ಉತ್ತರಪ್ರದೇಶದ ಹಾರ್ಪುರದ ಇಂದ್ರನಗರ ಕಾಲೋನಿಯಲ್ಲಿ 1986ರಿಂದ ವಾಸಿಸುತ್ತಿರುವ ದಲಿತ ಸಮುದಾಯಕ್ಕೆ ಸೇರಿದ 41 ಕುಟುಂಬಗಳಿಗೆ ನೀವು ಈ ಸ್ಥಳದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದೀರಿ, ಜಾಗ ಖಾಲಿ ಮಾಡಿ ಎಂದು ಪುರಸಭೆಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.
ಇಲ್ಲಿ ದಲಿತರಿಗೆ ಸೇರಿದ 41 ಮನೆಗಳಲ್ಲಿ ನಲವತ್ತು ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ನಿರ್ಮಿಸಲಾಗಿತ್ತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
2022ರ ವೇಳೆಗೆ “ಎಲ್ಲರಿಗೂ ವಸತಿ” ಒದಗಿಸುವ ಉದ್ದೇಶದಿಂದ ಆವಾಸ್ ಯೋಜನೆಯನ್ನು 2016ರಲ್ಲಿ ಪ್ರಾರಂಭಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣವನ್ನು ಬೆಂಬಲಿಸುವ ಯೋಜನೆಯನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G) ಎಂದು ಕರೆಯಲಾಗುತ್ತದೆ ಮತ್ತು ನಗರ ಪ್ರದೇಶಗಳಿಗೆ ಇದನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರ (PMAY-U) ಎಂದು ಕರೆಯಲಾಗುತ್ತದೆ.
ಇದೇ ಏಪ್ರಿಲ್ 8 ರಂದು ನೀಡಲಾದ ನೋಟಿಸ್‌ನಲ್ಲಿ ದಲಿತರು ಮನೆಗಳನ್ನು ನಿರ್ಮಿಸಿರುವ ಭೂಮಿ ಸರ್ಕಾರಕ್ಕೆ ಸೇರಿದ್ದು ಮತ್ತು ಅದು ಹಿಂದೆ ಕೊಳವಾಗಿತ್ತು ಎಂದು ಹೇಳಿದೆ.
ಗರ್ಮುಕ್ತೇಶ್ವರ ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿ ಮುಕ್ತಾ ಸಿಂಗ್ ಅವರು ನೀಡಿದ ನೋಟಿಸ್‌ನಲ್ಲಿ, “ನೀವು ನಗರ ಪಾಲಿಕೆಯ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡು ಅದರಲ್ಲಿ ಮನೆ ಕಟ್ಟಿದ್ದೀರಿ ಮತ್ತು ಈ ಮನೆಗಳನ್ನು ತೆರವು ಮಾಡಲು ನೀವು ಬಯಸುತ್ತಿಲ್ಲವಾದ್ದರಿಂದ, ನಿಮ್ಮ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸುವುದು ಮುಖ್ಯವಾಗಿದೆ. ಈ ನೋಟಿಸ್ ಸ್ವೀಕರಿಸಿದ 15 ದಿನಗಳಲ್ಲಿ, ಭೂಮಿಯಲ್ಲಿರುವ ನಿಮಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಹಾಕಿ ಮತ್ತು ಭೂಮಿಯನ್ನು ನಗರ ಪಾಲಿಕೆಗೆ ಒಪ್ಸಿಪಿ, ಇಲ್ಲದಿದ್ದರೆ ನಿಮ್ಮ ವಿರುದ್ಧದ ಪ್ರಕರಣಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿ” ಎಂದು ಬರೆದಿದ್ದಾರೆ.
ನಿವಾಸಿಗಳಿಗೆ ಹಲವಾರು ಬಾರಿ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದ್ದರೂ, “ಅವರ ಅಹಂಕಾರದಿಂದಾಗಿ” ಅವರು ಪುರಸಭೆಯ ಆದೇಶಗಳನ್ನು ಪಾಲಿಸಿಲ್ಲ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.
“ನಗರಸಭೆಯ ಅಧಿಕಾರಿಗಳು ನಿಮಗೆ ಭೂಮಿಯನ್ನು ಖಾಲಿ ಮಾಡುವಂತೆ ಹಲವಾರು ಬಾರಿ ಮೌಖಿಕವಾಗಿ ಆದೇಶ ನೀಡಲಾಗಿದ್ದರೂ, ಶಾಸನಬದ್ಧ ನಿಬಂಧನೆಗಳನ್ನು ಪಾಲಿಸದೆ ನೀವು ಭೂಮಿಯನ್ನು ಖಾಲಿ ಮಾಡಲು ನಿರಾಕರಿಸುತ್ತಿದ್ದೀರಿ ಮತ್ತು ನಿಮ್ಮ ಭೂ ದಾಖಲೆಗಳಲ್ಲಿ ಸದರಿ ಭೂಮಿಯನ್ನು ಸರಕಾರವು ತಮಗೆ ನೀಡಿದೆ ಮತ್ತು ದಾಖಲೆಗಳನ್ನು ನೀಡಿದೆ ಎಂದು ನೀವು ಹೇಳುತ್ತೀರಿ. ಸದರಿ ಭೂಮಿಯಲ್ಲಿ ಯಾವುದೇ ವಸತಿ ಪ್ಲಾಟ್‌ಗಳ ದಾಖಲೆಗಳಿಲ್ಲ ಮತ್ತು ಯಾವುದೇ ಸಂದರ್ಭದಲ್ಲಿ ಯಾರ ಹೆಸರಿನಲ್ಲಿ ಭೂ ದಾಖಲೆಗಳನ್ನು ಹೊಂದಿದ್ದರೆ ಅದನ್ನು ರದ್ದುಗೊಳಿಸಲಾಗಿದೆ.” ಎಂದು ಅವರು ಹೇಳಿದ್ದಾರೆ.
ಪ್ರಕಟಣೆಯೊಂದಿಗೆ ಮಾತನಾಡಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರೇರಣಾ ಶರ್ಮಾ, “ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ಇದನ್ನು ಮಂಗಳವಾರ ನಮ್ಮ ಗಮನಕ್ಕೆ ತರಲಾಗಿದೆ. ಜನರ ಹಕ್ಕುಗಳು ಸರಿಯಾಗಿದ್ದರೆ, ನಾವು ತನಿಖೆ ಮಾಡುತ್ತೇವೆ. PMAY ಯೋಜನೆಯಡಿಯಲ್ಲಿ ಭೂ ದಾಖಲೆಗಳ ದೃಢೀಕರಣವನ್ನು ನಾವು ಪರಿಶೀಲಿಸುವುದಿಲ್ಲ, ದಸ್ತಾವೇಜಿನ ಪ್ರಕಾರ ವ್ಯಕ್ತಿಯು ಸರಿಯಾದ ಮಾಲೀಕರೇ ಎಂಬುದನ್ನು ಮಾತ್ರ ನಾವು ಪರಿಶೀಲಿಸುತ್ತೇವೆ. ನಾವು ಹಕ್ಕುಗಳನ್ನು ಪರಿಶೀಲಿಸಬೇಕಾಗಿದೆ” ಎಂದು ವಿವರಿಸಿದ್ದಾರೆ.
ಆದಾಗ್ಯೂ ನೋಟಿಸ್‌ನಲ್ಲಿ ಬಳಸಲಾದ ಸ್ವರ ಮತ್ತು ಭಾಷೆಯ ಬಗ್ಗೆ ಕೇಳಿದಾಗ, ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದರು. ನೋಟಿಸ್ ಸ್ವೀಕರಿಸಿದ ನಂತರ ಹಲವಾರು ನಿವಾಸಿಗಳು ಕಾರ್ಯನಿರ್ವಾಹಕ ಅಧಿಕಾರಿಯನ್ನು ಭೇಟಿಯಾಗಿದ್ದಾರೆ.

ವರದಿಯ ಪ್ರಕಾರ 58 ವರ್ಷದ ಗಂಗಾರಾಮ್, “ನಾನು 4ನೇ ತರಗತಿಯವರೆಗೆ ಮಾತ್ರ ಓದಿದ್ದೇನೆ ಮತ್ತು ನನ್ನ ಹೆಸರನ್ನು ಮಾತ್ರ ಓದಬಲ್ಲೆ. ಕಾಲೋನಿಯಲ್ಲಿರುವ ಇತರರು ನನ್ನ ಮನೆಯನ್ನು ಖಾಲಿ ಮಾಡಬೇಕೆಂದು ನನಗೆ ವಿವರಿಸಿದರು. ನಮ್ಮ ಕಾಲೋನಿ ಅಕ್ರಮ ಎಂದು ಅಧಿಕಾರಿಗಳು ನಮಗೆ ಹೇಳಿದರು. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅವರು ನಮಗೆ ಹೇಳಿದರು. ನಾವು ಬಡವರು, ನಾವು ದೂರು ನೀಡಬಹುದು.” ಎಂದು ಆವಲತ್ತುಕೊಂಡಿದ್ದಾರೆ.
PMAY ಯೋಜನೆಯಡಿಯಲ್ಲಿ ಇಲ್ಲಿ ಮನೆ ನಿರ್ಮಾಣಕ್ಕೆ ಮೊದಲ COVID-19 ಲಾಕ್‌ಡೌನ್ ನಂತರ ನಾನು ಮೂರು ಕಂತುಗಳನ್ನು ಪಡೆದೆನು. ತಲಾ 1 ಲಕ್ಷ ರೂ. ಮತ್ತು ಮುಂದಿನ ಕಂತುಗಳಲ್ಲಿ ತಲಾ 50,000 ರೂ. ಪಡೆದೆನು. ಆಳಿದುಳಿದ ಮನೆ ನಿರ್ಮಾಣವನ್ನು ಪೂರ್ಣಗೊಳಿಸಲು ಹೆಚ್ಚುವರಿಯಾಗಿ ತಮ್ಮ ಉಳಿತಾಯದಿಂದ 1.5 ಲಕ್ಷ ರೂ.ಗಳನ್ನು ಬಳಕೆ ಮಾಡಿದೆ ಎಂದು ಅವರು ಹೇಳಿದರು.
1986ರಲ್ಲಿ ಗಾಜಿಯಾಬಾದ್ ಜಿಲ್ಲೆಯ ಭಾಗವಾಗಿದ್ದ ಗರ್ಮುಕ್ತೇಶ್ವರದ ಚುಪ್ಲಾದಿಂದ ಸರಕಾರವು ಆ ಪ್ರದೇಶಕ್ಕೆ ತಮ್ಮನ್ನು ಸ್ಥಳಾಂತರಿಸಲಾಗಿದೆ ಎಂದು ನಿವಾಸಿಗಳು ಹೇಳಿದರು.
ಆ ಸಮಯದಲ್ಲಿ ಹೊರಡಿಸಲಾದ ನೋಟಿಸ್‌ನಲ್ಲಿ, “ಪುನರ್ವಸತಿ ಉದ್ದೇಶಕ್ಕಾಗಿ, ಸಾಮೂಹಿಕ ಅರ್ಜಿ ಪತ್ರವನ್ನು ಪರಿಗಣಿಸಿ, ಪುನರ್ವಸತಿ ಸಮಸ್ಯೆ ಬಗೆಹರಿಯಲು 100 ಗಜ ಭೂಮಿಯನ್ನು ನಿಮಗೆ ನೀಡಲು ನಾವು ನಿರ್ಧರಿಸಿದ್ದೇವೆ. ಭೂಮಿಯನ್ನು ಮಾರಾಟ ಮಾಡುವ ಮತ್ತು ವರ್ಗಾಯಿಸುವ ಹಕ್ಕು ನಿಮಗೆ ಇರುವುದಿಲ್ಲ. ನೀವು ಮತ್ತು ನಿಮ್ಮ ಕುಟುಂಬ ಸದಸ್ಯರು ವಸತಿ ಉದ್ದೇಶಗಳಿಗಾಗಿ ಭೂಮಿಯನ್ನು ಬಳಸುತ್ತೀರಿ” ಎಂದಿದೆ.
ಅವರು ಸ್ಥಳಾಂತರಗೊಂಡಾಗ ಅಲ್ಲಿ ಬತ್ತಿದ ಕೊಳವಿತ್ತು ಎಂದು ಗಂಗಾರಾಮ್ ಹೇಳುತ್ತಾರೆ. ಆದಾಗ್ಯೂ ನಗರ ಪಾಲಿಕೆ ಅಧಿಕಾರಿಗಳು ಅದನ್ನು ಮುಚ್ಚಿಸಿ ಅಲ್ಲಿಗೆ ನಮ್ಮನ್ನು ಸ್ಥಳಾಂತರಿಸಲು ಸಹಾಯ ಮಾಡಿದರು ಎಂದು ಅವರು ಹೇಳುತ್ತಾರೆ.
ಮತ್ತೊಬ್ಬ ನಿವಾಸಿ ಕಮಲಾ ಅವರು, “ಅವರು (ಅಧಿಕಾರಿಗಳು) ತಾವು ಮಾಡಬೇಕಾದ್ದನ್ನು ಮಾಡಿದ್ದೇವೆ ಎಂದು ನಮಗೆ ಹೇಳಿದರು, ಮತ್ತು ಈಗ ನಮಗೆ ಸಾಧ್ಯವಾದದ್ದನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ… ನಮಗೆ ನಿದ್ರೆ ಬರುತ್ತಿಲ್ಲ, ನಮ್ಮ ಉಳಿತಾಯದ ಎಲ್ಲಾ ಹಣವನ್ನು ನಮ್ಮ ಮನೆಗಳನ್ನು ನಿರ್ಮಿಸಲು ಬಳಸಿದ್ದೇವೆ. ಈಗ ನಾವು ಎಲ್ಲಿಗೆ ಹೋಗುಬೇಕು” ಎಂದು ಪ್ರಶ್ನಿಸುತ್ತಾರೆ.
ಹಣ, ಹೆಂಡಕ್ಕೆ ಮತ ನೀಡಿದರೆ ಮುಂದಿನ ಜನ್ಮದಲ್ಲಿ ನಾಯಿ, ಬೆಕ್ಕುಗಳಾಗಿ ಹುಟ್ಟುತ್ತೀರಿ: ಬಿಜೆಪಿ ಶಾಸಕಿ ಉಷಾ ಠಾಕೂರ್


