Homeಅಂತರಾಷ್ಟ್ರೀಯಹ್ಯಾಪಿ ಬಾಟಮ್ ಕ್ವಾರ್ಟರ್ ಎಂದರೇನು ಗೊತ್ತೆ?

ಹ್ಯಾಪಿ ಬಾಟಮ್ ಕ್ವಾರ್ಟರ್ ಎಂದರೇನು ಗೊತ್ತೆ?

ಅಷ್ಟೇನೂ ಬುದ್ಧಿವಂತನಲ್ಲ ಎಂದು ಎಲ್ಲರಿಗೂ ಗೊತ್ತಿದ್ದರೂ ಭಾರತದ ರಾಜಕಾರಣಿಯ ಮಗನಿಗೆ ಕೇಂಬ್ರಿಡ್ಜ್ ನಲ್ಲಿ ಪ್ರವೇಶ ದೊರೆತದ್ದು ಹೇಗೆ?

- Advertisement -
- Advertisement -

| ಜಿ.ಆರ್ ವಿದ್ಯಾರಣ್ಯ |

ಇದೆಂತಹ ಕ್ವಾರ್ಟರ್ ಅಥವಾ ಎಣ್ಣೆಯ ಹೊಸ ಹೆಸರೇ ಎಂದು ಯೋಚಿಸಬೇಡಿ. ಇದು ಜಗದ್ವಿಖ್ಯಾತ ವಿದ್ಯಾಸಂಸ್ಥೆಗಳ ಜಾಣತನದ ಬಗ್ಗೆ ಒಂದು ಉದಾಹರಣೆ.

ನಮಗೆಲ್ಲರಿಗೂ ನಮ್ಮ ಮಕ್ಕಳು ಒಳ್ಳೆಯ ಶಾಲಾ-ಕಾಲೇಜುಗಳಲ್ಲಿ ಓದಿ ತುಂಬಾ ವಿದ್ಯಾವಂತರಾಗಲಿ, ನಮ್ಮ ಕುಟುಂಬಕ್ಕೆ, ನಾಡಿಗೆ ಒಳ್ಳೆಯ ಹೆಸರು ತರಬೇಕು ಎಂಬ ಆಸೆಯಂತೂ ಇರುತ್ತದೆ. ಸಾಮಾನ್ಯವಾಗಿ ನಗರ ಪ್ರದೇಶದ ಮಧ್ಯಮ ವರ್ಗದ ಪೋಷಕರ ನಿರ್ಧಾರ ಆ ಶಾಲೆಯ ವರ್ಣರಂಜಿತ ಜಾಹಿರಾತು, ಕಟ್ಟಡ ವಿನ್ಯಾಸ, ಕಲಿಕಾ (ಭಾಷಾ) ಮಾಧ್ಯಮ, ಪ್ರವೇಶ ಎಷ್ಟು ಸುಲಭ/ಕಷ್ಟ, ಪ್ರವೇಶಕ್ಕಾಗಿ ಕಾಯುತ್ತಿರುವವರ ಪಟ್ಟಿ ಎಷ್ಟು ಉದ್ದ, ಪ್ರವೇಶ ಮತ್ತು ಬೋಧನಾ ಶುಲ್ಕ ಎಷ್ಟು ದುಬಾರಿ, ನೆರೆ-ಹೊರೆಯವರ ಅಭಿಪ್ರಾಯ, ಮನೆಯಿಂದ ಶಾಲೆ/ಕಲೇಜು ಎಷ್ಟು ಹತ್ತಿರ/ದೂರ ಅಥವಾ ಸಾರಿಗೆ ಸೌಲಭ್ಯವಿದೆಯೇ, ಮುಂತಾದ ವಿಷಯಗಳ ಮೇಲೆ ಅವಲಂಬಿಸಿರುತ್ತವೆ.

ಶಾಲೆಗೆ ಬೇಕಾದ ಎಲ್ಲಾ ಸರಕಾರಿ ಪರವಾನಗಿ/ಮಾನ್ಯತೆ ದೊರೆತಿದೆಯೋ ಇಲ್ಲವೋ ಎಂಬ ಮಾಹಿತಿ, ಸುಲಭವಾಗಿ ತಿಳಿಯದಿದ್ದಲ್ಲಿ, ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಪ್ರಯತ್ನ ಪೋಷಕರು ಮಾಡುವುದು ವಿರಳ. ತಿಳಿಯದ ಯಾವುದೋ ಕಾರಣಕ್ಕಾಗಿ ಶಾಲೆ ಮಧ್ಯದಲ್ಲೇ ಮುಚ್ಚಲ್ಪಡುತ್ತದೋ ಎನೋ ಎಂಬ ಬಗ್ಗೆ ಅವರು ಆತಂಕಕ್ಕೆ ಮೊದಲೇ ಈಡಾಗುವುದಿಲ್ಲ. ಸಾಮಾನ್ಯ ಮಟ್ಟದ  ಶಾಲೆ/ಕಾಲೇಜಿನಲ್ಲಿ ಕಲಿತು ನಾವೆಲ್ಲರೂ ವಿದ್ಯಾವಂತರಾಗಿ ಸರಿಯಾದ ಜೀವನ ನಡೆಸುತ್ತಿದ್ದರೂ ಸಹ, ನಾವು ಕಲಿತ ಸಂಸ್ಥೆಯಲ್ಲೇ ನಮ್ಮ ಮಕ್ಕಳೂ ಕಲಿಯಲಿ ಎಂದು ಯೋಚಿಸುವವರು ಸಹ ತೀರಾ ಅಪರೂಪ. ತಾವು ಕಲಿತ ಶಾಲೆಗಿಂತ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಮಕ್ಕಳು ಕಲಿಯಲಿ ಎಂಬುದು ಪೋಷಕರ ಆಶಯ.

ಓರ್ವ ವಿದ್ಯಾ ಸಂಸ್ಥೆಯ ಖ್ಯಾತಿ, ಅದರ ಮೇಲೆ ಗೌರವ ನಿಜವಾಗಿ ಹೆಚ್ಚುವುದು ಆ ಸಂಸ್ಥೆಯು ನಡೆಸುತ್ತಿರುವ ಶಾಲಾ-ಕಾಲೇಜುಗಳಲ್ಲಿ ಓದು ಮುಗಿಸಿದ ಎಷ್ಟು ವಿದ್ಯಾರ್ಥಿಗಳು ಮುಂದೆ, ಬೇರೆ ಬೇರೆ ಕ್ಷೇತ್ರದಲ್ಲಿ, ಮಹತ್ತರ ಸಾಧನೆ ಮಾಡಿದ್ದಾರೆ ಅಥವಾ ಖ್ಯಾತಿವಂತ ವ್ಯಕ್ತಿಗಳಾಗಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ. ಅದರಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳು ಮುಂದೆ ಪ್ರಸಿದ್ಧಿವಂತರಾಗದೇ ಇರಬಹುದು ಅದರೆ ಅವರಲ್ಲಿ ಹತ್ತಾರು ಜನರಾದರೂ ಖ್ಯಾತಿವಂತರಾದಲ್ಲಿ, ಮಿಕ್ಕವರು, ಕೇವಲ ಆ ಸಂಸ್ಥೆಯಲ್ಲಿ ಓದಿದ ಮಾತ್ರಕ್ಕೆ, ಜಾಣರೆಂದು ಪರಿಗಣಿಸಲ್ಪಡುವ ಸಾಧ್ಯತೆಯಂತೂ ಇರುತ್ತದೆ, ಹೂವಿನ ಜೊತೆಗೆ ನಾರೂ ಸ್ವರ್ಗಕ್ಕೆ ಹೋದಂತೆ.

ಯಾವುದೇ ಒಂದು ಖ್ಯಾತಿವಂತ ವಿದ್ಯಾಸಂಸ್ಥೆಯು ಕನಸಿನ ಕೂಸಾಗಿ ಪ್ರಾರಂಭವಾಗಿರದೆ ಇದ್ದಾಗ, ಹೆಚ್ಚಿನ ಶಾಲೆ/ಕಾಲೇಜುಗಳೂ ಸಹ ಸಾಧಾರಣ ಮಕ್ಕಳಂತೆಯೇ, ಸಣ್ಣದಾಗಿ ಹುಟ್ಟಿ-ಬೆಳೆದು ದೊಡ್ಡದಾಗುತ್ತವೆ. ಆದ್ದರಿಂದ ಅದರ ಖ್ಯಾತಿ ಮಂದಗತಿಯಲ್ಲಿಯೇ ಬೆಳೆಯಬೇಕಾಗುತ್ತದೆ. ಶಾಲೆ/ಕಾಲೇಜು ಬೆಳೆದಂತೆ ಅದರಲ್ಲಿ ಓದುವ ಮಕ್ಕಳ ಸಂಖ್ಯೆಯೂ ಬೆಳೆಯುತ್ತದೆ, ಮುಂದೆ ಈ ಮಕ್ಕಳು ಶೈಕ್ಷಣಿಕ/ಕ್ರೀಡೆ/ಇತರ ಕ್ಷೇತ್ರದಲ್ಲಿ ಮಾಡುವ ಒಳ್ಳೆಯ ಸಾಧನೆಗಳಿಂದ ಅವರೂ ಖ್ಯಾತಿ ಪಡೆದು, ತಮ್ಮ ಕುಟುಂಬಕ್ಕೂ, ವಿದ್ಯಾಸಂಸ್ಥೆಗೂ ಗೌರವ ತರುತ್ತಾರೆ. ಸಂಸ್ಥೆಯಲ್ಲಿ ಓದು ಮುಗಿಸಿದ ನಂತರ ಅವರು ಅದರ ಮಾಜಿ ವಿದ್ಯಾರ್ಥಿ (ಅಲುಮ್ನೈ) ಆಗಿ ಮುಂದೆಯೂ ಸಂಸ್ಥೆಗೆ ಒಳ್ಳೆಯ ಹೆಸರು ತರಬಹುದು, ಆದರೆ ಸಂಸ್ಥೆಗೆ ಇದರ ಸುನಿಶ್ಚತತೆ ಇರುವುದಿಲ್ಲ. ಖ್ಯಾತಿ ಸುನಿಶ್ಚತತೆ ಮಾಡಿಕೊಳ್ಳಲು ಸಾಧ್ಯವೇ ಎಂಬುದು ಈ ಲೇಖನದ ಗುರಿಯಾದರೂ ಸಹ ಇಂದಿನ ಶಿಕ್ಷಣ ವ್ಯವಸ್ಥೆಯ ವಿಡಂಬನೆ ಈ ಲೇಖನ ಎಂದು ನಿಮಗೆ ಅನಿಸಬಹುದು.

ಹಾರ್ವರ್ಡ್, ಯೇಲ್, ಕೇಂಬ್ರಿಡ್ಜ್  ಮುಂತಾದ ವಿಶ್ವವಿಖ್ಯಾತ ವಿದ್ಯಾಸಂಸ್ಥೆಗಳು ತಮ್ಮ ಖ್ಯಾತಿ ನಿರಂತವಾಗಿರಲು ಏನೆಲ್ಲಾ ಮಾಡುತ್ತವೆ, ನೋಡೋಣ. ಇದನ್ನು “ಹ್ಯಾಪಿ ಬಾಟಮ್ ಕ್ವಾರ್ಟರ್” (ಎಚ್.ಬಿ.ಕ್ಯೂ.) ಎಂದುಕರೆಯುತ್ತಾರೆ. ಹಾರ್ವರ್ಡ್ ಇದನ್ನು ಪ್ರಾರಂಬಿಸಿತಾದರೂ ಶೀಘ್ರದಲ್ಲೇ ಇದು ಪ್ರಿನ್ಸ್ಟನ್, ಸ್ಟ್ಯಾನ್ಫರ್ಡ್, ಯೇಲ್, ಮುಂತಾದ ಸಂಸ್ಥೆಗಳಿಗೂ ಪಸರಿಸಿತು. ನಮ್ಮ ದೇಶದ ಐಐಟಿ ಅಥವಾ ಅಮೇರಿಕದ ಕ್ಯಾಲೊಫೋರ್ನಿಯದಲ್ಲಿರುವ ಕ್ಯಾಲ್ಟೆಕ್ವಿದ್ಯಾ ಸಂಸ್ಥೆಯ ಪ್ರವೇಶ ನೀತಿಗೆ ತದ್ವಿರುದ್ಧವಾಗಿ, ಮೇಧಾವಿ ಮಕ್ಕಳನ್ನು ತಮ್ಮಲ್ಲಿಗೆ ಸೇರಿಸಿಕೊಳ್ಳುವ ಬದಲಾಗಿ, ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವಂತರಾಗುವ ಹೆಚ್ಚು ಸಾಧ್ಯತೆಯುಳ್ಳ ಮಕ್ಕಳಿಗೆ ಮುಖನೋಡಿ ಮಣೆ ಹಾಕುತ್ತಾರೆ. ಆದರೂ ಸಹ ಯಾವುದೇ ಕಾರಣಕ್ಕೂ ತನ್ನ ಖ್ಯಾತಿಗೆ ಚ್ಯುತಿ ಬರದಂತೆಯೂ ಬೇಕಾದ ಜಾಗೃತೆಯನ್ನೂ ವಹಿಸುತ್ತಾರೆ.

ಈ ನೀತಿಯನ್ವಯ ಸಂಸ್ಥೆಯ 25% ಸೀಟುಗಳನ್ನು ಕಾಯ್ದಿರಿಸಿ, ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಮಕ್ಕಳು, ಅಂದರೆ ದೇಶದ ಅಧ್ಯಕ್ಷರು, ಪ್ರಧಾನಮಂತ್ರಿಗಳು, ರಾಜಕಾರಣಿಗಳು, ಆಗರ್ಭ ಶ್ರೀಮಂತರು, ದೊಡ್ಡ ಉದ್ಯೋಗಪತಿಗಳು, ಸಿನಿಮಾನಟ-ನಟಿಯರು, ಕ್ರೀಡಾಪಟುಗಳು, ನೋಬೆಲ್ ಮುಂತಾದ ಪುರಸ್ಕಾರ ವಿಜೇತರು, ಯಾವುದೇ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದವರು, ಮುಂತಾದವರ ಮಕ್ಕಳಿಗೆ ಪ್ರವೇಶ ನೀಡುತ್ತಾರೆ. ಇಂತಹ ಮಕ್ಕಳ ವಿದ್ಯಾಭ್ಯಾಸದ ಖರ್ಚು ಅವರ ಪೋಷಕರಿಗೇನೂ ಭಾರವಲ್ಲ, ಬದಲಾಗಿ ಕೇಳಿದಷ್ಟು ಡೊನೇಷನ್ ಕೊಡಲೂ ಸಿಧ್ಧರಿರುತ್ತಾರಷ್ಟೇ ಅಲ್ಲ, ಅದರ ಬಗ್ಗೆ ಯಾವಾಗಲೂ ತುಟಿಪಿಟಕ್ ಎನ್ನುವುದಿಲ್ಲ. ಇಂತಹವರ ಮಕ್ಕಳು ಮುಂದೆ ಖ್ಯಾತಿವಂತರಾಗುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ ಮತ್ತು ಅವರು ನಮ್ಮ ಸಂಸ್ಥೆಯ ಮಾಜಿ ವಿದ್ಯಾರ್ಥಿ ಎಂದು ವಿದ್ಯಾಸಂಸ್ಥೆಯೂ ಹೆಮ್ಮೆಯಿಂದ ಹೇಳಿಕೊಳ್ಳಲು ಮುಂದಾಗಿರುತಾರೆ. ನೋಬೆಲ್  ಮುಂತಾದ ಪುರಸ್ಕಾರ ವಿಜೇತರ ಮತ್ತು ವಿವಿಧ ಕ್ಷೇತ್ರದ ಪರಿಣಿತರ ಮಕ್ಕಳು ತಮ್ಮ ಆಯ್ದ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೆ ಸಿದ್ಧರಾಗಿಯೇ ಇರುತ್ತಾರೆ ಹಾಗೂ ಹಣದ ದಾಹ ಇರುವವರು ಹೇಗೇ ಆದರೂ ಹಣಗಳಿಸಿಯೇ ತೀರುತ್ತಾರೆ.

ಉದ್ಯೋಗಪತಿಗಳ ಮಕ್ಕಳು ಮುಂದೆ ಅಷ್ಟೇ ಪ್ರಖ್ಯಾತರಾಗುತ್ತರೆ ಎನ್ನುವುದು ಕಷ್ಟ ಅಥವಾ ಹೊಸ ಉದ್ಯೋಗ ಪ್ರಾರಂಭಿಸಬಲ್ಲವರು ಅಷ್ಟೇ ಸಫಲರಾಗುತ್ತಾರೆ ಎನ್ನುವುದೂ ಸಹ ಅನಿಶ್ಚಿತ. ಮುಂದಿನ ಫೇಸ್ಪುಕ್ ನಂತಹ ಅತ್ಯಂತ ಸಫಲವಾದ ಸ್ಟಾರ್ಟ್ ಅಪ್ ಧೀರ ಹಾರ್ವರ್ಡಿನಿಂದಲೇ ಬರುತ್ತಾನೆ ಎಂಬುದು ಕೇವಲ ಊಹಾಪೋಹ. ಇದು ಅವರ ನೀತಿಯಲ್ಲಿನ ಒಂದು ಅಪಾಯ (ರಿಸ್ಕ್). ಬಹುರಾಷ್ಟ್ರೀಯ ಕಂಪನಿಯ ಮುಖ್ಯಾಧಿಕಾರಿಗಳು ಸಹ ಅಪಾಯಕರ. ಅದನ್ನು ವಿದ್ಯಾಸಂಸ್ಥೆ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಈಗಿರುವ ಕ್ರೀಡಾಪಟುಗಳು ಮತ್ತು ಸಿನಿಮಾ ನಟ-ನಟಿಯರು ಆಗಲೇ ಹೇರಳ ಹಣ ಸಂಪಾದನೆ ಮಾಡುತ್ತಿರುತ್ತಾರೆ ಮತ್ತು ಅವರಿಗೆ ಪತಿಷ್ಟಿತ ಕಾಲೇಜಿನ ಪದವಿ ಪಡೆಯಲೇಬೇಕು ಎಂಬ ಹುಮ್ಮಸ್ಸು ಅಥವಾ ಸಮಯ ಇರುವುದಿಲ್ಲ ಆದರೆ ತಮ್ಮ ಮಕ್ಕಳನ್ನು ಹಣ ತೆತ್ತು ಒಳ್ಳೆಯ ಕಡೆ ಸೇರಿಸಲು ಸಿದ್ಧರಿರುತ್ತಾರೆ.

ಒಳ್ಳೆಯ ಭವಿಷ್ಯವುಳ್ಳ ಕ್ರೀಡಾಪಟುಗಳನ್ನು ಹುಡುಕುವುದು ಅಂತಹ ಕಷ್ಟಕರವೇನಲ್ಲ, ಅವರಿಗೆ ಕರೆದು ಪ್ರವೇಶ ನೀಡುತ್ತಾರೆ. ಪ್ರಗತಿ ಹೊಂದಿದ ವಿದೇಶದ ರಾಜಕಾರಣಿಗಳ ಮಕ್ಕಳು ಮುಂದೆ ಅಧಿಕಾರಕ್ಕೇರುವ ಸಾಧ್ಯತೆ ಅಷ್ಟೇನೂ ಇಲ್ಲದಿದ್ದರೂ ಭಾರತದಂತಹ ಪ್ರಗತಿಶೀಲ ರಾಜ್ಯಗಳಲ್ಲಿ ಸಾಧ್ಯತೆ ಹೆಚ್ಚಿರುತ್ತದೆ.

ಇಂದಿನ ಜಗತ್ತಿನಲ್ಲಿ ವಂಶಪಾರಂಪರೆಯ ವಾದ ಹೇರಳವಾಗಿದೆ, ಎಲ್ಲಾ ದೇಶದಲ್ಲೂ ಅಡೆತಡೆಯಿಲ್ಲದೆ ನಡೆಯುತ್ತದೆ. ಅಷ್ಟೇನೂ ಬುದ್ಧಿವಂತನಲ್ಲ ಎಂದು ಎಲ್ಲರಿಗೂ ಗೊತ್ತಿದ್ದರೂ ಭಾರತದ ರಾಜಕಾರಣಿಯ ಮಗನಿಗೆ ಕೇಂಬ್ರಿಜ್ನಲ್ಲಿ ಪ್ರವೇಶ ದೊರೆತದ್ದು ಹೇಗೆ ಅಥವಾ ಭಾರತದ ಅತಿ ದೊಡ್ಡ ಉದ್ಯೋಗಪತಿಯ ಎರಡನೆಯ ಮಗ ಅಮೇರಿಕದ ಹಾಲಿ ಅಧ್ಯಕ್ಷ ಹಾಗೂ ಗೂಗಲ್ ಸಂಸ್ಥೆಯ ಹಾಲಿ ಮುಖ್ಯಸ್ಥ ಓದಿದ ವ್ಹಾರ್ಟನ್ ವಿದ್ಯಾಸಂಸ್ಥೆಗೆ ಪ್ರವೇಶ ಗಳಿಸಿದ್ದು ಹೇಗೆ, ಅವರ ಹಾಜರಾತಿ ಸಮರ್ಪಕವಾಗಿತ್ತೇ ಅಥವಾ ಅವರು ಒಳ್ಳೆಯ ಅಂಕ ಪಡೆದು ಉತ್ತೀರ್ಣರಾದರೇ ಎಂದು ಯಾರೂ ತಲೆ ಕೆಡೆಸಿಕೊಳ್ಳುವುದಿಲ್ಲ. ಇಂತಹವರಿಗೆ ಪ್ರವೇಶ ನೀಡುವುದು ಸಂಸ್ಥೆಗೆ ಬಹಳ ಸುಲಭವೂ, ಲಾಭದಾಯಕವೂ ಆಗಿರುತ್ತದೆ. ಭಾರತದಲ್ಲೂ ಡೊನೇಷನ್ ಸೀಟುಗಳು ಸಾರಾಸಗಟಾಗಿ ಮಾರಾಟವಾಗುತ್ತದೆ ಅಥವಾ ಪ್ರಭಾವಶಾಲೀ ವ್ಯಕ್ತಿಗಳಿಗೆ ಕೊಡಲಾಗುತ್ತದೆ. ಅದರಲ್ಲಿ ಸಂಸ್ಥೆಗೆ ಬರುವ ಹಣ ಅಥವಾ ಆಗುವ ಲಾಭವೇ ಮುಖ್ಯವಾಗಿರುತ್ತದೆ ವಿನಃ ಅಂತಹ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಅವರ ಮುಂದಿನ ಭವಿಷ್ಯ ಅಥವಾ ಸಂಸ್ಥೆಯ ಪ್ರಖ್ಯಾತಿ ಅಷ್ಟು ಮಹತ್ವದ್ದಾಗಿರುವುದಿಲ್ಲ.

ಈ “ಹ್ಯಾಪಿ ಬಾಟಮ್ ಕ್ವಾರ್ಟರ್” ನ ಮಧ್ಯದ ಪದ ಗಮನೀಯವಾದದ್ದು. ಈ “ಬಾಟಮ್” ಇರುವುದಕ್ಕೆ ಮುಖ್ಯ ಕಾರಣ ವಿದ್ಯಾಸಂಸ್ಥೆ ತನ್ನ “ಟಾಪ್” 75% ಸೀಟುಗಳನ್ನು ನಿಜವಾದ ಮೇಧಾವಿ ವಿದ್ಯಾರ್ಥಿಗಳಿಗೆ ನೀಡುತ್ತದೆ. ಮೇಧಾವಿ ವಿದ್ಯಾರ್ಥಿಗಳು ಸಂಸ್ಥೆಯಿಂದ ಉತ್ತೀರ್ಣರಾಗಿ ಹೊರ ಹೋಗುವಾಗ ಕೆಳಗಿನ 25% ಸೀಟಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಜೊತೆಗೆ ಖಂಡಿತ ಪೈಪೋಟಿ ಮಾಡುವುದಿಲ್ಲ. ಈ ವಿದ್ಯಾಸಂಸ್ಥೆಗಳು ತಮ್ಮ ಕೆಲವು ಸೀಟುಗಳನ್ನು ಮುಂದೆ ಪ್ರಭಾವಶಾಲಿ ವ್ಯಕ್ತಿಯಾಗಬಲ್ಲವನ ಮೇಲೆ ಜೂಜಾಡಿ ಸ್ವಲ್ಪ ಮಟ್ಟದ “ರಿಸ್ಕ್” ತೆಗೆದುಕೊಳ್ಳುತ್ತವೆ, ಆದರೆ ಅಪಾಯಕ್ಕೆ ತಕ್ಕ ಹಣವಂತೂ ಸಂಸ್ಥೆಯ ಖಾತೆಗೆ ಆಗಲೇ ಜಮಾ ಆಗಿರುತ್ತದೆ. ಮುಂದೆ ಅಂತಹಾ ಅಪಾಯಕಾರಿ ವಿದ್ಯಾರ್ಥಿ 20-30-40 ವರ್ಷದ ನಂತರ, ಯಾವುದೇ ದೇಶದ ಪ್ರಧಾನಿ, ಶ್ರೀಮಂತ ವ್ಯಕ್ತಿ ಆದರೂ ಅಥವಾ ಆಗದಿದ್ದರೂ ಸಹ ಆ ವಿದ್ಯಾಸಂಸ್ಥೆಯ ಹೆಸರು ಕೆಡುವುದಿಲ್ಲ ಅಥವಾ ಅವನು ವಿದ್ಯಾಸಂಸ್ಥೆಯಲ್ಲಿದ್ದಾಗ ಎಂತಹ ವಿದ್ಯಾರ್ಥಿಯಾಗಿದ್ದ ಎಂದು ಯಾರೂ ನೆನಪಿನಲ್ಲಿಡುವುದಿಲ್ಲ.

ಒಟ್ಟಿನಲ್ಲಿ ಇದು ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ದೂರದೃಷ್ಟಿ ಮತ್ತು ಜಾಣತನವಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...