Homeಅಂತರಾಷ್ಟ್ರೀಯಟರ್ಕಿಯಿಂದ ಸಿರಿಯಾಕ್ಕೆ ಮರಳಿದ 3 ಮಿಲಿಯನ್ ನಿರಾಶ್ರಿತರಲ್ಲಿ 31,000 ನಿರಾಶ್ರಿತರು

ಟರ್ಕಿಯಿಂದ ಸಿರಿಯಾಕ್ಕೆ ಮರಳಿದ 3 ಮಿಲಿಯನ್ ನಿರಾಶ್ರಿತರಲ್ಲಿ 31,000 ನಿರಾಶ್ರಿತರು

- Advertisement -
- Advertisement -

ಟರ್ಕಿಯಲ್ಲಿ ಆಶ್ರಯ ಪಡೆದಿದ್ದ 3 ಮಿಲಿಯನ್ ನಷ್ಟು ಸಿರಿಯನ್ ರಲ್ಲಿ ಸುಮಾರು 31,000 ಸಿರಿಯನ್ನರು  ಬಶರ್ ಅಲ್-ಅಸ್ಸಾದ್ ಅವರ ಆಡಳಿತ ಪತನದ ನಂತರ ತಮ್ಮ ತವರಿಗೆ ಮರಳಿದ್ದಾರೆ ಎಂದು  ಟರ್ಕಿಯ ಆಂತರಿಕ ಮಂತ್ರಿ  ಹೇಳಿದ್ದಾರೆ.

ಏತನ್ಮಧ್ಯೆ ಸಿರಿಯಾದ ಅಲ್-ಅಸ್ಸಾದ್ ಆಡಳಿತದಲ್ಲಿ ಮತ್ತು 13 ವರ್ಷಗಳ ಅಂತರ್ಯುದ್ಧದ ಬಲಿಪಶುಗಳ ಗೌರವಾರ್ಥವಾಗಿ ಸಿರಿಯನ್ನರು ಸ್ಮರಣಾರ್ಥ ದಿನವಾಗಿ ರ್ಯಾಲಿ ನಡೆಸಿದರು. 2011ರಲ್ಲಿ ಯುದ್ಧದ ನಂತರ ಲಕ್ಷಾಂತರ ಜನ ಸಿರಿಯಾದಿಂದ ಟರ್ಕಿಗೆ ಪಲಾಯನ ಮಾಡಿದ್ದರು. ಡಿಸೆಂಬರ್ 8 ರಂದು ಅಲ್-ಅಸ್ಸಾದ್ ಆಡಳಿತ ಪತನದ ನಂತರ ಅನೇಕರು ಹಿಂತಿರುಗುವ ಎಂಬ ಭರವಸೆ ಹೊಂದಿದ್ದಾರೆ.

ಈಗ ಟರ್ಕಿಯಿಂದ ಸಿರಿಯಾಕ್ಕೆ ಹಿಂತಿರುಗಿದ ಜನರ ಸಂಖ್ಯೆ 30,663 ಆಗಿದೆ. ಅವರಲ್ಲಿ ಶೇ.30ರಷ್ಟು ಟರ್ಕಿಯಲ್ಲಿ ಜನಿಸಿದವರಾಗಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಶುಕ್ರವಾರ ಸ್ಥಳೀಯ ಟಿಜಿಆರ್‌ಟಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

25,000ಕ್ಕೂ ಹೆಚ್ಚು ಸಿರಿಯನ್ನರು ಮರಳಿದ್ದಾರೆ. ಅವರಿಗೆ 2025ರ ಮೊದಲಾರ್ಧದಲ್ಲಿ ಮೂರು ಬಾರಿ ಟರ್ಕಿಯನ್ನು ತೊರೆಯಲು ಮತ್ತು ಮರು-ಪ್ರವೇಶಿಸಲು ಅನುಮತಿಸಲಾಗುವುದು ಎಂದು ರಾಜ್ಯ ಸುದ್ದಿ ಸಂಸ್ಥೆ ಅನಾಡೋಲುಗೆ ಮಂಗಳವಾರ ಯೆರ್ಲಿಕಾಯಾ ಹೇಳಿದ್ದಾರೆ.

ಟರ್ಕಿಯಲ್ಲಿ ವಾಸಿಸುವ ಹೆಚ್ಚಿನ ನಿರಾಶ್ರಿತರು ಸಿರಿಯಾದ ಎರಡನೇ ನಗರವಾದ ಅಲೆಪ್ಪೊದವರಾಗಿದ್ದಾರೆ. ಈ ಅಲೆಪ್ಪೊದಲ್ಲಿ  “ವಲಸೆ ನಿರ್ವಹಣಾ ಕಚೇರಿ” ಯನ್ನು ತೆರೆಯಲಿದೆ ಎಂದು ಅವರು ಹೆಚ್ಚಿನ ವಿವರಗಳನ್ನು ನೀಡದೆ ಹೇಳಿದ ಅವರು, ಟರ್ಕಿಯು ಅಲೆಪ್ಪೊದಲ್ಲಿ ತನ್ನ ರಾಯಭಾರ ಕಚೇರಿಯನ್ನು ಕೆಲವೇ ದಿನಗಳಲ್ಲಿ ಮತ್ತೆ ತೆರೆಯುತ್ತದೆ ಎಂದು ಈ ವಾರದ ಆರಂಭದಲ್ಲಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಹೇಳಿಕೆಗಳನ್ನು ಪುನರುಚ್ಚರಿಸಿದ್ದಾರೆ.

ಹಯಾತ್ ತಹ್ರೀರ್ ಅಲ್-ಶಾಮ್ (HTS) ಬಂಡುಕೋರರಿಂದ ಅಲ್-ಅಸ್ಸಾದ್ ಆಡಳಿತವನ್ನು ಪತನಗೊಳಿಸಿದ ಆರು ದಿನಗಳ ನಂತರ, ಡಿಸೆಂಬರ್ 14ರಂದು ಟರ್ಕಿಯಲ್ಲಿ ಡಮಾಸ್ಕಸ್ ರಾಯಭಾರ ಕಚೇರಿಯನ್ನು ಪುನಃ ತೆರೆಯಲಾಯಿತು. ಏತನ್ಮಧ್ಯೆ, ರಾಜಧಾನಿ ಡಮಾಸ್ಕಸ್ ಮತ್ತು ಇತರೆಡೆಗಳಲ್ಲಿ, ಅಲ್-ಅಸ್ಸಾದ್‌ನ ಸುಮಾರು 25 ವರ್ಷಗಳ ಆಳ್ವಿಕೆಯಲ್ಲಿ ಕೊಲ್ಲಲ್ಪಟ್ಟ ಮತ್ತು ಜೈಲಿನಲ್ಲಿದ್ದವರಿಗಾಗಿ ಸಿರಿಯನ್ನರು ಸ್ಮರಣಾರ್ಥ ದಿನವನ್ನು ನಡೆಸಿದರು.

ಅಲ್-ಅಸ್ಸಾದ್ ಅಧಿಕಾರಾವಧಿಯಲ್ಲಿ ಕಾಣೆಯಾದ ಸಂಬಂಧಿಕರ ಭವಿಷ್ಯದ ಕುರಿತು ಹೊಸ ಅಧಿಕಾರಿಗಳನ್ನು ಒತ್ತಾಯಿಸಲು ಡಮಾಸ್ಕಸ್‌ನ ಮಧ್ಯಭಾಗದ ಹಿಜಾಜ್ ಸ್ಕ್ವೇರ್‌ನಲ್ಲಿ ಪ್ರತಿಭಟನಾಕಾರರು ಕಣ್ಮರೆಯಾದವರ ಚಿತ್ರಗಳನ್ನು ಹಿಡಿದುಕೊಂಡು ರ್ಯಾಲಿ ನಡೆಸಿದರೆಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿರಂಕುಶಾಧಿಕಾರಿಗಳು ಜವಾಬ್ದಾರಿ ಹೊಂದಲು ಇದು ಸಮಯ ಎಂಬ ಸೊಗಸಾದ ಕಪ್ಪು ಬ್ಯಾನರ್ ಅನ್ನು ಒಟ್ಟೋಮನ್ ರೈಲು ನಿಲ್ದಾಣದ ಬಾಲ್ಕನಿಯಿಂದ ಪ್ರದರ್ಶಿಸಲಾಯಿತು. ಹಾಗೆಯೇ ಇತರ ಫಲಕಗಳಲ್ಲಿ “ಕಾಣೆಯಾದವರ ಗುರುತು ಬಹಿರಂಗಪಡಿಸುವ ಹಕ್ಕು” ಮತ್ತು “ನನ್ನ ಮಗನಿಗೆ ಗುರುತು ಇಲ್ಲದ ಸಮಾಧಿ ನನಗೆ ಬೇಕಾಗಿಲ್ಲ, ನನಗೆ ಸತ್ಯ ಬೇಕು” ಎಂದು ಬರೆಯಲಾಗಿತ್ತು ಎಂದು ಡಮಾಸ್ಕಸ್‌ನಿಂದ ವರದಿ ಮಾಡುತ್ತಿರುವ ಅಲ್ ಜಜೀರಾದ ಹಶೆಮ್ ಅಹೆಲ್ಬರ್ರಾ ವರದಿ ಮಾಡಿದ್ದಾರೆ.

ಬಶರ್ ಅಲ್-ಅಸ್ಸಾದ್ ಅಥವಾ ಅವರ ತಂದೆ ಹಫೀಜ್ ಅಲ್-ಅಸ್ಸಾದ್ ಸಮಯದಲ್ಲಿ ಜೈಲುಗಳಲ್ಲಿ ಕೊಲ್ಲಲ್ಪಟ್ಟ ಅಥವಾ ಕಣ್ಮರೆಯಾದ ಅವರ ಪ್ರೀತಿಪಾತ್ರರ ಬ್ಯಾನರ್ ಗಳು ಮತ್ತು ಪೋಸ್ಟರ್ ಗಳು ಮತ್ತು ಚಿತ್ರಗಳನ್ನು ಹಿಡಿದಿದ್ದ ಅನೇಕ ಜನರನ್ನು ನಾನು ನೋಡಿದೆ ಎಂದು ಅವರು ವರದಿ ಮಾಡಿದ್ದಾರೆ.

ಒಂದು ಹಂತದಲ್ಲಿ ಅಹೆಲ್ಬರ್ರಾ ಬೀದಿಗಳಲ್ಲಿನ ದೃಶಗಳು “ಅಸ್ತವ್ಯಸ್ತ”ವಾಗಿದ್ದವು. ಏಕೆಂದರೆ ಜನರು   ಗಾಳಿಯಲ್ಲಿ ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ  ಸ್ಮರಣಾರ್ಥ ರ್ಯಾಲಿ ನಡೆಸುತ್ತಿದ್ದರು ಎಂದು ಹಶೆಮ್ ಅಹೆಲ್ಬರ್ರಾ ಹೇಳಿದ್ದಾರೆ.

ಅಲ್-ಅಸ್ಸಾದ್ ಆಡಳಿತಕ್ಕೆ ಸಿರಿಯಾದ ಜೈಲುಗಳು ವಿರೋಧಿಗಳನ್ನು ಮಟ್ಟಹಾಕಲು ಪ್ರಮುಖ ಆಧಾರಸ್ತಂಭವಾಗಿದ್ದವು. 2013ರಲ್ಲಿ ಸಿರಿಯಾದಿಂದ ಕಳ್ಳಸಾಗಣೆಯಾದವರ ಚಿತ್ರಗಳು, ಬಂಧನದಲ್ಲಿ ವ್ಯಾಪಕವಾದ ಚಿತ್ರಹಿಂಸೆ, ಹಸಿವು, ಹೊಡೆತಗಳು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಎಂದು ಮಾನವ ಹಕ್ಕುಗಳ ಗುಂಪು ಹೇಳಿದೆ.

ಇರಾನ್‌ನ ಉನ್ನತ ರಾಜತಾಂತ್ರಿಕರು ಸಿರಿಯಾದ ಭವಿಷ್ಯದಲ್ಲಿ “ವಿನಾಶಕಾರಿ ಹಸ್ತಕ್ಷೇಪ” ದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಸಿರಿಯಾದ ಯಾವುದೇ ನಿರ್ಧಾರಗಳು ದೇಶದ ಜನರೊಂದಿಗೆ ಮಾತ್ರ ಇರಬೇಕು ಎಂದು ಹೇಳಿದ್ದಾರೆ.

ಸಿರಿಯಾದಲ್ಲಿ ವಿನಾಶಕಾರಿ ಹಸ್ತಕ್ಷೇಪ ಅಥವಾ ವಿದೇಶಿ ಹೇರಿಕೆ ಇಲ್ಲದ, ಅಲ್ಲಿಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಜನರ ಸಂಪೂರ್ಣ ಜವಾಬ್ದಾರಿ ಎಂದು ಪರಿಗಣಿಸುತ್ತೇವೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಬೀಜಿಂಗ್‌ಗೆ ಭೇಟಿ ನೀಡಿದಾಗ ಚೀನಾದ ರಾಜ್ಯ ಮಾಧ್ಯಮ ಪೀಪಲ್ಸ್ ಡೈಲಿಯಲ್ಲಿ ಬರೆದಿದ್ದಾರೆ. ಅವರು ಸಿರಿಯಾದ ಏಕತೆ, ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗಾಗಿ ಇರಾನ್‌ನ ಗೌರವವನ್ನು ಒತ್ತಿ ಹೇಳಿದ್ದಾರೆ.

ವಿದೇಶಾಂಗ ಸಚಿವರಾಗಿ ನೇಮಕಗೊಂಡ ನಂತರ ತನ್ನ ಮೊದಲ ಅಧಿಕೃತ ಭೇಟಿಯನ್ನು ಪ್ರಾರಂಭಿಸಲು ಅಬ್ಬಾಸ್ ಅರಾಘ್ಚಿ ಶುಕ್ರವಾರ ಮಧ್ಯಾಹ್ನ ಚೀನಾದ ರಾಜಧಾನಿಯನ್ನು ತಲುಪಿದರು ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಚೀನಾ ಮತ್ತು ಇರಾನ್ ಎರಡೂ ಮಾಜಿ ಅಧ್ಯಕ್ಷ ಅಲ್-ಅಸ್ಸಾದ್ ಬೆಂಬಲಿಗರಾಗಿದ್ದರು.

ಮಾನವೀಯ ನೆಲೆಯಲ್ಲಿ  ಸುಮಾರು 50 ಟನ್‌ಗಳಷ್ಟು ಯುರೋಪಿಯನ್ ಯೂನಿಯನ್ ನಿಧಿಯ ವೈದ್ಯಕೀಯ ಸೌಲಭ್ಯಗಳು ಈ ವರ್ಷದ ಅಂತ್ಯದ ವೇಳೆಗೆ ಸಿರಿಯಾವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಾಗೆಯೇ ದುಬೈನಲ್ಲಿರುವ ಇಯು ದಾಸ್ತಾನುಗಳಿಂದ ಕಳುಹಿಸಲಾದ ವೈದ್ಯಕೀಯ ಸೌಲಭ್ಯಗಳು ಗುರುವಾರ ಇಸ್ತಾನ್‌ಬುಲ್‌ಗೆ ಬಂದಿಳಿದಿವೆ ಮತ್ತು ಮುಂದಿನ ದಿನಗಳಲ್ಲಿ ಗಡಿಗೆ ತಲುಪಿಸಲಾಗುವುದು ಎಂದು ದಕ್ಷಿಣ ಟರ್ಕಿಯ ವಿಶ್ವ ಆರೋಗ್ಯ ಸಂಸ್ಥೆಯ ಗಾಜಿಯಾಂಟೆಪ್ ಕಚೇರಿಯಿಂದ ಮೃಣಾಲಿನಿ ಸಂತಾನಂ ಅವರು ಎಎಫ್‌ಪಿಗೆ ತಿಳಿಸಿದ್ದಾರೆ.

ಇವುಗಳು 8,000 ತುರ್ತು ಶಸ್ತ್ರಚಿಕಿತ್ಸಾ ಕಿಟ್‌ಗಳು, ಅರಿವಳಿಕೆ ಸರಬರಾಜುಗಳು, IV ದ್ರವಗಳು, ಕ್ರಿಮಿನಾಶಕ ವಸ್ತುಗಳು ಮತ್ತು ರೋಗ ಹರಡುವುದನ್ನು ತಡೆಗಟ್ಟುವ ಔಷಧಿಗಳನ್ನು ಒಳಗೊಂಡಿವೆ. ಇಡ್ಲಿಬ್ ಮತ್ತು ಉತ್ತರ ಅಲೆಪ್ಪೊದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಬೆಂಬಲಿಸಲು ಇವುಗಳನ್ನು ಕಳುಹಿಸಲಾಗುವುದು ಎಂದು EU (ಯುರೋಪಿಯನ್ ಯೂನಿಯನ್) ಹೇಳಿದೆ.

2011ರಲ್ಲಿ ಪ್ರಾರಂಭವಾದ ಅಂತರ್ಯುದ್ಧವು  ಸಿರಿಯಾ ದೇಶ ಮತ್ತು ಆರೋಗ್ಯ ವ್ಯವಸ್ಥೆಯನ್ನು ಧ್ವಂಸಗೊಳಿಸಿತು. ಇಲ್ಲಿ ಅರ್ಧದಷ್ಟು ಆಸ್ಪತ್ರೆಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೃಣಾಲಿನಿ ಸಂತಾನಂ ಹೇಳಿದ್ದಾರೆ.

ದಕ್ಷಿಣ ಕೊರಿಯಾ: ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು 62 ಪ್ರಯಾಣಿಕರ ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...