HomeದಿಟನಾಗರFACT CHECK : ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಮತ ಚಲಾಯಿಸಬಹುದೇ?

FACT CHECK : ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಮತ ಚಲಾಯಿಸಬಹುದೇ?

- Advertisement -
- Advertisement -

‘ಚಾಲೆಂಜ್ ವೋಟ್‌ ಮತ್ತು ಟೆಂಡರ್ಡ್‌ ವೋಟ್‌’ (Challenge vote and Tender vote) ಕುರಿತು ವಿವರಿಸಿದ ಚುನಾವಣಾ ಜಾಗೃತಿಯದ್ದು ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್ ಸಂದೇಶದಲ್ಲಿ ಈ ಕೆಳಗಿನಂತೆ ಬರೆಯಲಾಗಿದೆ..

“ನೀವು ಮತಗಟ್ಟೆಗೆ ತೆರಳಿದಾಗ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ನಿಮ್ಮ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಸೆಕ್ಷನ್ 49ಪಿ ಅಡಿಯಲ್ಲಿ ‘ಚಾಲೆಂಜ್ ವೋಟ್’ ಅನ್ನು ಕೇಳಿ ಮತ್ತು ನಿಮ್ಮ ಮತವನ್ನು ಚಲಾಯಿಸಿ.”

“ಯಾರಾದರೂ ಈಗಾಗಲೇ ನಿಮ್ಮ ಮತವನ್ನು ಚಲಾಯಿಸಿದ್ದಾರೆ ಎಂಬುವುದು ನಿಮಗೆ ಗೊತ್ತಾದರೆ, ನಂತರ “ಟೆಂಡರ್ಡ್‌ ವೋಟ್” ಅನ್ನು ಕೇಳಿ ಮತ್ತು ನಿಮ್ಮ ಮತವನ್ನು ಚಲಾಯಿಸಿ”.

“ಯಾವುದೇ ಮತಗಟ್ಟೆಯಲ್ಲಿ ಶೇ.14ಕ್ಕಿಂತ ಹೆಚ್ಚು ಟೆಂಡರ್ಡ್‌ ಮತಗಳು ದಾಖಲಾದರೆ, ಅಂತಹ ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲಾಗುತ್ತದೆ”.

ಪೋಸ್ಟ್‌ ಲಿಂಕ್‌ ಇಲ್ಲಿದೆ

ಫ್ಯಾಕ್ಟ್‌ಚೆಕ್ : ‘ಚಾಲೆಂಜ್ ವೋಟ್ ಮತ್ತು ಟೆಂಡರ್ಡ್‌ ವೋಟ್’ ಬಗ್ಗೆ ವೈರಲ್ ಸಂದೇಶದಲ್ಲಿ ಉಲ್ಲೇಖಿಸಿರುವುದರಿಂದ ನಾವು ಮೊದಲು ಚಾಲೆಂಜ್ ವೋಟ್‌ ಬಗ್ಗೆ ಮಾಹಿತಿ ಹುಡುಕಿದ್ದೇವೆ. ಈ ವೇಳೆ 9 ಮೇ 2019 ರಂದು ಡೆಕ್ಕನ್ ಹೆರಾಲ್ಡ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಸುದ್ದಿಯೊಂದು ನಮಗೆ ದೊರೆತಿದೆ. ಈ ಸುದ್ದಿಯಲ್ಲಿ “ಚಾಲೆಂಜ್ ವೋಟ್‌ ಎನ್ನುವುದು ಮತಗಟ್ಟೆಯಲ್ಲಿ ನಡೆಯುವ ಒಂದು ಪ್ರಕ್ರಿಯೆಯಾಗಿದೆ. ಮತಗಟ್ಟೆಯಲ್ಲಿ ಕುಳಿತ ಚುನಾವಣಾ ಏಜೆಂಟ್ ಯಾವುದೇ ಮತದಾರರ ಗುರುತಿನ ಕುರಿತು ಪ್ರಶ್ನಿಸುವುದಾಗಿದೆ. ಅಂದರೆ, ಮತದಾರರು ತನ್ನ ಗುರುತಿನ ಕುರಿತು ಸುಳ್ಳು ಹೇಳುತ್ತಿದ್ದಾರೆ ಎನ್ನುವುದಾಗಿ” ಎಂದಿದೆ.

ನಾವು ಇನ್ನಷ್ಟು ಹುಡುಕಿದಾದ ತ್ರಿಪುರಾದ ಮುಖ್ಯ ಚುನಾವಣಾ ಅಧಿಕಾರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ 2023ರ ಚುನಾವಣಾ ಆಯೋಗದ ಕೈಪಿಡಿ ದೊರೆತಿದೆ. ಅದರಲ್ಲಿ ಚಾಲೆಂಜ್ ವೋಟ್ ಎಂದರೆ “ಮತಗಟ್ಟೆಯಲ್ಲಿ ಕುಳಿತಿ ಚುನಾವಣಾ ಏಜೆಂಟ್ 2 ರೂಪಾಯಿ ನಗದು ಠೇವಣಿ ಮಾಡುವ ಮೂಲಕ ಯಾವುದೇ ಮತದಾರರ ಗುರುತಿನ ಕುರಿತು ಚಾಲೆಂಜ್ ಮಾಡಬಹುದು. ಈ ವೇಳೆ ಸಣ್ಣ ವಿಚಾರಣೆಯ ಮೂಲಕ ಚಾಲೆಂಜ್ ಅನ್ನು ನಿರ್ಧರಿಸಬೇಕು. ಒಂದು ವೇಳೆ ಮತದಾರರ ವಿರುದ್ದದ ಚಾಲೆಂಜ್‌ ಸಮರ್ಥಿನಿಯ ಅಲ್ಲ ಎಂದು ಕಂಡು ಬಂದರೆ, ಆ ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡಬೇಕು. ಮತದಾರರ ಗುರುತಿನ ಕುರಿತ ಚಾಲೆಂಜ್ ಸಮರ್ಥಿನಿವಾಗಿದ್ದೆ (ಮತದಾರರ ಗುರುತು ಸುಳ್ಳಾಗಿದ್ದರೆ) ಅವರಿಗೆ ಮತ ಚಲಾಯಿಸಲು ಅವಕಾಶ ನೀಡಬಾರದು ಮತ್ತು ಲಿಖಿತ ದೂರಿನ ಮೂಲಕ ಪೊಲೀಸರಿಗೆ ಹಸ್ತಾಂತರಿಸಬೇಕು” ಎಂದಿದೆ.


“ಒಬ್ಬರು ಮತದಾರರನ್ನು ನಕಲಿ ಎಂದು ಸೂಚಿಸಲು ಬಲವಾದ ಆಧಾರಗಳಿಲ್ಲದಿದ್ದರೆ, ಅವರನ್ನು ನಿಜವಾದ ಮತದಾರರೆಂದು ಪರಿಗಣಿಸಬೇಕು. ಅಂತಹ ಯಾವುದೇ ಪ್ರಕರಣವನ್ನು ಸಾರಾಂಶ ವಿಚಾರಣೆಯ (ಪ್ರಾಥಮಿಕ ವಿಚಾರಣೆ) ಮೂಲಕ ನಿರ್ಧರಿಸಬೇಕು” ಎಂದು ಕೈಪಿಡಿಯಲ್ಲಿ ಸೇರಿಸಲಾಗಿದೆ.

theprint.in ಪ್ರಕಟಿಸಿದ ಫ್ಯಾಕ್ಟ್‌ಚೆಕ್ ಸುದ್ದಿಯಲ್ಲಿ “1961ರ ಚುನಾವಣಾ ನಿಯಮಗಳ ನಡವಳಿಕೆಯಲ್ಲಿ ಚಾಲೆಂಜ್ ವೋಟ್‌ ಬಗ್ಗೆ ಯಾವುದೇ ಉಲ್ಲೇಖ ನಮಗೆ ಕಂಡು ಬಂದಿಲ್ಲ” ಎಂದು ಹೇಳಿದೆ.

ವಿಭಾಗ 49ಪಿ ಎಂದರೇನು?

“1961ರ ಚುನಾವಣಾ ನಿಯಮಗಳ ನಡವಳಿಕೆಯ ವಿಭಾಗ 49 ಪಿಯಲ್ಲಿ ‘ಟೆಂಡರ್ಡ್‌ ವೋಟ್‌’ ಬಗ್ಗೆ ಹೇಳಲಾಗಿದೆ. ಈ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯು ಮತದಾನ ಮಾಡಿ ಹೋದ ಬಳಿಕ, ಅದೇ ಗುರುತಿನಲ್ಲಿ ಮತ್ತೊಬ್ಬ ಮತ ಚಲಾಯಿಸಲು ಬಂದರೆ, ಆತನಲ್ಲಿ ಮತಗಟ್ಟೆಯ ಚುನಾವಣಾ ಅಧಿಕಾರಿ ಕೆಲವೊಂದು ಸಾಮಾನ್ಯ ಪ್ರಶ್ನೆಗಳನ್ನು ಕೇಳಬಹುದು. ಆತ ನೀಡಿದ ಉತ್ತರ ತೃಪ್ತಿಕರವಾದರೆ, ಮತಯಂತ್ರದ ಮೂಲಕ ಮತ ಚಲಾಯಿಸಲು ಅನುಮತಿಸುವ ಬದಲು, ಪ್ರತ್ಯೇಕವಾಗಿ ವಿನ್ಯಾಸ ಮಾಡಿರುವ ಬ್ಯಾಲೆಟ್ ಪೇಪರ್‌ನಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡಬೇಕು. ಬ್ಯಾಲೆಟ್ ಪೇಪರ್‌ ಚುನಾವಣಾ ಆಯೋಗ ನಿಗದಿಪಡಿಸಿದ ನಿರ್ದಿಷ್ಟ ಭಾಷೆಯಲ್ಲಿರಬೇಕು”

ಶೇ.14ಕ್ಕಿಂತ ಹೆಚ್ಚು ‘ಟೆಂಡರ್ಡ್‌ ವೋಟ್’ ಚಲಾವಣೆಯಾದರೆ ಮರು ಮತದಾನ?

ಯಾವುದೇ ಮತಗಟ್ಟೆಗಳಲ್ಲಿ ಶೇ.14ಕ್ಕಿಂತ ಟೆಂಡರ್ಡ್‌ ವೋಟ್’ ಚಲಾವಣೆಯಾದರೆ ಮರು ಮತದಾನ ಮಾಡಲಾಗುತ್ತದೆ ಎಂದು ವೈರಲ್ ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಕುರಿತು ಫ್ಯಾಕ್ಟ್‌ಚೆಕ್ ಸುದ್ದಿ ಪ್ರಕಟಿಸಿರುವ theprint.in “ನಾವು 1961ರ ಚುನಾವಣಾ ನಿಯಮಗಳು ಮತ್ತು ಚುನಾವಣಾಧಿಕಾರಿಗಳ ಕೈಪಿಡಿಯನ್ನು ಪರಿಶೀಲಿಸಿದ್ದೇವೆ. ಅದರಲ್ಲಿ ಎಲ್ಲಿಯೂ ಶೇ.14ಕ್ಕಿಂತ ಹೆಚ್ಚು ‘ಟೆಂಡರ್ಡ್‌ ವೋಟ್’ ಚಲಾವಣೆಯಾದರೆ ಮರು ಮತದಾನ ಮಾಡುವ ಬಗ್ಗೆ ಪ್ರಸ್ತಾಪಿಸಿಲ್ಲ. ಚುನಾವಣಾ ಆಯೋಗವೂ ಈ ಕುರಿತು ಯಾವುದೇ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ. ಟೆಂಡರ್ಡ್‌ ಮತಗಳ ಕಾರಣದಿಂದಾಗಿ ಮರು ಮತದಾನದ ನಡೆಸಿದ ಕುರಿತು ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ನಮಗೆ ಕಂಡು ಬಂದಿಲ್ಲ ಎಂದು ತಿಳಿಸಿದೆ.

theprint.in ನ ಫ್ಯಾಕ್ಟ್‌ಚೆಕ್ ವರದಿ ಲಿಂಕ್ ಇಲ್ಲಿದೆ 

ವರದಿಗಳ ಪ್ರಕಾರ, ಟೆಂಡರ್ಡ್‌ ಮತಗಳನ್ನು ಮುಖ್ಯ ಮತಗಳ ಎಣಿಕೆ ವೇಳೆ ಪರಿಗಣಿಸುವುದಿಲ್ಲ. ನ್ಯಾಯಾಂಗದ ಪ್ರಕಾರ, ಟೆಂಡರ್ಡ್‌ ಮತಗಳು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವಾಗ ಮಾತ್ರ, ಅಂದರೆ, ಗೆಲುವಿನ ಅಂತರವು ಕಡಿಮೆ ಇದ್ದಾಗ ಮಾತ್ರ ಪರಿಗಣಿಸಲಾಗುತ್ತದೆ.

ನಾವು ನಡೆಸಿದ ಪರಿಶೀಲನೆಯಲ್ಲಿ ತಿಳಿದು ಬಂದಿರುವ ಅಂಶವೇನೆಂದರೆ, ವೈರಲ್ ಪೋಸ್ಟ್‌ನಲ್ಲಿ ಚಾಲೆಂಜ್ ವೋಟ್‌ ಬಗ್ಗೆ ನೀಡಿರುವ ಮಾಹಿತಿ ತಪ್ಪು. ಇನ್ನು ಟೆಂಡರ್ಡ್‌ ವೋಟ್‌ ಹಾಕಬಹುದಾದರೂ, ಯಾವುದೇ ಮತಗಟ್ಟೆಯಲ್ಲಿ ಶೇ.14ಕ್ಕಿಂತ ಹೆಚ್ಚು ಟೆಂಡರ್ಡ್‌ ವೋಟ್‌ ಚಲಾವಣೆಯಾದರೆ, ಅಲ್ಲಿ ಮರು ಮತದಾನ ಮಾಡುವ ಬಗ್ಗೆಯೂ ಉಲ್ಲೇಖವಿಲ್ಲ.

ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ನೀಡಿರುವ ಮಾಹಿತಿಯು ಬಹುತೇಕ ನಾವು ಸ್ವತಃ ಹುಡುಕಾಡಿದಾಗ ದೊರೆತ ಪತ್ರಿಕಾ ವರದಿಗಳು ಮತ್ತು ಚುನಾವಣಾ ಆಯೋಗದ ಪ್ರಕಟಣೆಗಳನ್ನು ಒಳಗೊಂಡಿದೆ. ಇನ್ನೂ ಕೆಲ ಮಾಹಿತಿಗಳನ್ನು theprint.in ಮಾಡಿರುವ ಫ್ಯಾಕ್ಟ್‌ಚೆಕ್ ವರದಿಯನ್ನು ಆಧರಿಸಿವೆ. theprint.in ನ ಫ್ಯಾಕ್ಟ್‌ಚೆಕ್ ವರದಿಯನ್ನು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಸುಳ್ಳು ಸುದ್ದಿಯ ಬಗೆಗಿನ ಈ ಬರಹವನ್ನು ಓದಿ’ ಎಂದು ಸಲಹೆ ನೀಡಿದ್ದಾರೆ. ಹಾಗಾಗಿ, theprint.in ನ ವರದಿಯಲ್ಲಿ ಹೇಳಲಾದ ಅಂಶಗಳು ಸರಿಯಾಗಿದೆ ಎಂದು ನಾವು ನಂಬಿದ್ದೇವೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯ ಎಕ್ಸ್ ಪೋಸ್ಟ್ ಲಿಂಕ್ ಇಲ್ಲಿದೆ

ಇದನ್ನೂ ಓದಿ : FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...