Homeಕರ್ನಾಟಕಶೂದ್ರರನ್ನು ಬಳಸಿಕೊಂಡು ಶೂದ್ರರ ವಿರುದ್ದವೆ ಬಾಣ ಪ್ರಯೋಗ: ಬಿಜೆಪಿಯ ಕೋಮುದ್ರುವೀಕರಣದ ವಿರುದ್ದ ‘ಕರ್ನಾಟಕ ಶೂದ್ರಶಕ್ತಿ ವೇದಿಕೆ’...

ಶೂದ್ರರನ್ನು ಬಳಸಿಕೊಂಡು ಶೂದ್ರರ ವಿರುದ್ದವೆ ಬಾಣ ಪ್ರಯೋಗ: ಬಿಜೆಪಿಯ ಕೋಮುದ್ರುವೀಕರಣದ ವಿರುದ್ದ ‘ಕರ್ನಾಟಕ ಶೂದ್ರಶಕ್ತಿ ವೇದಿಕೆ’ ಆಕ್ರೋಶ

- Advertisement -
- Advertisement -

ಬ್ರಾಹ್ಮಣ್ಯದ ಶಕ್ತಿಗಳು ಇಡೀ ಶೂದ್ರ ಶಕ್ತಿಯನ್ನು ಬಳಸಿಕೊಂಡು ಶೂದ್ರರ ವಿರುದ್ಧವೆ ಬಾಣ ಪ್ರಯೋಗಿಸುತ್ತಿದೆ ಎಂದು ‘ಕರ್ನಾಟಕ ಶೂದ್ರಶಕ್ತಿ ವೇದಿಕೆ’ಯ ಪರವಾಗಿ ಕಥೆಗಾರ-ಅನುವಾದಕ ಎಸ್. ಗಂಗಾದರಯ್ಯ ಅವರು ಬುಧವಾರ ಹೇಳಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಬೆಂಬಲಿತ ಸಂಘಟನೆಗಳ ಮೂಲಕ ನಡೆಯುತ್ತಿರುವ ಕೋಮುವಿಭಜನೆಯನ್ನು ಅವರು ವಿರೋಧಿಸಿದ್ದಾರೆ.

ಹಿರಿಯ ಸಾಹಿತಿ ನಟರಾಜ್‌ ಬೂದಾಳು, ಜಿ.ವಿ. ಆನಂದಮೂರ್ತಿ, ಕೆ. ದೊರೈರಾಜ್, ಎಸ್. ಗಂಗಾದರಯ್ಯ, ಡಾ. ಬಸವರಾಜ್, ನಟರಾಜ್ ಹೊನ್ನಾವಳ್ಳಿ, ಉಜ್ಜಜ್ಜಿ ರಾಜಣ್ಣ, ಕೊಟ್ಟ ಶಂಕರ್‌, ಮನುಚಕ್ರವರ್ತಿ ಸೇರಿದಂತೆ ತುಮಕೂರಿನ ಹಲವು ಕಲಾವಿದರು ಮತ್ತು ಲೇಖಕರು ಸೇರಿ ‘ಕರ್ನಾಟಕ ಶೂದ್ರ ಶಕ್ತಿ’ ವೇದಿಕೆಯನ್ನು ಕಟ್ಟಿಕೊಂಡಿದ್ದು, ಕೋಮುವಾದಿ ಸಂಘಟನೆಗಳನ್ನು ಬಿಟ್ಟು, ಎಲ್ಲಾ ಸಂಘಟನೆಗಳನ್ನು ಜೊತೆಗೆ ಸೇರಿಸಿ ಕೋಮು ಸಾಮರಸ್ಯಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ವೇದಿಕೆಯ ಪರವಾಗಿ ಮಾತನಾಡಿದ ಕಥೆಗಾರ-ಅನುವಾದಕ ಎಸ್. ಗಂಗಾದರಯ್ಯ ಅವರು, “ಕೆಲವೇ ಶೇಕಡ ಇರುವ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಮಂದಿ ಇಡೀ ಶೂದ್ರ ಶಕ್ತಿಯನ್ನು ಬಳಸಿಕೊಂಡು ಯಾರು ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಶೂದ್ರರ ವಿರುದ್ಧವೆ ಬಾಣ ತಿರುಗಿಸುತ್ತಿದ್ದಾರೆ. ಹೀಗಾಗಿ ನಾವು ಇಡೀ ಶೂದ್ರ ಜನಾಂಗದ ಎಲ್ಲಾ ಜನರಲ್ಲೂ, ‘ನೋಡ್ರಪ್ಪ…ನಿಮ್ಮ ವಿರುದ್ಧವೆ, ನಿಮ್ಮನ್ನು ಎತ್ತಿಕಟ್ಟಿ, ನಿಮ್ಮ ಕೈಯ್ಯಲ್ಲೇ ಈ ಕೆಲಸ ಮಾಡಿಸುತ್ತಿದ್ದಾರೆ’ ಎಂದು ಎಚ್ಚರ ಮೂಡಿಸಿ, ಪರ್ಯಾಯವಾಗಿ ಆಲೋಚನೆ ಮಾಡಲು ಬೇಕಾಗಿ ಈ ವೇದಿಕೆಯನ್ನು ಹುಟ್ಟು ಹಾಕಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಜರಂಗದಳವನ್ನು ‘ದೇಶದ್ರೋಹಿ ಸಂಘಟನೆ’ ಅನ್ನದೆ ಮತ್ತೇನು ಹೇಳಬೇಕು?: ಕುಮಾರಸ್ವಾಮಿ

ಸಧ್ಯಕ್ಕೆ ತುಮಕೂರಿನ ಎಲ್ಲಾ ತಾಲೂಕುಗಳನ್ನು ಕೇಂದ್ರವಾಗಿಟ್ಟುಕೊಂಡು ವೇದಿಕೆಯನ್ನು ಹುಟ್ಟು ಹಾಕಿದ್ದು, ಮುಂದಿನ ದಿನಗಳಲ್ಲಿ ಇದನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಕೆಲಸವನ್ನು ಮಾಡಲಿದ್ದೇವೆ ಎಂದು ಗಂಗಾದರಯ್ಯ ಅವರು ಹೇಳಿದ್ದಾರೆ.

ಬಿಜೆಪಿ ಬೆಂಬಲಿತ ವ್ಯಕ್ತಿಗಳು ಮುಸ್ಲಿಮರ ಮಾಂಸದ ಅಂಗಡಿಯನ್ನು ಬಹಿಷ್ಕರಿಸುವಂತೆ ನೀಡಿದ ಕರೆಯನ್ನು ವಿರೋಧಿಸಿರುವ ಅವರು, “ಇವರೊಂದಿಗೆ ಕೊಂಡುಕೊಳ್ಳಿ; ಇವರಿಂದ ಕೊಂಡುಕೊಳ್ಳಬೇಡಿ. ಇದನ್ನು ತಿನ್ನಿ; ಇದನ್ನು ತಿನ್ನಬೇಡಿ ಎಂದು ಹೇಳುತ್ತಿದ್ದಾರೆ. ಇವುಗಳೆಲ್ಲಾ ತಿನ್ನದೆ ಇರುವವರು, ತಿನ್ನುವವರ ಮೇಲೆ ನಡೆಸುತ್ತಿರುವ ಪ್ರಹಾರ. ಇದನ್ನು ಹೇಳಲು ಅವರಿಗೇನು ಹಕ್ಕಿದೆ? ನಮಗೆ ಬೇಕಾದುದನ್ನು ನಾವು ಮಾಡಿಕೊಳ್ಳುತ್ತೇವೆ. ಮಾಂಸ ಬೇಕಾದವರು ಅವರಿಗೆ ಬೇಕಾದ ಕಡೆ ಖರೀದಿಸಿ ತಿನ್ನುತ್ತಾರೆ” ಎಂದು ಅವರು ಹೇಳಿದ್ದಾರೆ.

“ಶೂದ್ರರನ್ನು ತಮ್ಮ ಗಾಳಗಳಾಗಿ ಉಪಯೋಗಿಸಿಕೊಂಡು ಅವರ ಮೂಲಕ ತಮ್ಮ ರಾಜಕೀಯ ಬೇಳೆಗಳನ್ನು ಬೇಯಿಸುತ್ತಿದ್ದಾರೆ. ಹೀಗಾಗಿ ಶೂದ್ರ ಸಮುದಾಯ ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕು. ಇಲ್ಲವೆಂದರೆ ಪರಿಸ್ಥಿತಿ ಬೇರೆ ರೀತಿಯಲ್ಲಿ ವಿಕೋಪಕ್ಕೆ ಹೋಗುತ್ತದೆ” ಎಂದು ಗಂಗಾದರಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಮಾಜದಲ್ಲಿ ಕಲಹ ಸೃಷ್ಟಿಸುವವರು ಸ್ವಾಮೀಜಿ ಎನಿಸಿಕೊಳ್ಳಲು ಸಾಧ್ಯವಿಲ್ಲ: ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ

“ರೈತರೊಂದಿಗೆ ಹೋಗಿ ಮುಸ್ಲಿಮರಿಗೆ ಮಾವಿನಕಾಯಿ, ಹುಣಸೆ ಮಾರಬೇಡಿ ಎಂದು ಕೋಮು ಬೀಜ ಬಿತ್ತಲಾಗುತ್ತಿದೆ. ಇವರ ಕೋಮು ದ್ವೇಷದಿಂದಾಗಿ ಇಡೀ ಹಳ್ಳಿಯ ಆರ್ಥಿಕ ಪರಿಸ್ಥಿತಿಯ ಮೇಲೆ ಹೊಡೆತಗಳು ಬೀಳುತ್ತಿವೆ, ರೈತ ಸಂಸ್ಕೃತಿಯ ಮೇಲೆ ಪ್ರಹಾರ ಮಾಡಲಾಗುತ್ತಿದೆ ಹಾಗೂ ರೈತರಿಗೆ ಅವಮಾನ ಮಾಡಲಾಗುತ್ತಿದೆ ಎಂದು ರೈತ ಸಮುದಾಯವನ್ನು ಎಚ್ಚರಿಸುತ್ತೇವೆ” ಎಂದು ಗಂಗಾದರಯ್ಯ ಅವರು ನಾನುಗೌರಿ.ಕಾಂಗೆ ಹೇಳಿದ್ದಾರೆ.

ವೇದಿಕೆಯ ಪರವಾಗಿ ಮಾತನಾಡಿದ ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಅವರು ಮಾತನಾಡಿ, “ಕೋಮುದ್ವೇಷಗಳನ್ನು ಹರಡಿ ನಮ್ಮ ಮಾರುಕಟ್ಟೆಗಳನ್ನು ವಶಪಡಿಸಲು ಹುನ್ನಾರ ನಡೆಸುತ್ತಿದ್ದಾರೆ. ನಾವು ಹಸಿದವರು, ಕಾರ್ಮಿಕರು ಮತ್ತು ಇತರ ಕೆಲಸ ಮಾಡುವವರು ಹಿಂದೂ ಧರ್ಮದಲ್ಲಿ ಗುರುತಿಸಿಕೊಂಡಿದ್ದೇವೆ. ಆದರೆ ನಮ್ಮ ಹೆಸರಿನಲ್ಲಿ ರಾಜಕಾರಣ, ದೊಂಬಿ, ಗಲಾಟೆ ಮಾಡುವುದಕ್ಕೆ ಅವಕಾಶ ಕೊಡಬಾರದು. ಬಡವರು ನಾವೆಲ್ಲಾ ಒಗ್ಗಟ್ಟಿನಲ್ಲಿ ಇರಬೇಕಾಗಿದೆ. ಇದು ನಮ್ಮ ವೇದಿಕೆಯ ಮುಖ್ಯ ಉದ್ದೇಶ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮತ್ತೆ ಮತೀಯ ಗೂಂಡಾಗಿರಿ: ಭಿನ್ನ ಧರ್ಮದ ಜೋಡಿಗೆ ಕಿರುಕುಳ, ಹಲ್ಲೆ ಆರೋಪ

“ಕಲಾವಿದರಾದ ನಾವು ಬೀದಿಯಿಂದಲೇ ಬಂದಿರುವುದರಿಂದ, ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವು ಮತ್ತೇ ಬೀದಿಗೆ ಹೋಗಿ ಕೆಲಸ ಮಾಡಬೇಕಾಗಿದೆ. ಈ ಹೊತ್ತಿನಲ್ಲಿ ನಾವು ಮೌನವಾಗಿ ಇರಬಾರದು. ಮೌನವಾಗಿ ಇದ್ದಷ್ಟು ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ಅದಾಗಿಯೆ ಸರಿಯಾಗುತ್ತದೆ ಎಂದು ನಾವು ಅಂದುಕೊಳ್ಳುವುದು ತಪ್ಪು. ಧರ್ಮ ಮತ್ತು ರಾಜಕಾರಣದ ಅಪವಿತ್ರ ಮೈತ್ರಿಯಿಂದ ಪರಿಸ್ಥಿತಿ ಹೀಗಾಗುತ್ತಿದೆ ಎಂದು ನಾವು ತಿಳಿದುಕೊಳ್ಳಬೇಕು. ಹಾಗೂ ನಾವು ಜನರ ಭಾಷೆಗಳನ್ನು ಮಾತನಾಡಬೇಕು ಎಂದು ವೇದಿಕೆಯಲ್ಲಿ ನಾವು ತೀರ್ಮಾನಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಿದ್ದೇವೆ” ಎಂದು ಹೇಳಿದ್ದಾರೆ.

“ಈ ಹಿಂದೆ ರಾಜ್ಯದಲ್ಲಿ ರೈತ ಸಂಘ ಮತ್ತು ದಲಿತ ಸಂಘಟನೆ ಗಟ್ಟಿಯಾಗಿದ್ದಾಗ ಕೋಮುದ್ವೇಷ ಹರಡುವ ಈ ರೀತಿಯ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಈಗ ಅವುಗಳು ನಿಷ್ಕ್ರಿಯವಾಗಿ ಇರುವುದರಿಂದ, ನಾವು ಶೂದ್ರರು ಶೂದ್ರ ವೇದಿಕೆಯನ್ನು ಕಟ್ಟಿ, ಅದರಲ್ಲಿ ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸಿ, ನಾವು ಕೆಲಸ ಮಾಡಲಿದ್ದೇವೆ” ಎಂದು ಅವರು ಹೇಳಿದ್ದಾರೆ.

“ಹಳ್ಳಿಗಳಲ್ಲಿ ಒಂದು ಆರ್ಥಿಕತೆಯಿದೆ. ಈ ಆರ್ಥಿಕತೆಯನ್ನು ಬಿಜೆಪಿ ಬೆಂಬಲಿತ ಸಂಘಟನೆಗಳು ಹಾಳುಮಾಡುತ್ತಿರುವುದರಿಂದ ರೈತರು, ಬಡವರು, ಬಡ ಮುಸ್ಲಿಮರ ವೃತ್ತಿಗಳಿಗೆ ತೊಂದರೆಯಾಗುತ್ತದೆ. ಈಗಾಗಲೇ ನಿರುದ್ಯೋಗ ಸೃಷ್ಟಿಯಾಗಿದೆ, ಈಗ ಇನ್ನಷ್ಟು ದೊಡ್ಡ ಹಂತದಲ್ಲಿ ನಿರುದ್ಯೋಗ ಸೃಷ್ಟಿಯಾಗುವ ವಾತಾವರಣವನ್ನು ಸಂಘಪರಿವಾರ ಸೃಷ್ಟಿಮಾಡುತ್ತಿದೆ. ಹೀಗಾಗಿ ‘ಅನ್ನ’ ಬೆಳೆಯುವವರು ಹಾಗೂ ‘ಅನ್ನ’ ಹಂಚುವವರು ಸಾಧ್ಯವಾದಷ್ಟು ಒಂದಾಗಬೇಕು ಎಂಬ ಆಶಯದೊಂದಿಗೆ ವೇದಿಕೆಯ ಮೂಲಕ ಕೆಲಸ ಮಾಡಲಿದ್ದೇವೆ” ಎಂದು ನಟರಾಜ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಹಲಾಲ್‌‌ ಮಾಂಸ ವಿಷಕಾರಿಯೆ? ಬಜರಂಗದಳದ ಈ ಪೋಸ್ಟರ್‌‌‌ನಲ್ಲಿರುವ ಸುಳ್ಳುಗಳೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...