Homeಮುಖಪುಟಗೋವಾದಲ್ಲಿ ಬಿಜೆಪಿಯ ಗೆಲುವಿನ ಓಟ ಮುಂದುವರಿಯುತ್ತಿರುವುದು ಹೇಗೆ?

ಗೋವಾದಲ್ಲಿ ಬಿಜೆಪಿಯ ಗೆಲುವಿನ ಓಟ ಮುಂದುವರಿಯುತ್ತಿರುವುದು ಹೇಗೆ?

- Advertisement -
- Advertisement -

ಟೆಲಿವಿಷನ್ ಚಾನೆಲ್‌ಗಳ ಬ್ರೇಕಿಂಗ್ ನ್ಯೂಸ್‌ನಲ್ಲಿ ನಿಮಗೆ ಕಾಣಸಿಗದ ಒಂದು ಕತೆಯಿದು. ಬಹುತೇಕ ಪತ್ರಿಕೆಗಳ ತಲೆಬರಹಗಳೂ ಈ ವಾಸ್ತವಾಂಶಗಳಿಗೆ ಸಂಬಂಧಿಸಿ ಎಡವುತ್ತವೆ. ಒಂದು ವೇಳೆ ಚುನಾವಣಾ ಫಲಿತಾಂಶಗಳ
ಅಂಕಿಅಂಶಗಳ ಮೇಲೆ ತ್ವರಿತವಾಗಿ ಕಣ್ಣುಹಾಯಿಸಿದರೂ ನಿಮಗೆ ಪೂರ್ಣ ಚಿತ್ರಣ ಸಿಗುವುದಿಲ್ಲ. ಹಾಗಾದರೆ ಬಿಜೆಪಿಯು ಗೋವಾ ವಿಧಾನಸಭೆಯ 40 ಸ್ಥಾನಗಳಲ್ಲಿ 20ನ್ನು ಗೆದ್ದು ಅಧಿಕಾರಕ್ಕೆ ಮರಳಿದ್ದು ಹೇಗೆ?

ಬಿಜೆಪಿಯು ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದೆ ಎಂಬುದೇ ಇನ್ನಷ್ಟು ಅಚ್ಚರಿ ಹುಟ್ಟಿಸುತ್ತದೆ. ಸರಾಸರಿಯಾಗಿ ಅದರ ಆಡಳಿತದ ದಾಖಲೆಯು ತೀರಾ ಕೆಳಮಟ್ಟದಲ್ಲಿ ಇಲ್ಲದಿದ್ದರೂ ಕಳಪೆಯಾಗಿದೆ.

ಗೋವಾದಲ್ಲಿ ಹೆಚ್ಚುಕಡಿಮೆ ಏಕಾಂಗಿಯಾಗಿಯೇ ಕೇಸರಿ ಪಕ್ಷದ ನೆಲೆಯನ್ನು ಕಟ್ಟಿದ ರಾಜಕಾರಣಿ
ಮನೋಹರ್ ಪರಿಕ್ಕರ್ ಒಟ್ಟಾಗಿ ನಾಲ್ಕು ಅವಧಿಯನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ಕಳೆದರು. ಆವರು ಯಾವ ಸಮಯದಲ್ಲಿಯೂ ಪೂರ್ಣ ಅವಧಿಯನ್ನು ಮುಗಿಸಿಲ್ಲ ಎಂದು- ಹೆಚ್ಚಾಗಿ ಹೊಗಳುವ- ಅವರ ಕುರಿತ ಜೀವನಚರಿತ್ರೆಗಳು ಹೇಳುತ್ತವೆ.

ಮನೋಹರ್ ಪರಿಕ್ಕರ್

ಮುಖ್ಯಮಂತ್ರಿಯಾಗಿ ಅವರ ಮೂರನೇ ಅವಧಿಯು ಕೇಂದ್ರ ಸಚಿವಸಂಪುಟದಲ್ಲಿ ಸಚಿವನಾಗುವಂತೆ ಕರೆ ಬಂದಾಗ ಚುಟುಕಾಯಿತು. 2017ರ ಚುನಾವಣೆಯಲ್ಲಿ ಅವರ ಪಕ್ಷವು 40ರಲ್ಲಿ ಕೇವಲ 13 ಸ್ಥಾನಗಳನ್ನು ಗಳಿಸಿ ಆಘಾತ ಅನುಭವಿಸಿದ ನಂತರ ಅವರು ಹಿಂದಕ್ಕೆ ಬಂದರು. ಆಗ ಕಾಂಗ್ರೆಸ್ ಕೂಡಾ ಅದಕ್ಕಿಂತ ಹೆಚ್ಚು ಅಂದರೆ, 17 ಸ್ಥಾನಗಳನ್ನು ಗಳಿಸಿತ್ತು. (ಆದರೂ, ಬಿಜೆಪಿ ಸರಕಾರ ರಚಿಸಿತು.) 2017ರ ಅಧಿಕಾರಾವಧಿಯು ದುರದೃಷ್ಟವಶಾತ್ ಮುಖ್ಯಮಂತ್ರಿಯವರಿಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ (ಮೇದೋಜೀರಕ ಗ್ರಂಥಿಯ ಕ್ಯಾನ್ಸರ್) ಬಂದುದರಿಂದ ಹಾಗೊಹಿಗೊ ಕಳೆಯಿತು. ಅವರು ತೀರಾ ಅಸ್ವಸ್ಥರಾಗಿದ್ದಾಗಲೂ, ಮಾರ್ಚ್ 2019ರಲ್ಲಿ ಅವರು ನಿಧನರಾಗುವವರೆಗೆ ಮುಖ್ಯಮಂತ್ರಿ ಪದವಿ ಬಿಡಲಿಲ್ಲ.

ಪರಿಕ್ಕರ್ ಕೈಯ್ಯಾರೆ ಆಯ್ಕೆ ಮಾಡಿದ್ದ ಆರೆಸ್ಸೆಸ್ ಸದಸ್ಯ, ಆಯುರ್ವೇದ ವೈದ್ಯ, ಪ್ರಮೋದ್ ಸಾವಂತ್ ಅಗತ್ಯಕ್ಕೆ ಸರಿಹೊಂದಲಿಲ್ಲ. ಅವರ ಅತ್ಯಂತ ಕೆಟ್ಟ ಕೋವಿಡ್ ನಿರ್ವಹಣೆ (ಇದು ಜಾಗತಿಕವಾಗಿ ಸುದ್ದಿ ಮಾಡಿತ್ತು), ನೆರೆಯ ಕರ್ನಾಟಕದೊಂದಿಗಿನ ಗಡಿಯಲ್ಲಿ ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವಿವಾದಾತ್ಮಕವಾದ ಮಹಾ ಯೋಜನೆಗಳಿಗೆ ಚಾಲನೆ, ಅದಾನಿ ಸೇರಿದಂತೆ ಆಳುವ ಪಕ್ಷಕ್ಕೆ ಪ್ರಿಯವಾದ ಉದ್ಯಮ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಕಲ್ಲಿದ್ದಲು ಮತ್ತು ಬಂದರು ನೀತಿ ಮುಂತಾದ ಹಲವಾರು ಅತ್ಯಂತ ಜನವಿರೋಧಿ ಕ್ರಮಗಳ ಸುಳಿಯಲ್ಲಿ ಸಿಕ್ಕಿಬಿದ್ದರು.

ಆದುದರಿಂದ ಈ ಒಗಟು: ಹಾಗಾದರೆ ಬಿಜೆಪಿಯು ಅತ್ಯಂತ ಚಾಣಾಕ್ಷ, ದಂತಕತೆ ಪರಿಕ್ಕರ್ ಚುಕ್ಕಾಣಿ ಹಿಡಿದಿದ್ದಾಗ, 2012ರಲ್ಲಿ ಪಡೆದದ್ದಕ್ಕಿಂತ ಹೆಚ್ಚು, ಬಹುಮತಕ್ಕೆ ಬೇಕಾಗಿರುವ 21ಕ್ಕಿಂತ ಕೇವಲ ಒಂದು ಸ್ಥಾನ ಕಡಿಮೆ ಪಡೆಯುವಷ್ಟು ಉತ್ತಮ ಸಾಧನೆ ತೋರಿದ್ದು ಹೇಗೆ?

ವಿವರಗಳಲ್ಲಿ ಈ ಗುಟ್ಟಿನ ಪಿಶಾಚಿ ಅಡಗಿದೆ. ಬಹಳ ಕಾಲದಿಂದ ಬಿಜೆಪಿ ಗೋವಾದಲ್ಲಿ ಅನುಸರಿಸುತ್ತಿರುವ ಹತ್ತು ಕಾರ್ಯತಂತ್ರಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ. ಪಟ್ಟಿಯ ಆರಂಭದಲ್ಲಿರುವುದು 2021ರಲ್ಲಿ ಬಿಜೆಪಿಯ ಪರವಾಗಿ ಕೆಲಸ ಮಾಡಿದಂತವು. ಅತ್ಯಂತ ಕೊನೆಯಲ್ಲಿರುವವು ಬಹಳ ಮುಖ್ಯವಾಗಿದ್ದು, ಸದಾ ಅನುಷ್ಟಾನದಲ್ಲಿದ್ದು, ಕಳೆದೆರಡು ದಶಕಗಳಿಂದ ಬಿಜೆಪಿಯ ಪರವಾಗಿ ಕೆಲಸ ಮಾಡಿದಂತವುಗಳು.

1. ಕಣವನ್ನು ಕಿಕ್ಕಿರಿದು ತುಂಬುವುದು: ಈ ಬಾರಿ ಅತ್ಯಂತ ಒತ್ತಡದಲ್ಲಿದ್ದ ಬಿಜೆಪಿಯು ಸ್ಪರ್ಧಾ ಕಣವನ್ನು ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ಕಿಕ್ಕಿರಿಯುವಂತೆ ಮಾಡಲು ಸಫಲವಾಯಿತು. ಬಿಜೆಪಿ ಮತ್ತು ಗೋವಾ ಫಾರ್ವರ್ಡ್ ಜೊತೆ ಮೈತ್ರಿ ಹೊಂದಿದ್ದ ಕಾಂಗ್ರೆಸ್ ಹೊರತಾಗಿ, ಕಣದಲ್ಲಿದ್ದ ಪಕ್ಷಗಳಲ್ಲಿ ಎಂಜಿಪಿ ಜೊತೆ ಮೈತ್ರಿ ಹೊಂದಿದ್ದ ತೃಣಮೂಲ ಕಾಂಗ್ರೆಸ್, ಆಪ್, ಹೊಸ ಪ್ರಾದೇಶಿಕ ಪಕ್ಷ ರೆವಲ್ಯೂಷನರಿ ಗೋವನ್ಸ್. ಉಳಿದಂತೆ, ಸಣ್ಣ ಪಕ್ಷಗಳಾದ ಶಿವಸೇನೆ, ಗೋಯೆಂಚೋ ಸ್ವಾಭಿಮಾನ್ (ಗೋವಾದ ಸ್ವಾಭಿಮಾನ ಅರ್ಥದ), ಸಾಂಬಾಜಿ
ಬ್ರಿಗೇಡ್ ಪಾರ್ಟಿ, ಜೈ ಮಹಾಭಾರತ್ ಪಾರ್ಟಿ… ಇದು ಕಣವನ್ನು ಕಿಕ್ಕಿರಿದು ತುಂಬಿಸಿತು.

2. ಈ ಎಲ್ಲಾ ಪಕ್ಷಗಳು ಮತಗಳನ್ನು ವಿಭಜನೆ ಮಾಡಲಿಲ್ಲ. ಆದರೆ, ರೆವಲ್ಯೂಷನರಿ ಗೋವನ್ಸ್ ಪಾರ್ಟಿಯು ಕಾಂಗ್ರೆಸ್ ಮತ್ತು ಎಂಜಿಪಿಯಿಂದ 9-12 ಸ್ಥಾನಗಳನ್ನು ಕಸಿಯಿತು. (ಎಂಜಿಪಿಯು ತೃಣಮೂಲ ಕಾಂಗ್ರೆಸ್ ಜೊತೆಗಿದ್ದು, ಚುನಾವಣಾ ನಂತರ ಬಿಜೆಪಿ ಪಾಳಯಕ್ಕೆ ನೆಗೆಯಿತು.) ಇದು ಅಂತಿಮ ಲೆಕ್ಕಾಚಾರದಲ್ಲಿ ಎಲ್ಲ ಬದಲಾವಣೆಗಳನ್ನು ಉಂಟುಮಾಡಿತು. ಇದಿಲ್ಲದಿದ್ದರೆ, ಆಳುವ ಪಕ್ಷದ ಕುರಿತು ಗೋವನ್‌ರಲ್ಲಿ ಇದ್ದ ಅತೃಪ್ತಿ ಚುನಾವಣಾ ಫಲಿತಾಂಶಗಳಲ್ಲಿ ಪ್ರತಿಫಲಿಸುತ್ತಿತ್ತು.

3. ವಿಚಿತ್ರವೆನಿಸಿದರೂ, ರೆವಲ್ಯೂಶನರಿ ಗೋವನ್ಸ್ ಪಕ್ಷವು 9.5 ಶೇಕಡಾ ಮತಗಳನ್ನು ಗಳಿಸಿದರೂ, ಅದರ ಮತಗಳನ್ನು ’ಇತರರು’ ವಿಭಾಗದಲ್ಲಿ ಸೇರಿಸಲಾಗಿತ್ತು. ಒಂದೆರಡು ದಿನಗಳ ಬಳಿಕವಷ್ಟೇ ಕೆಲವರು ಮಾತ್ರ ಅದು ಮಾಡಿದ್ದ ಪರಿಣಾಮವನ್ನು ಗಮನಿಸಿದರು.

4. ಚುನಾವಣಾ ಅಧಿಕಾರಿಗಳು ಸಾಮಾನ್ಯಕ್ಕಿಂತ ಕಡಿಮೆ ನ್ಯಾಯಬದ್ಧವಾಗಿದ್ದರು ಎಂಬಂತೆ ಚುನಾವಣೆ ನಡೆಸಿದರು ಎಂಬ ದೂರುಗಳೂ ಇದ್ದವು. ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿದ ರೆವಲ್ಯೂಶನರಿ ಗೋವನ್ಸ್ ಪಕ್ಷಕ್ಕೆ ಆರಂಭದಲ್ಲಿ ಪಕ್ಷ ನೋಂದಣಿ ಮಾಡುವುದಕ್ಕೇ ಅಡಚಣೆ ಮಾಡಲಾಯಿತು. ನಂತರ, ಈಗ ಚಾಲ್ತಿಯಲ್ಲಿಲ್ಲದ ಹಳೆಯ ಪಕ್ಷದ ಹೆಸರಿನಲ್ಲಿ ಸ್ಪರ್ಧಿಸಲು ಅದು ನಿರ್ಧರಿಸಿದಾಗ ತಕ್ಷಣ ಅದರ ನೋಂದಣಿ ಮಾಡಲಾಯಿತು. ಅದಕ್ಕೆ ಅವಸರವಾಗಿಯೇ ಚುನಾವಣಾ ಚಿಹ್ನೆಯೂ ಸಿಕ್ಕಿದಾಗ, ಇದರಿಂದ ಬಿಜೆಪಿಗೆ ಅನುಕೂಲವಾಗುವುದೇ ಎಂಬ ಊಹಾಪೋಹವಿತ್ತು. ಫಲಿತಾಂಶದ ವಿಶ್ಲೇಷಣೆಯು ಹಾಗೆಯೇ ಆಯಿತು ಎಂದು ಸೂಚಿಸುತ್ತದೆ. ಅಂತಿಮ ಫಲಿತಾಂಶ ಏರುಪೇರಾಗುವ ರೀತಿಯಲ್ಲಿ ಅದು ಕಾಂಗ್ರೆಸ್ ಮತ್ತು ಎಂಜಿಪಿಗೆ ಸಾಕಷ್ಟು ಸ್ಥಾನಗಳ ನಷ್ಟ ಉಂಟುಮಾಡಿತು. ಅದು ಮುಖ್ಯಮಂತ್ರಿ ಸ್ಥಾನಕ್ಕಾಗಿ ಪ್ರಮೋದ್ ಸಾವಂತ್‌ಗೆ ಪ್ರತಿಸ್ಪರ್ಧಿಯಾಗಲಿದ್ದ ಬಿಜೆಪಿ ಅಭ್ಯರ್ಥಿ ವಿಶ್ವಜಿತ್ ರಾಣೆಯ ಮತಗಳಿಗೂ ಕನ್ನಹಾಕಿತು.

ಪ್ರಮೋದ್ ಸಾವಂತ್

ಇನ್ನೊಂದು ಪ್ರಕರಣದಲ್ಲಿ ಉತ್ತರ ಭಾರತೀಯ ಹಿಂದಿ ಟಿವಿ ಚಾನೆಲ್ ಒಂದು ಮತದಾನಕ್ಕೆ ಮುಂಚಿನ ಗದ್ದಲವಿಲ್ಲದ ಅವಧಿಯಲ್ಲಿ ಒಂದು ಸುದ್ದಿಯನ್ನು ’ಸ್ಫೋಟಿಸಿತು’. ನಾಲ್ವರು ಅಭ್ಯರ್ಥಿಗಳಿಗೆ ಪಕ್ಷ ಬದಲಾವಣೆ ಮಾಡಲು ಆಮಿಷ ಒಡ್ಡಲಾಗಿದೆ ಮತ್ತು ಆವರು ಅದನ್ನು ಸ್ವೀಕರಿಸಲು ಮನಸ್ಸು ಮಾಡಿದ್ದಾರೆ ಎಂದು ಆ ಚಾನೆಲ್ ಆರೋಪ ಮಾಡಿತ್ತು. ಇವುಗಳಲ್ಲಿ ಎರಡು ಸ್ಥಾನಗಳಲ್ಲಿ ಮುಂಚೂಣಿಯಲ್ಲಿ ಇದ್ದ ಆಪ್ ಅಭ್ಯರ್ಥಿಗಳ ಕಡೆ ಸಂಶಯದ ಮುಳ್ಳಿದೆ ಎಂದು ರಾಜಕೀಯ ವೀಕ್ಷಕರು ಆರೋಪಿಸಿದ್ದರು.

5. ಟನ್ನುಗಟ್ಟಲೆ ಹಣ ಮತ್ತು ಕೋಮು ಧ್ರುವೀಕರಣ: ಈ ಬಾರಿ ಟನ್ನುಗಟ್ಟಲೆ ಹಣ ಚುನಾವಣಾ ಪ್ರಚಾರದ ವೇಳೆ ನೇರವಾಗಿ ಕಾಣುತ್ತಿದ್ದು, ಮತದಾರರಿಗೆ ಬಹಿರಂಗವಾಗಿಯೇ ಹಣ ಹಂಚಲಾಗುತ್ತಿತ್ತು. ತೃಣಮೂಲವೇ ಹೆಚ್ಚಿನ ಹಣ ಹಂಚಿದ ಆರೋಪವಿದ್ದು, ಅದು ಒಂದೂ ಸ್ಥಾನ ಗೆಲ್ಲದೇ ಇದ್ದರೂ, ಐದು ಶೇಕಡಾ ಮತ ಗಳಿಸಿತು. ತೃಣಮೂಲ ಪರ ಹಣ ಪಡೆದು ಬೆಂಬಲವನ್ನು ಮಾರಿದ ಆರೋಪವೂ ಮಾಧ್ಯಮಗಳ ಒಂದು ವಿಭಾಗದ ಮೇಲಿದೆ. ಒಂದು ಹಂತದಲ್ಲಂತೂ ಮುಖ್ಯಮಂತ್ರಿ ಸಾವಂತ್, ಕೋಮು ಭಾವನೆಗಳನ್ನು ಕೆರಳಿಸಲು ಯತ್ನಿಸಿದರೂ, ನಂತರ ಮುಂದುವರಿಸಲಿಲ್ಲ. ಈ ಬಾರಿ ಎಲ್ಲಾ ರಾಜಕೀಯ ಹಿನ್ನೆಲೆಯವರು- ಕೆಲವು ಉದ್ಯಮಪತಿಗಳು ಮತ್ತು ಪ್ರಭಾವಿ ಸಾರಸ್ವತ ಬ್ರಾಹ್ಮಣ ಸಮಾಜದವರೂ ಸೇರಿದಂತೆ- ಆಳುವ ಪಕ್ಷದ ಮೇಲೆ ಭಾರೀ ಅಸಮಾಧಾನ ಹೊಂದಿದ್ದರು.

ಬಿಜೆಪಿಯನ್ನು 2012ರಿಂದ ಅಧಿಕಾರದಲ್ಲಿ ಉಳಿಸಿ, ಆದು ಗೋವಾದಲ್ಲಿ ತನ್ನ ಹಿಡಿತ ಸ್ಥಾಪಿಸಲು ನೆರವಾದ ಕೆಲವು ಕಾರ್ಯತಂತ್ರಗಳು ಕೆಳಗಿವೆ.

1. ಮೊದಲನೆಯದಾಗಿ, ದ್ರೋಹವನ್ನು ಪ್ರೋತ್ಸಾಹಿಸುವುದು: ಬಿಜೆಪಿಯು ತನ್ನ ವಿರೋಧಿ ಪಕ್ಷಗಳ ಅತಿ ಮಹತ್ವಾಕಾಂಕ್ಷಿ ರಾಜಕಾರಣಿಗಳನ್ನು ತಮ್ಮ ಪಕ್ಷಗಳನ್ನು ವಿಭಜಿಸುವಂತೆ, ಬಂಡೇಳುವಂತೆ, ತನ್ನ ಕಡೆ ಬಂದು ಲೂಟಿಯನ್ನು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸುತ್ತಲೇ ಬಂದಿದೆ. ಇದು ಮೊದಲು ಪ್ರಾರಂಭವಾಗಿದ್ದು ಬಿಜೆಪಿ ಗೋವಾ ವಿಧಾನಸಭೆಗೆ ಕಾಲಿಟ್ಟ ನಾಲ್ಕು ವರ್ಷಗಳ ನಂತರ, 1998ರಲ್ಲಿ.

ಆಗಿನಿಂದ ಅದು ಪ್ರತಿಯೊಬ್ಬ ಪ್ರಮುಖ ಕಾಂಗ್ರೆಸ್ ನಾಯಕನನ್ನು ಬುಟ್ಟಿಗೆ ಹಾಕಿಕೊಂಡಿದೆ. (ಈ ರೀತಿಯಲ್ಲಿ ಒಲಿಯದವರನ್ನು ಬೇರೆ ರೀತಿಯಲ್ಲಿ ಬಗ್ಗಿಸಿದೆ).

ಗೋವಾದ ಅನೇಕ ಕಾಂಗ್ರೆಸ್ (ಮತ್ತು ಸಣ್ಣ ಪಕ್ಷಗಳ) ನಾಯಕರು ಅತಿ ಮಹತ್ವಾಕಾಂಕ್ಷಿಗಳಾಗುವ ಸ್ವಭಾವ ಹೊಂದಿದ್ದಾರೆ. ಅದಲ್ಲದೆ ಅವರು ತಾವು ಜೀವನದಲ್ಲಿ ಇನ್ನಷ್ಟು ಹೆಚ್ಚಿನ ಸ್ಥಾನಮಾನಗಳಿಗೆ ಅರ್ಹರು ಎಂದು ಭಾವಿಸುತ್ತಾರೆ. ಇದರಿಂದ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಸುಲಭವಾಗುತ್ತದೆ.

ಈ ರೀತಿಯಲ್ಲೇ ಬಿಜೆಪಿಯು 1999ರಲ್ಲಿ ಅಧಿಕಾರ ಹಿಡಿದದ್ದು. ನಂತರ ಒಂದು ವರ್ಷದಲ್ಲಿ ಅದು ಪಕ್ಷಾಂತರಿಗಳನ್ನು ಹೊರಹಾಕಿ ತನ್ನದೇ ಸರ್ಕಾರವನ್ನು ಸ್ಥಾಪಿಸಿಕೊಂಡಿತು.

2. ಎರಡನೆಯದಾಗಿ, ಸಾಮೂಹಿಕ ಪಕ್ಷಾಂತರಗಳನ್ನು ಪ್ರೋತ್ಸಾಹಿಸುವುದು: 40 ಸದಸ್ಯರ ವಿಧಾನಸಭೆಯಲ್ಲಿ ಕೇವಲ 13 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, 2017-2022ರ ವರೆಗೆ ಪಕ್ಷದ ನಂತರ ಪಕ್ಷವನ್ನು ಒಡೆದು, ಪೂರ್ತಿ ಐದು ವರ್ಷಗಳ ಕಾಲ ಆಡಳಿತ ನಡೆಸಿತ್ತು. ಅವಧಿ ಮುಗಿಯುವುದರೊಳಗೆ ಅದು 17 ಸದಸ್ಯ ಬಲದ ಕಾಂಗ್ರೆಸ್‌ಅನ್ನು ಕೇವಲ ಇಬ್ಬರು ಶಾಸಕರ ಮಟ್ಟಕ್ಕೆ ಇಳಿಸಿತ್ತು.

3. ಮಾಧ್ಯಮಗಳ ಚರ್ಚೆಯನ್ನು ತನಗೆ ತಕ್ಕಂತೆ ನಿಯಂತ್ರಿಸುವುದು: ಜಾಗರೂಕತೆಯ ಮಾಧ್ಯಮ ನಿಯಂತ್ರಣದ ಮೂಲಕ ಚರ್ಚೆಗಳು ಆಳುವ ವಕ್ಷದ ಕಡೆಗೇ ವಾಲಿರುವಂತೆ ನೋಡಿಕೊಳ್ಳುವುದು. 2021ರ ಕೋವಿಡ್ ಅಲೆಯಲ್ಲಿ ಪುಟ್ಟ ಗೋವಾದಲ್ಲಿ ನಡೆದ ಮರಣ ತಾಂಡವವು ಗೋವಾದಲ್ಲಿ ಸ್ವಲ್ಪ ಸಮಯ ಮಾತ್ರವೇ ಅಲ್ಲೋಲಕಲ್ಲೋಲ ಉಂಟುಮಾಡಿತು. ಅದನ್ನು ಬೇಗನೇ ಮರೆಸಲಾಯಿತು. ಬೇರೆಬೇರೆ ಕಾರಣಗಳಿಗಾಗಿ ವೈವಿಧ್ಯಮಯ ಹಿನ್ನೆಲೆ ಮತ್ತು ಮಾಲಕತ್ವ ಹೊಂದಿರುವ ಪತ್ರಿಕೆಗಳು ಸರಕಾರದ ಪರ ನಿಲುವನ್ನು ತಳೆದಿವೆ.

ವಿಶ್ವಜಿತ್ ರಾಣೆ

2022ರ ಚುನಾವಣೆಯಲ್ಲೇನೋ ಈ ಪರಿಸ್ಥಿತಿ ಸ್ವಲ್ಪ ಬದಲಾಯಿತು. 66.7 ಶೇಕಡಾ ಮತದಾರರು ಆಳುವ ಪಕ್ಷದ ವಿರುದ್ಧವಾಗಿರುವುದನ್ನು ಗಮನಿಸಿದ ಪತ್ರಿಕೆಗಳು ಸರ್ಕಾರವನ್ನು ಸ್ವಲ್ಪ ಹೆಚ್ಚು ಟೀಕಿಸಿದವು. ಆದರೆ, ಚುನಾವಣಾ ಫಲಿತಾಂಶ ಬಂದ ನಂತರ ಪತ್ರಿಕೆಗಳು ಬಹಿರಂಗವಾಗಿ ಸರಕಾರವನ್ನು ಬೆಂಬಲಿಸದೆ, ಆಗಾಗ ಪ್ರತಿಪಕ್ಷಗಳನ್ನು ಗುರಿ ಮಾಡಿಕೊಂಡು, ತಮ್ಮ ಹಿಂದಿನ ರಾಗಕ್ಕೆ ಮರಳಿವೆ.

4. ಪ್ರತಿಪಕ್ಷಗಳನ್ನು ದೂರುವುದು: ಮಾಧ್ಯಮಗಳ ನೆರವಿನಿಂದ ಈ ಆಟ ಆಡುವುದರಲ್ಲಿ ಬಿಜೆಪಿ ಅತ್ಯಂತ ನಿಪುಣ. 2017ರಲ್ಲಿ ಅಧಿಕಾರ ವಹಿಸಿಕೊಳ್ಳುವಲ್ಲಿ ಆದ ವಿಳಂಬಕ್ಕಾಗಿ ಮಾಧ್ಯಮಗಳು ಕಾಂಗ್ರೆಸನ್ನು ದೂರಿದವು. ಆದರೆ, 2022ರಲ್ಲಿ ಚುನಾವಣಾ ಫಲಿತಾಂಶ ಬಂದು ಹತ್ತು ದಿನಗಳು ಕಳೆದರೂ ಅದು ಗೋವಾದಲ್ಲಿ ಸರಕಾರ ರಚಿಸಲಿಲ್ಲ ಎಂಬ ಬಗ್ಗೆ ಮಾತೆತ್ತಿಲ್ಲ. ಪಕ್ಷಾಂತರ ಮಾಡಿದ ಶಾಸಕರನ್ನಾಗಲೀ, ಅವರನ್ನು ಸೆಳೆದ ಆಳುವ ಪಕ್ಷವನ್ನಾಗಲೀ ಅವು ದೂರುವುದಿಲ್ಲ; ಆದರೆ, ಈ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ವಿಫಲವಾದುದಕ್ಕೆ ಪ್ರತಿಪಕ್ಷಗಳನ್ನು ದೂರುತ್ತವೆ.

5. ಅಪ್ಪಿಕೊಳ್ಳುವುದು ಮತ್ತು ನುಂಗಿಬಿಡುವುದು: ಇದು ಸ್ಥಳೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ಕಾರ್ಯತಂತ್ರವಾಗಿದೆ. 1994ರ ತನಕ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು ಪ್ರಮುಖ ಪ್ರತಿಪಕ್ಷವಾಗಿತ್ತು. ಸಂಶಯಾಸ್ಪದವಾಗಿ ಸಾವಿಗೀಡಾದ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಅವರ ತಂತ್ರದಂತೆ, ಅದನ್ನು 1994ರ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಮರುಳು ಮಾಡಲಾಯಿತು.

ಮೊದಲಲ್ಲಿ ಎಂಜಿಪಿ ಹಿಂಜರಿಕೆ ತೋರಿಸಿತ್ತು. ಎರಡೂ ಪಕ್ಷಗಳು ಒಂದೇ ಮತದಾರ ನೆಲೆಯನ್ನು ಗುರಿಯಾಗಿಸಿಕೊಂಡಿದ್ದರಿಂದ, ಎಂಜಿಪಿ 1963ರಲ್ಲಿ ತನ್ನ ಸ್ಥಾಪನೆಯಾದಂದಿನಿಂದಲೇ ಮೃದು ಹಿಂದುತ್ವವನ್ನು ಅನುಸರಿಸುತ್ತಿತ್ತು. (ಅದು ಗೋವಾವನ್ನು 1963ರ ಕೊನೆಯ ಭಾಗದಿಂದ 1979ರ ಆರಂಭದ ವರೆಗೆ 15 ವರ್ಷಗಳಿಗೂ ಹೆಚ್ಚು ಕಾಲ ಆಳಿತ್ತು.)

ಆದರೆ, ಎಂಜಿಪಿಯು ಕಷ್ಟಕರ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಿತ್ತು. ಅದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳದೇ ಇದ್ದರೆ, ಅದರ ಸ್ವಂತ ಮತಗಳು ಒಡೆಯುವುದು ಶತಸಿದ್ಧವಾಗಿತ್ತು. ಮೈತ್ರಿ ಮಾಡಿಕೊಂಡರೆ, ಕಾಲಾಂತರದಲ್ಲಿ ಅದರ ಮತಗಳು ನಿಧಾನವಾಗಿ ಕರಗಿ ಬಿಜೆಪಿ ಸೇರಲಿದ್ದವು. ಕೊನೆಗೂ ಆದದ್ದು ಹಾಗೆಯೇ.

****

ಮೇಲೆ ಹೇಳಿರುವ ಹಳೆಯ ಮತ್ತು ಹೊಸ ಕಾರ್ಯತಂತ್ರಗಳು ಇರುವಾಗ, 2022ರ ಫಲಿತಾಂಶಗಳು ಹೀಗೇಕೆ ಬಂದವು ಎಂದು ಮನಗಾಣುವುದು ಅಷ್ಟೊಂದು ಕಷ್ಟವಲ್ಲ.

ಅನುವಾದ: ನಿಖಿಲ್ ಕೋಲ್ಪೆ

ಫ್ರೆಡ್ರಿಕ್ ನೊರೋನ್ಯ

ಫ್ರೆಡ್ರಿಕ್ ನೊರೋನ್ಯ
ಗೋವಾ ಮೂಲದ ಪತ್ರಕರ್ತರು


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...