Homeರಂಜನೆಕ್ರೀಡೆಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು! ಭಾರತದ ಇವಿಎಂ ಮತ್ತು ಕ್ರಿಕೆಟ್‍ನ ‘ಝಿಂಗ್’ ಬೇಲ್ಸ್!

ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು! ಭಾರತದ ಇವಿಎಂ ಮತ್ತು ಕ್ರಿಕೆಟ್‍ನ ‘ಝಿಂಗ್’ ಬೇಲ್ಸ್!

- Advertisement -
- Advertisement -

| ಮಲ್ಲಿ |

ಸದ್ಯ ಸುದ್ದಿಯಲ್ಲಿರುವ ವಿಶ್ವಕಪ್ ಕ್ರಿಕೆಟ್‍ನಲ್ಲಿ ‘ಝಿಂಗ್’ ಬೇಲ್ಸ್‍ಗಳು ಅಲ್ಲಾಡುತ್ತಲೇ ಇಲ್ಲ! ಒಮ್ಮೆ ನಮ್ಮ ಬೂಮ್ರಾ ಬಿರುಸಾಗಿ ಎಸೆದಾಗ ಚೆಂಡು ಸ್ಟಂಪ್‍ಗೆ ತಾಗಿತು, ಆದರೆ ‘ಝಿಂಗ್’ ಬೇಲ್ಸ್ ಮಿಸುಕಲೇ ಇಲ್ಲ, ಬೇಲ್ಸ್‍ನಲ್ಲಿರುವ ದೀಪಗಳು ಮಿನುಗಲೂ ಇಲ!. ಹೀಗಾಗಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಓಟಾಗಿಯೂ ಓಟಾಗಲಿಲ್ಲ! ಈ ಬೇಲ್ಸ್‍ಗಳನ್ನು ಕುಟ್ಟಿ ಪುಡಿ ಪುಡಿ ಮಾಡಬೇಕು ಎನಿಸಿರಬೇಕು ಜಸ್ಪ್ರಿತ್ ಬೂಮ್ರಾಗೆ!

ಆದರೆ ಕುಟ್ಟೊಂಗಿಲ್ಲ, ತಟ್ಟಂಗಿಲ್ಲ… ಟೂರ್ನಿ ಆರಂಭವಾದ ಮೇಲೆ ಕನಿಷ್ಠ ಐದು ಸಲವಾದರೂ ‘ಅಳ್ಳಾಡದ’ ಬೇಲ್ಸ್‍ಗಳ ಕಾರಣದಿಂದ ಬೌಲರ್‍ಗಳು ನಿರಾಶರಾಗಿದ್ದಾರೆ. ಒಂಥರಾ ನಮ್ಮ ಇವಿಯಂಗಳಂತೆ ವಿಚಿತ್ರ ವರ್ತನೆ ತೋರುತ್ತಿವೆಯೇ ಈ ‘ಝಿಂಗ್’ ಬೇಲ್ಸ್? ವಿಶ್ವಕಪ್ ಮುಗಿಯುವವರೆಗೂ ಈ ಬೇಲ್ಸ್ ಬದಲಿಸುವುದಿಲ್ಲ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇಳಿದೆ.. ಥೇಟು ನಮ್ಮ ಚುನಾವಣಾ ಆಯೋಗದ ಹಾಗೆಯೇ!

ಇವಿಎಂಗಳನ್ನು ತಿರುಚುವುದು ಸಾಧ್ಯ ಎಂಬುದನ್ನು ಹಲವಾರು ತಜ್ಞರು ದೃಢಪಡಿಸಿದ್ದಾರೆ. ಆದರೆ, ನಮ್ಮ ಚುನಾವಣಾ ಆಯೋಗವು ಜನರಲ್ಲಿನ ಸಂಶಯವನ್ನು ನಿವಾರಿಸುವ ಕೆಲಸವನ್ನು ಮಾಡಲೇ ಇಲ್ಲ. ಚುನಾವಣೆಯ ಮೊದಲ 4 ಹಂತಗಳಲ್ಲಿ 373 ಕ್ಷೇತ್ರಗಳಲ್ಲಿ ವೋಟ್ ಮಾಡಿದ ಮತ್ತು ಕೌಂಟ್ ಆದ ಮತಗಳ ನಡುವೆ 20-30 ಸಾವಿರ ವ್ಯತ್ಯಾಸವಿದ್ದರೂ ನಮ್ಮ ಆಯೋಗ ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ!

ಬ್ಯಾಟ್ಸಮನ್ ಒಬ್ಬನನ್ನು ನೇರ ಔಟ್ ಮಾಡಲು ಸ್ಟಂಪ್ ಮೇಲಿರುವ ಬೇಲ್ಸ್ ಹಾರುವಂತೆ ಅಥವಾ ಸ್ಟಂಪೇ ನೆಲಕ್ಕೆ ಬೀಳಬೇಕು ಎಂಬುದು ಪರಂಪರಾಗತ ನಿಯಮ. ಆದರೆ ಇಲ್ಲಿ ‘ಝಿಂಗ್’ ಮಾತ್ರ ಸ್ಥಾವರದಂತೆ ಅಂಟಿಕೊಂಡು ಬಿಟ್ಟಿದೆ. ಗಂಟೆಗೆ 110 ಮೈಲು ವೇಗದಲ್ಲಿ ಬಂದ ಬಾಲ್ ಸ್ಟಂಪ್‍ಗೆ ಅಪ್ಪಳಿಸಿದರೂ ‘ಝಿಂಗ್’ ಝುಮ್ಮ ಅಂತಾನೇ ಇಲ್ಲ. ಟೂರ್ನಿಯ ಮೊದಲ ಹತ್ತು ದಿನಗಳಲ್ಲೇ ಇಂತಹ 5 ನಿದರ್ಶನ ನಡೆದರೂ, ಐಸಿಸಿ ಮಾತ್ರ ಇಡೀ ಟೂರ್ನಿಮೆಂಟ್‍ವರೆಗೆ ಇದೇ ‘ಝಿಂಗ್-ಡಾಂಗ್’ ಮುಂದುವರೆಸುವುದಾಗಿ ಹೇಳಿದೆ.

‘ಮಿಸುಕದ ಝಿಂಗ್ ಕಾರಣದಿಂದ ಲೈಫ್ ಪಡೆದ ಆಟಗಾರನೇ ಪಂದ್ಯ ಗೆಲ್ಲಿಸಿದರೆ? ಆಗ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು. ಟೂರ್ನಿಯ ಮೊದಲ ಹತ್ತು ದಿನಗಳಲ್ಲಿ ಇಂತಹ ನಿದರ್ಶನಗಳನ್ನು ನೋಡಿದ ಪಾಕಿಸ್ತಾನದ ನಿವೃತ್ತ ವೇಗಿ ಶೋಯಬ್ ಅಖ್ತರ್ ಟ್ವೀಟ್ ಮಾಡಿ.’ ಅಯ್ಯೋ ಅಲ್ಲಾ, ನನ್ನ ಕ್ರಿಕೆಟ್ ಜೀವನದಲ್ಲೇ ಇಂತಹ ಬೇಲ್ಸ್ ನೋಡಿರಲಿಲ್ಲ. ಅದೂ ಪ್ರತಿಷ್ಟಿತ ವಿಶ್ವಕಪ್‍ನಲ್ಲೇ ಹೀಗಾಗುತ್ತಿದೆಯಲ್ಲ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ…

ಈ ಬೇಲ್ಸ್’ಗಳೂ ಪಕ್ಷಪಾತ ಮಾಡ್ತಿವೆಯಾ? ಬೇಕಾದಾಗ ಉರುಳೋದು ಬೇಡವಾದಾಗ ಸ್ಟಂಪ್ಸ್ ತಬ್ಬಿ ಕೂಡೋದು! ಇದನ್ನು ‘ಬೇಲ್ ಫಿಕ್ಸಿಂಗ್’ ಅಂತಾ ಕರೆಯಬಹುದೇ? ಕೆಲವು ಅನುಭವಿಗಳ ಪ್ರಕಾರ, ಈ ಬೇಲ್ಸ್‍ನಲ್ಲಿರುವ ಬ್ಯಾಟರಿಯ ತೂಕದ ಕಾರಣಕ್ಕೆ ಬೇಲ್ಸ್ ಧಡೂತಿಯಾಗಿ ಮಿಸುಗಾಡಲು ಆಗುತ್ತಿಲ್ಲವಂತೆ! ಚುನಾವಣಾ ಆಯೋಗವೇ ಐಸಿಸಿಗೆ ಮಾದರಿಯಾಗಿದೆಯಾ? ಇನ್ನು ಮುಂದೆ ಈ ಝಿಂಗ್ ಬೇಲ್ಸ್ ಮೇಲೆಯೇ ಬೆಟ್ಟಿಂಗ್ ನಡೆಯಲೂ ಬಹುದು!

ಕ್ಲೌಡ್ ಆ್ಯಂಡ್ ರಾಡಾರ್ ತಜ್ಞರನ್ನು ಈ ಬಗ್ಗೆ ನಮ್ಮ ಅಕ್ಷಯಕುಮಾರ್ ಪ್ರಶ್ನಿಸಿದರೆ ಚೆಂದ ಅಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...