ಭಾರತೀಯ ತಿನಿಸುಗಳ ಅತಿ ದೊಡ್ಡ ರಫ್ತದಾರ ಬ್ರಾಂಡ್ ಆದ ಹಲ್ದಿರಾಮ್ಸ್ (Haldiram’s) ಕಂಪನಿ ಟ್ವಿಟರ್‌ನಲ್ಲಿ ಸಾಕಷ್ಟು ಚರ್ಚೆಗೊಳಗಾಗುತ್ತಿದೆ. ಉಪ್ಪಿನ ಕಾಯಿ ಪ್ಯಾಕೆಟ್ ಮೇಲೆ ಉರ್ದು ಭಾಷೆ ಏಕೆ ಬಳಸಿದ್ದಿರಿ ಎಂದು ಮೈಕ್ ಹಿಡಿದು ಪ್ರಶ್ನಿಸಿದ ಸುದರ್ಶನ್ ಟಿವಿ ಪತ್ರಕರ್ತೆಯನ್ನು ಹಲ್ದಿರಾಮ್ಸ್ ಉದ್ಯೋಗಿಯೊಬ್ಬರು ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನೆಟ್ಟಿಗರು ಆ ಉದ್ಯೋಗಿಯ ಧೈರ್ಯವನ್ನು ಮೆಚ್ಚಿ ಪೋಸ್ಟ್ ಹಾಕುತ್ತಿದ್ದಾರೆ.
ಹಲ್ದಿರಾಮ್ಸ್ ಮಳಿಗೆಯಲ್ಲಿ ಬಲಪಂಥೀಯ ಬೆಂಬಲಿಗ ಮಾಧ್ಯಮವಾದ ಸುದರ್ಶನ್ ಟಿವಿಯ ನಿರೂಪಕಿ ತಿಂಡಿ ಪ್ಯಾಕೆಟ್‌ಗಳ ಮೇಲೆ ಉರ್ದು ಏಕೆ ಬರೆದಿದ್ದೀರಿ ಎಂದು ಕೂಗಾಡಿದ್ದಾರೆ. ಅದಕ್ಕೆ ಉದ್ಯೋಗಿಯೊಬ್ಬರು ಮೇಡಂ ನಿಮಗೆ ತಿಂಡಿ ಬೇಕಾದರೆ ಕೊಂಡುಕೊಳ್ಳಿ, ಇಲ್ಲವಾದರೆ ಇಲ್ಲಿಂದ ಹೊರಡಿ ಎಂದು ತಾಕೀತು ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಉದ್ಯೋಗಿಯು “ತಿಂಡಿ ಪ್ಯಾಕೆಟ್ ಮೇಲೆ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಸಹ ಬರೆಯಲಾಗಿದೆ. ನೀವು ಏಕೆ ಒಂದು ಭಾಷೆಯನ್ನು ನೋಡಿ ಮಾತನಾಡುತ್ತೀರಿ? ನಿಮ್ಮ ಇಂತಹ ತಂತ್ರಗಳನ್ನು ನಾವು ಪುರಸ್ಕರಿಸುವುದಿಲ್ಲ, ಇಲ್ಲಿಂದ ಹೊರಡಿ” ಎಂದು ಖಡಕ್ ಆಗಿ ಹೇಳಿದ್ದಾರೆ.
ಉರ್ದುವಿನಲ್ಲಿ ಬರೆಯುವ ಮೂಲಕ ನವರಾತ್ರಿ ಸಮಯದಲ್ಲಿ ಉಪವಾಸವಿರುದ ಹಿಂದೂಗಳಿಗೆ ಅವಮಾನ ಮಾಡಲಾಗುತ್ತಿದೆ. ಇದರಿಂದ ನೀವು ಏನನ್ನಾದರೂ ಮುಚ್ಚಿಡಲು ಬಯಸುತ್ತಿರುವಿರೆ? ಇದರಲ್ಲಿ ದನದ ಮಾಂಸ ಬಳಸಿದ್ದೀರಾ ಎಂದು ಪತ್ರಕರ್ತೆ ಪದೇ ಪದೇ ಆರೋಪಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಉದ್ಯೋಗಿ. “ನೀವು ಏನು ಬೇಕಾದರೂ ಭಾವಿಸಿ. ನಿಮ್ಮ ಮೈಕ್ ತೆಗೆದು ಏನಾದರೂ ವಿಚಾರಿಸುವುದಿದ್ದರೆ ನನ್ನ ಬಳಿ ಕೇಳಿ. ಅದು ಬಿಟ್ಟು ಸಾರ್ವಜನಿಕರಿಗೆ ತಪ್ಪು ಮಾಹಿತಿ ರವಾನಿಸಬೇಡಿ. ನಿಮ್ಮೊಂದಿಗೆ ನಾನು ಮಾತನಾಡುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ಈ ವಿಡಿಯೋವನ್ನು ಬಹಳಷ್ಟು ಜನರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅಲ್ಲಿರುವುದು ಉರ್ದು ಭಾಷೆಯಲ್ಲ, ಅದು ಅರೇಬಿಕ್ ಆಗಿದೆ. ಹಲ್ದಿರಾಮ್ಸ್‌ನ ಹಲವಾರು ಉತ್ಪನ್ನಗಳು ಮುಸ್ಲಿಂ ಜನಸಂಖ್ಯೆ ಹೆಚ್ಚು ಇರುವ ಗಲ್ಫ್ ದೇಶಗಳಿಗೆ ರಫ್ತು ಆಗುವುದರಿಂದ ಆ ಭಾಷೆಯಲ್ಲಿಯೂ ಸಹ ಮುದ್ರಿಸಲಾಗಿದೆ. ಇದರಿಂದ ಸುದರ್ಶನ್ ಟಿವಿಗೇನು ಕಷ್ಟ? ನಮ್ಮ ಭಾರತದ ನೋಟಿನಲ್ಲಿ ಉರ್ದು ಬಳಸಲಾಗಿದೆ, ರೈಲ್ವೆ ನಿಲ್ದಾಣಗಳಲ್ಲಿ ಉರ್ದು ಇರುತ್ತದೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
Here is some Urdu text. Will this reporter go to the Railways and ask what it is about? #Haldirams pic.twitter.com/DGZ8KDUoXv
— Drama Prasad Mukherjee (@KSasiKL1987) April 5, 2022
Amazing restraint by the Haldiram staff. BTW, Sudarshan's ‘sherni’ should know that it's Arabic and not Urdu. Haldiram exports to muliple Muslim majority countries who buy Indian products without discrimination.pic.twitter.com/jic6ASOo15
— Alishan Jafri (@alishan_jafri) April 5, 2022
Boycott Gang lets start boycott indian currency… #Urdu #haldiram #Haldirams pic.twitter.com/cW6pDgmiTp
— Prince Siddique (@PrinceSidd786) April 5, 2022
ಸುದರ್ಶನ್ ಟಿವಿಯು ತನ್ನ ಇಸ್ಲಾಮೋಫೋಬಿಯಾ ಕಾರಣಕ್ಕೆ ಕೆಲ ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಯುಪಿಎಸ್‌ಸಿ ಜಿಹಾದ್ ಎಂಬ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ಹಲವಾರು ವರದಿಗಳನ್ನು ಪ್ರಸಾರ ಮಾಡಿತ್ತು. ನ್ಯಾಯಾಧೀಶರು ಈ ಚಾನೆಲ್ ಉಗ್ರವಾದವನ್ನು ಪ್ರಸಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮುಸ್ಲಿಮರು ಸರ್ಕಾರಿ ಇಲಾಖೆಗಳಿಗೆ ನುಸುಳುತ್ತಿದ್ದಾರೆ ಎಂದು ಟಿವಿ ವರದಿ ಮಾಡಿದ್ದನ್ನು ಅಳಿಸುಹಾಕುವಂತೆ ಮತ್ತು ನಿಲ್ಲಿಸುವಂತೆ ಸುಪ್ರೀಂ ಸೂಚಿಸಿತ್ತು. ಒಂದು ಎಪಿಸೋಡ್ ನೋಡುವುದಲ್ಲಿಯೇ ನನಗ ಬಹಳ ಬೇಸರವಾಗಿತ್ತು. ಇನ್ನೊಂದು ಸಮುದಾಯದ ಮೇಲೆ ಆರೋಪಿಸುವುದನ್ನು ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಡಿ.ವೈ ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ; ಸಮಾಜದಲ್ಲಿ ಕಲಹ ಸೃಷ್ಟಿಸುವವರು ಸ್ವಾಮೀಜಿ ಎನಿಸಿಕೊಳ್ಳಲು ಸಾಧ್ಯವಿಲ್ಲ: ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಅಭಿಮತ


