Homeಅಂಕಣಗಳುಭಾರತದ ಪತ್ರಕರ್ತರು ತುರ್ತಾಗಿ ಒಂದು ಸತ್ಯವನ್ನು ಅರ್ಥಮಾಡಿಕೊಳ್ಳಲೇಬೇಕಿದೆ ನಾವೀಗ ಕೆಳಗೆ ಕುಸಿದಿದ್ದೇವೆ

ಭಾರತದ ಪತ್ರಕರ್ತರು ತುರ್ತಾಗಿ ಒಂದು ಸತ್ಯವನ್ನು ಅರ್ಥಮಾಡಿಕೊಳ್ಳಲೇಬೇಕಿದೆ ನಾವೀಗ ಕೆಳಗೆ ಕುಸಿದಿದ್ದೇವೆ

- Advertisement -
- Advertisement -

ಸ್ವಾತಂತ್ರ್ಯಾ ನಂತರದಲ್ಲಿ ಈ ದೇಶ ಎಷ್ಟು ಗೊಂದಲ, ಗಲಿಬಿಲಿಗೆ ಈಡಾಗಲಿಕ್ಕೆ ಸಾಧ್ಯವೋ ಅದಕ್ಕೆಲ್ಲವೂ ಈಗ ಈಡಾಗುತ್ತಿದೆ. ಜನ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡಿದ್ದಾರೆ, ತಮ್ಮ ಆದ್ಯತೆಗಳನ್ನು ಬುಡಮೇಲು ಮಾಡಿಕೊಂಡಿದ್ದಾರೆ. ಹಾಗಾಗಿ ಇಲ್ಲಿ ದುರಂತವೂ ವಿಜೃಂಭಿಸುತ್ತಿದೆ, ವೈಭವಿಸುತ್ತಿದೆ. ದೇಶವೊಂದರ ಸಾಗುವಿಕೆಯಲ್ಲಿ ಇಂಥಾ ಸನ್ನಿವೇಶಗಳು ಸಹಜವಿರಬಹುದು, ಆದರೆ ಭಾರತದ ಮಟ್ಟಿಗೆ ಆ ಸಹಜವನ್ನೂ ಅಸಹಜವಾಗಿ ಹೇರಲಾಗುತ್ತಿರೋದು ದುರಂತ. ಬಹುಶಃ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗಲೂ ಈ ದೇಶಕ್ಕೆ ಒಂದು ಸ್ಪಷ್ಟತೆಯಿತ್ತು. ಆ ಸ್ಪಷ್ಟತೆಯಿಂದಲೇ ಜೆಪಿ ಚಳುವಳಿ ಹುಟ್ಟಿಬಂತು. ಆ ಸ್ಪಷ್ಟತೆಯಿಂದಲೇ ಹಲವು ಹತ್ತು ಕ್ರಾಂತಿಕಾರಿ ಯೋಜನೆಗಳ ಹೊರತಾಗಿಯೂ ಇಂದಿರಾ ಸೋತು ಮೂಲೆ ಸೇರಬೇಕಾಯ್ತು. ಅಂಥಾ ಸ್ಪಷ್ಟತೆಗೆ ಕಾರಣವಾದದ್ದರಲ್ಲಿ ಅಂದಿನ ಮಾಧ್ಯಮಗಳು ವೃತ್ತಿನಿಷ್ಠೆಗೆ ಕಟ್ಟುಬಿದ್ದದ್ದೂ ಒಂದು ಕಾರಣ. ಆದರೆ ಈಗ ಮಾಧ್ಯಮಗಳೇ ಸ್ಪಷ್ಟತೆಯನ್ನು ಕಳೆದುಕೊಂಡು ವೃತ್ತಿನಿಷ್ಠೆಯನ್ನು ಮಣ್ಣು ಪಾಲಾಗಿಸಿವೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂಬ ಹೆಗ್ಗಳಿಕೆಯ ಮಾಧ್ಯಮ ಪ್ರಜಾಪ್ರಭುತ್ವವನ್ನು ರಕ್ಷಿಸುವುದಿರಲಿ, ಸ್ವತಃ ತನ್ನನ್ನೇ ಕಾಪಾಡಿಕೊಳ್ಳಲಾರದಷ್ಟು ದುಸ್ಥಿತಿಗೆ ಬಂದು ತಲುಪಿದೆ. ಪತ್ರಕರ್ತರ ಮೇಲೆ ಹಲ್ಲೆಗಳು ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ. ತಮ್ಮ ಮೇಲಿನ ಹಲ್ಲೆಗಳನ್ನು ಪ್ರತಿಭಟಿಸಲಾರದಷ್ಟು ಪತ್ರಿಕೋದ್ಯಮ ಸೈದ್ಧಾಂತಿಕ ರಾಜಕಾರಣದ ಗುಲಾಮನಾಗಿರುವುದು ಈ ನೆಲದ ದುರಂತವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದು ಅದನ್ನೇ ಒತ್ತಿಒತ್ತಿ ಹೇಳುತ್ತಿದೆ.

ಏಪ್ರಿಲ್ 2019 ರಲ್ಲಿ ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ (ಗಡಿರಹಿತ ಪತ್ರಕರ್ತರು) ಎನ್ನುವ ಅಂತರರಾಷ್ಟ್ರೀಯ ಸಂಸ್ಥೆಯು ತನ್ನ ವರದಿಯನ್ನು ಬಿಡುಗಡೆ ಮಾಡಿತು. ಈ ವರದಿಯಲ್ಲಿ ವಿಶ್ವದ 180 ದೇಶಗಳನ್ನು ಆಯಾ ದೇಶಗಳ ಅಭಿವ್ಯಕ್ತಿ ಸ್ವಾತಂತ್ರದ ಆಧಾರದ ಮೇಲೆ ಕ್ರಮಾಂಕಗಳನ್ನು ನೀಡಲಾಗಿದೆ. ಭಾರತವು ಆ 180 ದೇಶಗಳಲ್ಲಿ 140ನೇ ಸ್ಥಾನದಲ್ಲಿದೆ; ಪಾಕಿಸ್ತಾನಕ್ಕಿಂತ ಕೇವಲ ಎರಡು ಸೂಚ್ಯಾಂಕ ಮುಂದಿದೆ. ಕಳೆದ ಮೂರು ವರ್ಷಗಳಲ್ಲಿ ಎರಡು ಸ್ಥಾನ ಕೆಳಕ್ಕೆ ಕುಸಿದಿರುವುದು ನಿಜಕ್ಕೂ ನಾವು ತಲೆ ತಗ್ಗಿಸಬೇಕಾದ ಸಂಗತಿ.
ಈ ವರದಿಗನುಗುಣವಾಗಿ, ವಿಶ್ವಾದ್ಯಂತ ಪತ್ರಕರ್ತರ ವಿರುದ್ಧ ರಾಜಕೀಯ ಮುಖಂಡರು ಹೆಚ್ಚೆಚ್ಚು ದ್ವೇಷವನ್ನು ಕಾರುತ್ತಿದ್ದಾರೆ. ಹಾಗಾಗಿ ಪತ್ರಕರ್ತರು ಅಪಾಯದ ಮತ್ತು ಆತಂಕದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಪತ್ರಕರ್ತರಿಗೆ ಸುರಕ್ಷಿತವಾಗಿರುವ ದೇಶಗಳ ಸಂಖ್ಯೆ ಕ್ಷೀಣಿಸಿದೆ ಹಾಗೂ ಮಾಧ್ಯಮದ ಹಿಡಿತವು ಸರ್ವಾಧಿಕಾರದ ಆಡಳಿತದ ಕೈಯಲ್ಲಿ ಹಸ್ತಾಂತರವಾಗುತ್ತಿದೆ.

ಏಷಿಯಾ ಪೆಸಿಫಿಕ್ ಪ್ರದೇಶದಲ್ಲಿ ನಿರಂಕುಶ ಆಳ್ವಿಕೆಯ ಪ್ರೊಪಗಾಂಡಾ, ಸೆನ್ಸರ್‍ಶಿಪ್, ಬೆದರಿಕೆ, ದೈಹಿಕ ಹಿಂಸೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ಹೆಚ್ಚುತ್ತಿದೆ. ಇದರೊಂದಿಗೆ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯ ದೊಡ್ಡ ಮಟ್ಟದಲ್ಲಿ ಪ್ರಚಾರವೂ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಫ್ಘಾನಿಸ್ತಾನ್ ಭಾರತ ಮತ್ತು ಪಾಕಿಸ್ತಾನದಲ್ಲಿ ಕೊಲೆಯಾದ ಪತ್ರಕರ್ತರ ಸಂಖ್ಯೆ ಹೆಚ್ಚಿದೆ. ಬೆದರಿಕೆಗಳು, ಅವಮಾನ ಮತ್ತು ಹಲ್ಲೆಗಳು ಅನೇಕ ದೇಶದ ಪತ್ರಕರ್ತರಿಗೆ ಮಾಮೂಲಾಗಿದೆ.

ಭಾರತದ ಪತ್ರಕರ್ತರು ಪೊಲೀಸ್‍ರಿಂದ ಹಿಂಸೆ ಮತ್ತು ಕಿರುಕುಳ ಅನುಭವಿಸುವುದಲ್ಲದೇ ರಾಜಕೀಯ ಬೆದರಿಕೆಗಳಿಗೂ ಒಳಗಾಗುತ್ತಿದ್ದಾರೆ ಎನ್ನುತ್ತಿದೆ ಆ ವರದಿ. 2018ರಲ್ಲಿ ಕನಿಷ್ಠ ಆರು ಭಾರತೀಯ ಪತ್ರಕರ್ತರ ಕೊಲೆಯಾಯಿತು, ಈ ಕೊಲೆಗಳು ಅವರ ವೃತ್ತಿಗೆ ಸಂಬಂಧಪಟ್ಟವಾಗಿದ್ದವು. ಈ ಕೊಲೆಗಳಿಂದ ಭಾರತೀಯ ಪತ್ರಕರ್ತರು ಎದುರಿಸುತ್ತಿರುವ ಅದರಲ್ಲೂ ವಿಶೇಷವಾಗಿ ಇಂಗ್ಲೀಷ್ ಹೊರತುಪಡಿಸಿ ಪ್ರಾದೇಶಿಕ ಭಾಷೆಗಳ ಪತ್ರಕರ್ತರು ಎದುರಿಸುತ್ತಿರುವ ಅಪಾಯವನ್ನು ತೋರಿಸುತ್ತಿವೆ. ವಿಪರ್ಯಾಸವೆಂದರೆ, ಪತ್ರಕರ್ತರನ್ನು ಟ್ರೋಲ್ ಮಾಡುವಂತಹ ವ್ಯಕ್ತಿಗಳ ಸೋಶಿಯಲ್ ಮೀಡಿಯಾ ಅಕೌಂಟ್‍ಗಳನ್ನು ಸ್ವತಃ ನಮ್ಮ ಪ್ರಧಾನಿಗಳೇ ಫಾಲೋ ಮಾಡುತ್ತಿದ್ದಾರೆ. ಇದರ ಪರಿಣಾಮವೆಂದರೆ 2019ರಿಂದೀಚೆಗೆ, ಅಂದರೆ ಲೋಕಸಭಾ ಚುನಾವಣೆಗೂ ಮುನ್ನ ಪತ್ರಕರ್ತರ ಮೇಲಿನ ದಾಳಿ ಹೆಚ್ಚಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಹಿಂದುತ್ವದ ಸಿದ್ಧಾಂತಕ್ಕೆ ಒಪ್ಪದ ವಿಷಯಗಳ ಬಗ್ಗೆ ಬರೆಯುವ, ಮಾತನಾಡುವ ಧೈರ್ಯ ತೋರಿಸಿದ ಪತ್ರಕರ್ತರನ್ನು ಕೊಲೆ ಮಾಡುವ ಕರೆ ಕೊಟ್ಟು ಅವರ ವಿರುದ್ಧ ವ್ಯವಸ್ಥಿತವಾದ ದ್ವೇಷ ಪ್ರಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದನ್ನು ಈ ವರದಿ ಎತ್ತಿಹಿಡಿದಿದೆ. ಅದರಲ್ಲೂ ಮಹಿಳಾ ಪತ್ರಕರ್ತರ ವಿರುದ್ಧದ ದ್ವೇಷ ಪ್ರಚಾರ ಅತ್ಯಂತ ಕೆಟ್ಟದಾಗಿತ್ತು. ಪೊಲೀಸ್ ವ್ಯವಸ್ಥೆ ಮತ್ತು ಸರಕಾರಗಳು ತಮ್ಮ ಸರಕಾರದ ಬಗ್ಗೆ ವಿಮರ್ಶಾತ್ಮಕವಾದ ಪತ್ರಕರ್ತರನ್ನು ಸುಮ್ಮನಾಗಿಸಲು ದೇಶದ್ರೋಹ ಮತ್ತು ಕ್ರಿಮಿನಲ್ ಮಾನನಷ್ಟದಂತಹ ಪುರಾತನ ಕಾಲದ ಕಾನೂನುಗಳನ್ನು ಬಳಸುತ್ತಿವೆ. ಮಾವೋವಾದಿಗಳ ಪ್ರಾಬಲ್ಯವಾಗಿರುವ ಪ್ರದೇಶಗಳಲ್ಲಿ ಮತ್ತು ಕಾಶ್ಮೀರದಿಂದ ಪತ್ರಕರ್ತರು ವರದಿ ಮಾಡುವುದೇ ದುಸ್ತರ ಕೆಲಸವಾಗಿದೆ. ಅನೇಕ ಸಲ ಸರಕಾರಗಳ ನಿರ್ದೇಶನದಂತೆ POTA ಮತ್ತು UAPA ದಂತಹ ಕಠೋರ ಕಾನೂನುಗಳ ಅಡಿಯಲ್ಲಿ ಪತ್ರಕರ್ತರು ಬಂಧನಕ್ಕೊಳಗಾಗುವುದೂ ಭಾರತದಲ್ಲಿ ಕಂಡುಬಂದಿದೆ.

ರಾಜಕೀಯ ಒತ್ತಡದಲ್ಲಿ ಪತ್ರಕರ್ತರ ಮೇಲೆ ದಾಳಿಗಳು ಮತ್ತು ಬೇಕಾಬಿಟ್ಟಿಯಾಗಿ ಆಗುವ ಬಂಧನಗಳ ಬಗ್ಗೆ ಈ ವರದಿ ಪ್ರಕಟವಾದ ನಂತರ ಚರ್ಚೆಯಾಗುತ್ತಿದೆ. ಆತಂಕದ ವಾತಾವರಣದಿಂದ ಬಹುತೇಕ ಮಾಧ್ಯಮ ಸಂಸ್ಥೆಗಳು ಸರಕಾರದ ಮುಖವಾಣಿಯಾಗಿ ಬದಲಾಗಿವೆ. ಸರಕಾರವನ್ನು, ಅದರ ನೀತಿಗಳನ್ನು ಪ್ರಶ್ನಿಸುವ, ಹಗರಣಗಳನ್ನು ಬಯಲಿಗೆಳೆಯುವ ಹಾಗೂ ಜನರ ಸಮಸ್ಯೆಗಳನ್ನು ಎತ್ತಿಹಿಡಿಯುವ ಪತ್ರಕರ್ತರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತದೆ ಹಾಗೂ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಅನೇಕರಿಗೆ ಕೊಲೆ ಬೆದರಿಕೆಗಳೂ ಸಾಮಾನ್ಯವಾಗಿವೆ.

ಇಂತಹ ಆತಂಕದ ಮತ್ತು ದಾಸ್ಯಮನೋಭಾವದ ವಾತಾವರಣದಲ್ಲಿ ಜನರ ಸಮಸ್ಯೆಗಳನ್ನು ಎತ್ತಿಹಿಡಿಯುವವರು ಯಾರು? ಭಾರತೀಯ ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕನ್ನು ನೀಡುತ್ತದೆ ಹಾಗೂ ಸಂವಿಧಾನದ 21ನೇ ಪರಿಚ್ಛೇದದಲ್ಲಿ ಜೀವ ಮತ್ತು ವೈಯಕ್ತಿಕ ಸ್ವಾತಂತ್ರದ ಹಕ್ಕನ್ನು ನೀಡಲಾಗಿದೆ. ಆದರೆ ಪತ್ರಕರ್ತರ ರಕ್ಷಣೆಗಾಗಿ ಯಾವ ಕಾನೂನು ಕಾಣುತ್ತಿಲ್ಲ.
ಪ್ರಜಾಪ್ರಭುತ್ವದ ಮುಖ್ಯ ಆಧಾರಸ್ತಂಭ ಮುಕ್ತ ಪತ್ರಿಕೋದ್ಯಮ ಹಾಗೂ ಈ ಆಧಾರಸ್ಥಂಭ ಕಳಚಿಬೀಳದಂತೆ ನೋಡಿಕೊಳ್ಳುವುದು ನಾಗರಿಕರ ಕರ್ತವ್ಯವಾಗಿದೆ. ನಿಜವಾದ ಪತ್ರಕರ್ತರ ಮತ್ತು ಪತ್ರಿಕೋದ್ಯಮದ ವಿಷಯವನ್ನು ಎತ್ತಿಹಿಡಿಯಬೇಕಾದ ಸಮಯ ಬಂದಿದೆ.
ಒಂದು ಮಾತು ಹೇಳಲೇಬೇಕು, ಈ ಎಲ್ಲಾ ಆತಂಕ ಎದುರಿಸುತ್ತಿರೋದು, ಹಲ್ಲೆಗಳನ್ನು ಅನುಭವಿಸುತ್ತಿರೋದು ಜನರ ಪರವಾಗಿ ದನಿ ಎತ್ತುತ್ತಿರುವ, ಆಡಳಿತಗಾರರನ್ನು ಪ್ರಶ್ನಿಸುತ್ತಿರುವ ಪತ್ರಿಕೋದ್ಯಮ. ಬಲಿಷ್ಠ ಪ್ರಭುತ್ವದೊಂದಿಗೆ ರಾಜಿ ಮಾಡಿಕೊಂಡ ಪತ್ರಿಕೋದ್ಯಮ ಬೆಚ್ಚಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...