ಹೊಸದಿಲ್ಲಿ: ಭಾರತದ ಜಿಮ್ನಾಸ್ಟಿಕ್ ದೀಪಾ ಕರ್ಮಾಕರ್ ಅವರನ್ನು ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಷನ್ (ಎಫ್‌ಐಜಿ) ಅಮಾನತು ಮಾಡಿದೆ. ಈ ವಿಷಯದ ಕುರಿತು ಭಾರತ ಜಿಮ್ನಾಸ್ಟಿಕ್ಸ್ ಫೆಡರೇಷನ್ ಅಚ್ಚರಿ ವ್ಯಕ್ತಪಡಿಸಿದ್ದು, ತಮಗೆ ಮಾಹಿತಿಯೇ ಇಲ್ಲ ಎಂದೂ ಹೇಳಿದೆ.
ಎಫ್‌ಐಜಿಯ ವೆಬ್‌ಸೈಟ್‌ನಲ್ಲಿ ದೀಪಾ ಅವರ ಹೆಸರು ಅಮಾನತು ಪಟ್ಟಿಯಲ್ಲಿದೆ. ಭಾರತದ ಜಿಮ್ನಾಸ್ಟ್‌ಗಳೆಲ್ಲರ ಹೆಸರುಗಳೆಲ್ಲವೂ ಈ ವೆಬ್‌ಸೈಟ್‌ನಲ್ಲಿವೆ. ಆದರೆ ದೀಪಾ ಅವರ ಹೆಸರಿನ ಮುಂದೆ ಅಮಾನತು ಎಂದು ಗುರುತಿಸಲಾಗಿದೆ.

ಉಳಿದವರೆಲ್ಲರನ್ನೂ ಸಕ್ರಿಯ ಎಂದು ಗುರುತಿಸಲಾಗಿದೆ. 2016ರ ರಿಯೊ ಒಲಿಂಪಿಕ್ಸ್‌ನ ವಾಲ್ಟ್‌ನಲ್ಲಿ ದೀಪಾ ನಾಲ್ಕನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದರು. ಆದರೆ, ಗಾಯದ ಸಮಸ್ಯೆಯಿಂದಾಗಿ ಅವರು 2019 ರಿಂದ ಯಾವುದೇ ಸ್ಪರ್ಧೆಯಲ್ಲಿಯೂ ಭಾಗವಹಿಸಿರಲಿಲ್ಲ.
ಇದನ್ನೂ ಓದಿ: ಈ ಗುಲಾಬಿಯಿಂದ ಏನು ಮಾಡುವುದು?’: ಕೇಂದ್ರ ಸರ್ಕಾರದ ವಿರುದ್ಧ ಉಕ್ರೇನ್‌ನಿಂದ ಹಿಂತಿರುಗಿದ ವಿದ್ಯಾರ್ಥಿ ಆಕ್ರೋಶ
ಎಫ್‌ಐಜಿಯಿಂದ ಈ ಕುರಿತು ನಮಗೆ ಯಾವುದೇ ಸಂದೇಶ ಬಂದಿಲ್ಲ. ಅವರನ್ನು ಅಮಾನತಿನಲ್ಲಿಡಲು ಕಾರಣವೇನು ಎಂಬುದೂ ಗೊತ್ತಿಲ್ಲ. ಇದು ಸತ್ಯವೋ ಅಥವಾ ಆಕಸ್ಮಿಕವಾಗಿ ನಡೆದಿರುವುದೋ ತಿಳಿದಿಲ್ಲ. ಎಫ್‌ಐಜಿಯೊಂದಿಗಿನ ಮಾತುಕತೆಯಿಂದಷ್ಟೇ ತಿಳಿಯಬೇಕಿದೆ’ ಎಂದು ಜಿಎಫ್‌ಐ ಅಧ್ಯಕ್ಷ ಸುಧೀರ್ ಮಿತ್ತಲ್ ತಿಳಿಸಿದ್ದಾರೆ.
ಅಗರ್ತಲಾದಲ್ಲಿರುವ ದೀಪಾ ಮತ್ತು ಅವರ ಕೋಚ್ ವಿಶ್ವೇಶ್ವರ್ ನಂದಿ ಅವರಿಂದ ಮಾಹಿತಿ ಪಡೆಯಲು ಮಾಡಿದ ಪ್ರಯತ್ನಗಳು ಫಲಿಸಲಿಲ್ಲ. ಅವರು ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಅಶಿಸ್ತು ಅಥವಾ ನಿಯಮ ಉಲ್ಲಂಘನೆಗಾಗಿ ಎಫ್‌ಐಜಿ ಇಂತಹ ಕ್ರಮ ತೆಗೆದುಕೊಂಡಿರಬೇಕು. ಆದರೆ ಅಂತಹ ಯಾವುದೇ ಆರೋಪ ಅವರ ಮೇಲಿಲ್ಲ. ಆ ಕಾರಣಕ್ಕೂ ಅವರ ಮೇಲೆ ಅಮಾನತು ಹಾಕಿರುವ ಸಾಧ್ಯತೆಗಳಿಲ್ಲ‘ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಎಟಿ&ಎಸ್ ಕಾರ್ಮಿಕರ ಧರಣಿಗೆ 365 ದಿನಗಳು ತುಂಬಿದ ಸಂದರ್ಭದಲ್ಲಿ


