ಸಿರಿಸಾದಿಂದ ಆಕಸ್ಮಿಕವಾಗಿ ಹಾರಿದ ನಿರಾಯುಧ ಸೂಪರ್‌ಸಾನಿಕ್ ಕ್ಷಿಪಣಿಯೊಂದು ಬುಧವಾರ ಸಂಜೆ ಪಾಕಿಸ್ತಾನದ 124 ಕಿ.ಮೀ ದೂರದ ಭೂಪ್ರದೇಶಕ್ಕೆ ಬಿದ್ದಿದೆ ಎಂದು ಭಾರತೀಯ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ರಕ್ಷಣಾ ಸಚಿವಾಲಯವು ಆಗಿರುವ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದು, ಇದು ತಾಂತ್ರಿಕ ದೋಷ ಎಂದು ವಿವರಿಸಿದೆ.
2022ರ ಮಾರ್ಚ್ 9ರಂದು ದಿನನಿತ್ಯದ ನಿರ್ವಹಣೆಯ ವೇಳೆ ತಾಂತ್ರಿಕ ದೋಷದಿಂದಾಗಿ ಕ್ಷಿಪಣಿಯು ಆಕಸ್ಮಿಕವಾಗಿ ಉಡಾವಣೆಯಾಗಿದೆ. ಸರಕಾರವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯವಾಗಿದೆ ಎಂದು ಅದು ತಿಳಿಸಿದೆ.
ಇದಕ್ಕೂ ಮುನ್ನ ಶುಕ್ರವಾರದಂದು, ಪಾಕಿಸ್ತಾನದ ಆಡಳಿತದಿಂದ ಭಾರತದ ಉಸ್ತುವಾರಿಗಳನ್ನು ಕರೆಸಿ, ಭಾರತದ ವಾಯುಪ್ರದೇಶದ ಅಪ್ರಚೋದಿತ ಉಲ್ಲಂಘನೆಯ ಬಗ್ಗೆ ತಮ್ಮ ಪ್ರತಿಭಟನೆಯನ್ನು ತಿಳಿಸಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಕಚೇರಿಯು ಹೊಸದಿಲ್ಲಿಗೆ ‘ಅಹಿತಕರ ಪರಿಣಾಮಗಳ’ ಎಚ್ಚರಿಕೆಯನ್ನು ಬಿಡುಗಡೆ ಮಾಡಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕರೆ ನೀಡಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಸಂಸತ್‌ನಲ್ಲಿ ಮೋದಿ ಮೋದಿ ಎಂಬ ಘೋಷಣೆ ಕೂಗಿದ್ದು ನಿಜವೇ?
ಗುರುವಾರದಂದು ಪಾಕಿಸ್ತಾನವು ಕ್ಷಿಪಣಿಯನ್ನು ಉಲ್ಲೇಖಿಸಿ, “ಅದು 40,000 ಅಡಿ ಎತ್ತರದಲ್ಲಿ ಹಾರುತ್ತಿತ್ತು” ಎಂದು ಹೇಳಿಕೊಂಡಿದೆ. ಕ್ಷಿಪಣಿಯು ಭಾರತ ಮತ್ತು ಪಾಕಿಸ್ತಾನಿ ವಾಯುಪ್ರದೇಶದ ಪ್ರಯಾಣಿಕರ ವಿಮಾನಗಳಿಗೆ ಮತ್ತು ಭೂಪ್ರದೇಶದ ನಾಗರಿಕ ಆಸ್ತಿಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಅದು ತಿಳಿಸಿದೆ.
ಪಾಕಿಸ್ತಾನಿ ಸಶಸ್ತ್ರ ಪಡೆಗಳ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‌ಪಿಆರ್) ಮಹಾನಿರ್ದೇಶಕ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಅವರು, “ಭಾರತೀಯ ವಾಯು ಪ್ರದೇಶದೊಳಗಿನಿಂದ ಅತಿ ವೇಗದ ಹಾರುವ ವಸ್ತುವನ್ನು ಪಾಕಿಸ್ತಾನಿ ವಾಯುಪಡೆಯ ವಾಯು ರಕ್ಷಣಾ ಕಾರ್ಯಾಚರಣೆ ಕೇಂದ್ರವು ಗುರುತಿಸಿದೆ. ಇದು ಹಠಾತ್ತನೆ ಪಾಕಿಸ್ತಾನಿ ಪ್ರದೇಶದ ಕಡೆಗೆ ಚಲಿಸಿ, ಪಾಕಿಸ್ತಾನದ ವಾಯುಪ್ರದೇಶವನ್ನು ಉಲ್ಲಂಘಿಸಿದೆ. ಕೊನೆಗೆ ಮಿಯಾ ಚನ್ನು ಬಳಿ ಬಿದ್ದಿದೆ” ಎಂದು ಎಂದು ಹೇಳಿದ್ದಾರೆ.
ಯಾವುದೇ ಮಾನವ ಸಾವುನೋವುಗಳು ಅಥವಾ ಗಾಯಗಳು ಸಂಭವಿಸಿಲ್ಲ ಆದರೆ ಕೆಲವು ನಾಗರಿಕರ ಆಸ್ತಿ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ಕುರಿತು ಪಾಕಿಸ್ತಾನದ ರಕ್ಷಣಾ ಇಲಾಖೆಯು ಅಗತ್ಯವಾದ ಯುದ್ಧತಂತ್ರದ ಕಾರ್ಯವಿಧಾನಗಳನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.



ಪಾಕಿಸ್ತಾನ ಸಹ ಇಂತಹ ತಪ್ಪನ್ನು ಎಸಗಿದ್ದಿದ್ದರೆ, ಆಗ ನಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು. ಇಂತಹ ಅಚಾತುರ್ಯ ಎರಡು ದೇಶಗಳ ನಡುವಿನ ಯುದ್ದಕ್ಕೆ ನಾಂದಿ ಹಾಡುತ್ತದೆ. ಆದ್ದರಿಂದ ಇಂತಹದ್ದು ಮರುಕಳಿಸಬಾರದು.