Homeಕರ್ನಾಟಕಪ್ರಪೊಗಾಂಡ ಸಿನಿಮಾಕ್ಕೆ 6 ತಿಂಗಳು ತೆರಿಗೆ ವಿನಾಯಿತಿ; ಬಡವರ ಜ್ಯೋತಿಗೆ ಬರೆ?

ಪ್ರಪೊಗಾಂಡ ಸಿನಿಮಾಕ್ಕೆ 6 ತಿಂಗಳು ತೆರಿಗೆ ವಿನಾಯಿತಿ; ಬಡವರ ಜ್ಯೋತಿಗೆ ಬರೆ?

- Advertisement -
- Advertisement -

ಬಿಜೆಪಿಯ ಪ್ರಪೊಗಾಂಡ (ಯೋಜಿತ ಪ್ರಚಾರ) ಸಿನಿಮಾವಾಗಿರುವ ‘ಕಾಶ್ಮೀರ್‌ ಫೈಲ್ಸ್‌’ಗೆ ಆರು ತಿಂಗಳ ತೆರಿಗೆ ವಿನಾಯಿತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಮತ್ತೊಂದೆಡೆ ಬಡವರ ಪಾಲಿನ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಸಹಾಯಧನವನ್ನು ಮಿತಿಗೊಳಿಸಲು ಹೊರಟಿದೆ. ಅರ್ಧ ಸತ್ಯವನ್ನು ಹೇಳುತ್ತಿರುವ ಸಿನಿಮಾಕ್ಕೆ ಇರುವ ಬೆಲೆ ಬಡವರ ಪಾಲಿನ ಬೆಳಕಿಗೆ ಇಲ್ಲವೇ ಎಂಬ ಪ್ರಶ್ನೆ ಎದ್ದಿದೆ.

‘ಕಾಶ್ಮೀರ್‌ ಫೈಲ್ಸ್‌’ಗೆ ಆರು ತಿಂಗಳ ತೆರಿಗೆ ವಿನಾಯಿತಿ ಹಾಗೂ ಭಾಗ್ಯಜ್ಯೋತಿ ಸಹಾಯಧನಕ್ಕೆ ಮಿತಿಗೊಳಿಸಲು ಹೊರಟಿರುವ ಸರ್ಕಾರದ ನಡೆಯ ಕುರಿತು ಪತ್ರಕರ್ತ ಮಹಾಂತೇಶ್ ಭದ್ರಾವತಿಯವರ  ‘ದಿ ಫೈಲ್‌’ ತನಿಖಾ ಜಾಲತಾಣ ಬಯಲಿಗೆಳೆದಿದೆ. ಎರಡು ಪ್ರತ್ಯೇಕ ವರದಿಗಳನ್ನು ‘ದಿ ಫೈಲ್‌’ ಮಾಡಿದ್ದು, ಎರಡು ಸುದ್ದಿಗಳನ್ನು ಒಟ್ಟಿಗೆ ಇಟ್ಟು ನೋಡಿದಾಗ ಸರ್ಕಾರ ಯಾವುದಕ್ಕೆ ಆದ್ಯತೆ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಬೆಳಗಾವಿ (ದಕ್ಷಿಣ) ಶಾಸಕ ಅಭಯ್‌ ಪಾಟೀಲ್ ಮತ್ತಿತರ ಶಾಸಕರ ಕೋರಿಗೆ ಮೇರಿಗೆ ‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ ಮೂರು ದಿನದ ಅಂತರದೊಳಗೇ ಆರ್ಥಿಕ ಇಲಾಖೆಯು ಇದೀಗ ಆದೇಶ ಹೊರಡಿಸಿದೆ. ಈ ತೆರಿಗೆ ವಿನಾಯಿತಿಯು 2022ರ ಮಾರ್ಚ್ 14ರಿಂದ ಅನ್ವಯವಾಗುವಂತೆ ಆರು ತಿಂಗಳವರೆಗೆ ಜಾರಿಯಲ್ಲಿರುವಂತೆ ಆದೇಶದಲ್ಲಿ ಹೇಳಲಾಗಿದೆ.

2022ರ ಮಾರ್ಚ್ 18ರಂದು ಆದೇಶ ಹೊರಡಿಸಿರುವ ಸರ್ಕಾರವು ಚಿತ್ರ ಪ್ರದರ್ಶಕರು ವೀಕ್ಷಕರಿಂದ ಯಾವುದೇ ತರಹದ ಜಿಎಸ್‌ಟಿಯನ್ನು ಸಂಗ್ರಹಿಸಬಾರದು ಮತ್ತು ಜಿಎಸ್‌ಟಿ ತಗ್ಗಿಸಿದ ದರದಲ್ಲಿಯೇ ಟಿಕೆಟ್‌ಗಳನ್ನು ಮಾರಟ ಮಾಡಬೇಕು ಎಂದು ಸೂಚಿಸಿದೆ.  ದಿ ಕಾಶ್ಮೀರ್‌ ಫೈಲ್ಸ್‌ ಚಲನಚಿತ್ರಕ್ಕೆ ಶೇ. 10ರಷ್ಟು ತೆರಿಗೆ ವಿನಾಯಿತಿ ನೀಡಬೇಕು ಎಂದು ಶಾಸಕ ಅಭಯ್‌ ಪಾಟೀಲ್ ಅವರು 2022ರ ಮಾರ್ಚ್ 10ರಂದೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಆದೇಶ ಹೊರಡಿಸಲಾಗಿದೆ.

ಬಡವಾಗುತ್ತಿದೆ ಬಡವರ ಜ್ಯೋತಿ

ನೀರಾವರಿ ಪಂಪ್‌ಸೆಟ್‌, ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿ ಗ್ರಾಹಕರಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿ ನೀಡುತ್ತಿರುವ ಸಹಾಯಧನ ಮೊತ್ತವನ್ನು ಮಿತಿಗೊಳಿಸಲು ಇಂಧನ ಇಲಾಖೆಯಲ್ಲಿ ಮುಂದಾಗಿದೆ ಎಂದು ಮತ್ತೊಂದು ವರದಿ ತಿಳಿಸಿದೆ.

ಇಂಧನ ಇಲಾಖೆಯು ವಿದ್ಯುತ್‌ ಸಹಾಯಧನವನ್ನು ಎಸ್‌ಸಿಪಿ ಮತ್ತು ಟಿಎಸ್‌ಪಿಯೆಂದು ವರ್ಗೀಕರಿಸದೇ ಕೇವಲ ಲೆಕ್ಕ ಶೀರ್ಷಿಕೆ 106ರ ಅಡಿ ಒದಗಿಸಬೇಕು ಮತ್ತು ಈ ಎರಡೂ ಉಪ ಯೋಜನೆಗಳ ಗ್ರಾಹಕರಿಗೆ ನೀಡುತ್ತಿರುವ ಸಹಾಯಧನ ಮೊತ್ತವನ್ನು ಮಿತಿಗೊಳಿಸಲು ಪ್ರಸ್ತಾಪವನ್ನು ಮಂಡಿಸಿದೆ.

PC: The File

ಪರಿಶಿಷ್ಟರ ಅನುದಾನ ಗೋತ!

ಪರಿಶಿಷ್ಟ ಜಾತಿ, ಪಂಗಡಕ್ಕೆ ಶೇ. 14.84 ರಷ್ಟು ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಬೇಕಿದ್ದರೂ ಸರ್ಕಾರ ವರ್ಷವರ್ಷವೂ ಅನುದಾನವನ್ನು ಕಡಿತ ಗೊಳಿಸುತ್ತಲೇ ಇದೆ.

“ಕಾಯ್ದೆಯ ಅನುಗುಣವಾಗಿ ಬಜೆಟ್‌ ವೆಚ್ಚದಲ್ಲಿ ಉಪಯೋಜನೆ ಅನುದಾನದ ಪ್ರಮಾಣ ಶೇ. 14.84 ಇರಬೇಕು. 2017- 18ರಲ್ಲಿ 1,86,561 ಕೋಟಿ ರೂ.ಗಳ ಬಜೆಟ್ ಮಂಡಿಸಲಾಯಿತು. ಪರಿಶಿಷ್ಟರ ಅನುದಾನ 27,703.54 ಕೋಟಿ ರೂ. ಇತ್ತು. ಅಂದರೆ ಶೇ. 14. 84ರಷ್ಟು ಹಣವನ್ನು ಮೀಸಲಿಡಲಾಗಿತ್ತು. 2018-19ರಲ್ಲಿ ಬಜೆಟ್ ಗಾತ್ರ 2,18,488 ಕೋಟಿ ರೂ.ಗಳು. ಪರಿಶಿಷ್ಟರ ಉಪಯೋಜನೆಗೆ ನೀಡಿದ್ದು 29,209.47 ಕೋಟಿ ರೂಗಳು. ಉಪಯೋಜನೆಯ ಒಟ್ಟು ಪ್ರಮಾಣ ಶೇ. 12.23 ಮಾತ್ರ. 2019-20ರ ಬಜೆಟ್‌ ಗಾತ್ರ 2,34,152 ಕೋಟಿ ರೂ.ಗಳಾದರೆ, ಪರಿಶಿಷ್ಟರಿಗೆ ನೀಡಿದ್ದು 30,464.99 ಕೋಟಿ ರೂ; ಉಪಯೋಜನೆಯ ಗಾತ್ರ ಶೇ. 13 ಆಗಿತ್ತು. 2020-21ರಲ್ಲಿ ಬಜೆಟ್ ಗಾತ್ರ 2,37,892 ಕೋಟಿ ರೂ. ಉಪಯೋಜನೆಗೆ ನೀಡಿದ್ದು 27,699.52 ಕೋಟಿ ರೂ. ಅಂದರೆ ಶೇ. 11.64 ಮಾತ್ರ. 2021-2022ರ ಬಜೆಟ್‌ನಲ್ಲಿ ಪರಿಶಿಷ್ಟರಿಗೆ ನೀಡಿದ್ದು 26,005.01 ಕೋಟಿ ರೂ. ಅಂದರೆ ಶೇ. 10.64 ಮಾತ್ರ. 2022-23ರ ಬಜೆಟ್ ಗಾತ್ರ 2,65,720 ಕೋಟಿ ರೂ. ಪರಿಶಿಷ್ಟರಿಗೆ ಮೀಸಲಾಗಿರುವುದು 28,238.33 ಕೋಟಿ ರೂ. ಅಂದರೆ ಶೇ. 10.61 ಮಾತ್ರ”

2017-18 ರಿಂದ 2022-23ರವರೆಗೆ ಬಜೆಟ್ಟಿನ ಒಟ್ಟು ಗಾತ್ರದಲ್ಲಿ ಶೇ. 42.43ರಷ್ಟು ಏರಿಕೆಯಾಗಿದ್ದರೆ, ಉಪಯೋಜನೆಗಳ ಅನುದಾನ ಇದೇ ಅವಧಿಯಲ್ಲಿ ಶೇ. 1.93ರಷ್ಟು ಏರಿಕೆಯಾಗಿದೆ. ರಾಜ್ಯದ ಒಟ್ಟು ಬಜೆಟ್ಟಿನ ಗಾತ್ರದಲ್ಲಿ ಉಪಯೋಜನೆಗಳ ಅನುದಾನ 2017-18ರಲ್ಲಿ ಶೇ.14.86 ರಷ್ಟಿದ್ದದ್ದು, 2022-23ರಲ್ಲಿ ಶೇ.10.61ಕ್ಕಿಳಿದಿದೆ. ಒಟ್ಟು ಬಜೆಟ್ಟಿನ ಮೊತ್ತ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಆದರೆ ಉಪಯೋಜನೆಗಳ ಅನುದಾನ ಅದೇ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ.

ವಾಸ್ತವವಾಗಿ 2020-21ರ ನಂತರ ಅನುದಾನದ ಒಟ್ಟು ಮೊತ್ತದಲ್ಲಿಯೇ ಕಡಿಮೆಯಾಗುತ್ತಿದೆ. ಉದಾ: 2019-20ರಲ್ಲಿ ಅನುದಾನ 30,444.99 ಕೋಟಿ ರೂ. ಇದ್ದದ್ದು, 2020-21ರಲ್ಲಿ 27,699.52 ಕೋಟಿ ರೂ. ಆಗಿದೆ. 2021-22ರಲ್ಲಿ ರೂ.26,001 ಕೋಟಿ ರೂ.ಗೆ ಇಳಿದಿದೆ. ಈ ಬಜೆಟ್‌ನಲ್ಲಿ (2022-23) ಕೊಂಚ ಏರಿಕೆಯಾಗಿದ್ದು, 28,234.33 ಕೋಟಿ ರೂ. ನೀಡಲಾಗಿದೆ. (ವಿವರಗಳಿಗೆ ‘ಇಲ್ಲಿ’ ಓದಿರಿ)


ಇದನ್ನೂ ಓದಿರಿ: ವಿಶೇಷ ವರದಿ: ವರ್ಷ ವರ್ಷವೂ ಎಸ್‌ಸಿ, ಎಸ್‌ಟಿಗಳ ಅನುದಾನ ಗೋತಾ; ಸರ್ಕಾರಕ್ಕಿಲ್ಲ ದಲಿತರ ಮೇಲೆ ಕಾಳಜಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...