Homeಮುಖಪುಟ512ಕೆಜಿ ಈರುಳ್ಳಿಗೆ ಕೇವಲ 2ರೂ. ಲಾಭ ಪಡೆದ ರೈತ!; ಸರ್ಕಾರದ ಅಸಮಂಜಸ ನೀತಿಯೇ ಇದಕ್ಕೆ ಕಾರಣ...

512ಕೆಜಿ ಈರುಳ್ಳಿಗೆ ಕೇವಲ 2ರೂ. ಲಾಭ ಪಡೆದ ರೈತ!; ಸರ್ಕಾರದ ಅಸಮಂಜಸ ನೀತಿಯೇ ಇದಕ್ಕೆ ಕಾರಣ ಎಂದ ರೈತ ಮುಖಂಡ

- Advertisement -
- Advertisement -

ಮಹಾರಾಷ್ಟ್ರ, ಸೊಲ್ಲಾಪುರದ ರೈತರೊಬ್ಬರು ತಾವು ಬೆಳೆದಿದ್ದ 512 ಕೆಜಿ ಈರುಳ್ಳಿಯನ್ನು ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದು, ಅದರಿಂದ ಅವರು ಗಳಿಸಿದ ಹಣ ಕೇವಲ 2.49ರೂ. ಈ ಸುದ್ದಿ ತಿಳಿದಾಕ್ಷಣ ರೈತರು ಆಘಾತಕ್ಕೊಳಗಾದರು.

ಸೊಲ್ಲಾಪುರದ ಬಾರ್ಶಿ ತಹಸಿಲ್‌ನಲ್ಲಿ ವಾಸವಾಗಿರುವ 63 ವರ್ಷದ ರಾಜೇಂದ್ರ ಚವ್ಹಾಣ ಎಂಬ ರೈತ ಸೊಲ್ಲಾಪುರ ಮಾರುಕಟ್ಟೆ ಯಾರ್ಡ್‌ನಲ್ಲಿ ಈರುಳ್ಳಿ ಇಳುವರಿ ಪ್ರತಿ ಕೆಜಿಗೆ 1ರೂ.ನಂತೆ ಬೆಲೆ ಪಡೆದಿದೆ. ಆದರೆ ಎಲ್ಲಾ ಕಡಿತದ ನಂತರ ಅವರು ಈ ಅಲ್ಪ ಮೊತ್ತವನ್ನು ತಮ್ಮ ಒಟ್ಟು ಲಾಭವಾಗಿ ಪಡೆದರು ಎಂದು ಅವರು ಹೇಳಿದರು.

ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ರೈತ ಚವ್ಹಾಣ್, ”ಸೊಲ್ಲಾಪುರದ ಈರುಳ್ಳಿ ವ್ಯಾಪಾರಿಯೊಬ್ಬರಿಗೆ ಐದು ಕ್ವಿಂಟಾಲ್‌ಗಿಂತ ಹೆಚ್ಚು ತೂಕದ 10 ಚೀಲ ಈರುಳ್ಳಿಯನ್ನು ಮಾರಾಟಕ್ಕೆ ಕಳುಹಿಸಿದ್ದೆ, ಆದರೆ ಲೋಡಿಂಗ್, ಸಾರಿಗೆ, ಕೂಲಿ ಮತ್ತು ಇತರ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ನನಗೆ ಕೇವಲ ಅವರಿಂದ 2.49ರೂ. ನಿವ್ವಳ ಲಾಭ ಬಂದಿದೆ. ಆ ವ್ಯಾಪಾರಿ ನನಗೆ ನೀಡಿದ ದರ ಕ್ವಿಂಟಲ್‌ಗೆ 100 ರೂ. ಆಗಿತ್ತು. ಒಟ್ಟಾರೆ ಬೆಳೆ 512 ಕೆಜಿ ಇದ್ದು, ಉತ್ಪನ್ನಕ್ಕೆ 512ರೂ. ಬೆಲೆ ಬಂದಿದೆ” ಎಂದು ಅವರು ಹೇಳಿದರು..

”ಕೂಲಿ, ತೂಕ, ಸಾಗಣೆ ಮತ್ತು ಇತರ ಶುಲ್ಕಗಳ ಮೇಲೆ 509.51ರೂ. ಕಡಿತದ ನಂತರ, ನಾನು ಕೇವಲ 2.49ರೂ. ನಿವ್ವಳ ಲಾಭ ಪಡೆದಿದ್ದೇನೆ. ಇದು ನನಗೆ ಮತ್ತು ರಾಜ್ಯದ ಇತರ ಈರುಳ್ಳಿ ಬೆಳೆಗಾರರಿಗೆ ಮಾಡಿದ ಅವಮಾನವಾಗಿದೆ. ಅಂತಹ ಆದಾಯವನ್ನು ಪಡೆದರೆ ನಾವು ಹೇಗೆ ಬದುಕುವುದು? ಈರುಳ್ಳಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಮತ್ತು ಹಾನಿಗೊಳಗಾದ ರೈತರಿಗೆ ಪರಿಹಾರ ಸಿಗಬೇಕು” ಎಂದರು.

ಇದನ್ನೂ ಓದಿ: ಮಹಾರಾಷ್ಟ್ರ: ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆ ಕೊಂದು, ಬೆಡ್ ಬಾಕ್ಸ್‌ನಲ್ಲಿ ಶವ ಅಡಗಿಸಿಟ್ಟ ಪ್ರಿಯಕರ

ಉತ್ಪನ್ನವು ಉತ್ತಮ ಗುಣಮಟ್ಟದ್ದಾಗಿದೆ ಎಂದು ಚವಾಣ್ ಹೇಳಿಕೊಂಡರೆ, ಅದು ಕಡಿಮೆ ದರ್ಜೆಯದ್ದಾಗಿದೆ ಎಂದು ವ್ಯಾಪಾರಿ ಹೇಳಿದ್ದಾನೆ.

”ರೈತರು 10 ಚೀಲ ಮಾತ್ರ ತಂದಿದ್ದು, ಉತ್ಪನ್ನವೂ ಕಡಿಮೆ ದರ್ಜೆಯದ್ದಾಗಿದೆ. ಹೀಗಾಗಿ ಕ್ವಿಂಟಲ್ ದರಕ್ಕೆ 100ರೂ. ಸಿಕ್ಕಿದೆ. ಹೀಗಾಗಿ ಎಲ್ಲ ಕಡಿತಗೊಳಿಸಿ 2ರೂ. ನಿವ್ವಳ ಲಾಭ ಬಂದಿದೆ” ಎಂದು ವ್ಯಾಪಾರಿ ತಿಳಿಸಿದ್ದಾನೆ.

”ಇದೇ ರೈತ ಇತ್ತೀಚಿನ ದಿನಗಳಲ್ಲಿ ನನಗೆ 400ಕ್ಕೂ ಹೆಚ್ಚು ಚೀಲಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಪಡೆದಿದ್ದಾನೆ. ಈ ಬಾರಿ 10 ಮೂಟೆ ಇಲ್ಲದ ಉಳಿಕೆ ಉತ್ಪನ್ನಗಳನ್ನು ತಂದಿದ್ದು, ಬೆಲೆ ಕುಸಿದಿದ್ದರಿಂದ ಈ ದರ ಸಿಕ್ಕಿದೆ”  ಎಂದು ವ್ಯಾಪಾರಿ ಹೇಳಿದರು.

ಈ ಬಗ್ಗೆ ರೈತ ಮುಖಂಡ ಹಾಗೂ ಮಾಜಿ ಸಂಸದ ರಾಜು ಶೆಟ್ಟಿ ಮಾತನಾಡಿ, ”ಈಗ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ‘ಖಾರಿಫ್’ ಉತ್ಪನ್ನವಾಗಿದ್ದು, ಇದನ್ನು ದೀರ್ಘಕಾಲ ಶೇಖರಿಸಿಡಲು ಸಾಧ್ಯವಿಲ್ಲ, ಹೀಗಾಗಿ ಉತ್ಪನ್ನದ ಶೆಲ್ಫ್ ಲೈಫ್ ಕಡಿಮೆಯಾಗಿದೆ. ಈ ಈರುಳ್ಳಿಯನ್ನು ತಕ್ಷಣ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಹೊರಕ್ಕೆ ರಫ್ತು ಮಾಡಬೇಕಾಗಿದೆ. ಆದರೆ ದಲ್ಲಾಳಿಗಳ ದುರಾಸೆಯಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ.

ಈ ಈರುಳ್ಳಿಯನ್ನು ಭಾರತೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ(NAFED)ದಿಂದ ಖರೀದಿಸಲಾಗುತ್ತಿಲ್ಲ, ಆದ್ದರಿಂದ ಈ ‘ಖಾರಿಫ್’ ಈರುಳ್ಳಿಗೆ ಬೆಲೆ ಸಿಗುವಂತೆ ಮಾಡುವುದೇ ಸರ್ಕಾರಕ್ಕೆ ಇರುವ ಏಕೈಕ ಆಯ್ಕೆಯಾಗಿದೆ ಎಂದು ರಾಜು ಶೆಟ್ಟಿ ಹೇಳಿದರು.

”ಈರುಳ್ಳಿಗೆ ಸಂಬಂಧಿಸಿದಂತೆ ಸರ್ಕಾರದ ರಫ್ತು ಮತ್ತು ಆಮದು ನೀತಿಯು ಸ್ಥಿರವಾಗಿಲ್ಲ. ನಾವು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಎರಡು ಶಾಶ್ವತ ಮಾರುಕಟ್ಟೆಗಳನ್ನು ಹೊಂದಿದ್ದೇವೆ. ಆದರೆ ನಮ್ಮ ಸರ್ಕಾರದ ಅಸಮಂಜಸ ನೀತಿಯಿಂದಾಗಿ ಅವರು ನಮ್ಮ ಬದಲಿಗೆ ಇರಾನ್‌ನಿಂದ ಈರುಳ್ಳಿ ಖರೀದಿಸಲು ಆದ್ಯತೆ ನೀಡಿದರು. ಮೂರನೇ ಮಾರುಕಟ್ಟೆ ಶ್ರೀಲಂಕಾ, ಆದರೆ ಪ್ರತಿಯೊಬ್ಬರಿಗೂ ಅವರ ಪರಿಸ್ಥಿತಿ ತಿಳಿದಿದೆ ಮತ್ತು ಯಾರೂ ತಮ್ಮ ಉತ್ಪನ್ನಗಳನ್ನು ಕಳುಹಿಸಲು ಬಯಸುವುದಿಲ್ಲ” ಎಂದು ಅವರು ಹೇಳಿದರು.

ಸರ್ಕಾರ ಈ ಈರುಳ್ಳಿ ಖರೀದಿಸಬೇಕು ಅಥವಾ ರೈತರಿಗೆ ಸಬ್ಸಿಡಿ ನೀಡಬೇಕು ಎಂದು ರೈತ ಮುಖಂಡರು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. The farmers agitation…remember…that’s when farmers shot themselves in the foot….they became political pawns and protested good reforms…if any one expects govt to buy everything that they produce that’s not right. Markets will find their levels and reforms would have helped you avoid pitfalls. By the way I am also a farmer happily living with organic and multi crop farming.

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...