Homeದಿಟನಾಗರಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಸಂಸತ್‌ನಲ್ಲಿ ಮೋದಿ ಮೋದಿ ಎಂಬ ಘೋಷಣೆ ಕೂಗಿದ್ದು ನಿಜವೇ?

ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಸಂಸತ್‌ನಲ್ಲಿ ಮೋದಿ ಮೋದಿ ಎಂಬ ಘೋಷಣೆ ಕೂಗಿದ್ದು ನಿಜವೇ?

- Advertisement -
- Advertisement -

ಪಾಕಿಸ್ತಾನದ ಸಂಸತ್ತಿನಲ್ಲಿ ಮೋದಿ ಮೋದಿ ಎಂಬ ಘೋಷಣೆಗಳು ಕೇಳಿಬಂದಿವೆ ಎಂಬ ವಿಡಿಯೋ ಒಂದು ವೈರಲ್ ಆಗಿದೆ. ಶಾ ಮೊಹಮದ್ ಖುರೇಷಿ ಪಾಕಿಸ್ತಾನದ ಸಂಸತ್ ನಲ್ಲಿ ಮಾತನಾಡುವ ವೇಳೆ ಮೋದಿ ಮೋದಿ ಎಂಬ ಘೋಷಣೆಗಳು ಮೊಳಗಿವೆ ಎಂದು ಆ ವೀಡಿಯೋದಲ್ಲಿ ಪ್ರತಿಪಾದಿಸಲಾಗಿದೆ. ಕೆಲವರು ಇದನ್ನು ನರೇಂದ್ರ ಮೋದಿಯವರ ಸಾಧನೆ ಎಂಬಂತೆ ಸುದ್ದಿಯ ವಿಶ್ಲೇಷಣೆ ಮಾಡುತ್ತಿದ್ದಾರೆ. ಇದು ನಿಜವೆ ಎಂಬುದನ್ನು ಪರಿಶೀಲಿಸೋಣ.

ಸಂತೋಷ್ ಕೆಂಚೆಂಬ ಎಂಬುವವರು ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು 3 ಲಕ್ಷಕ್ಕೂ ಅಧಿಕ ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸುವಂತೆ ನಾನುಗೌರಿ.ಕಾಂಗೆ ಮನವಿಗಳು ಬಂದಿದ್ದವು.

ಫ್ಯಾಕ್ಟ್‌ ಚೆಕ್

ಈ ವೀಡಿಯೋದ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ವೀಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಇದು 2020ರ ಅಕ್ಟೋಬರ್ 26 ರಂದು ನಡೆದ ಪಾಕಿಸ್ತಾನದ ಸಂಸತ್ತಿನ ಅಧಿವೇಶನದ ವೀಡಿಯೋ ಎಂಬುದು ತಿಳಿದುಬಂದಿದ್ದು ಅದರ ಪೂರ್ಣ ವಿಡಿಯೋ ದೊರಕಿದೆ. ಆ ವಿಡಿಯೋವನ್ನು ನೀವು ಕೆಳಗೆ ನೋಡಬಹುದು.

ಫ್ರೆಂಚ್ ವಿಡಂಬನಾತ್ಮಕ ನಿಯತಕಾಲಿಕೆ ಚಾರ್ಲಿ ಹೆಬ್ಡೊ ಪ್ರಕಟಿಸಿದ್ದ “ನಿಂದೆನೆಯ” ವ್ಯಂಗ್ಯಚಿತ್ರ ಮತ್ತು ಇಸ್ಲಾಂ ಕುರಿತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನೀಡಿದ ಹೇಳಿಕೆಗಳ ವಿರುದ್ಧ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು.

ಪಾಕಿಸ್ತಾನದ ಸಂಸತ್ತಿನ ವಿದೇಶಾಂಗ ಸಚಿವ ಮೊಹಮದ್ ಖುರೇಷಿ ಧರ್ಮ ನಿಂದನೆಯ ವಿರುದ್ದ ನಿರ್ಣಯವನ್ನು ಸಂಸತ್ತಿನಲ್ಲಿ ಮಂಡಿಸಿದ ವೇಳೆ ಮೇಲಿನ ವಿಡಿಯೋದ 17.50ನೇ ನಿಮಿಷದಲ್ಲಿ ವಿರೋದ ಪಕ್ಷದ ಸದಸ್ಯರು “ವೋಟಿಂಗ್ ವೋಟಿಂಗ್” ಎಂದು ಘೋಷಣೆಗಳನ್ನು ಕೂಗಿದ್ದಾರೆ. ತದನಂತರ ಸ್ಪೀಕರ್‌ರವರು ವೋಟಿಂಗ್ ನಡೆಸಲಾಗುತ್ತದೆ, ಸದಸ್ಯರು ಸಮಾಧಾನದಿಂದಿರಬೇಕೆಂದು ಮನವಿ ಮಾಡುವುದನ್ನು ಸಹ ನೋಡಬಹುದು.

ಈ ಅಧಿವೇಶನದ ಕುರಿತು ಪಾಕಿಸ್ತಾನದ DAWN ಪತ್ರಿಕೆಯು ವಿವರವಾಗಿ ವರದಿ ಮಾಡಿದ್ದು, ಅದರಲ್ಲಿ ವಿರೋಧ ಪಕ್ಷಗಳು ವೋಟಿಂಗ್ ನಡೆಸುವುದಕ್ಕಾಗಿ ಘೋಷಣೆ ಕೂಗಿದ್ದಾರೆ ಎಂಬುದನ್ನು ಸಹ ಉಲ್ಲೇಖಿಸಿದೆ. ಅದನ್ನು ಇಲ್ಲಿ ಓದಬಹುದು.

ಇಂಡಿಯಾ ಟುಡೆ ಪತ್ರಿಕೆಯು ಪಾಕಿಸ್ತಾನದ ಹಿರಿಯ ಪತ್ರಕರ್ತ ಮತೀನ್ ಹೈದರ್ ಅವರನ್ನು ಸಂಪರ್ಕಿಸಿದಾಗ “ಪಾಕಿಸ್ತಾನದ ಸಂಸತ್ತಿನಲ್ಲಿ ಭಾರತ ಸರ್ಕಾರವನ್ನು/ ಮೋದಿಯವರನ್ನು ಬೆಂಬಲಿಸುವ ಯಾವುದೇ ಘೋಷಣೆಗಳು ಕೇಳಿಬಂದಿಲ್ಲ” ಎಂದು ಖಚಿತಪಡಿಸಿದ್ದಾರೆ ಎಂದು ವರದಿ ಮಾಡಿದೆ. ಒಂದು ವೇಳೆ ಪಾಕಿಸ್ತಾನದ ಸಂಸತ್ತಿನಲ್ಲಿ ಮೋದಿ ಮೋದಿ ಎಂದು ಘೋಷನೆಗಳು ಕೇಳಿಬಂದಿದ್ದರೆ ಅದು ಪಾಕಿಸ್ತಾನದ ಮತ್ತು ಭಾರತದ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ವರದಿಯಾಗಿರುತ್ತಿತ್ತು. ಆದರೆ ಅಂತಹ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ. ಹಾಗಾಗಿ ಆ ಘೋಷಣೆಗಳು ಕೂಗಿಲ್ಲ ಎಂದು ಖಚಿತವಾಗಿ ಹೇಳಬಹುದು.

ಆದರೆ ಕೆಲ ದುಷ್ಕರ್ಮಿಗಳು ಆ ವೋಟಿಂಗ್ ವೋಟಿಂಗ್ ಎಂಬ ಘೋಷಣೆಗಳನ್ನು ತೆಗೆದು ಆ ಜಾಗಕ್ಕೆ ಮೋದಿ ಮೋದಿ ಎಂಬ ದ್ವನಿಯನ್ನು ಎಡಿಟ್ ಮಾಡಿ ಸಿಂಕ್ ಮಾಡಲಾಗಿದೆ. ಹಾಗಾಗಿ ಇದು ಎಡಿಟ್ ಮಾಡಿದ ಫೇಕ್ ವೀಡಿಯೋವಾಗಿದೆ. ಇದೇ ವಿಡಿಯೋವನ್ನು ಅಸಲಿಯೆಂದು ಹಲವು ನ್ಯೂಸ್ ಚಾನಲೆಗಳು ಬಿತ್ತರಿಸಿ ಫೇಕ್ ನ್ಯೂಸ್ ಹರಡುತ್ತಿವೆ. ಹಾಗಾಗಿ ಇಂತಹ ವೀಡಿಯೋಗಳನ್ನು ನಂಬುವ ಮೊದಲು ಎಚ್ಚರವಹಿಸಬೇಕಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನೀರು ಕುಡಿಯುತ್ತಾ ಚಾರ್ಜಿಂಗ್‌ನಲ್ಲಿರುವ ಫೋನ್‌ ಬಳಸಿದರೇ ಫೋನ್ ಸ್ಟೋಟಗೊಳ್ಳುತ್ತದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Fake news post maadidavarige namma deshaddalli shikshisuwa yaaudu khanoon illave illaddidare mudalu Vanda Katthina khaanoonu maadabeku illaddidare mundina dinagallali dodda anaahutagalaagbahudu.

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....