Homeಕರ್ನಾಟಕಇನ್ಸ್‌‌ಟಾಗ್ರಾಮ್‌‌‌ನಲ್ಲಿ ಅಂಬೇಡ್ಕರ್‌ ಮತ್ತು ಅವರ ಪತ್ನಿಗೆ ಅವಹೇಳನ: FIR ದಾಖಲು

ಇನ್ಸ್‌‌ಟಾಗ್ರಾಮ್‌‌‌ನಲ್ಲಿ ಅಂಬೇಡ್ಕರ್‌ ಮತ್ತು ಅವರ ಪತ್ನಿಗೆ ಅವಹೇಳನ: FIR ದಾಖಲು

- Advertisement -
- Advertisement -

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಮತ್ತು ಅವರು ಪತ್ನಿ ಸವಿತಾ ಅಂಬೇಡ್ಕರ್‌ ಅವರ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಿರುವ ಇನ್ಸ್‌ಟಾಗ್ರಾಮ್‌ ಖಾತೆಯ ವಿರುದ್ದ ಕೊಪ್ಪಳ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಇನ್ಸ್‌‌ಟಾಗ್ರಾಮ್‌ ಖಾತೆಯೊಂದರ ಪೋಸ್ಟ್‌‌‌‌ಗೆ ಬಂದ ಕಮೆಂಟ್‌ನಲ್ಲಿ ಅಂಬೇಡ್ಕರ್ ಮತ್ತು ಅವರ ಪತ್ನಿ ಸವಿತಾ ಅವರನ್ನು ಉಲ್ಲೇಖಿಸಿ ಅಶ್ಲೀಲ ಪದಗಳನ್ನು ಬಳಸಿ ತೀರಾ ಕೀಳು ಮಟ್ಟದಲ್ಲಿ ಅವಹೇಳನಕಾರಿಯಾಗಿ ನಿಂದಿಸಲಾಗಿದೆ. ಅವಹೇಳನ ಮಾಡಿರುವ ಖಾತೆಯ ಹೆಸರು, rock_951753 ಎಂದು ಗುರುತಿಲಾಗಿದೆ.

ಸಂವಿಧಾನ ಶಿಲ್ಪಿಗೆ ಅವಹೇಳನ ಮಾಡಿರುವುದರ ವಿರುದ್ಧ ಕೊಪ್ಪಳದ ಕುಕನೂರು ತಾಲೂಕಿನ ಕಾನೂನು ವಿದ್ಯಾರ್ಥಿ ಮರಿಸ್ವಾಮಿ ಅವರು ನೀಡಿದ ದೂರಿನಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮರಿಸ್ವಾಮಿ ಅವರು ತನ್ನ ದೂರಿನಲ್ಲಿ ಇನ್ಸ್‌ಟಾಗ್ರಾಮ್‌ ಸ್ಕ್ರೀನ್‌ಶಾರ್ಟ್‌‌ ಅನ್ನು ಕೂಡಾ ಲಗತ್ತಿಸಿದ್ದಾರೆ.

ಇದನ್ನೂ ಓದಿ:ನಟಿಯ ಬಗ್ಗೆ ಅಸಂಬದ್ದ ಸುದ್ದಿ ಪ್ರಕಟಿಸಿ ‘ವಿಕೃತಿ’ ಮೆರೆದ ವಿಜಯವಾಣಿ.ನೆಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...