“ಪ್ರಧಾನಿ ಮೋದಿ ಅವರು ಹೈದರಾಬಾದ್‌ನಲ್ಲಿ ಹಿಂದೂ ಸಂತನ ಪ್ರತಿಮೆಯನ್ನು ನಿರ್ಮಿಸುತ್ತಿದ್ದಾರೆ” ಎಂಬ ಪೋಸ್ಟ್ ಅನ್ನು ಬಿಜೆಪಿ ನಾಯಕರು ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪ್ರಧಾನಿ ಮೋದಿ, ಸಂಸದ ಅಸಾದುದ್ದೀನ್ ಓವೈಸಿ ಮತ್ತು ಪ್ರತಿಮೆಯ ದೃಶ್ಯಗಳನ್ನು ವಿಡಿಯೊದಲ್ಲಿ ಕಾಣಬಹುದು. AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಭದ್ರಕೋಟೆಯಾಗಿರುವ ಹೈದರಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷವು ವಿಶ್ವದ ಅತಿ ಎತ್ತರದ ಹಿಂದೂ ಸಂತನ ಪ್ರತಿಮೆಯನ್ನು ನಿರ್ಮಿಸುತ್ತಿದೆ ಎಂದು ಬಿಂಬಿಸಲಾಗುತ್ತಿದೆ.
ಈ ವಿಡಿಯೋವನ್ನು ಶೇರ್ ಮಾಡುತ್ತಿರುವವರು ಅಸಾದುದ್ದೀನ್ ಓವೈಸಿಯನ್ನು ಗೇಲಿ ಮಾಡುತ್ತಿದ್ದಾರೆ. ಮುಂಬರುವ ಉತ್ತರ ಪ್ರದೇಶ ಚುನಾವಣೆಯೊಂದಿಗೆ ಈ ಪ್ರತಿಪಾದನೆ ತಳುಕು ಹಾಕಿಕೊಂಡಿದೆ. ಬಿಜೆಪಿ ಮುಖಂಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಗಿರಿರಾಜ್ ಸಿಂಗ್ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಓವೈಸಿಯವರನ್ನು ಟಾರ್ಗೆಟ್ ಮಾಡಿ ಟ್ವೀಟ್ ಮಾಡಿದ್ದಾರೆ.
अब आया ऊंट पहाड़ के नीचे।
— Shandilya Giriraj Singh (@girirajsinghbjp) January 9, 2022
जय महादेव। pic.twitter.com/LJ9g54DuLY
ओवैसी के घर के बगल में मोदी जी बनवा रहे हैं महान तपस्वी संत "रामानुजाचार्य" की भव्य दिव्य 216 फुट ऊंची "स्टैचू आफ इक्वलिटी"
— प्रकाश ' बागी ' (@TheRebeal) January 8, 2022
जिस से नफरत करते हो
अब रोज करो दीदार 😊@beingarun28 @YogiDevnath2 @swamidipankar #संस्कृत_मांगे_न्याय pic.twitter.com/yufNPfZLlW
ಓವೈಸಿಯವರನ್ನು ಗುರಿಯಾಗಿಸಿಕೊಂಡು `ನಿಲುಮೆ’ ಫೇಸ್‌ಬುಕ್ ಗ್ರೂಪಿನಲ್ಲಿ ಪೋಸ್ಟ್ ಮಾಡಲಾಗಿದೆ.
ಈಗ ವೈರಲ್ ಆಗಿರುವ ವಿಡಿಯೊವನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.
ಪ್ರತಿಪಾದನೆ: ಹಿಂದೂ ಸಂತ ರಾಮಾನುಜಾಚಾರ್ಯರ ಅತಿ ಎತ್ತರದ ಪ್ರತಿಮೆಯನ್ನು ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ಹೈದರಾಬಾದ್‌ನಲ್ಲಿ ವಿಶ್ವದ ನಿರ್ಮಿಸಿದ್ದಾರೆ.
ಫ್ಯಾಕ್ಟ್‌ಚೆಕ್: `ಸ್ಟ್ಯಾಚ್ಯೂ ಆಫ್ ಇಕ್ವಾಲಿಟಿ’, `ರಾಮಾನುಜಾಚಾರ್ಯ’, `ಹೈದರಾಬಾದ್’ ಮುಂತಾದ ಕೆಲವು ಪದಗಳನ್ನು ವೀಡಿಯೊದಲ್ಲಿ ಸಾಕಷ್ಟು ಬಾರಿ ಹೇಳಿರುವುದನ್ನು ನಾವು ಗಮನಿಸಿದ್ದೇವೆ. ಅದರ ಆಧಾರದಲ್ಲಿ ನಾವು ರಿವರ್ಸ್ ಇಮೇಜ್‍್ ಮಾಡಿದಾಗ ಅದೇ ರೀತಿಯ ಪ್ರತಿಮೆಯನ್ನು ಹೋಲುವ ಹಲವಾರು ವರದಿಗಳು ಲಭಿಸಿವೆ. ದಿನಾಂಕ 28 ಆಗಸ್ಟ್ 2021ರಂದು ನ್ಯೂಸ್ 18 ಮಾಡಿರುವ ವರದಿಯ ಪ್ರಕಾರ, ಸಂತ ಶ್ರೀ ರಾಮಾನುಜಾಚಾರ್ಯರ ಜನ್ಮದಿನದ ಸಂದರ್ಭದಲ್ಲಿ, ಹೈದರಾಬಾದ್‌ನ ಶ್ರೀ ರಾಮ್ ನಗರ ಜೀವಾಶ್ರಮದ ಬಳಿ 216 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸಮಾನತೆಯ ಪ್ರತಿಮೆ ಎಂದೂ ಕರೆಯಲ್ಪಡುವ ರಾಮಾನುಜಾಚಾರ್ಯರ ಪ್ರತಿಮೆಯನ್ನು ಅಷ್ಟಧಾತುಗಳ ಮಿಶ್ರಣದಿಂದ ಮಾಡಲಾಗಿದೆ.
ಈ ಕುರಿತು ನಾವು ಹಲವಾರು ವೀಡಿಯೊ ವರದಿಗಳನ್ನು ನೋಡಿದ್ದೇವೆ. `TV9 ಭಾರತವರ್ಷ’ ಚಾನೆಲ್‍್ ವರದಿಯ ಪ್ರಕಾರ, 1000 ಕೋಟಿ ವೆಚ್ಚದ ಈ ಯೋಜನೆಯು 75 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿದೆ.
statueofequality.org ವೆಬ್‌ಸೈಟ್‌ನ ವಿವಿಧ ವಿಭಾಗಗಳನ್ನು ಪರಿಶೀಲಿಸಲು ಪ್ರಾರಂಭಿಸಿದಾಗ ನಾವು ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದ ವರದಿಯನ್ನು ಗಮನಿಸಲಾಗಿದೆ. ಅದರ ಪ್ರಕಾರ, ತ್ರಿದಂಡಿ ಶ್ರೀಮನ್ನಾರಾಯಣ ರಾಮಾನುಜ ಚಿನ್ನಜೀಯರ ಸ್ವಾಮೀಜಿ ಅವರು 216 ಅಡಿಗಳ ಭಗವದ್ ರಾಮಾನುಜಾಚಾರ್ಯರ ಪ್ರತಿಮೆ ಮತ್ತು 108 ಸ್ಫೂರ್ತಿ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮವು ಫೆಬ್ರವರಿ 2 ರಿಂದ ಫೆಬ್ರವರಿ 14, 2022 ರವರೆಗೆ ನಡೆಯಲಿದ್ದು, ಅಲ್ಲಿ ಪ್ರಧಾನಿ ಮೋದಿಯವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕ್ಯಾಬಿನೆಟ್ ಸಚಿವರು ಮತ್ತು ಇತರ ಗಣ್ಯರಿಗೂ ಆಹ್ವಾನ ನೀಡಲಾಗಿದೆ ಎಂದು ಇತರ ವರದಿಗಳು ಹೇಳುತ್ತವೆ.
ಟ್ರಸ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ವಸ್ತುಸಂಗ್ರಹಾಲಯಕ್ಕಾಗಿ ಸ್ವೀಕರಿಸಿದ ದೇಣಿಗೆ ಮತ್ತು ಅದರ ವೆಚ್ಚವನ್ನು ಉಲ್ಲೇಖಿಸುವ ಹಣಕಾಸಿನ ವಿವರಗಳನ್ನು ಗಮನಿಸಬಹುದಗಿದೆ. ಟ್ರಸ್ಟ್ ಪ್ರಪಂಚದಾದ್ಯಂತ ಇರುವ ತನ್ನ ಭಕ್ತರಿಗೆ ದೇಣಿಗೆಗಾಗಿ ಮನವಿ ಮಾಡಿದೆ. ಆದಾಗ್ಯೂ, ಇದು ಎಲ್ಲಿಯೂ ಭಾರತೀಯ ಜನತಾ ಪಕ್ಷದಿಂದ ಅಥವಾ ಪ್ರಧಾನಿ ನರೇಂದ್ರ ಮೋದಿಯವರಿಂದ ಸಹಾಯ ಪಡೆದ ಉಲ್ಲೇಖಿಸಿಲ್ಲ ಎಂಬುದು ಗಮನಾರ್ಹವಾಗಿದೆ. ಹಣಕಾಸಿನ ವರದಿಯನ್ನು ಇಲ್ಲಿ ನೋಡಬಹುದಾಗಿದೆ.
ಇದರ ಕುರಿತು the logical Indian ಮಾಧ್ಯಮದವರು ಚಿನ್ನ ಜೀಯರ್ ಸ್ವಾಮಿ (ಆಶ್ರಮ) ಅವರೊಂದಿಗೆ ಮಾತನಾಡಿದ್ದಾರೆ. ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಭಾರತೀಯ ಲಕ್ಷ್ಮಿ, ದಿ ಲಾಜಿಕಲ್ ಇಂಡಿಯನ್‌ನೊಂದಿಗೆ ಮಾತನಾಡುತ್ತಾ, “ಯಾವುದೇ ರಾಜಕೀಯ ಪಕ್ಷ ಇದರಲ್ಲಿ ಭಾಗಿಯಾಗಿಲ್ಲ. ಬಿಜೆಪಿ ಅಥವಾ ಯಾವುದೇ ಪಕ್ಷವೂ ಇಲ್ಲ. ಇದೆಲ್ಲವೂ ದೇಣಿಗೆಯಿಂದ ಬಂದ ಹಣವಾಗಿದೆ. ತೆಲುಗು ದೇಶಂ ಪಕ್ಷವಾಗಲೀ, ತೆಲಂಗಾಣ ರಾಷ್ಟ್ರ ಸಮಿತಿಯಾಗಲೀ ಅಥವಾ ಬೇರೆ ಯಾವುದೇ ಪಕ್ಷವಾಗಲಿ ಪ್ರತಿಮೆ ನಿರ್ಮಿಸಿಲ್ಲ. ನಾವು ದೇಣಿಗೆಯಿಂದ ಎಲ್ಲವನ್ನೂ ಸಿದ್ದಪಡಿಸಿದ್ದೇವೆ. ಇದರ ಬಗ್ಗೆ ಎಲ್ಲ ಪಕ್ಷಗಳು ಏನಾದರೂ ಹೇಳಬಹುದು. ಅದು ನಿಜವಲ್ಲ. ನಾವು 1 ರೂಪಾಯಿಯಿಂದಲೂ ದೇಣಿಗೆ ಸಂಗ್ರಹಿಸಿದ್ದೇವೆ. ನಾವು ಪ್ರತಿಯೊಬ್ಬರ ರಸೀದಿ ಹೊಂದಿದ್ದೇವೆ. 2014ರಿಂದ ನಾವು ದೇಣಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ” ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಸಮಾನತೆಯ ಪ್ರತಿಮೆ ಉದ್ಘಾಟನೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ, ಪಕ್ಷ ಭೇದವಿಲ್ಲದೆ ಎಲ್ಲ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದೇವೆ. ನ್ಯಾಯಾಧೀಶರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ, ಬಿಜೆಪಿ ಕುರಿತು ಸಾಫ್ಟ್ ಕಾರ್ನರ್ ಇಲ್ಲ. ನಾವು ಅಸಾದುದ್ದೀನ್ ಓವೈಸಿಯವರನ್ನೂ ಆಹ್ವಾನಿಸಿದ್ದೇವೆ. ನಾವು ಎಲ್ಲಾ ಮಂತ್ರಿಗಳನ್ನು ಆಹ್ವಾನಿಸುತ್ತಿದ್ದೇವೆ. ನಮಗೆ ಯಾವುದೇ ಪಕ್ಷದ ಬಗ್ಗೆ ಕಾಳಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ , ರಾಮಾನುಜಾಚಾರ್ಯರಿಗೆ ಸಮರ್ಪಿತವಾದ ಸಮಾನತೆಯ ಪ್ರತಿಮೆಯನ್ನು ಜೀಯರ್ ಎಜುಕೇಶನಲ್ ಟ್ರಸ್ಟ್ ನಿರ್ಮಿಸಿದೆ. ಪ್ರಪಂಚದಾದ್ಯಂತ ಇರುವ ರಾಮಾನುಜಾಚಾರ್ಯರ ಭಕ್ತರು ಇದಕ್ಕಾಗಿ ದೇಣಿಗೆ ನೀಡಿದ್ದಾರೆ. ಫೆಬ್ರವರಿ 5, 2022ರಂದು ಪ್ರಧಾನಿ ಮೋದಿ ಇದನ್ನು ಅನಾವರಣಗೊಳಿಸುತ್ತಾರೆ. ಆದರೆ ಬಿಜೆಪಿ ಅಥವಾ ಮೋದಿಯವರಿಂದ ಈ ಪ್ರತಿಮೆ ನಿರ್ಮಾಣವಾಗಿಲ್ಲ. ವಿವಿಧ ರಾಜಕೀಯ ಪಕ್ಷಗಳ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಹೀಗಾಗಿ ವೈರಲ್‍್ ಆದ ಪ್ರತಿಪಾದನೆ ಸುಳ್ಳಾಗಿದೆ.
ಕೃಪೆ: ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ‘ಏನ್.ಸುದ್ದಿ.ಕಾಂ’
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಸಂಸತ್‌ನಲ್ಲಿ ಮೋದಿ ಮೋದಿ ಎಂಬ ಘೋಷಣೆ ಕೂಗಿದ್ದು ನಿಜವೇ?
ನಿಮಗೆ ದೇಣಿಗೆ ನೀಡುವುದು ದೇಶದ್ರೋಹಿ ಗಳಿಗೆ ಸಹಾಯ ಮಾಡಿದಂತೆ ನಿಮ್ಮಂಥ ಮಾದ್ಯಮಗಳು ದೇಶಕ್ಕೆ ಮಾರಕ