ಉಕ್ರೇನ್ ರಾಜಧಾನಿ ಕೈವ್‌ನ ಸುತ್ತಮುತ್ತಲಿನ ಪ್ರದೇಶದಲ್ಲಿ ಇದುವರೆಗೂ 1,222 ಶವಗಳು ಪತ್ತೆಯಾಗಿವೆ ಎಂದು ದೇಶದ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್‌ನ ಸಾವುನೋವುಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ.
ಸಾವಿರಾರು ಯುದ್ಧ ಅಪರಾಧಗಳಿಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ರಷ್ಯಾದ ಪ್ರಮುಖ 500 ಅಧಿಕಾರಿಗಳ ವಿರುದ್ದದ ಅಪರಾಧವನ್ನು ದೇಶವು ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಭಾನುವಾರ ಬೆಳಿಗ್ಗೆ ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಈಶಾನ್ಯ ಖಾರ್ಕಿವ್‌ನಲ್ಲಿ ನಡೆದ ಕ್ಷಿಪಣಿ ದಾಳಿಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಒಲೆಗ್ ಸಿನೆಗೌಬೊವ್ ಹೇಳಿದ್ದಾರೆ. ಅಧಿಕಾರಿಗಳು ಪ್ರಕಾರ, ನಗರದ ಆಗ್ನೇಯ ಭಾಗದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಒಂದು ಮಗು ಸೇರಿದಂತೆ 10 ನಾಗರಿಕರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ರಶ್ಯಾ-ಉಕ್ರೇನ್ ಯುದ್ದ; ಬಾರತದ ಮೆಡಿಕಲ್ ಶಿಕ್ಶಣ ವ್ಯವಸ್ತೆಯ ಕತೆ-ವ್ಯತೆ
“ಯುದ್ದವನ್ನು ಗೆಲ್ಲಲ್ಲು ಸಾಧ್ಯವಿರದ ಕಾರಣಕ್ಕೆ ರಷ್ಯಾ ಸೈನ್ಯವು ನಾಗರಿಕರ ಮೇಲೆ ಯುದ್ಧವನ್ನು ಮುಂದುವರೆಸಿದೆ” ಎಂದು ಸಿನೆಗೌಬೊವ್ ಟೆಲಿಗ್ರಾಮ್‌ನಲ್ಲಿ ಹೇಳಿದ್ದಾರೆ.
ಒಂದು ಮಿಲಿಯನ್ ನಿವಾಸಿಗಳಿರುವ ದೊಡ್ಡ ಕೈಗಾರಿಕಾ ನಗರವಾದ ಡ್ನಿಪ್ರೊದಲ್ಲಿ, ರಷ್ಯಾದ ಕ್ಷಿಪಣಿಗಳು ಸ್ಥಳೀಯ ವಿಮಾನ ನಿಲ್ದಾಣವನ್ನು ನಾಶಪಡಿಸಿತು, ಇದು ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಗೆ ಕಾರಣವಾಯಿತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯು ಮಾರ್ಚ್ 15 ರಂದು ನಡೆದಿತ್ತು.
ಅಧ್ಯಕ್ಷ ಝೆಲೆನ್ಸ್ಕಿ ಮತ್ತೊಮ್ಮೆ ನಾಗರಿಕರ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದಾರೆ. ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ನಡೆದ ಮಾತುಕತೆಯ ನಂತರ, “ಯುದ್ಧಾಪರಾಧಗಳ ಎಲ್ಲಾ ಅಪರಾಧಿಗಳನ್ನು ಗುರುತಿಸಬೇಕು ಮತ್ತು ಶಿಕ್ಷಿಸಬೇಕು ಎಂದು ಒಪ್ಪಿಕೊಂಡರು” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರು, ಶಾಂತಿಗಾಗಿ ದಾರಿ ಮಾಡಿಕೊಡಲು ಈಸ್ಟರ್ ಕದನ ವಿರಾಮಕ್ಕೆ ಕರೆ ನೀಡಿದ್ದು, ಯುದ್ಧವನ್ನು ಖಂಡಿಸಿದ್ದಾರೆ.
ಡೊನೆಟ್ಸ್ಕ್ ಪ್ರದೇಶದ ಗವರ್ನರ್ ಪಾವ್ಲೊ ಕಿರಿಲೆಂಕೊ ಅವರು ನೀಡಿದ ಪರಿಷ್ಕೃತ ಲೆಕ್ಕಾಚಾರದ ಪ್ರಕಾರ, ಉಕ್ರೇನ್‌ನ ಪೂರ್ವದಲ್ಲಿ ಸಾವಿನ ಸಂಖ್ಯೆಯು ಏರಿದ್ದು, ಅಲ್ಲಿ ಶುಕ್ರವಾರ ನಡೆದ ಕ್ಷಿಪಣಿ ದಾಳಿಯಲ್ಲಿ ಕ್ರಾಮಾಟೋರ್ಸ್ಕ್ ನಗರದ ರೈಲ್ವೆ ನಿಲ್ದಾಣದಲ್ಲಿದ್ದ 57 ಜನರು ಸಾವಿಗೀಡಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಕೇರಳ ಬಜೆಟ್: ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ 10 ಕೋಟಿ ರೂ. ಮೀಸಲಿಟ್ಟ ಸರ್ಕಾರ


