Homeಮುಖಪುಟವಿಜ್ಞಾನಿಗಳ ನಿದ್ದೆಗೆಡಿಸಿರುವ ರೇಡಿಯೋ ತರಂಗ ಸೂಸುವ ಅಪರಿಚಿತ ಶಕ್ತಿಪುಂಜ

ವಿಜ್ಞಾನಿಗಳ ನಿದ್ದೆಗೆಡಿಸಿರುವ ರೇಡಿಯೋ ತರಂಗ ಸೂಸುವ ಅಪರಿಚಿತ ಶಕ್ತಿಪುಂಜ

- Advertisement -
- Advertisement -

ವಿಸ್ಮಯಗಳಿಂದ ತುಂಬಿರುವ ನಭೋಮಂಡಲದಲ್ಲಿ ಇತ್ತೀಚೆಗೆ ಕಂಡುಬಂದಿರುವ ವಿದ್ಯಮಾನವೊಂದು ಜಾಗತಿಕವಾಗಿ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆಕಾಶದಲ್ಲಿ ದೈತ್ಯ ಶಕ್ತಿಪುಂಜವಾಗಿ ಕಾಣುವ ಕಾಯವೊಂದರಿಂದ ನಿರಂತರವಾಗಿ ರೇಡಿಯೋ ಸಿಗ್ನಲ್ ಬರುತ್ತಿರುವುದಾಗಿ ಆಸ್ಟ್ರೇಲಿಯಾದ ವಿಜ್ಞಾನಿಗಳು ಮೊದಲ ಬಾರಿಗೆ ಆವಿಷ್ಕರಿಸಿದ್ದರು.

ಆಸ್ಟ್ರೇಲಿಯಾದ ಖಗೋಳ ಭೌತಶಾಸ್ತ್ರಜ್ಞ ನತಾಶಾ ಹರ್ಲಿ-ವಾಕರ್ ಈ ಕೌತುಕವನ್ನು ಆವಿಷ್ಕರಿಸಿದ್ದು, ಈ ರೇಡಿಯೋ ತರಂಗಗಳು ಪ್ರತಿ 18 ನಿಮಿಷ 18 ಸೆಕೆಂಡಿಗೆ ಒಮ್ಮೆ ನಿರಂತರವಾಗಿ ಬಿತ್ತರವಾಗುತ್ತಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಿಚುಕ್ಕಿ; ಬಾಹ್ಯಾಕಾಶದಲ್ಲಿ ಅತ್ಯಂತ ದೊಡ್ಡದಾದ ಸ್ಫೋಟ?

ಗಂಟೆಗೆ ಮೂರು ಬಾರಿ ಬರುತ್ತಿರುವ ರೇಡಿಯೋ ಸಂದೇಶಗಳ ಮೂಲ ಪತ್ತೆಯಾಗದೆ, ಖಗೋಳ ವಿಜ್ಞಾನಿಗಳ ಮಟ್ಟಿಗೆ ಈ ವಿದ್ಯಮಾನ ಅಕ್ಷರಶಃ ಭೂತಚೇಷ್ಟೆ ಕಂಡಂತಾಗಿದೆ ಎಂದು ಹಲವು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹೊಸ ಆವಿಷ್ಕಾರದ ಸುದ್ದಿ ವೈಜ್ಞಾನಿಕ ಸಮುದಾಯದಲ್ಲಿ ಸಂಚಲನವನ್ನು ಸೃಷ್ಟಿಸಿದ್ದು, ವಿಜ್ಞಾನಿಗಳು ಈ ವಿದ್ಯಮಾನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ರೇಡಿಯೋ ತರಂಗಗಳನ್ನು ಬಿಡುಗಡೆ ಮಾಡುತ್ತಿರುವ ಕಾಯವು ಭೂಮಿಯಿಂದ ಸುಮಾರು 4,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದ್ದು, ಬಲವಾದ ಕಾಂತೀಯ ಬಲವನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ‘ಬಾಹ್ಯಾಕಾಶಕ್ಕೆ ಪ್ರವಾಸ ಹೊರಡುವ ಸಮಯ!’- ಇತಿಹಾಸ ನಿರ್ಮಿಸಲಿರುವ ‘ವರ್ಜಿನ್‌ ಗ್ಯಾಲಾಕ್ಟಿಕ್‌’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಮೆಟ್ರೋದಲ್ಲಿ ಕೇಜ್ರಿವಾಲ್‌ಗೆ ಜೀವ ಬೆದರಿಕೆ ಬರಹ; ‘ಪ್ರಧಾನಿ ಕಚೇರಿಯಲ್ಲಿ ಸಂಚು ರೂಪಿಸಲಾಗಿದೆ’ ಎಂದ...

0
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಜೀವ ಬೆದರಿಕೆ ಹಾಕುವ ಬರಹವು ರಾಷ್ಟ್ರ ರಾಜಧಾನಿಯ ರಾಜೀವ್ ಚೌಕ್ ಮತ್ತು ಪಟೇಲ್ ನಗರ ಮೆಟ್ರೋ ನಿಲ್ದಾಣಗಳಲ್ಲಿ ಕಾಣಿಸಿಕೊಂಡಿದ್ದು, ಬಿಜೆಪಿ ವಿರುದ್ಧ ಆಮ್ ಆದ್ಮಿ ಪಕ್ಷದ (ಎಎಪಿ)...