Homeಮುಖಪುಟಉಕ್ರೇನ್‌- ರಷ್ಯಾ ವಾರ್‌: ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ

ಉಕ್ರೇನ್‌- ರಷ್ಯಾ ವಾರ್‌: ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ

ಜಪೋರಿಝಿಯಾ ಪರಮಾಣು ಸ್ಥಾವರ ಸ್ಫೋಟಿಸಿದರೆ, ಚೋರ್ನೋಬಿಲ್‌ಗಿಂತ 10 ಪಟ್ಟು ದೊಡ್ಡ ದುರಂತವಾಗುತ್ತದೆ: ಉಕ್ರೇನ್‌

- Advertisement -
- Advertisement -

ಕೀವ್‌: ರಷ್ಯಾ ದಾಳಿಯ ಬಳಿಕ ಉಕ್ರೇನ್‌ನಲ್ಲಿರುವ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ರಷ್ಯಾದ ಪಡೆಗಳು ಅಗ್ನಿಶಾಮಕ ದಳದ ಮೇಲೆ ಗುಂಡಿನ ದಾಳಿ ಮುಂದುವರಿಸಿವೆ ಎಂದು ಜಪೋರಿಝಿಯಾ ಪರಮಾಣು ಸ್ಥಾವರದ ಬಳಿಯ ಪಟ್ಟಣದ ಮೇಯರ್ ತಿಳಿಸಿದ್ದಾರೆ.

“ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾದ ಪಡೆಗಳು ಕ್ಷಪಣಿ ದಾಳಿ ನಡೆಸಿದ ಪರಿಣಾಮವಾಗಿ ಬೆಂಕಿ ಕಾಣಿಸಿಕೊಂಡಿದೆ” ಎಂದು ಇಲ್ಲಿನ ವಕ್ತಾರ ಆಂಡ್ರೇ ತುಜ್ ವಿಡಿಯೊ ಮೂಲಕ ತಿಳಿಸಿದ್ದಾರೆ. ಯಾವುದೇ ವಿಕಿರಣ ಘಟನೆ ಸಂಭವಿಸಬಹುದೇ ಎಂದು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ತಕ್ಷಣದಲ್ಲಿ ವಿಕಿರಣ ಘಟನೆ ವರದಿಯಾಗಿಲ್ಲ. ಅಗತ್ಯ ಉಪಕರಣಗಳು ಬೆಂಕಿಗೆ ಸಿಲುಕಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಆಕ್ರಮಣಕಾರಿ ಪಡೆಗಳು ಮುಂದೆ ಏನು ಮಾಡಬಹುದು ಎಂಬುದು ಸ್ಪಷ್ಟವಾಗಿಲ್ಲ.

ಚೆರ್ನೋಬಿಲ್ ಪರಮಾಣು ದುರಂತವನ್ನು “ಪುನರಾವರ್ತನೆ” ಮಾಡಲು ರಷ್ಯಾ ಪ್ರಯತ್ನಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ. ಜಪೋರಿಝಿಯಾ ಪರಮಾಣು ಸ್ಥಾವರದಲ್ಲಿನ ಬಿಕ್ಕಟ್ಟಿನ ಬಗ್ಗೆ ಯುಎಸ್ ಅಧ್ಯಕ್ಷ ಜೋ ಬಿಡನ್ ಸೇರಿದಂತೆ ಅಂತಾರಾಷ್ಟ್ರೀಯ ನಾಯಕರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

“ರಷ್ಯಾ ಹೊರತುಪಡಿಸಿ ಯಾವುದೇ ದೇಶವು ಪರಮಾಣು ಶಕ್ತಿ ಘಟಕಗಳ ಮೇಲೆ ಗುಂಡು ಹಾರಿಸಿಲ್ಲ” ಎಂದು ಝೆಲೆನ್ಸ್ಕಿ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಬೆಂಕಿ ಕಾಣಿಸಿಕೊಂಡ ನಂತರ ದಾಳಿಯನ್ನು ನಿಲ್ಲಿಸುವಂತೆ ರಷ್ಯಾದ ಪಡೆಗಳಿಗೆ ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಶುಕ್ರವಾರ ಕರೆ ನೀಡಿದ್ದಾರೆ.

ಆಗ್ನೇಯ ಉಕ್ರೇನ್‌ನ ಕೈಗಾರಿಕಾ ನಗರವಾದ ಜಪೋರಿಝಿಯಾದಲ್ಲಿನ ಈ ಸ್ಥಾವರವು ದೇಶದ ಪರಮಾಣು ಶಕ್ತಿಯ ಅಂದಾಜು 40 ಪ್ರತಿಶತವನ್ನು ಪೂರೈಸುತ್ತದೆ.

“ಜಪೋರಿಝಿಯಾ ಸ್ಥಾವರ ಸ್ಫೋಟಿಸಿದರೆ, ಚೋರ್ನೋಬಿಲ್‌ಗಿಂತ 10 ಪಟ್ಟು ದೊಡ್ಡ ದುರಂತವಾಗುತ್ತದೆ. ರಷ್ಯನ್ನರು ತಕ್ಷಣವೇ ಬೆಂಕಿಯನ್ನು ನಿಲ್ಲಿಸಬೇಕು.  ಅಗ್ನಿಶಾಮಕ ಸಿಬ್ಬಂದಿಗೆ ಅವಕಾಶ ನೀಡಬೇಕು. ಭದ್ರತಾ ವಲಯವನ್ನು ಸ್ಥಾಪಿಸಬೇಕು” ಎಂದು ಕುಲೇಬಾ ಟ್ವೀಟ್ ಮಾಡಿದ್ದಾರೆ.

ರಷ್ಯಾದ ಪಡೆಗಳು “ಎಲ್ಲಾ ಕಡೆಯಿಂದ” ಗುಂಡು ಹಾರಿಸುತ್ತಿವೆ ಎಂದು ಅವರು ಬರೆದಿದ್ದಾರೆ.

1986ರ ಚೆರ್ನೋಬಿಲ್ ದುರಂತದ ಸ್ಥಳವನ್ನು ಒಳಗೊಂಡಂತೆ ಉಕ್ರೇನ್‌ನ ಪರಮಾಣು ಸ್ಥಳಗಳಲ್ಲಿನ ಎಲ್ಲಾ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಯುಎನ್‌ನ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು ವಿಶ್ವಸಂಸ್ಥೆಯಲ್ಲಿ ಈಗಾಗಲೇ ರಷ್ಯಾವನ್ನು ಒತ್ತಾಯಿಸಿದೆ.


ಇದನ್ನೂ ಓದಿರಿ: ಉಕ್ರೇನ್‌- ರಷ್ಯಾ ಯುದ್ಧ: ಭಾರತೀಯ ವಿದ್ಯಾರ್ಥಿಯ ಮೇಲೆ ಗುಂಡಿನ ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...