ಧಾರವಾಡದ ನುಗ್ಗಿಕೇರಿಯಲ್ಲಿನ ಹನುಮಾನ್ ದೇವಸ್ಥಾನದ ಬಳಿ ಕಳೆದ ಹದಿನೈದು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ನಬಿಸಾಬ್ ಅವರಿಗೆ ಶ್ರೀರಾಮಸೇನೆಯ ಗೂಂಡಾಗಳು ಅಡ್ಡಿಪಡಿಸಿ ಸುಮಾರು ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಒಡೆದು ಹಾಕಿರುವ ಘಟನೆಗೆ ನಾಡಿನ ಜನರು ಕಂಬನಿ ಮಿಡಿದಿದ್ದಾರೆ.
ಮುಸ್ಲಿಂ ಎಂಬ ಕಾರಣವೊಡ್ಡಿ ಬಡಪಾಯಿಯ ಹೊಟ್ಟೆಯ ಮೇಲೆ ಹೊಡೆದಿರುವ ಚಿತ್ರಗಳನ್ನು, ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುವ ಜನರು ಸರ್ಕಾರದ ನಿಷ್ಕ್ರಿಯತೆಯನ್ನು ಪ್ರಶ್ನಿಸುತ್ತಿದ್ದಾರೆ.
ಬಸವಾದಿ ಶರಣರು, ಸೂಫಿ ಸಂತರು ನಡೆದಾಡಿದ ನೆಲದಲ್ಲಿ ದಿನದಿಂದ ದಿನಕ್ಕೆ ಜನಾಂಗೀಯ ದ್ವೇಷ ಹೆಚ್ಚಾಗುತ್ತಿರುವುದರ ವಿರುದ್ದದ ಜನಾಕ್ರೋಶವು ನಬಿಸಾಬ್ ಅವರಿಗಾಗಿರುವ ಅನ್ಯಾಯದ ಹಿನ್ನೆಲೆಯಲ್ಲಿ ಸ್ಪೋಟಗೊಂಡಿದೆ. ಧರ್ಮದ ಹೆಸರಲ್ಲಿ ತಾಂಡವವಾಡುತ್ತಿರುವ ಅಧರ್ಮದ ವಿರುದ್ಧ ಪ್ರಜ್ಞಾವಂತ ಮನಸ್ಸುಗಳು ದನಿ ಎತ್ತಿವೆ.
ಘಟನೆಯ ಬಳಿಕ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, “ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗೆಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರಾಮಭಕ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮುಸ್ಲಿಮರ ಅಂಗಡಿಗಳನ್ನು ನಾಶಪಡಿಸಿ, ಅವರು ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿರುವುದು ಹೇಯ & ಪರಮ ಕಿರಾತಕ ಕೃತ್ಯ” ಎಂದಿದ್ದಾರೆ.
“ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಸುವ ಭಯಾತ್ಪಾದಕರಿಗೂ, ಶಾಂತಿ-ಸೌಹಾರ್ದತೆಗೆ ಕಿಚ್ಚಿಡುತ್ತಿರುವ ಈ ಕಿರಾತಕರಿಗೂ ವ್ಯತ್ಯಾಸವೇ ಇಲ್ಲ. ತಿನ್ನುವ ಅನ್ನಕ್ಕೆ ಮಣ್ಣುಹಾಕಿ ಬದುಕಿಗೆ ಬೆಂಕಿ ಇಡುವ ಇಂಥ ಪ್ರವೃತ್ತಿ ಅನಾಗರಿಕ-ಅಸಹ್ಯ. ಕರ್ನಾಟಕವನ್ನು ಈ ದುಷ್ಟರು, ಶಿಲಾಯುಗದತ್ತ ಹಿಮ್ಮೆಟ್ಟಿಸುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಈ ರಕ್ಕಸರು ಕಲ್ಲಂಗಡಿಯನ್ನು ರಸ್ತೆಗೆಸೆದು ನಾಶ ಮಾಡಿದ ಪರಿಯನ್ನು ಗಮಿನಿಸಿದರೆ ಸಾಕು; ಇವರ ರಾಕ್ಷಸ ಪ್ರವೃತ್ತಿ ಉಗ್ರರಿಗಿಂತ ಕಮ್ಮಿಯೇನಲ್ಲ. ಅನ್ನವನ್ನೇ ಹಾಳುಗೆಡವಿದ ಈ ನೀಚರಿಗೆ ತಕ್ಕ ಪಾಠ ಕಲಿಸಲೇಬೇಕು. ಇವರ ವಿರುದ್ಧ ಸರಕಾರವು ಕೂಡಲೇ ಭಯೋತ್ಪಾದನೆ ವಿರುದ್ಧದ ಕಾಯ್ದೆ ಅಡಿ ಕೇಸು ದಾಖಲಿಸಬೇಕು. ಸರ್ವ ಜನಾಂಗದ ತೋಟಕ್ಕೆ ಸಮಾಧಿ ಕಟ್ಟುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆಯಾ? ಎಂಬ ಸಂಶಯ ನನ್ನದು” ಎಂದು ಹೇಳಿದ್ದಾರೆ.
***
‘ಕ್ರಿಯೆಗೆ ಪ್ರತಿಕ್ರಿಯೆ’
ಪ್ರೀತಿಯ ದಲಿತ ಹೋರಾಟಗಾರರೇ…. ಈ ಸಮಾಜವನ್ನು ನಾವಲ್ಲದೆ ಮತ್ಯಾರೂ ಸರಿದಾರಿಗೆ ತರಲಾರರು. ಮೊನ್ನೆ ಮೊನ್ನೆ ನೀವೆಲ್ಲಾ ನೀಲಿ ಶಾಲುಗಳೊಂದಿಗೆ ಬೀದಿಗಳಲ್ಲಿ ನೊಂದವರ ಕಣ್ಣೀರು ಒರೆಸಿದ್ದೀರಿ… ಈಗಲೂ ಆ ಅನಿವಾರ್ಯತೆ ಒದಗಿಬಂದಿದೆ.
ಧರ್ಮದ ಹೆಸರಲ್ಲಿ ಈ ಪುಂಡು ಪೋಕರಿಗಳು ಎಲ್ಲೆಲ್ಲಿ ಉಣ್ಣವ ತಟ್ಟೆಗಳಿಗೆ ಉಚ್ಚೆ ಹೊಯ್ಯುತ್ತಾರೋ.. ಅಲ್ಲೆಲ್ಲಾ ನೀಲಿಶಾಲುಗಳೊಂದಿಗೆ ಕೈಯಲ್ಲೊಂದು ದೊಣ್ಣೆ ಹಿಡಿದು ಬೀದಿಗಳಿಯಿರಿ…. ಅವರ ಕುಂಡಿಗಳ ಮೇಲೆ ಬಾರಿಸಿ ಬುದ್ದಿ ಹೇಳೋಣ. ಅವರಿಗೆ ನಮ್ಮ ದೊಣ್ಣೆಗಳೇ ಸರಿ. ರಾಜ್ಯದ ಮುಖ್ಯಮಂತ್ರಿ ಹೇಗೂ ಹೇಳಿದ್ದಾರೆ ‘ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ’ ಅಂತ. ಆವತ್ತು ಇದೇ ಮುಸಲ್ಮಾನ ಬಂಧುಗಳು ಬಾಬಾಸಾಹೇಬರ ಕೈ ಹಿಡಿದಿದ್ದನ್ನು ಮರೆಯದಿರೋಣ.
– ಹುಲಿಕುಂಟೆ ಮೂರ್ತಿ
***
ಭವಿಷ್ಯವೇ ಛಿದ್ರವಾಗಿ ಬಿದ್ದಿದೆ
ಇವು ನಿಮಗೆ ಕೇವಲ ಒಡೆದು ಹೋದ ಕಲ್ಲಂಗಡಿಯ ಹಾಗೆ ಕಾಣುತ್ತಿರಬಹುದು. ಸರಿಯಾಗಿ ಗಮನಿಸಿನೋಡಿ. ನಮ್ಮ ಮಕ್ಕಳ, ಮೊಮ್ಮಕ್ಕಳ ಭವಿಷ್ಯವೇ ಇಲ್ಲಿ ಛಿದ್ರವಾಗಿ ಬಿದ್ದಿದೆ. ಸೌಹಾರ್ದ ಕರ್ನಾಟಕದ ಕನಸುಗಳ ಕೂಸುಗಳು ರಕ್ತಚೆಲ್ಲಿಕೊಂಡು ಬಿದ್ದಿದೆ. ಇದನ್ನು ಇನ್ನು ರಿಪೇರಿ ಮಾಡುವುದು ಕಷ್ಟ. ನೀವು ಹಿಂದೂ ಆಗಿರಿ, ಮುಸ್ಲಿಂ ಆಗಿರಿ, ಮತ್ತೊಂದು ಧರ್ಮೀಯರೇ ಆಗಿರಿ, ನಿಮ್ಮ ಮಕ್ಕಳ ಭವಿಷ್ಯವನ್ನು ಹೀಗೆ ಬೀದಿಯಲ್ಲಿ ಒಡೆದುಹಾಕಲಾಗಿದೆ, ನೀವು ಅದನ್ನು ನೋಡಿಕೊಂಡು ಸುಮ್ಮನಿದ್ದೀರಿ. ನೀವು ನಂಬಿದ ದೇವರು ಎಲ್ಲವನ್ನೂ ನೋಡುತ್ತಿರುತ್ತಾನಲ್ಲವೇ? ಕೊನೆಯ ಪಕ್ಷ ನಿಮ್ಮ ಆತ್ಮಸಾಕ್ಷಿಯೂ ಒಮ್ಮೆ ತಿರುಗಿ ನಿಂತು ಪ್ರಶ್ನೆ ಕೇಳಿದಾಗ ಏನುತ್ತರ ಕೊಡುವಿರಿ?
– ಚಂದ್ರು ತರಹುಣಿಸೆ
***
ಶ್ರೀರಾಮ ಚೂರಾದರೂ ಕರುಣಿಸಲಿ
ಯಾವುದೊ ಒಂದು ಕೆಲಸ ಫೈನಲ್ ಆಗುವುದರಲ್ಲಿತ್ತು. ಆ ಕಟ್ಟಡದ ಮಾಲೀಕ ಮುಸ್ಲಿಮ್. ಮುಂಗಡದ ವಿಷಯ ಮಾತಾಡಲು ಬೆಳಿಗ್ಗೆ ಕರೆ ಮಾಡಿದಾಗ ಆತ ‘ ನಿಮ್ಮವರು ಸಾಬರಿಗೆ ಕೆಲಸ ಕೊಡಬೇಡಿ, ಸಾಬರಲ್ಲಿ ವ್ಯಾಪಾರ ಮಾಡಬೇಡಿ ಅಂತಿದ್ದಾರೆ ಈಗ ನಾವು ಹೇಗೆ ನಿಮಗೆ ಕೆಲಸ ಕೊಡೋದು? ನಮ್ಮವರನ್ನೇ ಯಾರನ್ನಾದರೂ ನೋಡಿಕೊಳ್ಳುತ್ತೇನೆ ಬಿಡಿ…’ ಎಂದು ಕಾಲ್ ಕಟ್ ಮಾಡಿದರು. ಲಗಾಮಿಲ್ಲದ ಬೆಲೆಯೇರಿಕೆಯಿಂದಾಗಿ ಕೆಲಸಗಳು ಕೈ ತಪ್ಪುತ್ತಿರುವ ಅತಿಕೆಟ್ಟ ಸಮಯದಲ್ಲಿ ಮತ್ತೊಂದು ಬರೆ. ಯಾರೋ ಎಲ್ಲೋ ಹಚ್ಚಿದ ಬೆಂಕಿ ಕೇವಲ ಅವರು ಗುರಿಯಿಟ್ಟಿರುವವರನ್ನು ಮಾತ್ರ ಸುಡುತ್ತಿಲ್ಲ ಎಂಬುದಕ್ಕೆ ಇಂದಿನ ಘಟನೆ ಒಂದು ಉದಾಹರಣೆ. ಬ್ಯಾನ್ ನ ಅಭಿಯಾನ ನಡೆಸುತ್ತಿರುವವರು, ಅದನ್ನು ಆನಂದಿಸುತ್ತಿರುವವರು ಹಾಗೂ ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಅಲ್ಲಿ ಇಲ್ಲಿ ಮದುವೆ, ಮನೆ ಒಕ್ಕಲಿನಲ್ಲಿ ಫೋಟೊಗೆ ಫೋಸ್ ಕೊಡುತ್ತಿರುವ ಮುಖ್ಯಮಂತ್ರಿಗಳು… ಇವರೆಲ್ಲರಾಚೆಗೂ ಒಂದು ದೊಡ್ಡ ಜಗತ್ತಿದೆ. ಅದು ಶ್ರಮಿಕರ ಜಗತ್ತು. ಅಲ್ಲವರು ದಿನನಿತ್ಯ ಗೇಯ್ದೇ ಹೊಟ್ಟೆ ತುಂಬಿಸಿಕೊಳ್ಳಬೇಕು. ಅಲ್ಲಿ ಅವರಿಗೆ ಇವರು ಬೇಕು, ಇವರಿಗೆ ಅವರು ಬೇಕು. ಧರ್ಮ ಸಂಘರ್ಷಗಳು ಯಾವತ್ತಿಗೂ ಮೊದಲು ಬಲಿಹಾಕುವುದು ಈ ಬಡವರನ್ನೇ… ಶ್ರಮಿಕರ mutual contribution ಅನ್ನು ಮುರಿದು ದೇಶ ಕಟ್ಟಲು ಹೊರಟಿರುವವರಿಗೆ ಶ್ರೀರಾಮ ಈ ಅರಿವನ್ನು ಚೂರಾದರೂ ಕರುಣಿಸಲಿ.
ರಾಮನವಮಿಯ ಶುಭಾಶಯಗಳು.…
****
ಹಾಗೆ ಸುಮ್ಮನೆ…
ಕಲ್ಲಂಗಡಿ ಹಣ್ಣುಗಳನ್ನು ರಸ್ತೆಗೆಸೆಯುತ್ತಿದ್ದಾಗ ಅಲ್ಲಿದ್ದ ಅಷ್ಟೂ ಜನ ಯಾಕೆ ತಡೆಯಲಿಲ್ಲವೆಂದು ವೃಥಾ ಪ್ರಶ್ನೆ ಕೇಳಬೇಡಿ. ನಾವು ನಮ್ಮ ಕಣ್ಮುಂದೆ ಬೀದಿಯಲ್ಲಿ ಕೊಲೆ ನಡೆದರೂ, ಹೊಡೆದಾಟ ನಡೆದರೂ ‘ಹಾಗೆ ಸುಮ್ಮನೆ’. ಅಷ್ಟೇ ಯಾಕೆ ರಸ್ತೆ ಅಪಘಾತ ನಡೆದು ಯಾರಾದ್ರೂ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದರೂ ನಾವು ‘ಹಾಗೆ ಸುಮ್ಮನೆ’. ನಾವು ಬಹಳ ಒಳ್ಳೆಯ ಸುಸಂಸ್ಕ್ರತ ಜನ. ಬೇರೆಯವರ ವಿಷಯಗಳಲ್ಲಿ ಅನಗತ್ಯವಾಗಿ. ಮೂಗು ಬಿಡಿ ತಲೆ, ಕೈ, ಬಾಯಿ ಏನೂ ಹಾಕಲ್ಲ. Poking Nose ಒಳ್ಳೆಯ ಗುಣಲಕ್ಷಣ ಅಲ್ಲ. You know we aren’t uncouth but civilised people.
-ಅಲ್ಮೇಡಾ ಗ್ಲಾಡ್‌ಸನ್
***
ಸಹಾಯ ಮಾಡೋಣ
ಇವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ.. ಏನಂತೀರಾ…? ನಾವು ಮುನುಷ್ಯತ್ವವನ್ನೇ ಧರ್ಮವೆನ್ನುವ ಹಿಂದೂಗಳು… ರಾಮನಾವಮಿಗೆ ಮಾಡಿದ ಪಾನಕ ಕೋಸಂಬರಿಯನ್ನು ಇವರ ಜೊತೆ ಹಂಚಿ,ತಿಂದು ಬೆಳೆದವರು. ಅದು ನಮ್ಮ ರಾಮಮಂದಿರದ ಮುಂದೆ. ರಾಮನವಮಿಯಾ ಶುಭಾಶಯಗಳು ಆಗ ಬೇರೇನೇ ಇರ್ತಿತ್ತು.
– ಅಕ್ಷತಾ ಪಾಂಡವಪುರ
ಪೂರ್ವ ನಿಯೋಜಿತ
ಇದ್ಯಾವುದೂ ಆಕಸ್ಮಿಕವೇನಲ್ಲ, ಎಲ್ಲವೂ ಪೂರ್ವನಿಯೋಜಿತ ಷಡ್ಯಂತ್ರದ ಭಾಗ. ಇದು ಇಲ್ಲ ಕೊನೆಗೊಳ್ಳುವುದೂ ಇಲ್ಲ, ಮುಂದೆ ಭೀಕರ ಬದುಕು ಕಾಣಸಿಗಲಿದೆ. ಈ ಹಿರಿ ಜೀವದ ಅಸಹಾಯಕತೆ ಮತ್ತು ನೋವನ್ನು ಕಾಣುವಾಗ ನಮ್ಮ ಆತ್ಮಸಾಕ್ಷಿ ನಮ್ಮನ್ನು ನಾವಿದ್ದೂ ಏನು ಪ್ರಯೋಜನ ಎಂದು ನಮ್ಮನ್ನು ಪ್ರಶ್ನಿಸತೊಡಗಿದೆ.
– ಜಬ್ಬರ್ ಸುಂಡೇಕೆರೆ
***
***
***
ಮನುಷ್ಯನಾಗು ಮಗುವೆ…
ಅಯ್ಯೋ ಎಲ್ಲವೂ ಒಡೆದು ಮಣ್ಣುಪಾಲು ಮಾಡಿದೆಯೇನೋ ಮಗನೆ.
ಅಗೊ ಅಲ್ಲಿ ನಡುವಲ್ಲಿ ಬಿದ್ದಿದೆ ನೋಡು
ನೀನೇ ನಿನ್ನ ಕೈಯಾರೆ ಒಡೆದಿದ್ದು. ಬಲು ಕೆಂಪು
ಸಕ್ಕರೆಯಚ್ಚು ತಿಂದಷ್ಟು ಸವಿ
ಬಿರು ಬಿಸಿಲಲ್ಲಿ ತಂಪು
ನರನಾಡಿಗೆಲ್ಲ ಚೈತನ್ಯದ ಸಿಂಚನ
ಉರಿವ ಸೂರ್ಯ ಸೆಳೆದ
ಶಕ್ತಿಯೆಲ್ಲವ ಮರಳಿ ತಂದಂತೆ
ಮೊಗೆ ಮೊಗೆದು ಕುಡಿವಷ್ಟು
ಅಮೃತ ಧಾರೆ.
ಹಸಿವು ನೀರಡಿಕೆ ಬಿಸಿಲಿಗೆಲ್ಲಿದೆ ಧರ್ಮ?
ಎಲ್ಲ ಹಸಿದವರಿಗಾಹಾರವಾಗಿ
ಬೊಗಸೆಗೆ ಜೀವದ ಹನಿಯಾಗುತಿತ್ತು ಅದು.
ಸುಮ್ಮನೇಕೆ ಮಣ್ಣಾಗಿಸಿದೆ?
ನಿನ್ನ ತುತ್ತಿನ ಚೀಲವನೇ ತುಂಬುತ್ತಿತ್ತು.
ಎಷ್ಟು ಅಂಗಡಿಗಳ ಕೆಡುಕೆಡುಹಿ
ದಾಹಗೊಂಡಿರುವೆಯೊ?
ಎಷ್ಟೊಂದು ಬೈದು ಗಂಟಲೊಣಗಿದೆಯೊ?
ಇದರಲ್ಲೊಂದಾದರೂ ತಿನ್ನಬಾರದಿತ್ತೆ?
ಅಗೊ ಅಲ್ಲಿ ನೋಡು
ಸಂಜೀವಿನಿ ತಂದ ಹನುಮ.
ಹನುಮನಲ್ಲಿಗೆ ಬಂದು ಸುತ್ತು ಹೊಡೆದು ಸುಸ್ತಾಗಿದವರಿಗಿದುವೇ ಆಸರೆಯಾಗಿತ್ತು. ಅವರೊಡಲು ತಂಪಾದರೆ
ನನ್ನೆದೆಯ ಹೂವು ಅರಳುತ್ತಿತ್ತು.
ಅಲ್ಹಾನ ಪ್ರಾರ್ಥನೆಯೊಂದೇ
ಎನ್ನೊಡಲಿಗಾಧಾರ.
ಹಸಿವೆಂಬುದೊಂದು ಹೆಬ್ಬಾವು ಕೂಸೆ.
ಕಚ್ಚಿದರದು ವಿಷವೇ ಹೌದು.
ಹೆಗಲ ಶಾಲಲಿ ಬೆವರೊರೆಸಿಕೊ
ಮತ್ತೂ ತರುವೆ ಸಿಹಿಕಲ್ಲಂಗಡಿ
ನಿನಗಾಗಿ
ಹಸಿದೊಡಲಿಗಾಗಿ.
ಹಾಂ ನೆನಪಿಟ್ಟುಕೊ
ಒಡೆದು ಹಾಕುವ ಮುನ್ನ
ಒಂದು ಚೂರಾದರೂ ತಿಂದು ದಣಿವಾರಿಸಿಕೊ…
ಮತ್ತು
ಹೊಟ್ಟೆ ತಣ್ಣಗಾದ ಮೇಲಾದರೂ
ಮನುಷ್ಯನಾಗು ಮಗುವೆ.
– ಕೆ.ನೀಲಾ, ಕಲ್ಬುರ್ಗಿ
***
***
***
ಆ ನಾಲ್ಕು ಮಂದಿ ಪುಂಡರಿಗಿಂತಲೂ ಸುಮ್ಮನೆ ಕೂತು ನೋಡುತ್ತಿರುವ ಸಮಾಜದ ಬಗ್ಗೆ ಹೇವರಿಕೆ ಹುಟ್ಟುತ್ತಿದೆ. ನಮ್ಮೊಳಗೆ ನಾವು ಅಪರಿಚಿತರಾಗಿ ಬದುಕುವ ಸಂಕಟ ಯಾರಿಗೂ ಬರಬಾರದು.
-ಫಾತಿಮಾ ರಲಿಯಾ
***
***
‘ಅರೆಸ್ಟ್ ಸಂಘಿಗೂನ್ಸ್’ ಅಭಿಯಾನ #ArrestSanghiGoons
ಅಭಿಯಾನವನ್ನು ಕರ್ನಾಟಕ ರಣಧೀರ ಪಡೆ (ಕರಪ) ವತಿಯಿಂದ #ArrestSanghiGoons ಟ್ವಿಟರ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಹಲವಾರು ಚಿಂತಕರ ಹೇಳಿಕೆಗಳನ್ನು ಕರಪ ಅಧ್ಯಕ್ಷ ಹರೀಶ್ ಭೈರಪ್ಪ ಹಂಚಿಕೊಂಡಿದ್ದಾರೆ.
#ArrestSanghiGoons#ಕಿಡಿಗೇಡಿಗಳನ್ನುಬಂಧಿಸಿ pic.twitter.com/BZLoB7nc5S
— ಭೈರಪ್ಪ ಹರೀಶ್ ಕುಮಾರ್🟨🟥,🇮🇳(B Harish Kumar) (@byrappa_harish) April 10, 2022














ಸ್ವಲ್ಪ ಜೆ ಜೆ ನಗರ ಚಂದ್ರು ಕೊಲೆ ಬಗ್ಗೆನು ಬರೆಯಿರಿ
Bahalla dukka agide ivarige hagu e media ke.
Kashmiralli Marrana Homa maddaga ela media sweets thinuthithu.
Iga kalangadi hanu vishaya dodadagi publicity madthare.
Chandru kole,savira savira anyaya publicity madi.
One sided news agbedi .
Nima news bore aguthe.
Nivu yavudo ondu Varga vanu mechisalu e news Channel nadso Hage kanuthe .
Sound pollution 5 times a day kandisi publicity madi..Madthira ?
Nimage Gandhi family thumba close Janma Janma Sambandha ansuthe…
Sahawasa dosha