Homeಕರ್ನಾಟಕಛಲಬಿಡದ ಕನ್ನಡ ಪ್ರೇಮಿ ಸೈಯದ್ ಇಸಾಕ್‌: ಗಣರಾಜ್ಯ ದಿನದಂದು ಗ್ರಂಥಾಲಯ ಓಪನ್‌

ಛಲಬಿಡದ ಕನ್ನಡ ಪ್ರೇಮಿ ಸೈಯದ್ ಇಸಾಕ್‌: ಗಣರಾಜ್ಯ ದಿನದಂದು ಗ್ರಂಥಾಲಯ ಓಪನ್‌

- Advertisement -
- Advertisement -

ಮೈಸೂರಿನ ರಾಜೀವನಗರ 2ನೇ ಹಂತದಲ್ಲಿ ಕನ್ನಡಪ್ರೇಮಿ ಸೈಯದ್ ಇಸಾಕ್‌ ಅವರು ನಿರ್ಮಿಸಿದ್ದ ಗ್ರಂಥಾಲಯ ಸುಟ್ಟು ಹೋಗಿದ್ದು ಭಾರೀ ಸುದ್ದಿಯಾಗಿತ್ತು. ಕುಡುಕನೊಬ್ಬನ ಅತಾಚುರ್ಯದಿಂದ ಬೀಡಿ ಬೆಂಕಿ ತಾಕಿ ಕಳೆದ ಏಪ್ರಿಲ್‌ನಲ್ಲಿ ಗ್ರಂಥಾಲಯ ಭಸ್ಮವಾದ ಬಳಿಕ, ಸೈಯದ್ ಅವರಿಗೆ ನೆರವಿನ ಮಹಾಪೂರದ ಭರವಸೆಯೇ ಹರಿದುಬಂದಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಸೈಯದ್ ಅವರ ಕನ್ನಡ ಪ್ರೇಮವನ್ನು ಕೊಂಡಾಡಲಾಯಿತು. ಪತ್ರಿಕೆಗಳು ವರದಿಗಳನ್ನು ಪ್ರಕಟಿಸಿದವು. ಸ್ಥಳಕ್ಕೆ ಶಾಸಕರು, ಸಂಸದರು, ಅಧಿಕಾರಿಗಳು ಭೇಟಿ ನೀಡಿದರು. ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿ ಗ್ರಂಥಾಲಯ ನಿರ್ಮಿಸುವುದಾಗಿ ಹೇಳಿದ್ದವು. ಮಿಸ್ಬಾ ಪತೇನ್‌ ಎಂಬವರು ಫಂಡ್‌ ರೈಸಿಂಗ್‌ ಮಾಡಿದ್ದರು. ಆದರೆ ಸರ್ಕಾರ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಸುಮಾರು 29 ಲಕ್ಷ ರೂ.ಗಳನ್ನು ದಾನಿಗಳಿಗೆ ಮಿಸ್ಬಾ ಹಿಂತಿರಿಸಿದ್ದರು.

ಗ್ರಂಥಾಲಯ ಸುಟ್ಟು ಹೋದ ಬಳಿಕ ಕೆಲವು ಜನಪ್ರತಿನಿಧಿಗಳು ಬೋರ ಎಂಬ ಸಂಸ್ಥೆಗೆ ಸೇರಿದ ನಿವೇಶನದಲ್ಲಿ ಸೈಯದ್ ಅವರು 2011ರಿಂದ ಗ್ರಂಥಾಲಯ ನಡೆಸುತ್ತಿದ್ದರು. ಹೀಗಾಗಿ ಬೋರ ಸಂಸ್ಥೆಯಿಂದ ಜಾಗವನ್ನು ಬಿಡಿಸಿಕೊಂಡು, ಗ್ರಂಥಾಲಯಕ್ಕೆ ಜಾಗವನ್ನು ಬಿಡಿಸಿಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ನಿವೇಶನವೇನೋ ಮಂಜೂರಾಗಿತ್ತು. ಆದರೆ ಗ್ರಂಥಾಲಯ ನಿರ್ಮಾಣ ವಿಳಂಬವಾಗಿತ್ತು. ಕೊನೆಗೂ ಸರ್ಕಾರ ಗ್ರಂಥಾಲಯ ನಿರ್ಮಾಣ ಮಾಡಿಕೊಡುವಲ್ಲಿ ತಡ ಮಾಡಿತು. ಹೀಗಾಗಿ ವಿವಿಧ ದಾನಿಗಳಿಂದ ಬಂದಿದ್ದ ಹಣವನ್ನೆಲ್ಲ ಖರ್ಚು ಮಾಡಿ ಸೈಯದ್ ಇಸಾಕ್ ಅವರೇ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ.

“ಗ್ರಂಥಾಲಯ ನಿರ್ಮಾಣ ವಿಳಂಬವಾಗುತ್ತಿದೆ. ಜಾಗವೇನೋ ಮಂಜೂರಾಗಿದೆ. ಆದರೆ, ಸರ್ಕಾರ ಗ್ರಂಥಾಲಯ ನಿರ್ಮಿಸದಿದ್ದರೆ ದಾನಿಗಳು ನೀಡಿರುವ ಒಂದಿಷ್ಟು ಹಣವಿದ್ದು, ಅದರಲ್ಲೇ ಮೊದಲಿನಂತೆ ಗುಡಿಸಲು ನಿರ್ಮಿಸಿ, ದಾನಿಗಳಿಂದ ಬಂದಿರುವ ಸಾವಿರಾರು ಪುಸ್ತಕಗಳನ್ನು ಗ್ರಂಥಾಲಯಕ್ಕೆ ಇರಿಸುತ್ತೇನೆ. ಮೈಸೂರಿನ ರಾಜೀವನಗರ ಭಾಗದಲ್ಲಿ ಕನ್ನಡ ಓದುವವರು ಕಡಿಮೆ ಇದ್ದಾರೆ. ಉರ್ದು ಬಳಕೆ ಹೆಚ್ಚಿದೆ. ಇಂತಹ ಜಾಗದಲ್ಲಿ ಕನ್ನಡ ಗ್ರಂಥಾಲಯ ಅಗತ್ಯವಿದೆ” ಎಂದು ಸೈಯದ್ ಹೇಳುತ್ತಲೇ ಬಂದಿದ್ದರು. ಕೊನೆಗೂ ತಮ್ಮ ಕನಸನ್ನು ಸೈಯದ್ ಇಸಾಕ್‌ ನನಸು ಮಾಡಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ಜನರು ಕೊಟ್ಟಿದ್ದ ಹಣದಲ್ಲೇ ಗ್ರಂಥಾಲಯ ಮಾಡಿದ್ದೇನೆ. ಶಾಸಕ ಜಮೀರ್‌ ಅಹಮದ್ 2 ಲಕ್ಷ ರೂ., ಸಂಸದ ಪ್ರತಾಪ್‌ ಸಿಂಹ 50 ಸಾವಿರ ರೂ., ಸಚಿವ ಎಸ್.ಟಿ.ಸೋಮಶೇಖರ್‌ 25,000 ರೂ. ನೀಡಿದ್ದರು. ಅನೇಕರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದರು. ಎಲ್ಲ ಸೇರಿ 3,45,000 ರೂ. ಇತ್ತು. ಗ್ರಂಥಾಲಯ ನಿರ್ಮಾಣಕ್ಕೆ ಒಟ್ಟು ನಾಲ್ಕು ಲಕ್ಷ ರೂ. ಖರ್ಚಾಗಿದೆ. ಸಿಸಿಟಿವಿ ಹಾಕಿಸಬೇಕೆಂದು ಯೋಚಿಸಿದ್ದೆ. ಆದರೆ ಅಷ್ಟು ಹಣ ಸಿಗಲಿಲ್ಲ. ಇರುವಷ್ಟರಲ್ಲಿ ಸಂತೋಷದಲ್ಲಿದ್ದೇನೆ. ಜನವರಿ 26ಕ್ಕೆ ಸರ್ಕಾರಿ ಶಾಲಾ ಮಕ್ಕಳನ್ನು ಕರೆಸಿ, ರಾಷ್ಟ್ರಗೀತೆ, ನಾಡಗೀತೆ ಹಾಡಿಸಿ ಟೇಪ್‌ ಕತ್ತರಿಸಿ, ದೀಪ ಹಚ್ಚಿಸಿ ಶಾಲಾ ಮಕ್ಕಳಿಂದಲೇ ಗ್ರಂಥಾಲಯ ಉದ್ಘಾಟಿಸಲಿದ್ದೇನೆ” ಎಂದು ತಿಳಿಸಿದರು.

“ಕೂತುಕೊಳ್ಳಲು ಪ್ಲಾಸ್ಟಿಕ್‌ ಚೇರ್‌ ಹಾಕಿಸಬೇಕೆಂದಿದ್ದೇನೆ. ಈಗ ಆರು ಚೇರುಗಳಿವೆ. ಅದರಲ್ಲಿ ಎರಡು ಮುರಿದು ಹೋಗಿವೆ. ಇನ್ನೂ ನಾಲ್ಕು ಚೇರ್‌ಗಳನ್ನು ಖರೀದಿಸುತ್ತೇನೆ. ಕೂತು ಓದಲು ಅವಕಾಶ ಮಾಡಿಕೊಡುತ್ತೇನೆ. ಸಾಲಲಿಲ್ಲ ಎಂದರೆ ಸಿಮೆಂಟ್ ಇಟ್ಟಿಗೆ ತಂದು ಸುಣ್ಣು ಹೊಡೆದು ಒಳಗೆ ಜೋಡಿಸುತ್ತೇನೆ” ಎಂದರು.

“ಗ್ರಂಥಾಲಯ ನಿರ್ಮಿಸಿಕೊಡದಿದ್ದರೂ ಕರ್ನಾಟಕ ಸರ್ಕಾರ ಜಾಗವನ್ನು ಮಂಜೂರು ಮಾಡಿದೆ. ಅದಕ್ಕಾಗಿ ಹೃದಯಪೂರ್ವಕ ವಂದನೆಗಳು. ಈಗ ಬಂದೋಬಸ್ತ್‌ ಆಗಿ ಗ್ರಂಥಾಲಯ ನಿರ್ಮಾಣವಾಗಿದೆ. ಮೂರು ಅಡಿ ಗೋಡೆ ಕಟ್ಟಿ ಬಂದೋಬಸ್ತ್‌ ಮಾಡಲಾಗಿದೆ. ಶೀಟ್ ಹಾಕಿಸಲಾಗಿದೆ” ಎಂದು ಹೇಳಿದರು.

ಗ್ರಂಥಾಲಯ ಇಲಾಖೆಗೆ ಹಣ ನೀಡಿದ್ದೇವೆ: ಪಾಲಿಕೆ ಆಯುಕ್ತ

ಸೈಯದ್ ಅವರಿಗೆ ಗ್ರಂಥಾಲಯ ನಿರ್ಮಿಸುವ ಭರವಸೆ ನೀಡಿ ವಿಳಂಬ ಮಾಡುತ್ತಿರುವುದು ಏತಕ್ಕೆ ಎಂದು ಹಿಂದೊಮ್ಮೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್‌ ರೆಡ್ಡಿ ಅವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತ್ತು. “ಪ್ರತ್ಯೇಕವಾಗಿ ನಾವು ಲೈಬ್ರರಿ ಸೆಸ್‌ ಸಂಗ್ರಹಿಸುತ್ತೇವೆ. ಅದನ್ನು ಗ್ರಂಥಾಲಯ ಇಲಾಖೆಗೆ ನೀಡಿದ್ದೇವೆ. ಅವರು ಪ್ರಕ್ರಿಯೆ ನಡೆಸುತ್ತಿದ್ದಾರೆ. ಭೂಮಿಯನ್ನು ಮಂಜೂರು ಮಾಡಲಾಗಿದೆ. ಕಟ್ಟಡ ನಿರ್ಮಾಣವು ಗ್ರಂಥಾಲಯ ಇಲಾಖೆಯಿಂದ ಆಗಬೇಕು. ಕೊಡಬೇಕಾದ ಹಣವನ್ನು ಗ್ರಂಥಾಲಯ ಇಲಾಖೆಗೆ ನಾವು ನೀಡಿದ್ದೇವೆ” ಎಂದಿದ್ದರು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ

20 ಕೋಟಿ ರೂ. ಸೆಸ್‌ ಬಾಕಿ ಇದೆ: ಗ್ರಂಥಾಲಯ ಇಲಾಖೆ

ಗ್ರಂಥಾಲಯ ನಿರ್ಮಾಣಕ್ಕೆ ಪಾಲಿಕೆಯಿಂದ ನೀಡಬೇಕಾದ ಹಣವನ್ನೆಲ್ಲ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತರು ಹೇಳಿದರೆ ಮೈಸೂರು ಗ್ರಂಥಾಲಯ ಉಪನಿರ್ದೇಶಕ ಬಿ.ಮಂಜುನಾಥ್ ಅವರು ಬೇರೆ ತೊಂದರೆಗಳನ್ನು ಹೇಳಿಕೊಂಡಿದ್ದರು.

“ಈ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್‌ ಅವರು ಗ್ರಂಥಾಲಯ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದರು. ನಮ್ಮ ಇಲಾಖೆಯಲ್ಲಿ ಕಟ್ಟಡ ನಿರ್ಮಾಣಕ್ಕಾಗುವಷ್ಟು ಹಣವಿಲ್ಲ. ನಿತ್ಯದ ಖರ್ಚು ವೆಚ್ಚಕ್ಕೆ ಹಣ ಸಾಕಾಗುತ್ತಿಲ್ಲ. ಪಾಲಿಕೆಯಿಂದ 20 ಕೋಟಿ ರೂ. ಸೆಸ್ ಬಾಕಿ ಇದೆ. ಈಗ ಪ್ರಸ್ತುತವಾಗಿ ಬರಬೇಕಾಗಿರುವ ಸೆಸ್ ಬರುತ್ತಿದೆ. ಆದರೆ ನಿತ್ಯದ ಖರ್ಚು ವೆಚ್ಚಕ್ಕೇ ಆ ಹಣ ಹೋಗುತ್ತಿದೆ. ಮೈಸೂರು ನಗರದ ಪೀಪಲ್ಸ್ ಪಾರ್ಕ್‌‌ನಲ್ಲಿ ಐದೂವರೆ ಕೋಟಿ ರೂ.ಗಳಲ್ಲಿ ನಿರ್ಮಾಣವಾಗಿರುವ ಗ್ರಂಥಾಲಯ ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಮೂರರಿಂದ ನಾಲ್ಕು ಕೋಟಿ ರೂ. ಬೇಕಾಗಿದೆ. ನಮ್ಮ ಬಳಿ ಅಷ್ಟು ಹಣವಿಲ್ಲ” ಎಂದು ಗ್ರಂಥಾಲಯ ಉಪನಿರ್ದೇಶಕ ಬಿ.ಮಂಜುನಾಥ್‌ ಹೇಳಿದ್ದರು.

ಗ್ರಂಥಾಲಯ ಉಪನಿರ್ದೇಶಕ ಬಿ.ಮಂಜುನಾಥ್‌

“ಸುಮಾರು 35 ಲಕ್ಷ ರೂ.ಗಳಲ್ಲಿ ಸೈಯದ್‌ ಅವರ ಗ್ರಂಥಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದಿಂದ ಯೋಜನೆ ಸಿದ್ಧಪಡಿಸಲಾಗಿದೆ. ಮುಡಾದವರು ನಿವೇಶನ ನೀಡಿದ್ದಾರೆ. ಸಿಎ ನಿವೇಶನ ಆಗಿರುವುದರಿಂದ ಹಣ ಕಟ್ಟಬೇಕು ಎಂದು ಲೆಟರ್‌ ಕೊಟ್ಟಿದ್ದಾರೆ. ಆದರೆ ನಂತರದಲ್ಲಿ ನಡೆದ ಸಭೆಯಲ್ಲಿ ಹಣ ಕಟ್ಟುವುದೇನೂ ಬೇಡವೆಂದು ಮುಡಾ ಆಯುಕ್ತರು ಭರವಸೆ ನೀಡಿದ್ದಾರೆ. ಪಾಲಿಕೆ ಮತ್ತು ಗ್ರಂಥಾಲಯ ಇಲಾಖೆಯಿಂದ ಕಟ್ಟಡ ನಿರ್ಮಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಯೋಜಿತ 35 ಲಕ್ಷ ರೂ.ಗಳಲ್ಲಿ 20 ಲಕ್ಷ ರೂ.ಗಳನ್ನಾದರೂ ಪಾಲಿಕೆ ನೀಡಿದರೆ ಗ್ರಂಥಾಲಯ ಕಟ್ಟಡ ನಿರ್ಮಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಪತ್ರವನ್ನೂ ಬರೆದಿದ್ದೇನೆ” ಎಂದಿದ್ದರು.

ಸರ್ಕಾರದಿಂದ ವಿಳಂಬವಂತೂ ಆಯಿತು. ಅನೇಕರು ಪುಸ್ತಕಗಳನ್ನು ಸೈಯದ್ ಅವರಿಗೆ ಕಳುಹಿಸಿದ್ದರು. ಮನೆಯಲ್ಲಿಯೇ ಬಹುಕಾಲ ಪುಸ್ತಕಗಳನ್ನು ಇರಿಸಿಕೊಂಡಿದ್ದರು. ಆದರೆ ಕಟ್ಟಡ ನಿರ್ಮಾಣವಾಗುವುದು ಮರೀಚಿಕೆಯಾದಾಗ ದಾನಿಗಳ ಹಣ ಬಳಸಿ ಗ್ರಂಥಾಲಯ ಮರು ನಿರ್ಮಿಸಿದ್ದಾರೆ. “ಪೀಠೋಪಕರಣಗಳ ಅಗತ್ಯವಿದೆ. ದಾನಿಗಳು ಹೆಚ್ಚಿನ ಪುಸ್ತಕಗಳನ್ನೂ ನೀಡಬಹುದು” ಎಂದು ಸೈಯದ್ ಹೇಳಿದ್ದಾರೆ. ಅವರಿಗೆ ಹೆಚ್ಚಿನ ಸಹಾಯ ನೀಡಲು ಬಯಸುವವರು ಮೊ.ಸಂ. 99012 66487 ಸಂಪರ್ಕಿಸಬಹುದು.


ಇದನ್ನೂ ಓದಿರಿ: ಎಷ್ಟು ದಿನ ಕಾಯಲಿ? ಗುಡಿಸಲು ನಿರ್ಮಿಸಿ ಗ್ರಂಥಾಲಯ ಆರಂಭಿಸುವೆ: ಸೈಯದ್ ಇಸಾಕ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಸರ್ಕಾರ ಮಾಡಲಾಗದ್ದನ್ನು ಒಬ್ಬ ವ್ಯಕ್ತಿ ಮಾಡಿದ್ದಾರೆ. ಇದು ನಿಜವಾದ ಕನ್ನಡ ಪ್ರೇಮ ಮತ್ತು ಸಮಾಜಸೇವೆ.

  2. ಸೈಯದ್ ಇಸಾಕ್ ನಂತಹವರು ,ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುಬರಲಿ. ಕನ್ನಡದ ಜನರು ನಡೆ ,ನುಡಿಯಲ್ಲಿ ಎಲ್ಲಾದರೂ ಇರಲಿ , ಎಂತಾದರು ಇರಲಿ ,ಕನ್ನಡ ನಾಗಿರಲಿ ಎಂಬ ಆಶಾಭಾವನೆ ಎಲ್ಲರಲ್ಲಿ ಮೂಡಿ ಬರಲಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....