Homeಕರ್ನಾಟಕಎಲ್ಲರೂ ನನ್ನ ಕೊಂದು ಬಿಡಿ: ಶ್ರೀರಾಮಸೇನೆಯ ಗೂಂಡಾಗಳಿಂದ ದಾಳಿಗೊಳಗಾದ ಮುಸ್ಲಿಂ ವ್ಯಾಪಾರಿಯ ಸಂಕಟ

ಎಲ್ಲರೂ ನನ್ನ ಕೊಂದು ಬಿಡಿ: ಶ್ರೀರಾಮಸೇನೆಯ ಗೂಂಡಾಗಳಿಂದ ದಾಳಿಗೊಳಗಾದ ಮುಸ್ಲಿಂ ವ್ಯಾಪಾರಿಯ ಸಂಕಟ

- Advertisement -
- Advertisement -

“ಕೈ ಎತ್ತಿಬಿಡ್ತೀನಿ… ಎಲ್ಲರೂ ನನ್ನ ಕೊಂದು ಬಿಡಿ…”- ಹೀಗೆ ಮನನೊಂದು ಹೇಳುತ್ತಾರೆ ಧಾರವಾಡದ ಮುಸ್ಲಿಂ ವ್ಯಾಪಾರಿ ನಬಿಸಾಬ್‌. ಈ ಮಾತು ಮನುಷ್ಯರಾದವರನ್ನು ಕಲಕದೆ ಇರದು.

ಧಾರವಾಡದ ನುಗ್ಗಿಕೇರಿಯಲ್ಲಿನ ಹನುಮಾನ್‌ ದೇವಸ್ಥಾನದ ಬಳಿ ಕಳೆದ ಹದಿನೈದು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ನಬಿಸಾಬ್‌‌, ಶ್ರೀರಾಮಸೇನೆಯ ಗೂಂಡಾಗಳಿಂದ ತೊಂದರೆಗೊಳಗಾಗಿದ್ದಾರೆ. ದೇವಸ್ಥಾನದ ಬಳಿ ಕಲ್ಲಂಗಡಿ ಮಾರುತ್ತಿದ್ದ ಕಾರಣಕ್ಕೆ ಗೂಂಡಾಗಳು ದಾಂಧಲೆ ನಡೆಸಿದ್ದಾರೆ. ಐದು ಕ್ವಿಂಟಾಲ್‌ ಕಲ್ಲಂಗಡಿಯನ್ನು ಒಡೆದು ಹಾಕಿ, ಬಡ ವ್ಯಾಪಾರಿಯ  ಹೊಟ್ಟೆ ಮೇಲೆ ಹೊಡೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿರುವ ನಬಿಸಾಬ್‌, “ಬಂದವರು ಪಟ್‌ ಪಟ್‌ ಅಂತ ಕಲ್ಲಂಗಡಿ ಕಾಯಿಗಳನ್ನು ಒಡೆದುಕೊಂಡು ಬಂದರು. ಒಂದೆರಡು ಕಾಯಿಯಲ್ಲ, ತೆಗೆದುಕೊಳ್ಳುತ್ತೀವಿ ಸ್ವಾಮಿ ಸ್ವಲ್ಪ ನಿಲ್ಲಿಸಿ ಎಂದರೂ ಕೇಳಲಿಲ್ಲ. ಎಲ್ಲವನ್ನೂ ಒಡೆದುಹಾಕಿದರು. ನಾನೇನು ಮಾಡಬೇಕಾಗುತ್ರೀ?” ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.

“ನಾವು ಸರಿದು ನಿಂತುಬಿಟ್ಟಿವಿ. ಅವರು ಒಡೆಯುತ್ತಿದ್ದಾಗ ನಾವೇನು ಮಾಡಲು ಆಗುತ್ರೀ? ಅವರು ಎಂಟು ಹತ್ತು ಇದ್ದರು, ನಾವೊಬ್ಬ ಇದ್ದೀನಿ. ಒಂದು ಕಾಯಿ ತೆಗೆದು ಇಡುವಷ್ಟರಲ್ಲಿ ಹತ್ತು ಕಾಯಿ ಒಡೆಯುತ್ತಿದ್ದರು. ಆರು ಕಿಂಟ್ವಾಲ್‌ ತೆಗೆದುಕೊಂಡು ಬಂದಿದೆ. ಒಂದು ಕಿಂಟ್ವಾಲ್ ಮಾಗ್ರ ಮಾರಿದ್ದೆ. ಉಳಿದೆಲ್ಲವನ್ನೂ ಒಡೆದು ಹಾಕಿದ್ರು” ಎಂದು ನೋವು ತೋಡಿಕೊಂಡಿದ್ದಾರೆ.

“ಮುಸಲ್ಮಾನರು ಅಂಗಡಿ ಇಡಬೇಡಿ ಎಂದು ತಿಳಿಸಿದ್ದು ನಿಜ. ನಾನು ಹದಿನೈದು ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಪ್ರತಿ ಕಿಂಟ್ವಾಲ್ ಕಲ್ಲಂಗಡಿಯನ್ನು 1700 ರೂಪಾಯಿ ಕೊಟ್ಟು ಖರೀದಿಸಿದ್ದೀನಿ. ಒಂದು ಕ್ವಿಂಟಾಲ್ ಮಾತ್ರ ಮಾರಿದ್ದೀನಿ. ಉಳಿದಿದೆಲ್ಲವನ್ನೂ ಒಡೆದು ಹಾಕಿದ್ದಾರೆ… ಕೈ ಎತ್ತಿಬಿಡ್ತೀನಿ, ಎಲ್ಲರೂ ನನ್ನ ಕೊಂದುಬಿಡಿ” ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ನಬಿಸಾಬ್.

ದೇವಸ್ಥಾನದ ಪರ್ಯಾಯಸ್ತ ನರಸಿಂಹ ದೇಸಾಯಿಯವರು ಮಾತನಾಡಿ, “ಶ್ರೀರಾಮಸೇನೆಯವರು ನಮಗೆ ಮನವಿ ಕೊಟ್ಟಿಲ್ಲ.. ಹೋದ ತಿಂಗಳೇನೋ ಕೊಟ್ಟಿದ್ದರೇನೋ… ನಾನು ಬಂದು ಒಂದು ತಿಂಗಳಾಗಿದೆ. ಆ ಮನವಿ ಬಗ್ಗೆಯಾಗಲೀ, ಇಂದಿನ ಗಲಾಟೆ ಬಗ್ಗೆಯಾಗಲೀ ಸಮಿತಿಯ ಸಭೆ ಕರೆದು ಪ್ರತಿಕ್ರಿಯೆ ನೀಡುತ್ತೇನೆ…” ಎಂದಿದ್ದಾರೆ.

“ಅಂಗಡಿ ನಡೆಸಲು ಬಡವರಿಗೆ ಕೊಟ್ಟಿದ್ದೀವಿ. ಇಲ್ಲಿ ಶೇ. 99 ಜನ ಹಿಂದೂಗಳಿದ್ದಾರೆ. ಎಲ್ಲರಿಗೂ ಹೊಟ್ಟೆಪಾಡು ಇರುತ್ತೆ. ಅವರ ಹೊಟ್ಟೆಪಾಡಿಗೆ ನಾವು ಸಹಾಯ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿರಿ: ಮುಸ್ಲಿಂ ಜೊತೆ ಮದುವೆಯಾದರೆ ಬಹಿಷ್ಕರಿಸಿ ಎನ್ನುವ ಬಿಜೆಪಿ ಮುಖಂಡ, ‘ಅಂತರ್ಜಾತಿ ವಿವಾಹ’ ಎಂದರೆ ಉತ್ತರಿಸುವುದಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಮನ ಕಲುಕಲಿಕ್ಕೆ ಇವರು ನಿಜವಾಗ್ಲೂ ಮನುಷ್ಯರಲ್ಲ ಪುರಾಣದಲ್ಲಿ ರಾಕ್ಷಸರಿಗಾದರೂ ಸ್ವಲ್ಪ ಕರುಣೆ ಇತ್ತೇನೋ ಇವರು ಗೋಮುಖ ವ್ಯಾಘ್ರರು ಅಲ್ರಿ ಬೀದಿಬದಿ ಹಣ್ಣು ವ್ಯಾಪಾರ ಮಾಡಿ ತಮ್ಮ ಕುಟುಂಬ ಸಾಕಲಿಕ್ಕೆ ಅಲ್ವಾ ಬಿಸಿಲಲ್ಲಿ ಶ್ರಮ ಪಡೋದು ಇದೇನು ದೇಶದ್ರೋಹಿ ಕೆಲಸನಾ ನೆನಪಿರಲಿ ಸೃಷ್ಟಿ ಕರ್ತ ಎಲ್ಲವನ್ನು ನೋಡುತ್ತಿದ್ದಾನೆ ಮುಂದೊಂದು ದಿನ ಈ ಬಡ ಮುಸಲ್ಮಾನರೇ ನಿಮ್ಮ ಹೆಣ ಹೊರಲಿಕ್ಕೆ ಸಮಯ ಬರಬಹುದು ಭಗವಂತನ laathiyalli ಸೌಂಡ್ ಇರುವುದಿಲ್ಲ b carefull

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...