ಯುಪಿಯಲ್ಲಿ ಬಿಜೆಪಿಯ ಗೆಲುವಿಗೆ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕಿ ಮಾಯಾವತಿ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಸಹಾಯ ಮಾಡಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದಕ್ಕೆ ಅವರಿಬ್ಬರಿಗೂ ಪದ್ಮವಿಭೂಷಣ ಹಾಗೂ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ರಾವತ್ ಸಲಹೆ ನೀಡಿದ್ದಾರೆ.
“ಅಖಿಲೇಶ್ ಯಾದವ್ 42 ರಿಂದ 125 ಹೆಚ್ಚಿಸಿ ಮೂರು ಪಟ್ಟು ಸ್ಥಾನಗಳನ್ನು ಹೆಚ್ಚಿಸಿದ್ದಾರೆ. ಆದರೆ, ಬಿಜೆಪಿಯ ಗೆಲುವಿಗೆ ಮಾಯಾವತಿ ಮತ್ತು ಓವೈಸಿ ಕೊಡುಗೆ ನೀಡಿದ್ದಾರೆ. ಆದ್ದರಿಂದ ಅವರಿಗೆ ಪದ್ಮವಿಭೂಷಣ, ಭಾರತ ರತ್ನ ನೀಡಬೇಕು” ಎಂದು ರಾವತ್ ಹೇಳಿದ್ದಾರೆ.
ಬಿಎಸ್‌ಪಿ ಮತ್ತು ಎಐಎಂಐಎಂ ಪಕ್ಷಗಳು ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಲು ಬೇಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿಯ “ಬಿ” ಟೀಮ್‌ಗಳು ಎಂದು ವಿರೋಧ ಪಕ್ಷದ ಅನೇಕ ಜನರು ಆರೋಪಿಸುತ್ತಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಪಕ್ಷ 111 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅವರ ನೇತೃತ್ವದ ಮೈತ್ರಿಕೂಟವು 125 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
ಮಾಯಾವತಿಯವರ ಪಕ್ಷವು ಚುನಾವಣೆಯಲ್ಲಿ 12.8% ರಷ್ಟು ಮತಗಳನ್ನು ಪಡೆದುಕೊಂಡಿದ್ದು, ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಂಡಿದೆ. AIMIM ತನ್ನ ಖಾತೆಯನ್ನು ತೆರೆಯಲು ವಿಫಲವಾಗಿದ್ದು, ಚುನಾವಣೆಯಲ್ಲಿ 0.49% ಮತಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಯುಪಿ ಫಲಿತಾಂಶ 2024ರ ಚುನಾವಣೆಗೆ ದಿಕ್ಸೂಚಿ ಎಂದ ಮೋದಿ: ಇದು ಸುಳ್ಳು ನಿರೂಪಣೆ ಎಂದ ಪ್ರಶಾಂತ್ ಕಿಶೋರ್



ತಮ್ಮ ಸ್ವಾರ್ಥ ಮತ್ತು ಸ್ವಪ್ರತಶ್ಟೆಗಳನ್ನು ಬದಿಗಿಟ್ಟು, ಎಲ್ಲಿಯವರೆಗೆ ಎಲ್ಲಾ ವಿರೋಧ ಪಕ್ಷಗಳು ಒಂದಾಗುವುದಿಲ್ಲವೋ, ಅಲ್ಲಿಯವರೆಗೆ ಬಿ.ಜೆ.ಪಿ.ಯನ್ನು ಸೋಲಿಸುವುದು ಸಾದ್ಯವಿಲ್ಲ.