ಸೇವೆಯನ್ನು ತೊರೆದ ಭಾರತೀಯ ಸೇನೆಯ ಮೇಜರ್ ಜೀವನ ಕುರಿತ ಚಿತ್ರಕಥೆಯನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಲಾಗಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಸೈನ್ಯದಲ್ಲಿ ತನ್ನ ಸ್ಥಾನವನ್ನು ತೊರೆಯಬೇಕಾದ ಸೈನಿಕನ ನೈಜ ಜೀವನದ ಹೋರಾಟ ಕಥನವನ್ನು ಚಿತ್ರನಿರ್ಮಾಪಕ ಓನಿರ್ ಅವರು ಮುಂದಿನ ಚಲನಚಿತ್ರವಾಗಿ ತರಲು ಇಚ್ಛಿಸಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರಾಗಿದ್ದಕ್ಕೆ ಅವರು ಸೇನೆಯಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ಈ ಚಲನಚಿತ್ರವು ಓನಿರ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ‘ಐ ಆಮ್’ನ ಮುಂದುವರಿದ ಭಾಗವಾಗಿರಬಹುದು. ‘ಐ ಆಮ್’ ಸಿನಿಮಾವು ಏಕ ತಾಯ್ತನ, ಸಲಿಂಗಕಾಮ ಮತ್ತು ಇತರ ಸಾಮಾಜಿಕ ಸಮಸ್ಯೆಗಳಂತಹ ವಿಷಯಗಳ ಕುರಿತು ಬೆಳಕು ಚೆಲ್ಲುತ್ತದೆ.
ಈ ವಿಷಯದ ಕುರಿತು TOI ವರದಿಗಾರ ಮಾಡಿರುವ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ ಓನೀರ್, “ಭಾರತೀಯ ಸೇನೆಯಲ್ಲಿ ಸಲಿಂಗಕಾಮವು ಇನ್ನೂ ಕಾನೂನುಬಾಹಿರವಾಗಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
75 years of independence, more than three years since he Supreme Court of india had decriminalised homosexuality but as a society we are a long way from being treated as equals . While 56 countries across the world accepts #lgbtqi in the army ,it is still illegal the indian army. https://t.co/YboPeAUnqK
— অনির Onir اونیر ओनिर he/him (@IamOnir) January 21, 2022
“ಸಮಾಜ ನಮ್ಮನ್ನು ಸಮಾನವಾಗಿ ಪರಿಗಣಿಸಲು ಬಹಳ ದೂರದಲ್ಲಿದ್ದೇವೆ” ಎಂದು ಮೈ ಬ್ರದರ್ ನಿರ್ದೇಶಕ ನಿಖಿಲ್ ಬರೆದಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, “ನನ್ನ ಸೇನೆಯ ಬಗ್ಗೆ ನನಗೆ ಅತ್ಯಂತ ಗೌರವ ಮತ್ತು ಪ್ರೀತಿ ಇದೆ. ದೇಶಕ್ಕೆ ಸೇವೆ ಸಲ್ಲಿಸಲು ಬಯಸುವ ಯಾರನ್ನೂ ಲೈಂಗಿಕತೆಯ ಕಾರಣದಿಂದ ಸೇನೆ ತಾರತಮ್ಯ ಮಾಡಬಾರದು ಎಂದು ನಾನು ಬಯಸುತ್ತೇನೆ” ಎಂದು ಓನಿರ್ ತಿಳಿಸಿದ್ದಾರೆ.
ಜನವರಿ 19ರಂದು ಸೇನೆಯ ಕಾರ್ಯತಂತ್ರದ ಸಂವಹನ ವಿಭಾಗದ ಹೆಚ್ಚುವರಿ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಕರ್ನಲ್ ಸಚಿನ್ ಉಜ್ವಾಲ್ ಅವರಿಂದ ಒನಿರ್ ಇಮೇಲ್ ಸ್ವೀಕರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳುತ್ತದೆ.
“ಡಿಸೆಂಬರ್ 16, 2021ರಂದು ಇಮೇಲ್ ಮೂಲಕ ಸ್ವೀಕರಿಸಿದ ಸ್ಕ್ರಿಪ್ಟ್‌ನ ವಿಷಯವನ್ನು ವಿಶ್ಲೇಷಿಸಲಾಗಿದೆ” ಎಂದು ಉಜ್ವಾಲ್ ಹೇಳಿದ್ದಾರೆ. “ಸ್ಕ್ರಿಪ್ಟ್ ಅನ್ನು ಆರ್ಮಿಯಿಂದ ತೆರವುಗೊಳಿಸಲಾಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ” ಎಂದು ತಿಳಿಸಿದ್ದಾರೆ.
ಜುಲೈ 2020ರಲ್ಲಿ, ರಕ್ಷಣಾ ಸಚಿವಾಲಯವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ಗೆ ಪತ್ರ ಬರೆದಿರುವುದಾಗಿ ವರದಿಯಾಗಿತ್ತು. ಸೇನೆಯ ಮೇಲೆ ಯಾವುದೇ ಚಲನಚಿತ್ರ, ಸಾಕ್ಷ್ಯಚಿತ್ರ ಅಥವಾ ವೆಬ್ ಸರಣಿಯನ್ನು ಪ್ರಸಾರ ಮಾಡುವ ಮೊದಲು ರಕ್ಷಣಾ ಸಚಿವಾಲಯದಿಂದ “ನಿರಾಕ್ಷೇಪಣೆ ಪ್ರಮಾಣಪತ್ರ” ಪಡೆಯಲು ಪ್ರೊಡಕ್ಷನ್ ಹೌಸ್‌ಗಳಿಗೆ ಸಲಹೆ ನೀಡಬೇಕೆಂದು ಪತ್ರ ಸೂಚಿಸಿತ್ತು.
#Bollywood #BreakingNews Ministry of Defence writes to CBFC saying all web series on OTT platforms need to get a NoC from MoD on depiction of Armed forces in these series.@thetribunechd @adgpi @indiannavy @IAF_MCC pic.twitter.com/82uP645jvi
— Ajay Banerjee ਅਜੈ ਬੈਨਰਜੀ (@ajaynewsman) July 31, 2020
ರಕ್ಷಣಾ ಪಡೆಗಳ ಚಿತ್ರಣವನ್ನು ವಿರೂಪಗೊಳಿಸುವ ಮತ್ತು ರಕ್ಷಣಾ ಸಿಬ್ಬಂದಿ, ಅನುಭವಿಗಳ ಭಾವನೆಗಳನ್ನು ಘಾಸಿಗೊಳಿಸುವ ಘಟನೆಗಳನ್ನು ಮೊಟಕುಗೊಳಿಸುವ ಉದ್ದೇಶ ಈ ಸೂಚನೆಯ ಹಿಂದಿದೆ ಎನ್ನಲಾಗಿತ್ತು.
ಭಾರತೀಯ ಸೇನಾ ಸಿಬ್ಬಂದಿ ಮತ್ತು ಸೇನಾ ಸಮವಸ್ತ್ರವನ್ನು “ಅವಮಾನಕರ ರೀತಿಯಲ್ಲಿ” ಚಿತ್ರಿಸಿರುವ ಬಗ್ಗೆ ತೀವ್ರ ಆಕ್ಷೇಪಣೆಗಳನ್ನು ಎತ್ತುವ ಕೆಲವು ದೂರುಗಳನ್ನು ರಕ್ಷಣಾ ಸಚಿವಾಲಯ ಸ್ವೀಕರಿಸಿತ್ತು.
ಹಿಂದೆ ಪ್ರಸಾರವಾದ ವೆಬ್ ಸರಣಿಗಳಲ್ಲಿ ಸೇನೆಗೆ ಸಂಬಂಧಿಸಿದ ದೃಶ್ಯಗಳು ವಾಸ್ತವದಿಂದ ದೂರವಾಗಿದ್ದು ಸಶಸ್ತ್ರ ಪಡೆಗಳ ಕುರಿತು ವಿಕೃತ ಚಿತ್ರಣವನ್ನು ಪ್ರಸ್ತುತಪಡಿಸಲಾಗಿದೆ ಎಂದು ಮೂಲಗಳು ವರದಿ ಮಾಡಿದ್ದವು.
ಹೀಗಾಗಿ “ಆಕ್ಷೇಪಣೆಯಿಲ್ಲದ ಪ್ರಮಾಣಪತ್ರ” ಪಡೆಯಲು ಓನೀರ್ ಅವರು ಚಲನಚಿತ್ರ ಸ್ಕ್ರಿಪ್ಟ್ ಅನ್ನು ಸೇನೆಗೆ ಸಲ್ಲಿಸಿದ್ದರು. ಸೇನೆಯು ಚಲನಚಿತ್ರ ಚಿತ್ರಕತೆಯನ್ನು ರದ್ದುಗೊಳಿಸಿದ ವರದಿಗೆ ಹಲವು ಜನರು ಪ್ರತಿಕ್ರಿಯೆಗಳನ್ನು ಟ್ವಿಟ್ಟರ್‌ನಲ್ಲಿ ನೀಡಿದ್ದಾರೆ. ಸೇನೆಯ ನಿಲುವು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ.
Gay Indian soldiers are not allowed to love.
— Devdutt Pattanaik (@devduttmyth) January 21, 2022
Kshatriyas are supposed to be brave, not puritanical. https://t.co/23CqP4MqV7
Exclusion of #LGBT is disservice to our nation.
— Nitesh R Pradhan (@NiteshRPradhan) January 21, 2022
ಇದನ್ನೂ ಓದಿರಿ: ಅಮರ್ ಜವಾನ್ ಜ್ಯೋತಿ ವಿಲೀನ: ಕೆಲವರಿಗೆ ದೇಶಭಕ್ತಿ, ತ್ಯಾಗ ಅರ್ಥವಾಗುವುದಿಲ್ಲ ಎಂದ ರಾಹುಲ್


