರುದ್ಧವೂ ಅಲ್ಲ ಕಾಂಗ್ರೆಸ್‌ನ ಪರವೂ ಅಲ್ಲ: ಚುಕ್ಕಿ ನಂಜುಂಡಸ್ವಾಮಿ
ಹೀಗೆ ಸಾವಿರಾರು ಜನ ಟ್ವೀಟ್ ಮಾಡಿದ್ದಾರೆ.
World Largest Protest. #300DeathsAtProtest pic.twitter.com/O8nEYTTvym
— Poulami Mukherjee ?? (@Poulamime) March 18, 2021
Over 300 farmers have been died at protest sites asking for their rights. How many more deaths will make Modi repeal these farm laws?#300DeathsAtProtest pic.twitter.com/Xc6yb1M1Sl
— Rabiul Hassan (@Rabiul__INC) March 18, 2021
We support farmers guys,god bless u all farmers supporters,sat shri akal all guys,'So today is hastag #300DeathsATProtest pic.twitter.com/qio9pxjnzC
— Doaba,Punjab (@Sachin88617922) March 18, 2021
ಇದನ್ನೂ ಓದಿ: ಮಾ. 26ಕ್ಕೆ ಭಾರತ್ ಬಂದ್: ಹೋಳಿ ದಿನದಂದು ಕೃಷಿ ಕಾನೂನುಗಳ ಪ್ರತಿ ದಹನ


